ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಶಿವಪರಮಾತ್ಮನ ಉಪಾಸನೆಯಲ್ಲಿ ರುದ್ರಾಕ್ಷಕ್ಕೆ ಅತ್ಯಂತ ಪ್ರಮುಖ ಸ್ಥಾನ.”ರುದ್ರ” ಹಾಗೂ “ಅಕ್ಷ” ಈ ಎರಡು ಪದಗಳಿರುವ ಶಬ್ದ ರುದ್ರಾಕ್ಷ,ಅಂದರೆ ರುದ್ರನ ಕಣ್ಣು.”ರುದ್ರಸ್ಯ ಅಕ್ಷಿಃ ರುದ್ರಾಕ್ಷಃ”. ರುದ್ರಾಕ್ಷವೆಂಬುದು ಒಂದು ಮರ.ಆ ಮರದ ಬೀಜವೇ ರುದ್ರಾಕ್ಷಿ.ಶಿವ ಪುರಾಣ,ವಿದ್ಯೇಶ್ವರ ಸಂಹಿತಾ ಹಾಗೂ ಶ್ರೀ ದೇವೀಭಾಗವತಗಳಲ್ಲಿ ರುದ್ರಾಕ್ಷಕ್ಕೆ ಸಂಬಂಧಿಸಿದ ವಿಷಯಗಳಿವೆ.ಅನೇಕ ವರ್ಷಗಳ ಸತತ ಧ್ಯಾನದ ನಂತರ ಸದಾಶಿವ ತನ್ನ ಕಣ್ಣುಗಳನ್ನು ತೆರೆದ.ಆಗ ಕಣ್ಣುಗಳಿಂದ ಅಶ್ರು ಸುರಿಯಿತು.ಆ ಕಣ್ಣಿರಿನಿಂದಲೇ ಜನ್ಯವಾದದ್ದು ರುದ್ರಾಕ್ಷವೃಕ್ಷ ಎಂಬ ಪೌರಾಣಿಕ ಕಥೆಯಿದೆ.
ರುದ್ರಾಕ್ಷಿಯನ್ನು ಧರಿಸುವುದರಿಂದ ತನು-ಮನಗಳಲ್ಲಿ ಪವಿತ್ರತೆಯ ಸಂಚಾರವಾಗುತ್ತದೆ.ಪಾಪಗಳ ಸಮೂಹವನ್ನೇ ರುದ್ರಾಕ್ಷಿ ನಾಶಪಡಿಸುತ್ತದೆ.ಬಿಳಿ,ಕೆಂಪು,ಹಳದಿ ಹಾಗೂ ಕಪ್ಪುಬಣ್ಣಗಳಲ್ಲಿ ರುದ್ರಾಕ್ಷಿ ಸಿಗುತ್ತದೆ.ಋಷಿಗಳ ನಿರ್ದೇಶನದಂತೇ ಮನುಷ್ಯರು ತಮ್ಮ ದೇಹದ ಬಣ್ಣಗಳ ಪ್ರಕಾರ ರುದ್ರಾಕ್ಷಿಯನ್ನು ಧರಿಸಬೇಕು.ಸುಖ ಹಾಗೂ ಮೋಕ್ಷವನ್ನು ಬಯಸುವ ಜನರು ರುದ್ರಾಕ್ಷದ ಮಾಲೆಯನ್ನು ಧರಿಸಬೇಕು.ವಿಶೇಷವಾಗಿ ಶೈವ ಮತಾವಲಂಬಿಗಳು ತಪ್ಪದೇ ರುದ್ರಾಕ್ಷಮಾಲೆಯನ್ನು ಧರಿಸಬೇಲೇಬೇಕೆಂಬ ನಿಯಮವಿದೆ.
ಹಲವು ಮುಖ ಹಾಗೂ ಆಕಾರಗಳಲ್ಲಿ ರುದ್ರಾಕ್ಷಿ ಲಭ್ಯವಿದೆ.ಏಕಮುಖಿ ರುದ್ರಾಕ್ಷಿಯಲ್ಲಿ ಬಹಳ ಶಕ್ತಿಯಿರುತ್ತದೆಂದು ಹೇಳಲಾಗುತ್ತದೆ.ರುದ್ರಾಕ್ಷಿ ಚಿಕ್ಕದಿದ್ದಂತೆ ಅದರ ಶಕ್ತಿ ಉತ್ತರೋತ್ತರವಾಗಿ ವೃದ್ಧಿಯಾಗುತ್ತಿರುತ್ತದೆ.ದೊಡ್ಡ ರುದ್ರಾಕ್ಷಿಗಿಂತ ಚಿಕ್ಕ ರುದ್ರಾಕ್ಷಿಗೆ ಅಧಿಕಶಕ್ತಿಯಿರುತ್ತದೆ.ಆದರೂ ಎಲ್ಲ ರುದ್ರಾಕ್ಷಿಗಳಲ್ಲೂ ಶಿವಶಕ್ತಿ ಜಾಗೃತವಾಗಿರುತ್ತದೆ,ಸರ್ವಪಾಪಗಳನ್ನು ವಿನಾಶಮಾಡುವ ವಿಶೇಷ ಶಕ್ತಿಯಿರುತ್ತದೆ.ಸುಂದರವಾಗಿರುವ,ಅಖಂಡವಾಗಿರುವ ರುದ್ರಾಕ್ಷಿಯನ್ನು ಧರಿಸಬೇಕು.ತುಂಡಾಗಿರುವ,ಕೀಟದಿಂದ ಕಡಿಯಲ್ಪಟ್ಟಿರುವ,ಗಾಯಗಳಿಂದ ಕೂಡಿರುವ ರುದ್ರಾಕ್ಷಿಯನ್ನು ಧರಿಸಬಾರದು.
ರುದ್ರಾಕ್ಷಿ ಮಾಲೆಯನ್ನು ಧರಿಸುವುದರ ಹಿಂದೆ ಇವೆ ಹಲವು ವೈಜ್ಞಾನಿಕ ಕಾರಣಗಳು :-
ರುದ್ರಾಕ್ಷಿ ಮಾಲೆಯನ್ನು ಧರಿಸುವುದರಿಂದ ಕತ್ತಿನ ಭಾಗದಲ್ಲಿರುವ ನರಗಳು ದೃಢವಾಗಿರುತ್ತವೆ,ಇದು ಗಳಗಂಡ,ಕತ್ತುನೋವು ಮುಂತಾದ ರೋಗಗಳನ್ನು ತಡೆಯುತ್ತದೆ.ರುದ್ರಾಕ್ಷಿಗೆ ವಿಶೇಷವಾದ ಔಷಧೀಯ ಗುಣಗಳಿವೆ.ಸ್ನಾನವನ್ನು ಮಾಡುವಾಗ ರುದ್ರಾಕ್ಷಿಮಾಲೆಯ ನೀರು ಶರೀರದ ಮೇಲೆ ಬೀಳುವುದರಿಂದ ಅನೇಕ ಚರ್ಮರೋಗಗಳ ನಿಯಂತ್ರಣವಾಗುತ್ತದೆ. ಪ್ರಕೃತಿಯು ಮನುಷ್ಯನಿಗೆ ಕೊಟ್ಟ ಶ್ರೇಷ್ಟ ಉಡುಗೊರೆ ರುದ್ರಾಕ್ಷ. ಇಲ್ಲಿ ಓದಿ:-ಈ 5 ವಸ್ತುಗಳಿಂದ ಶಿವ ಲಿಂಗವನ್ನು ಪೂಜಿಸುವಂತಿಲ್ಲ!!!
ನಮ್ಮ ಅನೇಕ ಧರ್ಮಗ್ರಂಥಗಳಲ್ಲಿ ರುದ್ರಾಕ್ಷದ ಶ್ರೇಷ್ಟತೆಯನ್ನು ಪ್ರಶಂಸಿಸಲಾಗಿದೆ.ರುದ್ರಾಕ್ಷಿಮಾಲೆಯನ್ನು ಹಾಕಿಕೊಂಡು ದೇವಪೂಜೆ ಮಾಡಿದರೆ ಹರಿದ್ವಾರ,ಕಾಶೀ,ಗಂಗೆ ಮುಂತಾದ ಪುಣ್ಯತೀರ್ಥಗಳಲ್ಲಿ ಪೂಜೆ ಮಾಡಿದ ಫಲ ಸಿಗುತ್ತದೆ.ರುದ್ರಾಕ್ಷಿ ಮಾಲೆಯನ್ನು ಧರಿಸಿ ಮಂತ್ರೋಚ್ಚಾರಣೆ,ಜಪ ಮಾಡಿದರೆ ಫಲಪ್ರಾಪ್ತಿ ದ್ವಿಗುಣವಾಗುತ್ತದೆ.ರುದ್ರಾಕ್ಷಿಮಾಲೆಯನ್ನು ಧರಿಸಿದವರ ಶರೀರದಲ್ಲಿ ಸಕಾರಾತ್ಮಕ ಶಕ್ತಿ ಜಾಗೃತವಾಗುತ್ತದೆ.ಮನಸ್ಸಿನ ನಿಯಂತ್ರಣ ರುದ್ರಾಕ್ಷಿಮಾಲೆಯಿಂದ ಸಾಧ್ಯ.ರುದ್ರಾಕ್ಷಿಮಾಲೆಯಲ್ಲಿ ನೂರಾಎಂಟು ಅಥವಾ ಐವತ್ತನಾಲ್ಕು ರುದ್ರಾಕ್ಷಿಗಳಿದ್ದರೆ ಪರಿಣಾಮಕಾರಿ.
ರುದ್ರಾಕ್ಷಿಮಾಲೆಯನ್ನು ಧರಿಸಿ ಭಗವಾನ್ ಶಿವನ ಪೂಜೆ,ಜಪಗಳನ್ನಾಚರಿಸಿದರೆ ಶುಭವಾಗುತ್ತದೆ.ಬೇರೆ ಬೇರೆ ಮುಖಗಳಿರುವ ರುದ್ರಾಕ್ಷಿಮಾಲೆಯನ್ನು ಧರಿಸುವುದರಿಂದ ವಿಭಿನ್ನ ಇಚ್ಚೆಗಳು ನೆರವೇರುತ್ತವೆ.ರುದ್ರಾಕ್ಷಿಯನ್ನು ಧರಿಸಿದವರಿಗೆ ಶಿವಲೋಕ ಸಿಗುತ್ತದೆಂದು ಪದ್ಮಪುರಾಣ,ಶಿವಪುರಾಣಗಳಲ್ಲಿ ತಿಳಿಸಲಾಗಿದೆ.
ರುದ್ರಾಕ್ಷವನ್ನು ಧರಿಸುವ ಬಗೆ :-
ಭದ್ರಾಕ್ಷವೆಂಬುದು ರುದ್ರಾಕ್ಷದ ಇನ್ನೊಂದು ಜಾತಿ..ರುದ್ರಾಕ್ಷದ ಮಧ್ಯದಲ್ಲಿ ಭದ್ರಾಕ್ಷವನ್ನು ಧರಿಸಿದರೆ ಒಳಿತಾಗುತ್ತದೆ. ರುದ್ರಾಕ್ಷವನ್ನು ಧರಿಸುವ ಮುನ್ನ ಅದು ಅಸಲಿಯೋ,ನಕಲಿಯೋ ಎಂದು ಪರೀಕ್ಷಿಸಬೇಕು.ನೇಪಾಳ ಭಾಗದಲ್ಲಿ ಸಿಗುವ ರುದ್ರಾಕ್ಷ ಸಾಮಾನ್ಯವಾಗಿ ಅಸಲಿಯಾಗಿರುತ್ತದೆ.ಅಲ್ಲಿನ ಪಶುಪತಿನಾಥ ದೇವಾಲಯದಲ್ಲಿ ಹಲವು ವಿಧದ ಅಸಲಿ ರುದ್ರಾಕ್ಷಿ ಮಾಲೆಗಳು ಸಿಗುತ್ತವೆ.ತುಂಡಾಗಿರುವ,ಕೀಟಗಳು ತಿಂದಿರುವ ರುದ್ರಾಕ್ಷವನ್ನು ಧರಿಸಬಾರದು.ಜಪಾದಿ ಕರ್ಮಗಳಲ್ಲಿ ಚಿಕ್ಕರುದ್ರಾಕ್ಷಿಯಿರುವ ಮಾಲೆಗಳನ್ನು ಬಳಸಬೇಕು.
ಈ ನಂಬರಿನ ರುದ್ರಾಕ್ಷಿಗಳಿರುವ ಮಾಲೆಯನ್ನು ಧರಿಸಿದರೆ ಸಿಗುವ ಫಲಗಳು :-
26 ರುದ್ರಾಕ್ಶಿಗಳಿರುವ ಮಾಲೆ ಶಿರದಲ್ಲಿ,
50 ರುದ್ರಾಕ್ಷಿಗಳಿರುವ ಮಾಲೆ ಎದೆಯಲ್ಲಿ,
16 ರುದ್ರಾಕ್ಷಿಗಳಿರುವ ಮಾಲೆ ಭುಜದಲ್ಲಿ,
12 ರುದ್ರಾಕ್ಷಿಗಳಿರುವ ಮಾಲೆಯನ್ನು ಮಣಿಕಟ್ಟಿನಲ್ಲಿ ಧರಿಸಬೇಕೆಂದು ಪುರಾಣಗಳು ತಿಳಿಸುತ್ತವೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪರಿಸರ ದಿನಾಚರಣೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ವಿಶ್ವ ಪರಿಸರ ದಿನಾಚರಣೆ ಆಚರಿಸಲು ಲಕ್ಷ ಲಕ್ಷ ದುಡ್ಡು ವೆಚ್ಚ ಮಾಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಪರಿಸರ ದಿನಾಚರಣೆಗಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬರೋಬ್ಬರಿ 20 ಲಕ್ಷ ರೂಪಾಯಿ ಖರ್ಚು ಮಾಡಿದೆ ಎಂದು ತಿಳಿದು ಬಂದಿದೆ. ಜೂನ್ 5 ರಂದು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಮಾಡಲಾಗಿತ್ತು.ಸರಳವಾಗಿ ಆಚರಿಸಬೇಕಿದ್ದ ಪರಿಸರ ದಿನಾಚರಣೆಗೆ 20.45 ಲಕ್ಷ ರೂ. ಹಣ ಖರ್ಚಾಗಿದೆ. ಮಲ್ಲೇಶ್ವರದ ಚೌಡಯ್ಯ ಮೆಮೋರಿಯಲ್ ಹಾಲ್‍ನಲ್ಲಿ…
ಕೋಲಾರ:- ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ, ಹನುಮಂತರಾಯನ ದಿನ್ನೆ ಗ್ರಾಮದ ವಾಸಿ ಹೆಚ್.ಎನ್.ವೆಂಕಟೇಶ್ ಬಿನ್ ನಾರಾಯಣಸ್ವಾಮಿ ಎಂಬಾತ ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿಕೊಂಡು ಹೋಗಿ, ಅತ್ಯಾಚಾರ ಎಸಗಿರುವುದು ರುಜುವಾತಾದ ಹಿನ್ನಲೆ ಪೋಕ್ಸೊ ನ್ಯಾಯಾಲದಯದ ನ್ಯಾಯಾಧೀಶರಾದ ಬಿ.ಪಿ.ದೇವಮಾನೆ ರವರು ಆರೋಪಿಗೆ 20 ವರ್ಷ ಸಜೆ ತೀರ್ಪು ನೀಡಿದ್ದಾರೆ. ಸದರಿ ಆರೋಪಿಯ ವಿರುದ್ದ ಕೋಲಾರ ಮಹಿಳಾ ಪೊಲೀಸ್ ಠಾಣೆ ವೃತ್ತ ನಿರೀಕ್ಷಕರಾದ ಎನ್.ಬೈರ ರವರು ಹಾಗೂ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯವರು ಕಲಂ 6 ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ…
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ9663953892 call/ whatsapp/ mail raghavendrastrology@gmail.com ಮೇಷ(14 ನವೆಂಬರ್, 2018) ಯಾವುದಾದರೂ ಐತಿಹಾಸಿಕ ಸ್ಮಾರಕಕ್ಕೆ ಒಂದು ಸಣ್ಣ ಪ್ರಯಾಣವನ್ನುಯೋಜಿಸಿ. ಇದು ಮಕ್ಕಳು…
ಆಗಸದಲ್ಲಿ ವಾಸಮಾಡಲು ಜನರು ನಿರ್ಧರಿಸುತ್ತಿರುವ ಈ ಆಂತರಿಕ ಯುಗದಲ್ಲಿ, ಇನ್ನೂ ಕೆಲುವು ಬುಡಕಟ್ಟು ಜನಾಂಗಗಳು ನೀರಿನಲ್ಲಿ ವಾಸ ಮಾಡುತ್ತಿರುವುದು ಆಚ್ಚರಿ ಸಂಗತಿ.
ಬಿಗ್ ಬಾಸ್ ಕನ್ನಡ-5′ ಕಾರ್ಯಕ್ರಮಕ್ಕೆ ಕಾಲಿಟ್ಟ ಕ್ಷಣದಿಂದಲೇ, ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಆಗಿರುವ ಸ್ಪರ್ಧಿ ಅಂದ್ರೆ ಅದು ನಿವೇದಿತಾ ಗೌಡ. ಕನ್ನಡವನ್ನ ಇಂಗ್ಲೀಷ್ ಸ್ಟೈಲ್ ನಲ್ಲಿ ಮಾತನಾಡುವ ‘ಬಾರ್ಬಿ ಡಾಲ್’ ನಿವೇದಿತಾ ಮನೆಯ ಒಳಗೆ ಹಾಗೂ ಹೊರಗೆ ಸಖತ್ ಸುದ್ದಿಯಾಗುತ್ತಿದ್ದು, ಪಡ್ಡೆ ಹುಡುಗರ ಕನಸಿನ ರಾಣಿಯಾಗಿದ್ದಾರೆ.
ಶಬರಿಮಲೆ ಸನ್ನಿಧಾನಕ್ಕೆ ಮಹಿಳೆಯರು ಪ್ರವೇಶಿಸಿದ್ದು, ಇದರಿಂದ ಒಳ್ಳೆದಾಯ್ತಲ್ಲ, ಹಠ ತೊಟ್ಟವರಿಗೆ ಸಮಾಧಾನ ಆಯ್ತಲ್ಲವೇ ಎಂದು ಪರೋಕ್ಷವಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅಸಮಾಧಾನವನ್ನು ಹೊರಹಾಕಿದ್ದಾರೆ. ಕ್ಷೇತ್ರದ ಆಚಾರ, ಸಂಪ್ರದಾಯ ಪಾಲಿಸುವುದು ಮುಖ್ಯ. ಬ್ರಹ್ಮಚರ್ಯ, ಸಂಯಮ ಸಾಧಿಸಿ ವ್ರತಾಚರಣೆ ಮಾಡಿ ಕ್ಷೇತ್ರಕ್ಕೆ ತೆರಳುತ್ತಾರೆ. ಈಗೆಲ್ಲ ಬೆಳಗ್ಗೆ ಮಾಲೆ ಹಾಕಿ ಮಧ್ಯಾಹ್ನ ಸನ್ನಿಧಾನಕ್ಕೆ ಹೋಗುವ ಆಚಾರ ಇದೆ. ಹೀಗಾಗಿ ಇಂತಹ ಅಪಚಾರಗಳಾಗುತ್ತಿದೆಎಂದು ಡಾ. ವೀರೇಂದ್ರ ಹೆಗ್ಗಡೆ ಬೇಸರ ವ್ಯಕ್ತಪಡಿಸಿದ್ದಾರೆ. ಮಹಿಳೆಯರಾದ ಬಿಂದು ಮತ್ತು ಕನಕ ಮಧ್ಯರಾತ್ರಿ ಬೆಟ್ಟವನ್ನು ಹತ್ತಿ ಬುಧವಾರ…