ಪ್ರೀತಿಸುವ ಹುಡುಗ ಹುಡುಗಿಯ ಕೈಯನ್ನು ತನ್ನ ಕೈಗಳಲ್ಲಿ ಬಂಧಿಸಿದಾಗ ಉಂಟಾಗುವ ಅನುಭವವೇ ಮಧುರವಾಗಿರುತ್ತದೆ. ಆ ಒಂದು ಹಿಡಿತದಲ್ಲಿ ಹುಡುಗನ ಹೃದಯದ ಮಾತು ಅರ್ಥವಾಗುತ್ತದೆ. ಪ್ರೀತಿಯ ಮಹತ್ವ ಏನು ಎಂಬುದು ಆ ಹಿಡಿತವು ತಿಳಿಸುತ್ತದೆ.

ಪ್ರೀತಿಯನ್ನು ಪಡೆಯಲು ಪ್ರತಿಯೊಬ್ಬರು ಕಾತುರರಾಗಿರುತ್ತಾರೆ. ಈ ಸಮಯದಲ್ಲಿ ಹುಡುಗ ಹುಡುಗಿಯ ಕೈ ಹಿಡಿದಾಗ ಅದೊಂದು ಮಧುರ ಅನುಬಂಧವನ್ನು ಉಂಟು ಮಾಡುತ್ತದೆ.
ಈ ಸಂದರ್ಭದಲ್ಲಿ ಹುಡುಗಿಯ ಮನಸ್ಸಿನಲ್ಲಿ ಏನೆಲ್ಲಾ ಆಲೋಚನೆಗಳು ಬರುತ್ತವೆ ಗೊತ್ತಾ?

ಪಾರ್ಕ್‌ನಲ್ಲಿ ತಿರುಗಾಡುವ ಸಮಯದಲ್ಲಿ ಅಚಾನಕ್ ಆಗಿ ಹುಡುಗ ತನ್ನ ಗರ್ಲ್‌ಫ್ರೆಂಡ್‌ನ ಕೈಯನ್ನು ಹಿಡಿದಾಗ, ಆಕೆಗೆ ಒಮ್ಮೆಲೆ ಎದೆ ಝಲ್ ಎನನ್ಉತ್ತದೆ. ತನ್ನೊಳಗೆ ಸಮುದ್ರದ ಅಲೆ ಎದ್ದಂತಹ ಅನುಭವವಾಗುತ್ತದೆ.

ಆ ಸಮಯದಲ್ಲಿ ಹುಡುಗಿ ತನ್ನಲ್ಲಿ ತಾನು ಕಳೆದು ಹೋಗ ಬಯಸುತ್ತಾರೆ. ಆ ಸಮಯವನ್ನು ಎಂಜಾಯ್ ಮಾಡಲು ಬಯಸುತ್ತಾರೆ. ಜೀವನವೆ ಬದಲಾದಂತೆ ಅವರಿಗೆ ಅನಿಸುತ್ತದೆ. ಅಷ್ಟೇ ಅಲ್ಲಾ ಪೂರ್ತಿ ಪ್ರಪಂಚ ಎಷ್ಟೊಂದು ಸುಂದರವಾಗಿದೆ ಎಂದು ಅನಿಸುತ್ತದೆ.

ಒಂದು ವೇಳೆ ಹುಡುಗ ಗಟ್ಟಿಯಾಗಿ ಕೈಯನ್ನು ಹಿಡಿದರೆ ಆ ಹುಡುಗಿಗೆ ಹೆಮ್ಮ ಹಾಗೂ ಪ್ರೀತಿ ಎರಡೂ ಉಂಟಾಗುತ್ತದೆ. ಆ ಸಮಯದಲ್ಲಿ ಆಕೆಗೆ ತಾನು ಪ್ರಪಂಚದ ಶ್ರೀಮಂತ ಮತ್ತು ಲಕ್ಕಿ ಪರ್ಸನ್ ಎಂಬ ಅನುಭವ ಉಂಟಾಗುತ್ತದೆ. ಆ ಒಂದು ಸಮಯದಲ್ಲಿ ಆಕೆ ಪ್ರಪಂಚವನ್ನೆ ಮರೆತು ಬಿಟ್ಟು ಆಕಾಶದಲ್ಲಿ ತೇಲಿ ಹೋಗುತ್ತಾಳೆ.

ರೋಡ್ ಕ್ರಾಸ್ ಮಾಡುವ ಸಂದರ್ಭದಲ್ಲಿ ಹುಡುಗ ಹುಡುಗಿಯ ಕೈ ಹಿಡಿದರೆ ತಮ್ಮನ್ನು ಕೇರ್ ಮಾಡುವ, ತುಂಬಾ ಪ್ರೀತಿ ಮಾಡುವ ವ್ಯಕ್ತಿ ಸಿಕ್ಕಿದ್ದಾನೆ ಎಂಬ ಭಾವನೆ ಉಂಟಾಗುತ್ತದೆ. ಆ ಸಮಯದಲ್ಲಿ ಅವರಿಗೆ ರೋಡ್ ಇನ್ನಷ್ಟು ಅಗಲವಾಗಿ ಯಾಕೆ ಇರಬಾರದು ಎಂದು ಯೋಚನೆ ಮಾಡುತ್ತಾರೆ.
