ಉದ್ಯೋಗ

ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ‘ಮೈಜಾಬ್’ ಆ್ಯಪ್ ಲೋಕಾರ್ಪಣೆ..!ತಿಳಿಯಲು ಈ ಲೇಖನ ಓದಿ..

510

ನಿರುದ್ಯೋಗ ಸಮಸ್ಯೆ ನಿವಾರಿಸುವ ಸಲುವಾಗಿ ಮೈ ಜಾಬ್ ಆ್ಯಪ್ ಬಿಡುಗಡೆಗೊಳಿಸಲಾಯಿತು. ಉದ್ಯೋಗಕ್ಕಾಗಿ ಯುವಜನರು -ಕರ್ನಾಟಕ ವತಿಯಿಂದ ಬಿಡುಗಡೆಗೊಳಿಸಲಾಗಿರುವ ಈ ಆ್ಯಪ್‍ನಲ್ಲಿ ಉದ್ಯೋಗ ಕುರಿತು ಮಾಹಿತಿ ನೆರವು ಅರಿವು ನೀಡಲಾಗುತ್ತದೆ. ಈ ಮೂಲಕ ರಚನಾತ್ಮಕ ಕೆಲಸ ಮಾಡಲು ನೆರವಾಗಲಿದೆ. ಈ ಆ್ಯಪ್‍ನಿಂದ ಮುಖ್ಯಮಂತ್ರಿ, ಪ್ರಧಾನಮಂತ್ರಿ ಅವರಿಗೆ ತಮ್ಮ ಮನವಿಯನ್ನು ನೇರವಾಗಿ ಇಮೇಲ್ ಕಳುಹಿಸಬಹುದು ಎಂದು ಸಂಘಟನೆ ಪದಾಧಿಕಾರಿ ಸರೋವರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಯುವಜನರು ಈ ಆ್ಯಪ್ ಮುಖಾಂತರ ನೂರಾರು ಬಗೆಯ ಉಪಯೋಗಗಳು ಮತ್ತು ಸ್ಕಾಲರ್‍ಶಿಪ್ ಬಗ್ಗೆ ಮಾಹಿತಿ ಪಡೆಯಬಹುದು. ಉದ್ಯೋಗ ಕಲ್ಪಿಸುವಲ್ಲಿ ಸೃಜನ ಪಕ್ಷಪಾತ, ಭ್ರಷ್ಟಾಚಾರ, ಉಡಾಫೆ ತೋರುವ ವ್ಯವಸ್ಥೆಯನ್ನು ಧೈರ್ಯವಾಗಿ ಎದುರಿಸಬಹುದು. ಇದು ದೊಡ್ಡ ಆಂದೋಲನವಾಗಬೇಕು ಎಂಬುದು ನಮ್ಮ ಆಶಯ ಎಂದರು.

ಮೈ ಜಾಬ್ ಮೊಬೈಲ್ ಆ್ಯಪ್‍ನ್ನು 19 ವರ್ಷ ವಯಸ್ಸಿನ ವಿಜಯ್ ಮತ್ತು ಅನುದೀಪ್ ಎಂಬ ಯುವಕರು ರೂಪಿಸಿಕೊಟ್ಟರು. ಇವರು ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ವ್ಯಾಸಂಗ ಮಾಡುತ್ತಿರುವುದಾಗಿ ಹೇಳಿದರು. ಐದು ವರ್ಷಗಳಲ್ಲಿ 50 ಲಕ್ಷ ಉದ್ಯೋಗವನ್ನು ಸೃಷ್ಟಿಸುವುದು ಇವರ ಆಶಯವಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ