ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈ ಜಗತ್ತಿನಲ್ಲಿ ಮನುಷ್ಯ ಜೀವನ ಪ್ರಾಣಿ–ಪಕ್ಷಿಗಳಿಗಿಂತ ಉನ್ನತ ಹಾಗೂ ಅರ್ಥಪೂರ್ಣವಾದುದ್ದು. ಒಮ್ಮೆ ಮನುಷ್ಯ ಜೀವ ತಳೆದ ಮೇಲೆ ಇನ್ನೊಂದು ಜನ್ಮದಲ್ಲಿ ಮತ್ತೆ ಮನುಷ್ಯನಾಗೇ ಹುಟ್ಟುತ್ತಾನೆ ಎಂದು ಹೇಳಲಾಗದು. ಇರುವ ಒಂದೇ ಜನ್ಮದಲ್ಲಿ ಸಕಲ ಸಂತೋಷವನ್ನು ಕಾಣಬೇಕು. ಮನುಷ್ಯ ಆಧ್ಯಾತ್ಮಿಕ ಮಾರ್ಗಗಳಲ್ಲಿ ಸಾಗುವ ಮೂಲಕ ತನ್ನೊಳಗೆ ತಾನು ಸಂತೋಷವನ್ನು ಕಂಡುಕೊಳ್ಳಬಹುದು.
ಒಬ್ಬ ಮನುಷ್ಯ ಜೀವನದಲ್ಲಿ ಐದಾರು ಕಾರುಗಳನ್ನು ಕೊಳ್ಳಬಹುದು, ಐಷಾರಾಮಿ ಬಂಗಲೆಯನ್ನು ಕಟ್ಟಿಸಬಹುದು, ಚಿನ್ನ, ಬೆಳ್ಳಿಯನ್ನು ಹೊದ್ದು ಮಲಗಬಹುದು. ಆದರೆ ಇದನ್ನೆಲ್ಲ ಅನುಭವಿಸಲು ಇರುವುದು ಒಂದೇ ಜನ್ಮ. ಈ ಜನ್ಮದಲ್ಲಿ ಅರ್ಧ ಸುಖ ಅನುಭವಿಸಿ, ಇನ್ನರ್ಧ ಸುಖವನ್ನು ಮುಂದಿನ ಜನ್ಮದಲ್ಲಿ ಅನುಭವಿಸುತ್ತೇನೆ ಎಂದರೆ ಅದು ಆಗದು. ಒಮ್ಮೆ ಜೀವನ ಮುಗಿದ ಮೇಲೆ ಮತ್ತೆ ಇನ್ನೊಂದು ಜನ್ಮವನ್ನು ನಾವು ಹಣ ಕೊಟ್ಟು ಕೊಳ್ಳಲು ಸಾಧ್ಯವಿಲ್ಲ. ಅಲ್ಲದೇ ಮತ್ತೆ ಅಷ್ಟೇ ಸರಳ, ಸುಂದರ, ಪ್ರತಿಷ್ಠೆಯ ಜೀವನವನ್ನು ಪಡೆಯುತ್ತೇವೆ ಎಂದುಕೊಂಡರೆ ನಿಜಕ್ಕೂ ನಮ್ಮಷ್ಟು ಮೂರ್ಖರು ಯಾರು ಇಲ್ಲ.
ಆಧ್ಯಾತ್ಮಿಕ ಚಿಂತನೆಗಳು ನಮ್ಮ ಮನಸ್ಸಿಗೆ ಸಂತಸವನ್ನು ಹುಡುಕುವ ಮಾರ್ಗವನ್ನು ತೋರುತ್ತವೆ. ಜೀವನದಲ್ಲಿ ನಿರೀಕ್ಷೆಗಳಿಲ್ಲದೆ ಬದುಕಿದಾಗ ಸಂತೋಷದ ಜೀವನವು ತಾನಾಗಿಯೇ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಆಧ್ಯಾತ್ಮಿಕ ಸತ್ಯಗಳನ್ನು ಕಂಡುಕೊಳ್ಳುವುದರಿಂದ ನಮ್ಮೊಳಗಿನ ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಳ್ಳಬಹುದು. ತನ್ನ ಹಾಗೂ ಪರರ ಇಚ್ಛೆಗಳನ್ನು ಪೂರೈಸಲು ಕೂಡ ಈ ಚಿಂತನೆಗಳಿಂದ ಸಾಧ್ಯ.
ದೇವರು ನೀಡಿರುವ ಈ ಅಪರೂಪದ ಮಾನವ ಜೀವನವನ್ನು ಸಂತಸದಿಂದ ಕಳೆಯಬೇಕು. ಸದಾ ಕೊರಗುತ್ತಾ ಬದುಕಿ ಇರುವ ಒಂದೇ ಒಂದು ಜನ್ಮವನ್ನು ನೋವಿನಲ್ಲಿ ಕಳೆಯುವುದಕ್ಕಿಂತ ‘ಈ ಭೂಮಿ ಮೇಲೆ ದೇವರು ನನಗೆ ನೀಡಿರುವ ಅಪರೂಪದ ಜನ್ಮ, ಮನುಷ್ಯ ಜನ್ಮ. ಇದು ನನಗೆ ಸಿಕ್ಕಿರುವ ಭಾಗ್ಯ. ನಾನೇ ಅದೃಷ್ಟವಂತ’ ಎಂದು ನಮಗೆ ನಾವೇ ಅಂದುಕೊಳ್ಳಬೇಕು. ಅಂತೆಯೇ ಬದುಕನ್ನು ಸುಂದರವಾಗಿ ರೂಪಿಸಿಕೊಂಡು ಪ್ರತಿ ಕ್ಷಣದಲ್ಲೂ ಸಂತೋಷವನ್ನು ಹುಡುಕಿ ಬದುಕಬೇಕು.
ಸಂತೋಷವನ್ನು ಕಂಡುಕೊಳ್ಳಲು ಕೇವಲ ಮೂರು ಸೂತ್ರಗಳನ್ನು ಅನುಸರಿಸಿ :-
ಜೀವನದಲ್ಲಿ ನಾವು ಅನೇಕ ಬಾರಿ, ಹಲವು ಕಾರಣಗಳಿಗೆ ಬೇಸರಗೊಳ್ಳುತ್ತೇವೆ. ಕಾರಣವೇ ಇಲ್ಲದೆ ಮನಸ್ಸಿಗೆ ಖೇದವಾಗುತ್ತದೆ. ಅದೇ ನೋವಿನಲ್ಲೇ ನಾವು ಎಷ್ಟೋ ಅಮೂಲ್ಯ ಸಮಯವನ್ನು ಹಾಳುಮಾಡಿಕೊಂಡಿರುತ್ತೇವೆ. ನಮಗೆ ಬೇಸರವಾದಾಗ ಅದರಿಂದ ಹೊರಬರುವ ಮಾರ್ಗವನ್ನು ನಾವೇ ಕಂಡುಕೊಳ್ಳಬೇಕು. ‘ಬೇಸರವಾದಾಗ ನಾನು ಇಂತಹ ಕೆಲಸ ಮಾಡಬೇಕು’ ಎಂದುಕೊಂಡು ಅದೇ ದಾರಿಯಲ್ಲಿ ಸಾಗಬೇಕು. ನಮ್ಮ ಮನಸ್ಸು ಸಂತಸಗೊಳ್ಳುವ ಹಾದಿಯನ್ನು ಕಂಡುಕೊಂಡು ಆ ಹಾದಿಯಲ್ಲೇ ಮುಂದುವರಿಯಬೇಕು. ಬೇಸರ ಕಳೆಯಲು ಏನಾದರೂ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಅಡುಗೆ ಮಾಡುವುದನ್ನು ಕಲಿಯಬೇಕು. ಪ್ರತಿ ದಿನ ಹೊಸ ಹೊಸ ಪ್ರಯೋಗಗಳಲ್ಲಿ ತೊಡಗಿಸಿಕೊಳ್ಳಬೇಕು. ಇದು ನಿಮ್ಮ ಮನಸ್ಸು ದುಃಖ, ನಿರಾಸೆಯೆಡೆಗೆ ಸುಳಿಯದಂತೆ ಮಾಡುತ್ತದೆ, ಜೊತೆಗೆ ಮನಸ್ಸನ್ನು ಸಂತಸದಿಂದಿರುವಂತೆ ನೋಡಿಕೊಳ್ಳುತ್ತದೆ.
ಸ್ನೇಹಿತರು ಮತ್ತು ಬಂಧುಗಳು ನಮ್ಮ ಸಂತೋಷದ ಪಾಲುದಾರರಾಗಿರುತ್ತಾರೆ. ನಮ್ಮ ಪ್ರತಿ ನೋವು, ನಲಿವಿನಲ್ಲೂ ಜೊತೆಯಾಗುವುದು ನಮ್ಮ ಸ್ನೇಹಿತರೇ. ಕೆಲಸವಿಲ್ಲದೇ ಅಲೆಯುತ್ತಿದ್ದಾಗ, ಕಾಯಿಲೆ ಬಿದ್ದು ಹಾಸಿಗೆಯಲ್ಲಿ ಮಲಗಿದ್ದಾಗ, ಪರಮಾಪ್ತರು ನಮ್ಮಿಂದ ದೂರವಾದಾಗ, ಆ ನೋವನ್ನೆಲ್ಲ ನಮ್ಮಿಂದ ಭರಿಸಲು ಸಾಧ್ಯವಾಗುವುದು ನಮ್ಮ ಸ್ನೇಹಿತರು ಮತ್ತು ಬಂಧುಗಳಿಗೆ ಮಾತ್ರ. ನಮ್ಮನ್ನು ಪ್ರೀತಿಸುವವರನ್ನು ನಾವು ಪ್ರೀತಿಸಿದರೆ ನಮ್ಮೊಳಗಿನ ನೋವುಗಳಲ್ಲಿ ಅವರು ಜೊತೆಯಾಗುತ್ತಾರೆ. ಮನುಷ್ಯರು ನಂಬಿಕೆಗೆ ಆರ್ಹರಲ್ಲ ಎನ್ನಿಸಿದರೆ – ಪ್ರಾಣಿ, ಪಕ್ಷಿಗಳನ್ನು ಪ್ರೀತಿಸಬೇಕು. ಆ ಪ್ರೀತಿಗೆ ನೋವು ಮರೆಸುವ ಮಾಂತ್ರಿಕ ಶಕ್ತಿಯಿದೆ.
ನಮ್ಮ ಜೀವನದಲ್ಲಿ ಏನಾದರೂ ಒಂದು ಹೊಸ ಸಂಗತಿ ಘಟಿಸುತ್ತದೆ ಎಂದು ನಂಬುವುದರಲ್ಲಿ ಸಂತೋಷದ ಗುಟ್ಟಿದೆ. ನಂಬಿಕೆ ಸಂತೋಷದ ಬುನಾದಿ. ನಾವು ಅಂದುಕೊಂಡ ಗುರಿ ತಲುಪಲು ಕೂಡ ನಂಬಿಕೆಯಿಂದ ಸಾಧ್ಯ. ನಮ್ಮ ಪ್ರತಿ ಸಂತೋಷವೂ ಕೂಡ ನಾವು ಮಾಡಿದ ಕೆಲಸವನ್ನು ಅವಲಂಬಿಸಿದೆ.
ಪ್ರತಿಯೊಬ್ಬರಿಗೂ ಜೀವನದಲ್ಲಿ ಏನಾದರೊಂದು ಗುರಿ ಇರಬೇಕು, ಆ ಗುರಿಯನ್ನು ಸಾಧಿಸಬೇಕು ಎಂಬ ಕನಸು ಇರಬೇಕು. ಆ ಗುರಿಯನ್ನು ನಾನು ಮುಟ್ಟಿಯೇ ತೀರುತ್ತೇನೆ ಎಂಬ ಛಲವಿರಬೇಕು. ನಾವು ಅಂದುಕೊಂಡ ಗುರಿ ಸಾಧಿಸದಿದ್ದರೆ ನಾವು ಸಂತೃಪ್ತರಾಗುವುದಿಲ್ಲ. ಸಂತೃಪ್ತಭಾವವು ಖುಷಿಯನ್ನು ಹರಡುವ ಮನೋಭಾವ. ನಾವು ಮಾಡುವ ಕೆಲಸ, ನಮ್ಮ ಸ್ನೇಹಿತರು ಹಾಗೂ ಬಂಧುಗಳ ನಡುವೆ ನಂಬಿಕೆಯನ್ನು ಕಳೆದುಕೊಂಡರೆ ನಮ್ಮೊಳಗಿನ ಸಂತೋಷವನ್ನು ನಾವೇ ಕಳೆದುಕೊಂಡಂತೆ.
ನಮ್ಮೊಳಗೇ ಇರುವ ಸಂತೋಷವನ್ನು ನಾವೇ ಕಂಡುಕೊಳ್ಳಬೇಕು. ಸಂತೋಷವನ್ನು ಅನುಭವಿಸುವುದೆಂದರೆ, ಈ ಬದುಕನ್ನು ಸಾರ್ಥಕಗೊಳಿಸಿಕೊಳ್ಳುವುದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭಾರತದ ಸ್ಪೈಡರ್ ಮ್ಯಾನ್ ಎಂದೇ ಹೆಸರುಗಳಿಸಿರುವ ಚಿತ್ರದುರ್ಗದ ಕೋತಿರಾಜು ಅಲಿಯಾಸ್ ಜೋತಿರಾಜು ಬಗ್ಗೆ ನಿಮಗೆ ಗೊತ್ತೇ? ನೀವು ಚಿತ್ರದುರ್ಗದ ಕೋಟೆಗೆ ಭೇಟಿ ನೀಡಿದ್ದರೆ ನೀವು ಇವರ ಸಾಹಸಮಯ ಆಟಗಳನ್ನು ನೋಡಿರಬಹುದು, ಇವರು ನೂರಾರು ಅಡಿ ಎತ್ತರದ ಗೋಡೆಗಳನ್ನು ಯಾವ ಸಹಾಯವಿಲ್ಲದೆಯೇ ಮೇಲೇರುತ್ತಾರೆ!
ಪತಿಯ ಎದುರೇ ಪತ್ನಿಯನ್ನು ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರಾಮ್ಪುರ್ ಜಿಲ್ಲೆಯಲ್ಲಿ ಜೂನ್ 11ರಂದು ನಾಲ್ವರು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಈ ಸಂಬಂಧ ದಂಪತಿ ಪೊಲೀಸರಿಗೆ ಯಾವುದೇ ದೂರು ನೀಡಿರಲಿಲ್ಲ. ಆದರೆ ಈಗ ಪತಿಯೊಂದಿಗೆ ಸೆಕ್ಸ್ ಮಾಡಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಂತ್ರಸ್ತೆ ಪೊಲೀಸ್ ಮೆಟ್ಟಿಲೇರಿದ್ದಾಳೆ. ಪತಿಯೊಂದಿಗೆ ಬರುತ್ತಿದ್ದಾಗ ನಾಲ್ಕು ಜನರ ಗುಂಪು ನಮ್ಮನ್ನು ತಡೆಯಿತು. ಬಳಿಕ ಪತಿಯ ಮೇಲೆ ಹಲ್ಲೆ…
ಇಂದು ಮಂಗಳವಾರ, 06/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ಇತಿಹಾಸ ಪ್ರಸಿದ್ಧ ಹಾಸನಾಂಬ ದೇವಿ ದೇವಸ್ಥಾನದ ಬಾಗಿಲು ಅ.17ರಿಂದ ತೆರೆಯಲಿದ್ದು, ಭಕ್ತರಿಗೆ 13 ದಿನಗಳ ಕಾಲ ದೇವಿಯ ದರ್ಶನ ಭಾಗ್ಯ ಲಭಿಸಲಿದೆ. ಅಕ್ಟೋಬರ್ 17ರ ಗುರುವಾರ ಮಧ್ಯಾಹ್ನ 12.30ಕ್ಕೆ ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆಯಲು ಆಗಮಿಸಲಿದ್ದಾರೆ. ಆದ್ದರಿಂದ, ಜಿಲ್ಲಾಡಳಿತ ಅಗತ್ಯ ವ್ಯವಸ್ಥೆಗಳನ್ನು ಮಾಡುತ್ತಿದೆ. ದೇವಿಯ ದರ್ಶನಕ್ಕೆ ರಾಜ್ಯ, ಹೊರ ರಾಜ್ಯದಿಂದಲೂ ಸಹಸ್ತ್ರಾರು ಸಂಖ್ಯೆಯ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತೆ ಕಲ್ಪಿಸಲು ಜಿಲ್ಲಾಧಿಕಾರಿ ಗಿರೀಶ್, ಅಪರ ಜಿಲ್ಲಾಧಿಕಾರಿ ನಾಗರಾಜ್, ತಹಸೀಲ್ದಾರ್…
ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ಪೈಪೋಟಿ ನೀಡಿ, ಟೆಲಿಕಾಂ ಕಂಪನಿಗಳ ಬೆವರಿಲಿಸಿದ್ದ, ಮುಖೇಶ್ ಅಂಬಾನಿ ಮಾಲಿಕತ್ವದ ರಿಲಾಯನ್ಸ್ ಜಿಯೋ ಕಂಪನಿ ಈಗ ಮತ್ತೊಂದು ಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸಲು ಸಜ್ಜಾಗಿದೆ.
ಗ್ಯಾಸ್ಟ್ರಿಕ್ ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಕಾಡುತ್ತಿರುವ ಸಮಸ್ಯೆ. ಈಗ ತಾನೇ ಹುಟ್ಟಿದ ಮಗುವು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತದೆ ಎಂದರೆ ನಂಬುತ್ತೀರಾ? ನಂಬಲೇಬೇಕು, ಏಕೆಂದರೆ ಈಗ ನಾವು ಬಳಸುತ್ತಿರುವ ಆಹಾರದಲ್ಲಿ ಪೋಷಕಾಂಶ ಕಡಿಮೆ, ಕೆಮಿಕಲ್ ಹೆಚ್ಚು. ಇದನ್ನು ಸ್ವತಃ ಆಹಾರ ತಜ್ಞರೇ ಒಪ್ಪಿಕೊಳ್ಳುತ್ತಾರೆ. ಆದರೇನು ಮಾಡುವುದು ದಿನನಿತ್ಯ ಲಭ್ಯವಿರುವ ತಾಜಾ ತರಕಾರಿ, ಆಹಾರವನ್ನು ಸೇವಿಸಿ ಈ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಹೋಗಲಾಡಿಸುವುದು ಹೇಗೆಂದು ಇಲ್ಲಿ ಪರಿಹಾರ ಕೊಡಲಾಗಿದೆ. ಓದಿ. ಸದುಪಯೋಗಪಡಿಸಿಕೊಳ್ಳಿ. ಒಂದು ಚಿಕ್ಕ ತುಂಡು ಶುಂಠಿಯನ್ನು ಜಜ್ಜಿ ಒಂದು ಲೋಟ ನೀರಿಗೆ…