ಜ್ಯೋತಿಷ್ಯ

ನಿಮ್ಮ ಮಂಗಳವಾರದ ರಾಶಿ ಭವಿಷ್ಯ ಶುಭವೋ ಅಶುಭವೋ ಈ ಲೇಖನ ನೋಡಿ ತಿಳಿಯಿರಿ…

562

ಮಂಗಳವಾರ, 27/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

ಮೇಷ:

ಅಧಿಕಾರಿಗಳ ಅವಕೃಪೆಗೆ ಪಾತ್ರರಾಗುವ ಸಾಧ್ಯತೆ. ಖರ್ಚುವೆಚ್ಚಗಳಲ್ಲಿ ಮಿತಿ ಇರಲಿ. ಆಗಾಗ ಮಾನಸಿಕ ಸ್ಥಿರತೆ ಇರದು. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ದೊರಕಲಿವೆ. ಹಾಗೆ ಯೋಗ್ಯ ವಯಸ್ಕರಿಗೆ ಕಂಕಣಭಾಗ್ಯ ಒದಗುತ್ತದೆ. ಅತಿಯಾದ ಕೋಪವನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳುವುದು ಉತ್ತಮ. ಕಷ್ಟವಾದರೂ ವ್ಯವಹಾರದಲ್ಲಿ ಉತ್ತಮ ಸಾಧನೆಯನ್ನು ಮಾಡಲಿದ್ದೀರಿ.

ವೃಷಭ:-

ಸಾಂಸಾರಿಕವಾಗಿ ಪತ್ನಿ ಹಾಗೂ ಮಕ್ಕಳಿಂದ ಸುಖ ಸಮಾಧಾನ ವಿರುತ್ತದೆ. ವ್ಯವಹಾರ ಕ್ಷೇತ್ರದಲ್ಲಿ ಗಳಿಕೆ ಅಧಿಕಗೊಂಡು ಉತ್ತಮ ಆದಾಯ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಅಗತ್ಯ. ಮಕ್ಕಳ ವಿವಾಹ ಸಂಬಂಧಿಸಿದ ಪ್ರಯತ್ನಗಳು ಫಲಕಾರಿಯಾಗುವವು. ಆರ್ಥಿಕವಾಗಿ ಉನ್ನತಿಯಿಂದ ಕಾರ್ಯಾನುಕೂಲವಾಗಲಿದೆ. ಅತಿಥಿಗಳ ಸಹಕಾರದಿಂದ ನೆಮ್ಮದಿ ತಂದೀತು.

 

ಮಿಥುನ:

ಅಪರೂಪದ ಬಂಧುಗಳ ಭೇಟಿ ಅಥವಾ ಆಗಮನ ಸಾಧ್ಯತೆ. ನಾನಾ ರೀತಿಯಲ್ಲಿ ಧನಾಗಮನವಿರುತ್ತದೆ. ಕೆಟ್ಟ ಕೆಲಸಕಾರ್ಯಗಳಿಗಾಗಿ ಪ್ರಚೋದಿತರಾಗದಿರಿ. ಉತ್ತಮ ಸಂಬಂಧಗಳ ಜೋಡನೆ ಕಂಕಣಭ್ಯಾಗವನ್ನು ತಂದು ಕೊಡಲಿದೆ. ಮುಂದುವರಿಯಿರಿ. ಅಧಿಕಾರಿಗಳಿಂದ ಪ್ರಶಂಸೆಗಳನ್ನು ಗಳಿಸಿಕೊಳ್ಳಲಿದ್ದೀರಿ. ಆಕಾಂಕ್ಷಿಗಳಿಗೆ ಸಂತಾನ ಪ್ರಾಪ್ತಿಯಾಗುವ ಸಾದ್ಯತೆ. ಪಂಡಿತರು, ಸಾಧಕರಿಗೆ ಉತ್ತಮ ಮನ್ನಣೆ.

ಕಟಕ :-

ವಿದ್ಯಾರ್ಥಿಗಳು ಉದಾಸೀನತೆ ತೋರದೆ ಮುಂದುವರಿಯಬೇಕಾಗುತ್ತದೆ. ಆಸೆ ಆಕಾಂಕ್ಷೆಗಳು ಸುಗಮವಾಗಿ ನೆರವೇರುವುದರಿಂದ ಮಾನಸಿಕ ನೆಮ್ಮದಿ. ಮಕ್ಕಳ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ವಸ್ತ್ರಾಭರಣ ಖರೀದಿ ಸಾಧ್ಯತೆ ಕಂಡುಬರುವುದು. ಸಾಂಸಾರಿಕವಾಗಿ ಹೆಂಡತಿಯ ಸಲಹೆಗಳಿಗೆ ಸ್ಪಂದಿಸಬೇಕಾಗುತ್ತದೆ. ದಿನಾಂತ್ಯದಲ್ಲಿ ಧನಾಗಮನದಿಂದ ಕಾರ್ಯಸಿದ್ಧಿ ಇದೆ.

 

 

 ಸಿಂಹ:

ಉತ್ತಮ ಆರೋಗ್ಯ ಹೊಂದುವಿರಿ. ಉತ್ತಮ ದಾಂಪತ್ಯ ಜೀವನ ನಿಮ್ಮದಾಗಲಿದೆ. ವ್ಯವಹಾರದಲ್ಲಿ ಹೆಚ್ಚಳ ಕಂಡುಬರುವ ಸಾಧ್ಯತೆ. ಆದಾಯದಲ್ಲಿ ಹೆಚ್ಚಳದಿಂದ ಆರ್ಥಿಕ ಅಭಿವೃದ್ಧಿಗೆ ನಾಂದಿ. ಗಳಲ್ಲಿ ನಿಮ್ಮ ಪ್ರಯತ್ನಬಲ ಸಫ‌ಲವಾದೀತು. ಆರ್ಥಿಕ ವಿಚಾರಗಳಲ್ಲಿ ಜಾಗ್ರತೆ ವಹಿಸಬೇಕು. ಯಾವುದೇ ವಿಚಾರದಲ್ಲಿ ದುಡುಕದೆ ಮುಂದುವರಿಯಬೇಕಾಗುತ್ತದೆ. ವ್ಯಾಪಾರ ವ್ಯವಹಾರ

ಕನ್ಯಾ :-

ದೇವತಾ ಕಾರ್ಯಗಳಿಗಾಗಿ ಸಂಚಾರವಿದೆ. ಬಂಧುಗಳೊಂದಿಗೆ ಮೃಷ್ಠಾನ್ನ ಭೋಜನ ಸವಿಯುವ ಸಾಧ್ಯತೆ. ಮಹಿಳೆಯರು ಪ್ರಯಾಣ ಕಾಲದಲ್ಲಿ ಕಳ್ಳರ ಭಯವನ್ನು ಎದುರಿಸಬೇಕಾಗುವ ಸಾಧ್ಯತೆ ಕಂಡುಬರುವುದು. ವಿದ್ಯಾರ್ಥಿಗಳಿಗೆ ಉತ್ತಮ ಫ‌ಲಿತಾಂಶ ತಂದು ಕೊಡಲಿದೆ. ಅನಿರೀಕ್ಷಿತ ಉದ್ಯೋಗ ಲಾಭದಿಂದ ಅಚ್ಚರಿ ತರುತ್ತದೆ. ಮಿತ್ರರ ಸಹಕಾರದಿಂದ ಕಾರ್ಯಸಿದ್ಧಿ ಇದೆ.

ತುಲಾ:

ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಯಶಸ್ಸು. ವ್ಯವಹಾರದಲ್ಲಿ ಉತ್ತಮ ಪ್ರತಿಫಲ. ವ್ಯಾಪಾರ ವ್ಯವಹಾರಸ್ಥರಿಗೆ ಅಧಿಕ ರೂಪದಲ್ಲಿ ಆದಾಯ ವರ್ಧಿಸಲಿದೆ. ಆರ್ಥಿಕ ಸ್ಥಿತಿ ಉತ್ತಮವಿದ್ದರೂ ಖರ್ಚುವೆಚ್ಚಗಳಲ್ಲಿ ಮಿತಿ ಇರಬೇಕು. ದಿನಾಂತ್ಯದಲ್ಲಿ ಕಿರು ಸಂಚಾರದ ಸಾಧ್ಯತೆ ಇದೆ. ಆದಾಯದಲ್ಲಿ ಹೆಚ್ಚಳ. ಆರೋಗ್ಯದಲ್ಲಿ ಉತ್ತಮ. ಸಂಗಾತಿಯೊಂದಿಗೆ ಸ್ನೇಹಪರ ಮಾತುಕತೆ. ದಿನವಿಡೀ ಸಂತಸದ ಹೊನಲು.

ವೃಶ್ಚಿಕ :-

ಯೋಗ್ಯ ವಯಸ್ಕರು ಬಂದ ಅವಕಾಶಗಳನ್ನು ಸದುಪಯೋಗಿಸಬೇಕು. ಶ್ರಮಕ್ಕೆ ತಕ್ಕ ಪ್ರತಿಫಲ. ಅತಿಯಾದ ಪ್ರಯಾಣದ ಆಲಸ್ಯ ಉಂಟಾಗುವ ಸಾಧ್ಯತೆ. ಸ್ತ್ರೀಯರಿಂದ ಅವಮಾನಕರ ಸನ್ನಿವೇಶ ಎದುರಾದೀತು. ಮಾನಸಿಕ ನೆಮ್ಮದಿಯನ್ನು ಕೆಡಿಸಿಕೊಳ್ಳದೇ ದೃಢ ಚಿತ್ತತೆ ಕಾಪಾಡಿಕೊಳ್ಳಿ. ವೃತ್ತಿರಂಗದಲ್ಲಿ ಮುನ್ನಡೆ ತೋರಿ ಬಂದರೂ ಕಿರಿಕಿರಿ ತಪ್ಪಲಾರದು. ವಾಹನ ಚಾಲನೆಯಲ್ಲಿ ಹೆಚ್ಚಿನ ಜಾಗ್ರತೆ ಇರಲಿ.

 

ಧನಸ್ಸು:

ವಿದ್ಯಾರ್ಥಿಗಳ ಪ್ರಯತ್ನಬಲ ಮುನ್ನಡೆಗೆ ಸಾಧನವಾಗಲಿದೆ. ವಾಹನ ಖರೀದಿ ಸಾಧ್ಯತೆ. ಉತ್ತಮ ದಾಂಪತ್ಯ ಜೀವನ. ರೈತಾಪಿ ವರ್ಗದವರಿಗೆ ಹೈನುಗಾರಿಕೆ ನಡೆಸುವವರಿಗೆ ಒಳ್ಳೆಯ ಆದಾಯ. ಉನ್ನತಾಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾಗುವಿರಿ. ಧಾರ್ಮಿಕತೆಯಲ್ಲಿ ಶಾಂತಿ ಸಮಾಧಾನ ಸಿಗಲಿದೆ. ಸಾಮಾಜಿಕವಾಗಿ ಕಾರ್ಯಗಳಿಂದ ನಿಮ್ಮ ಕ್ರಿಯಾಶೀಲತೆ ಪ್ರಕಟವಾದೀತು.

ಮಕರ :-

ಜ್ಞಾನಾರ್ಜನೆಗಾಗಿ ಪರಸ್ಥಳದಲ್ಲಿ ವಾಸಿಸಬೇಕಾದ ಅಥವಾ ದೂರ ಪ್ರಯಾಣ ಕೈಗೊಳ್ಳಬೇಕಾದ ಪ್ರಸಂಗ ಎದುರಾದೀತು. ಸಂಚಾರದಲ್ಲಿ ಹೆಚ್ಚಿನ ಗಮನ ಹರಿಸಬೇಕು. ಕಾರ್ಯಒತ್ತಡಗಳು ಆಗಾಗ ತೋರಿ ಬರುತ್ತವೆೆ. ಸಾಂಸಾರಿಕವಾಗಿ ಚೇತರಿಕೆ ಕಂಡು ಬರುತ್ತದೆ. ಹಣಕಾಸಿನ ಬಗ್ಗೆ ಹಿಡಿತ ಬಲವಿದ್ದಷ್ಟು ಉತ್ತಮ.ಜ್ಞಾನದೊಂದಿಗೆ ಧನಾರ್ಜನೆಯ ಕೆಲಸವೂ ನಡೆಯಲಿದೆ. ಸಜ್ಜನರ ಸಾಂಗತ್ಯದಿಂದ ನೆಮ್ಮದಿ.

ಕುಂಭ:-

ಕಟ್ಟಡ-ಮನೆ ಮಾರಾಟ, ಫ್ಲಾಟ್‌ ಖರೀದಿಗೆ ಅನುಕೂಲವಾಗಲಿದೆ. ಉನ್ನತ ಅಧಿಕಾರಿಗಳ ನೆರವಿನಿಂದ ಉದ್ಯೋಗದಲ್ಲಿ ಸ್ಥಿರತೆ. ಆದಾಯದಲ್ಲಿ ಹೆಚ್ಚಳವನ್ನು ಕಂಡುಕೊಳ್ಳುವಿರಿ. ಹೊಸ ಯೋಜನೆ ರೂಪಿಸುವ ಸಲುವಾಗಿ ಸಮಾಲೋಚನೆ ನಡೆಸಲಿದ್ದೀರಿ. ಹಿತ ಶತ್ರು ಹಿತವಚನದಿಂದಲೇ ತಣ್ಣಗಾದಾರು. ಮಕ್ಕಳ ವಿವಾಹ ಪ್ರಸ್ತಾವಗಳಿಗೆ ಕಂಕಣಬಲ ಕೂಡಿ ಬರುತ್ತದೆ.

ಮೀನ:-

ಅಧಿಕಾರ ಅಥವಾ ಉದ್ಯೋಗದಲ್ಲಿ ಬದಲಾವಣೆ ನಿರೀಕ್ಷಿಸಬಹುದು. ಉತ್ತಮ ಸಹವಾಸ ದೊರಕಲಿದೆ. ಆಪ್ತೆಷ್ಟರ ಸಲಹೆಗಳು ಉಪಯುಕ್ತವಾಗಲಿವೆ. ವಿದ್ಯಾರ್ಥಿಗಳಿಗೆ ದುರ್ಜನರ ಸಂಗ ದುಶ್ಚಟ ಕಲಿಸ‌ಬಹುದು. ಆಫೀಸಿನಲ್ಲಿ ಸ್ತ್ರೀಯರ ಅಪವಾದ ಭೀತಿ ತಂದೀತು. ಜಾಗ್ರತೆ ಇರಲಿ. ಎಲ್ಲ ಕಡೆಯಿಂದಲೂ ಗೌರವಾದರಗಳನ್ನು ಪಡೆದುಕೊಳ್ಳಲಿದ್ದೀರಿ. ವಿದೇಶದಲ್ಲಿರುವ ಬಂಧುಗಳಿಂದ ಸಹಾಯ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • inspirational, ಭವಿಷ್ಯ

    ಶ್ರೀ ಸಿಗಂದೂರು ಚೌಡೇಶ್ವರಿ ದೇವಿಯ ಕೃಪೆ ಇಂದ ನಿಮ್ಮ ರಾಶಿ ಪಲ ಹೇಗಿದೆ ನೋಡಿ…..

    ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ಸರ್ಕಾರಿ ಕೆಲಸದಲ್ಲಿ ಅನ್ಯರ ಹಸ್ತಕ್ಷೇಪದಿಂದ ತೊಂದರೆ ಎದುರಾಗುವುದು. ಹಾಗಾಗಿ ಯಾರೊಡನೆಯೂ ಗುಟ್ಟು ಬಿಟ್ಟುಕೊಡದಿರಿ. ವಾಹನದಲ್ಲಿ ಸಂಚರಿಸುವಾಗ ದುರ್ಗಾದೇವಿಯ ಸ್ತೋತ್ರವನ್ನು ಪಠಿಸಿ. ಹಣಕಾಸು ಉತ್ತಮವಾಗಿರುವುದು. . ನಿಮ್ಮ ಸಮಸ್ಯೆಏನೇಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ…

  • ಸುದ್ದಿ

    ಆನ್‍ಲೈನ್ ಫುಡ್ ಪ್ರಿಯರೆ ದಯವಿಟ್ಟು ಇದನ್ನೊಮ್ಮೆ ಓದಿ, ಇದನ್ನು ನೀವು ತಪ್ಪದೇ ತಿಳಿದುಕೊಳ್ಳಬೇಕು,.!

    ಆನ್‍ಲೈನ್‍ನಲ್ಲಿ ಫುಡ್ ಆರ್ಡರ್ ಮಾಡುವ ಮುನ್ನ ಗ್ರಾಹಕರೇ ಹುಷಾರಾಗಿರಿ. ಯಾಕೆಂದರೆ ಬೆಂಗಳೂರಿನ ಹಲವೆಡೆ ಆನ್‍ಲೈನ್ ಫುಡ್ ಮಾಫಿಯಾ ನಡೆಯುತ್ತಿದೆ. ಇಂದಿನ ಬ್ಯುಸಿ ಶೆಡ್ಯೂಲ್ ನಲ್ಲಿ ಜನರಿಗೆ ಅಡುಗೆ ಮಾಡಿಕೊಂಡು ಊಟ ಮಾಡಲು ಸಹ ಸಮಯ ಇಲ್ಲ. ಸಿಲಿಕಾನ್ ಸಿಟಿಯಂತಹ ಮಹಾನಗರಗಳಲ್ಲಿ ಬಹುತೇಕರು ಆನ್‍ಲೈನ್ ಫುಡ್ ತರಿಸೋ ಮೂಲಕ ಸಮಯ ಉಳಿಸುವ ಪ್ರಯತ್ನಕ್ಕೆ ಮುಂದಾಗುತ್ತಾರೆ. ಒಮ್ಮೆ ನೀವು ಆರ್ಡರ್ ಮಾಡುವ ಆಹಾರ ತಯಾರಾಗುವ ಸ್ಥಳ ನೋಡಿದ್ರೆ ಬೇಡಪ್ಪ ಬೇಡ ಅನ್‍ಲೈನ್ ಅನ್ನೋದು ಗ್ಯಾರೆಂಟಿ. ಬೆಂಗಳೂರಿನ ಎಚ್‍ಎಸ್‍ಆರ್ ಲೇಔಟ್‍ನ ಕರಾವಳಿ…

  • ಉಪಯುಕ್ತ ಮಾಹಿತಿ

    ನಿಮ್ಮ ಮೂಗಿನ ಮೇಲಿನ ಬ್ಲಾಕ್ ಹೆಡ್ಸ್ ಅನ್ನು ಸುಲಭವಾಗಿ ಹೋಗಲಾಡಿಸಬಹುದು ಹೇಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    ನಿಮ್ಮ ಮುಖ ಸುಂದರವಾಗಿದ್ದರೂ ಈ ಬ್ಲಾಕ್ ಹೆಡ್ಸ್ ನಿಂದಾಗಿ ಕಿರಿಕಿರಿಯಾಗುತ್ತದೆ.. ಇದರಿಂದ ಕೆಲವು ಬಾರಿ ಮುಜುಗರಕ್ಕೂ ಒಳಗಾಗುತ್ತೇವೆ.. ಪ್ರತಿ ಬಾರಿ ಬ್ಯೂಟಿ ಪಾರ್ಲರ್ ಗೆ ಹೋಗಿ ತೆಗಿಸಲು ಸಾಧ್ಯವಿಲ್ಲ.. ಅದರಲ್ಲೂ ಹುಡುಗರು ಪಾರ್ಲರ್ ಗಳಲ್ಲಿ ತೆಗೆಸಲು ಮುಜುಗರವೂ ಆಗುತ್ತದೆ.. ಇದಕ್ಕಾಗಿಯೇ ಮನೆ ಮದ್ದುಗಳ ಮೊರೆ ಹೋಗುವುದೇ ಒಳ್ಳೆಯದು.. ನಿಮಗಾಗಿಯೇ ಇಲ್ಲಿ ಕೆಲವು ಮನೆಮದ್ದುಗಳ ಮಾಹಿತಿ ನೀಡಿದ್ದೇವೆ ನೋಡಿ..

  • ಆಧ್ಯಾತ್ಮ

    ದೇವಸ್ಥಾನದಲ್ಲಿ ಪ್ರದಕ್ಷಿಣೆ ಯಾಕೆ ಮಾಡಬೇಕು ಗೊತ್ತಾ! ಈ ಕಾರಣಕ್ಕಾಗಿ ಮಾಡಬೇಕು!

    ಪ್ರದಕ್ಷಿಣೆ ಯಾಕೆ ಹಾಕುತ್ತೇವೆ ? ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಭಗವಂತನ ಬಳಿ ನಿನ್ನ ಬಿಟ್ಟರೆ ನಮ್ಮನ್ನು ಕಾಯುವವರು ಯಾರೂ ಇಲ್ಲ, ನೀನು ತೋರಿಸಿದ ಮಾರ್ಗದಲ್ಲಿ ನಡೆಯುತ್ತೇವೆ ಎಂಬುದು ಈ ಪ್ರದಕ್ಷಿಣೆ ಅರ್ಥ. ದೇವಸ್ಥಾನದಲ್ಲಿ ಪ್ರದಕ್ಷಿಣೆಯನ್ನು ಎಷ್ಟು ಪ್ರದಕ್ಷಿಣೆ ಹಾಕಬೇಕು? ಯಾವ್ಯಾವ ದೇವರಿಗೆ ಎಷ್ಟು ಬಾರಿ ಪ್ರದಕ್ಷಿಣೆ ಮಾಡಿದರೆ ಏನು ಫಲ ಎಂಬುದನ್ನು ತಿಳಿಯೋಣ. ಹಿಂದೂ ಪುರಾಣಗಳ ಪ್ರಕಾರ ದೇವರಿಗೆ ಹಾಕುವ ಪ್ರದಕ್ಷಿಣೆ ಬಗ್ಗೆ ಹಲವಾರು ಕಥೆಗಳಿವೆ. ಇವುಗಳಲ್ಲಿ ಶಿವ, ಗಣಪತಿ ಮತ್ತು ಕಾರ್ತೀಕೇಯನ ಕಥೆಯು ನಮ್ಮೆಲ್ಲರಿಗೆ ತಿಳಿದಿರುವಂತಾಗಿದೆ. ಶಿವ…

  • ಸುದ್ದಿ

    ಶಾಕಿಂಗ್ ನ್ಯೂಸ್!ಯಲಹಂಕ ಏರ್ ಶೋ ನೋಡಲು ಹೋದವರ 150ಕ್ಕೂ ಹೆಚ್ಚು ಕಾರುಗಳು ಭಸ್ಮ?ಬಂದ್ ಆಯ್ತು ಏರ್ ಶೋ

    ಏರೋ ಇಂಡಿಯಾ 2019ರ ಏರ್ ಶೋ ನೋಡಲು ರಾಜಧಾನಿ ಬೆಂಗಳೂರಿನ ಯಲಹಂಕಕ್ಕೆ ಆಗಮಿಸಿದ್ದರು, ಎಲ್ಲರೂ ತಮ್ಮ ಕಾರುಗಳನ್ನು ಪಾರ್ಕ್ ಮಾಡಿ ವೈಮಾನಿಕ ಪ್ರದರ್ಶನವನ್ನು ನೋಡುವಲ್ಲಿ ಮುಳುಗಿ ಹೋಗಿದ್ದರು, ಆದರೆ ನೋಡು ನೋಡುತ್ತಿದ್ದಂತೆಯೇ ಕಣ್ಣ ಮುಂದೆಯೇ ಕಷ್ಟ ಪಟ್ಟು ತೆಗೆದುಕೊಂಡಿದ್ದ ಕಾರುಗಳು ಭಸ್ಮವಾದವು. ಏರ್ ಶೋ ನಡೆಯುತ್ತಿದ್ದ ಸಂದರ್ಭದಲ್ಲೇ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಗೇಟ್ ನಂಬರ್ 5 ರ ಪಾರ್ಕಿಂಗ್ ಸ್ಥಳದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಸುಮಾರು 150ಕ್ಕೂ ಹೆಚ್ಚು ಕಾರುಗಳು ಸುಟ್ಟು ಕರಕಲಾಗಿದೆ. ಸ್ಥಳಕ್ಕೆ 10…

  • ಸುದ್ದಿ

    170 ಕ್ಕೂ ಹೆಚ್ಚು ಭತ್ತದ ತಳಿಗಳ ಜೋಪಾನ ಮಾಡಿದ್ದ ಜಯರಾಮನ್ …!

    ಭಾರತದ ಕೃಷಿ ಕ್ಷೇತ್ರದಲ್ಲಿ ಪ್ರಮುಖ ಹೆಸರಾಗಿದ್ದ, ನೂರಾರು ಭತ್ತದ ತಳಿಗಳ ಪುನಶ್ಚೇತನಕ್ಕೆ ಕಾರಣರಾಗಿದ್ದ ತಮಿಳ್ನಾಡಿನ ಕೆ ಆರ್ ಜಯರಾಮನ್ ನಿಧನರಾಗಿದ್ದಾರೆ. ಅವರು ಕ್ಯಾನ್ಸರಿನಿಂದ ಬಳಲುತ್ತಿದ್ದರು.ನೆಲ್ (ಭತ್ತವನ್ನು ತಮಿಳಿನಲ್ಲಿ ಹೀಗೇ ಕರೆಯುತ್ತಾರೆ) ಎಂದೇ ಹೆಚ್ಚು ಪರಿಚಿತರಾಗಿದ್ದ ಜಯರಾಮನ್, 170 ಕ್ಕಿಂತಲೂ ಹೆಚ್ಚು ಸ್ಥಳೀಯ ಭತ್ತದ ವೈವಿಧ್ಯಗಳನ್ನು ಪುನಶ್ಚೇತನಗೊಳಿಸಿದ್ದುರ. ಮಾತ್ರವಲ್ಲ, ತಮಿಳುನಾಡಿನಲ್ಲಿ ಸಾವಯವ ಕೃಷಿಗೆ ಉತ್ತೇಜನ ನೀಡಿದ್ದರು. ತಮಿಳ್ನಾಡಿನಲ್ಲಿ ‘ಸೇವ್ ಅವರ್ ರೈಸ್’ ಅಭಿಯಾನದ ಸಾರಥಿಯಾಗಿದ್ದ ಜಯರಾಮನ್, ಇದಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಹಲವಾರು ಪ್ರಶಸ್ತಿಗಳಿಗೆ ಪಾತ್ರರಾಗಿದ್ದರು.ಬೀಜಗಳ ಸಂರಕ್ಷಣೆ,…