ಸುದ್ದಿ

ಕಾಲ್​ ರಿಸೀವ್​ ಮಾಡಿ, ಮಾಡದೇ ಇರಿ ರಿಂಗ್ ಆಗುವುದು ಮಾತ್ರ 30 ಸೆಕೆಂಡ್ ಅಷ್ಟೇ,,.!

62

ಮೊಬೈಲ್​ ಫೋನ್​ ಬಳಕೆದಾರರು ತಮ್ಮ ಮೊಬೈಲ್​ಗೆ ಬರುವ ಕರೆಯನ್ನು ಸ್ವೀಕರಿಸಲಿ ಅಥವಾ ಸ್ವೀಕರಿಸದಿರಲಿ. ಇನ್ಮುಂದೆ ಕೇವಲ 30 ಸೆಕೆಂಡ್​ ರಿಂಗಣಿಸಲಿದೆ!ಅಂತೆಯೇ ಲ್ಯಾಂಡ್​ಲೈನ್​ ಫೋನ್​ಗಳು 60 ಸೆಕೆಂಡ್​ ರಿಂಗಣಿಸಲಿವೆ!

ಅರೆ, ಇದೇನಿದು ಎಂದು ಹುಬ್ಬೇರಿಸಬೇಡಿ.ಮೊಬೈಲ್​ ಫೋನ್​ಗಳ ರಿಂಗಣವನ್ನು30 ಸೆಕೆಂಡ್​ಗಳಿಗೆ ಮತ್ತು ಲ್ಯಾಂಡ್​ಲೈನ್​ ಫೋನ್​ಗಳ ರಿಂಗಣವನ್ನು 60 ಸೆಕೆಂಡ್​ಗಳಿಗೆ ಸೀಮಿತಗೊಳಿಸಿ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ(ಟ್ರಾಯ್​) ಆದೇಶ ಹೊರಡಿಸಿದೆ.

ಒಳ ಬರುವ ಕರೆಗಳ ರಿಂಗಣ ಸಮಯವನ್ನು ಸೀಮಿತಗೊಳಿಸುವ ನಿಯಮದ ತಿದ್ದುಪಡಿಯಿಂದಾಗಿ ಮೊಬೈಲ್​ಫೋನ್​ ಮತ್ತು ಲ್ಯಾಂಡ್​ಲೈನ್​ ಗ್ರಾಹಕರಿಗೆ ನೀಡಲಾಗುವ ಸೇವೆಗಳ ಗುಣಮಟ್ಟವನ್ನು ಹೆಚ್ಚಿಸಲು ಅನುಕೂಲವಾಗಲಿದೆ ಎಂದು ಟ್ರಾಯ್​ ಹೇಳಿದೆ.

ಕರೆ ರಿಂಗಣ ಸಮಯದ ವಿಷಯವಾಗಿ ರಿಲಯನ್ಸ್​ ಜಿಯೋ ಮತ್ತು ಭಾರ್ತಿ ಏರ್​ಟೆಲ್​ ನಡುವೆ ಜಟಾಪಟಿ ಏರ್ಪಟ್ಟಿತ್ತು. ಮೊಬೈಲ್​ಫೋನ್​ಗಳ ರಿಂಗಣ ಸಮಯವನ್ನು 45 ಸೆಕೆಂಡ್​ಗಳಿಗೆ ನಿಗದಿಪಡಿಸಬೇಕು.ಆ ಮೂಲಕ ಕರೆಸ್ವೀಕರಿಸುತ್ತಿರುವ ನೆಟ್​ವರ್ಕ್​ಗೆ ಕರೆ ಸ್ವೀಕಾರಕ್ಕೆ ಸಾಕಷ್ಟು ಸಮಯಾವಕಾಶ ನೀಡಬೇಕುಎಂದು ಭಾರ್ತಿ ಏರ್​ಟೆಲ್ ​ವಾದಿಸಿತ್ತು. ಈ ಅವಧಿಯನ್ನು 20ರಿಂದ25 ಸೆಕೆಂಡ್​ಗೆ ಸೀಮಿತಗೊಳಿಸಬೇಕು ಎಂದು ರಿಲಯನ್ಸ್​ ಜಿಯೋ ಪ್ರತಿಪಾದಿಸಿತ್ತು. ಆದರೆ  ವೊಡೋಫೋನ್​ ಐಡಿಯಾ ಮಾತ್ರ ರಿಂಗಣದ ಸಮಯವನ್ನು 30 ಸೆಕೆಂಡ್​ಗೆ ಸೀಮಿತಗೊಳಿಸುವಂತೆ ಮನವಿ ಮಾಡಿಕೊಂಡಿತ್ತು. 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ವಿಚಿತ್ರ ಆದರೂ ಸತ್ಯ

    ಈ ವ್ಯಕ್ತಿಯ ಹೊಟ್ಟೆಯಲ್ಲಿ ಸಿಕ್ಕಿದ್ವು,ಬರೋಬರಿ 70ಕ್ಕಿಂತ ಹೆಚ್ಚು ನಾಣ್ಯಗಳು..!ಇದು ಹೇಗೆ ಸಾಧ್ಯ ಅಂತೀರಾ…

    ದಿನದಿಂದ ದಿನಕ್ಕೆ ಒಂದಲ್ಲ ಒಂದು ವಿಶೇಷವಾದ ಸುದ್ದಿಯನ್ನು ನೋಡುತ್ತಲೇ ಇರುತ್ತೇವೆ.ಕೆಲವು ಸುದ್ದಿಗಳು ಅಚ್ಚರಿಯಾಗಿದ್ದರು ಸತ್ಯಕ್ಕೆ ಹತ್ತಿರವಾಗಿರುತ್ತವೆ. ಹಾಗು ಕೆಲವು ಸುದ್ದಿಗಳು ರೋಚಕತೆ ಸೃಷ್ಟಿಸುವ ರೀತಿಯಲ್ಲಿರುತ್ತವೆ.

  • ರಾಜಕೀಯ

    ನರೇಂದ್ರ ಮೋದಿ ರಾಜಕೀಯ ಲಾಭಕ್ಕಾಗಿ ಸ್ವಂತ ಪತ್ನಿಯನ್ನೇ ತೊರೆದರು : ಅಕ್ಕ ಮಾಯಾವತಿ ಹೇಳಿಕೆ

    ರಾಜಕೀಯ ಲಾಭಕ್ಕಾಗಿ ತಮ್ಮ ಸ್ವಂತ ಪತ್ನಿಯನ್ನು ತೊರೆದ ಪ್ರಧಾನಿ ನರೇಂದ್ರ ಮೋದಿಯವರು ಬೇರೆಯವರ ಸೋದರಿ ಮತ್ತು ಪತ್ನಿಯರಿಗೆ ಗೌರವ ತೋರಿಸುತ್ತಾರೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಮೋದಿ ವಿರುದ್ಧ ವೈಯಕ್ತಿಕ ದಾಳಿ ನಡೆಸಿದ್ದಾರೆ. ಇಂದು ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ ಅವರು, ಅಲ್ವರ್ ಅತ್ಯಾಚಾರ ಕೇಸಿನಲ್ಲಿ ಮೋದಿಯವರು ರಾಜಕೀಯ ಮಾಡುತ್ತಿದ್ದಾರೆ. ಮದುವೆಯಾದ ಮಹಿಳೆಯರು ತಮ್ಮ ಪತಿಯನ್ನು ನರೇಂದ್ರ ಮೋದಿಯವರ ಬಳಿ ಕಳುಹಿಸಲು ಭಯಪಡುತ್ತಾರೆ. ಮೋದಿಯವರು ತಮ್ಮ ಪತ್ನಿಯನ್ನು ತೊರೆದಂತೆ ತಮ್ಮ ಪತಿಯಂದಿರೂ…

  • ಸುದ್ದಿ

    ಸೂರ್ಯನ ಬೆಳಕಿನಿಂದ ನಾಶವಾಗುತ್ತಾ ಕೊರೋನಾ ವೈರಸ್, ಇಲ್ಲಿದೆ ನೋಡಿ ಅಸಲಿ ಸತ್ಯ.

    ಸದ್ಯಕ್ಕೆ ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೋನಾ ವೈರಸ್ ಜಾಗತಿಕ ಮಟ್ಟದಲ್ಲಿ ಎಲ್ಲ ದೇಶದ ಜನರ ನಿದ್ದೆಗೆಡಿಸಿದೆ, ಹೌದು ಕೊರೋನಾ ತಂದಿರುವ ಸ್ಥಿತಿ ಆ ರೀತಿಯದ್ದಾಗಿದೆ. ಇನ್ನು ಕೊರೊನ ಬಗ್ಗೆ ಜನರು ನಾನಾ ರೀತಿಯ ತಪ್ಪು ತಿಳುವಳಿಕೆ ಹೊಂದಿದ್ದಾರೆ ಮತ್ತು ಈ ತಪ್ಪುಗಳ ಬಗ್ಗೆ ಜನರಿಗೆ ತಿಳುವಳಿಕೆ ನೀಡುವುದು ನಮ್ಮ ಕರ್ತವ್ಯ ಆಗಿದೆ. ಹೆಚ್ಚಿನ ಜನರು ತಾಪಮಾನ ಹೆಚ್ಚಿದರೆ ವೈರಸ್ ನಾಶವಾಗುತ್ತೆ ಎನ್ನುವ ಸುದ್ದಿಯೊಂದನ್ನು ಬಲವಾಗಿ ನಂಬಿದ್ದಾರೆ, ಆದರೆ ಈ ಸುದ್ದಿಯ ಬಗ್ಗೆ ವಿಶ್ವ ಅರೋಗ್ಯ ಸಂಸ್ಥೆ ಏನು…

  • ಜ್ಯೋತಿಷ್ಯ

    150 ವರ್ಷಗಳಿಗೆ ಒಮ್ಮೆ ಮಾತ್ರ ಬರುವ ಈ ಗ್ರಹಣದಿಂದ ಯಾವ ರಾಶಿಗೆ ಏನು ಫಲ..?ತಿಳಿಯಲು ಈ ಲೇಖನ ಓದಿ..

    ಈ ತಿಂಗಳ 31ರಂದು ಸಂಪೂರ್ಣ ಚಂದ್ರಗ್ರಹಣದ ಇದೆ. 150 ವರ್ಷಗಳಿಗೆ ಒಮ್ಮೆ ಮಾತ್ರ ಬರುವ ಈ ಗ್ರಹಣ ತುಂಬಾ ವರ್ಚ್ಯುವಲ್ ಎಂದು ಹೇಳುತ್ತಾರೆ. ಹುಣ್ಣಿಮೆ ದಿನ ಉಂಟಾಗುವ ಚಂದ್ರಗ್ರಹಣ ಸಂದರ್ಭದಲ್ಲಿ ಚಂದ್ರನು ’ಸೂಪರ್ ಬ್ಲೂ ಬ್ಲಡ್ ಮೂನ್’ ಆಗಿ ಕಾಣಿಸುತ್ತಾನೆಂದು, ಇದು ಅತ್ಯಂತ ಅಪರೂಪ ಎನ್ನುತ್ತಿದ್ದಾರೆ ತಜ್ಞರು.

  • ಆರೋಗ್ಯ

    ಈ 10 ಹವ್ಯಾಸಗಳು ನಮ್ಮ ಮೆದುಳಿಗೆ, ತೊಂದರೆ ಉಂಟು ಮಾಡುತ್ತವೆ…

    ಮನುಷ್ಯನ ದೇಹದಲ್ಲಿ ಅತ್ಯಂತ ಪ್ರಮುಖವಾದ ಅಂಗ ಎಂದರೆ ಅದು ಮೆದುಳು. ಮೆದುಳು ಸರಿಯಾಗಿ ಕೆಲಸ ಮಾಡಿದಾಗ ಮಾತ್ರ ಆತ ಬುದ್ಧಿವಂತನಾಗುತ್ತಾನೆ, ಅಥವಾ ಆತ ಮಾನಸಿಕವಾಗಿ ಸ್ವಸ್ಥನಾಗಿದ್ದಾನೆ ಎಂದು ಹೇಳಬಹುದು. ಹಾಗಾದ್ರೆ ನಮ್ಮ ಮೆದುಳಿಗೆ ತೊಂದರೆ ಉಂಟು ಮಾಡುವ ಹತ್ತು ಹವ್ಯಾಸಗಳನ್ನು ತಿಳಿಯೋಣ..

  • ಸುದ್ದಿ

    ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆಟೋ ಚಾಲಕನಿಗೆ ಬಿತ್ತು ಬರೋಬ್ಬರಿ 47,500 ರೂ. ದಂಡ

    ಭುವನೇಶ್ವರ, ಸಂಚಾರಿ ನಿಯಮ ಉಲ್ಲಂಘನೆಗೆ ದಂಡವನ್ನು ಹೆಚ್ಚಿಸಿರುವುದರಿಂದ ವಾಹನ ಸವಾರರು ಕಕ್ಕಾಬಿಕ್ಕಿಯಾಗಿದ್ದು, ಕುಡಿದು ಆಟೋ ಚಾಲನೆ ಮಾಡಿರುವುದು ಸೇರಿದಂತೆ ವಿವಿಧ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆಟೋ ಚಾಲಕನಿಗೆ ಬರೋಬ್ಬರಿ 47,500 ರೂ. ದಂಡ ವಿಧಿಸಿರುವ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ. ಕುಡಿದು ವಾಹನ ಚಾಲನೆ ಮಾಡಿರುವುದು, ಪರ್ಮಿಟ್, ಚಾಲನಾ ಪರವಾನಗಿ, ನೋಂದಣಿ ಸೇರಿದಂತೆ ತಿದ್ದುಪಡಿ ಕಾಯ್ದೆಯ ವಿವಿಧ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 47,500 ರೂ. ದಂಡ ವಿಧಿಸಲಾಗಿದೆ. ಭಾನುವಾರದಿಂದ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದು ಭುವನೇಶ್ವರದ ಪೊಲೀಸ್ ಅಧಿಕಾರಿಗಳು…