ವಿಚಿತ್ರ ಆದರೂ ಸತ್ಯ

ನಿಮ್ಮಲ್ಲಿ ಈ 5 ಲಕ್ಷಣಗಳಿದ್ರೆ, ವಿಜ್ಞಾನದ ಪ್ರಕಾರ ನೀವು ಜಾಸ್ತಿ ಬುದ್ಧಿವಂತರು!ಹೇಗೆ ಗೊತ್ತಾ???

1308

 

ತುಂಬಾ ಸರ್ತಿ ಜೀವನದಲ್ಲಿ ನಮ್ಮನ್ನ ನಾವೇ ಕಡೆಗಾಣಿಸ್ಕೊತೀವಿ. ನಮ್ಮ ಮನೆಯೋರು ಕೂಡ  ನಮ್ಮನ್ನ  ಎಷ್ಟೋ ಸರ್ತಿ ನೀನು ಸೋಮಾರಿ, ಒಂದು ಕೆಲಸ ಕೂಡ ಗಮನ ಇಟ್ಟು ಮಾಡಲ್ಲಾ  ಅಂತೆಲ್ಲಾ ಬೈತಿರ್ತರೆ.

ಆದ್ರೆ ತಮಾಷೆ ಏನಪ್ಪಾ ಅಂದ್ರೆ, ಇಲ್ಲಿರುವ  ಕೆಲವು ಗುಣಗಳು ನಮ್ಮಲ್ಲಿದ್ರೆ, ವಿಜ್ಞಾನದ ಪ್ರಕಾರ ನಾವು ನಮಗಿಂತ, ನಾವಂದುಕೊಂಡಿರೋದಕ್ಕಿಂತ ಜಾಸ್ತಿ ಬುದ್ಧಿವಂತ್ರಂತೆ. ಅದು ಹೇಗೆ ಅಂತಿರಾ…..ಮುಂದೆ ಓದಿ

  • ನೀವೂ ನಕ್ಕು ಬೇರೆಯವ್ರನ್ನೂ ತುಂಬ ನಗಿಸ್ತೀರಾ ?

ನಿಮ್ಮಲ್ಲಿ ನೀವೂ ನಕ್ಕು, ನಿಮ್ಮ ಜೊತೆ ಇರೋರನ್ನೂ ನಗಿಸೊ ಸ್ವಭಾವ ಇದ್ದರೆ, ನಿಮ್ಮ ಮೆದುಳು ತುಂಬ ಚನ್ನಾಗಿ ಕೆಲಸ ಮಾಡುತ್ತೆ, ಚುರುಕಾಗಿದೆ ಅಂತ ಅರ್ಥ. 1990 ರಲ್ಲಿ ಮೈಕಲ್ ಎ. ಜಾನ್ ಹೇಳೊ ಪ್ರಕಾರ ನೀವು ಹಾಸ್ಯಭರಿತರಾಗಿದ್ರೆ, ನಿಮ್ಮಲ್ಲಿ ಪ್ರಾಬ್ಲಮ್ ಸಾಲ್ವಿಂಗ್ ಶಕ್ತಿ ಹೆಚ್ಚಂತೆ.

  • ನೀವುಸ್ವಲ್ಪ ಟೆನ್ಷನ್ ಪಾರ್ಟಿನಾ ?

ನಿಮಗೆ ಎಲ್ಲರೂ ಟೆನ್ಷನ್ ಒಳ್ಳೇದಲ್ಲ ಅಂತ ಸುಮಾರ್ ಸರ್ತಿ ಹೇಳಿರ್ತಾರೆ. ಆದರೆ, ಸ್ಟ್ರೆಸ್ನ ಸರಿಯಾಗಿ ನಿಭಾಯಿಸಿದ್ರೆ ಅದರಿಂದ ತುಂಬ ಉಪಯೋಗ ಇದೆಯಂತೆ ಕಣ್ರಿ. ಈ ಸ್ಟ್ರೆಸ್ಸ್ ಲೆವಲ್ ಹಿತ – ಮಿತವಾಗಿದ್ರೆ, ನಮ್ಮ ಎಷ್ಟೋ ದಿನನಿತ್ಯದ ಕೆಲಸಗಳಿಗೆ ಸಹಾಯ ಆಗುತ್ತೆ.                                                                                        ಹಿಂಗೆ ಒಂದು ಸರ್ತಿ, ಇಸ್ರೇಲ್ ಅಲ್ಲಿ ಒಂದ್ಸಲ್ಪ ಜನಕ್ಕೆ ಕಂಪ್ಯೂಟರ್ ಲ್ಯಾಬಲ್ಲಿ ಏನೋ ನೋಡಿ ಅಂತ ಸುಳ್ಳು ಕಂಪ್ಯೂಟರ್ ವೈರಸ್ ಹಬ್ಬಿಸಿಬಿಟ್ರಂತೆ … ಅಲ್ಲಿದವ್ರು ಪಾಪ ಇದನ್ನ ತಾವೇ ಮಾಡಿದ್ದು ಅಂತ ಕಕ್ಕಾಬಿಕ್ಕಿ ಆಗಿ ಅದನ್ನ ಸರಿ ಮಾಡೋ ರೀತಿ ಯೋಚ್ಸಿದ್ರಂತೆ . ಆಗ ಸಂಶೋಧಕರು ಕಂಡು ಹಿಡಿದಿದ್ದೇನಪ್ಪಾ ಅಂದ್ರೆ, ಯಾರು ಟೆನ್ಷನ್ ಮಾಡ್ಕೊಂಡಿದ್ರೋ, ಅವರೇ ಚನ್ನಾಗಿ ಕೆಲಸ ಮುಗಿಸೋದು ಅಂತ. ವಿಚಿತ್ರ ಅಲ್ವಾ?

  • ನೀವು ನಿಮ್ಮ ಶಾಲಾ, ಕಾಲೇಜುಗಳಲ್ಲಿ ಯಾವಾಗ್ಲೂ ಲಾಸ್ಟ್ ಬೆಂಚಾ ?

ನೀವು, ಸ್ಕೂಲು- ಕಾಲೇಜಲ್ಲಿ ನಾನು ಯಾವಾಗ್ಲೂ ಕನಸು ಕಾಣ್ತಾ ಲಾಸ್ಟ್ ಬೆಂಚಲ್ಲೇ ಉಳ್ಕೊಂಡ್ಬಿಟ್ಟೆ… ನನ್ನ ಲೈಫ್ ಏನಾಗತ್ತೋ ಅಂತ ಚಿಂತೆ ಮಾಡಿದ್ರೆ, ಇಲ್ಲಿದೆ ನಿಮ್ಗೊಂದು ಒಳ್ಳೆ ಸುದ್ದಿ. ವಿಜ್ಞಾನಿಗಳ ಪ್ರಕಾರ, ಒಂದು ಕೆಲಸ ಮಾಡೋವಾಗ ನಿಮ್ಮ ಗಮನ ಆ ಕಡೆ ಈ ಕಡೆ ಹೋದ್ರೆ, ಒಂದೇ ಸಲಕ್ಕೆ ನಿಮಗೆ ಒಂದಕ್ಕಿಂತ ಹೆಚ್ಚು ಕೆಲಸ ಮಾಡೊ ಶಕ್ತಿ ಇದೆ ಅಂತಂತೆ. ಹಾಗೇ, ಹಗಲುಗನಸು ಕಾಣೋರಿಗೆ, ನೆನಪಿನ ಶಕ್ತಿ ಜಾಸ್ತಿ .

  • ನೀವು ಜನರ ಜೊತೆ ಹೆಚ್ಚಾಗಿ ಬೆರೆಯಕ್ಕೆ ಇಷ್ಟ ಪಡಲ್ವಾ ?

 

ನಿಮ್ಮ ಕೈಲಿ ಒಂದು ಪುಸ್ತಕ ಇದ್ದುಬಿಟ್ರೆ, ಲೋಕಾನೇ ಮರೆತುಬಿಡ್ತೀರ…ಇದರ ಜೊತೆಗೆ ಸ್ವಲ್ಪ ಕಾಫಿ ಸಿಕ್ಕಿಬಿಟ್ರಂತೂ, ಸ್ವರ್ಗಕ್ಕೆ ಮೂರೇ ಮೆಟ್ಟಿಲು. ಮತ್ತೇನೂ ಬೇಡ, ಯಾರೂ ಬೇಡ ಅಲ್ವಾ?ನೀವು ನಿಮ್ಮ ಜೊತೇನೆ ಜಾಸ್ತಿ ಸಮಯ ಕಳೆಯಕ್ಕೆ ಇಷ್ಟ ಪಡ್ತೀರ. 90 %  ಅಂತರ್ಮುಖಿಗಳಿಗೆ ಓದೋ ಹವ್ಯಾಸ ಉಂಟಂತೆ ಹಾಗೇ,ಯಾರು ಚಿಕ್ಕ ವಯಸ್ಸಿಂದ ಓದೋ ಹವ್ಯಾಸ ಬೆಳೆಸಿಕೊಂಡಿರ್ತಾರೋ ಅಂಥಾವರು, ಮುಂದೆ ಬುದ್ದಿವಂತರಾಗಿರ್ತಾರೆ ಮತ್ತು ತಮ್ಮನ್ನ ಚನ್ನಾಗಿ ವ್ಯಕ್ತಪಡಿಸಿಕೊಳ್ತಾರೆ.

  • ನೀವು ನಿಮ್ಮ ಎಡಗೈನೇ ಹೆಚ್ಚಾಗಿ ಬಳಸ್ತೀರಾ ?

ಎಡಚರಿಗೆ ವಿಭಿನ್ನವಾದ ಯೋಚನಾಶಕ್ತಿ ಇರುತ್ತಂತೆ. 90 ರ ದಶಕದಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ,ಎಡಗೈ ಉಪಯೋಗಿಸೋರ ಆಲೋಚನೆಗಳು ಡಿಫರೆಂಟಾಗಿ ಇರೋದ್ರಿಂದ ಅವರು ಎರಡು ಸಂಬಂಧ ಇಲ್ಲದಿರೊ ವಸ್ತುಗಳಲ್ಲೂ ಲಿಂಕ್ ಹುಡುಕ್ತಾರಂತೆ. ಇವರಲ್ಲಿ ಕ್ರಿಯಾಶೀಲತೆ ಜಾಸ್ತಿ ಮತ್ತು ಯಾವುದೇ ಸಮಸ್ಯೆ ಇದ್ದರೂ ಅದಕ್ಕೆ ಬೇಗ ಒಂದು ಉಪಾಯ ಕಂಡು ಹಿಡೀತಾರೆ.

ಹಾಗಾದ್ರೆ ಈಗ ಹೇಳಿ ನೀವು ಬುದ್ದಿವಂತರಾ, ಅಲ್ವಾ 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ರಾಜಕೀಯ

    ರಾಜರಾಜೇಶ್ವರಿನಗರ ಮುನಿರತ್ನ VS ಪ್ರಜ್ವಲ್ ರೇವಣ್ಣ ನೀವು ಯಾರನ್ನ ಬೆಂಬಲಿಸುತ್ತೀರಾ..?

    ಮುನಿರತ್ನ ರವರು 2014ರಲ್ಲಿ ನಡೆದ MLA ಎಲೆಕ್ಷನ್ ನಲ್ಲಿ 71064 ವೋಟ್ ಪಡೆದು ಅವರ ಹತ್ತಿರದ ಸ್ಪರ್ದಿ Sri M. Srinivas (ಬಿಜೆಪಿ) ರವರಿಗಿಂತ 20338 ಮತಗಳಿಂದ ಗೆಲವನ್ನು ಪಡೆದರು.

  • ಸುದ್ದಿ

    10 ಸಾವಿರ ಅಡಿ ಎತ್ತರದಲ್ಲಿ ಇದ್ದ ವಿಮಾನದಿಂದ ಬಿದ್ದ ಈ ಹುಡುಗಿ ಅಮೆಜಾನ್ ಕಾಡಿನಲ್ಲಿ ಬದುಕಿದ್ದು ಹೇಗೆ ಗೊತ್ತಾ.

    ಒಬ್ಬ ಸಾಮಾನ್ಯ ಮಹಿಳೆ ಹತ್ತು ಸಾವಿರ ಅಡಿ ಎತ್ತರದಿಂದ ಕೆಳಗೆ ಬೀಳುತ್ತಾಳೆ ಮತ್ತು ಆಕೆ ಕೆಳಗೆ ಬಿದ್ದ ನಂತರ ಏನಾಯಿತು ಎಂದು ತಿಳಿದರೆ ನೀವು ನಿಜಕ್ಕೂ ಶಾಕ್ ಆಗುತ್ತೀರಿ. ಈ ಘಟನೆ ನಡೆದಿದ್ದು 1971 ರ ಡಿಸೆಂಬರ್ ತಿಂಗಳಲ್ಲಿ, ಸ್ನೇಹಿತರೆ ಅಷ್ಟು ಎತ್ತರಿಂದ ಬಿದ್ದ ಈ ಹುಡುಗಿಯ ಹೆಸರು ಜೂಲಿಯನ್, ಈ ಹುಡುಗಿಯ ತಂದೆ ಹೊರದೇಶದಲ್ಲಿ ಕೆಲಸವನ್ನ ಮಾಡುತ್ತಿದ್ದ ಕಾರಣ 1971 ರ ಡಿಸೆಂಬರ್ ತಿಂಗಳಲ್ಲಿ ಜೂಲಿಯನ್ ತನ್ನ ತಾಯಿಯ ಜೊತೆ ತಂದೆಯನ್ನ ಭೇಟಿಯಾಗಲು ಹೊರದೇಶಕ್ಕೆ ವಿಮಾನದ…

  • ಸುದ್ದಿ

    ಟಿಕ್‌ಟಾಕ್‌ಗೆ ಮತ್ತೊಂದು ಬಲಿ : ಕೋಲಾರದಲ್ಲಿ ಕೃಷಿ ಹೊಂಡದ ಬಳಿ ವಿಡಿಯೋ ಮಾಡಲು ಹೋಗಿ ವಿದ್ಯಾರ್ಥಿನಿ ಸಾವು…!

    ಟಿಕ್ ಟಾಕ್ ಹಾವಳಿ ಎಲ್ಲೇ ಮೀರುತ್ತಿದೆ. ಈ ಆ್ಯಪ್​​ ನಿಷೇಧವಾಗಬೇಕೆಂಬ ಕೂಗು ಕೇಳಿಬರುತ್ತಿರುವ ಬೆನ್ನಲ್ಲೇ ಟಿಕ್​ಟಾಕ್​ ಆ್ಯಪ್​ನಿಂದ ಜೀವ ಕಳೆದುಕೊಳ್ಳುತ್ತಿರುವವ ಸಂಖ್ಯೆಯೂ ಹೆಚ್ಚುತ್ತಿದೆ. ತುಮಕೂರಿನಲ್ಲಿ ಯುವಕನೊರ್ವ ಪ್ರಾಣ ಕಳೆದುಕೊಂಡ ಬೆನ್ನಲ್ಲೇ, ಇದೀಗ ಕೋಲಾರದಲ್ಲಿ ಪದವಿ ವಿದ್ಯಾರ್ಥಿನಿಯೊಬ್ಬಳು ಟಿಕ್​ಟಾಕ್​ ಕ್ರೇಜ್​​ಗೆ ಬಲಿಯಾಗಿದ್ದಾಳೆ. ಮಾಲಾಗೆ ವಿಪರೀತ ಟಿಕ್​ಟಾಕ್​ ಗೀಳು ಅಂಟಿಕೊಂಡಿತ್ತು. ಹೀಗಾಗಿ ಕೂತಲ್ಲಿ ನಿಂತಲ್ಲಿ ಟಿಕ್​ಟಾಕ್​ ಚಿತ್ರೀಕರಿಸುತ್ತಿದ್ದಳು. ಇದೇ ರೀತಿ ಅಪಾಯಕಾರಿ ಕೃಷಿ ಹೊಂಡದ ಬಳಿ ಟಿಕ್​ಟಾಕ್​ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾಳೆ. ಕೋಲಾರದ ಸರಕಾರಿ ಮಹಿಳಾ ಕಾಲೇಜಿನಲ್ಲಿ ಮಾಲಾ…

  • ಪ್ರೇಮ

    ಆಕೆ ನನಗೆ ಸ್ವಲ್ಪ ಉಸಿರಾಟದ ತೊಂದರೆಯಾಗಿದೆ ಎಂದಳು – ಒಂದು ಪ್ರೆಮ ಕಥೆ 2 ನಿಮಿಷ ಸಮಯ ವಿದ್ದರೆ ಓದಿ

    ಆಕೆಯ ಸುಮಧುರ ಧ್ವನಿ ಆಕರ್ಷಕ ರೂಪ ಮಲ್ಲಿಗೆ ಹೂವಿನಂತ ನಗು ಸೌಮ್ಯತೆಯ ಮಾತಿನ ಮೋಡಿಗೆ ನನ್ನ ನಿದ್ರೆ ಹಾರಿ ಹೋಗಿತ್ತು.

  • ಉಪಯುಕ್ತ ಮಾಹಿತಿ

    ಕೆಟ್ಟ ದೃಷ್ಟಿ ಇದ್ದರೆ ತಪ್ಪದೆ ವಿಳ್ಳೆದೆಲೆಯಿಂದ ಹೀಗೆ ಮಾಡಿ ಸಾಕು.

    ಮಕ್ಕಳು ಎಂದರೆ ಎಲ್ಲರಿಗೂ ಕೂಡ ಬಹಳನೇ ಪ್ರೀತಿ ಪ್ರತಿಯೊಬ್ಬರ ಮನೆಯಲ್ಲಿ ಕೂಡ ಸಣ್ಣ ಪುಟ್ಟ ಮಕ್ಕಳು ಇರುತ್ತಾರೆ ನಾವು ಬೆಳಿಗ್ಗೆ ಎದ್ದಾಗಿನಿಂದ ಹಿಡಿದು ಸಂಜೆವರೆಗೂ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿ ಆಯಾಸ ಬೇಜಾರು ಬೇಸರ ಇದರಲ್ಲಿ ಮುಳುಗಿ ಹೋಗಿರುತ್ತದೆ ಇಂತಹ ಸಂದರ್ಭದಲ್ಲಿ ಮನೆಯಲ್ಲಿ ಪುಟ್ಟ ಮಕ್ಕಳು ಜೊತೆ ಒಂದಷ್ಟು ಸಮಯ ಕಳೆದರೆ ಆಯಾಸ ಹೋಗುತ್ತದೆ ಮನೆಯಲ್ಲಿರುವ ಮಕ್ಕಳು ದೇವರಿಗೆ ಸಮಾನ ಅವು ಯಾವಾಗಲೂ ನಗುನಗುತ್ತಾ ಖುಷಿಯಿಂದ ಇರಬೇಕು. ಆದರೆ ಸಾಮಾನ್ಯವಾಗಿ ಪುಟ್ಟಮಕ್ಕಳು ರಾತ್ರಿಯ ವೇಳೆ ಚಿಕ್ಕ ಪುಟ್ಟ…

  • ಸುದ್ದಿ

    ಆಪರೇಷನ್ ಕಮಲ ಠುಸ್..? ಉಲ್ಟಾ ಹೊಡೆದ ರಾಜೀನಾಮೆ ಅಸ್ತ್ರ…!

    ರಾಜಕೀಯ ಬಿಕ್ಕಟ್ಟಿಗೆ ಮತ್ತೊಂದು ತಿರುವು ಸಿಕ್ಕಿದ್ದು, ಐವರು ಶಾಸಕರ ರಾಜೀನಾಮೆ ಮಾತ್ರ ಸ್ವೀಕೃತಗೊಂಡಿದೆ. ಉಳಿದ 8 ಮಂದಿ ಶಾಸಕರ ರಾಜೀನಾಮೆ ಪತ್ರಗಳು ಕ್ರಮಬದ್ಧವಾಗಿಲ್ಲದ ಕಾರಣ ತಿರಸ್ಕೃತಗೊಂಡಿದೆ. ಇದರಿಂದ ಮೈತ್ರಿ ಸರ್ಕಾರಕ್ಕೆ ಉಸಿರಾಡಲು ಅವಕಾಶ ಸಿಕ್ಕಿದಂತಾಗಿದೆ. ಸರ್ಕಾರ ರಕ್ಷಿಸಲು ದೋಸ್ತಿ ನಾಯಕರಿಗೆ ಎರಡು, ಮೂರು ದಿನಗಳ ಕಾಲ ಅವಕಾಶ ಸಿಕ್ಕಿದೆ. ಯಾರ ರಾಜೀನಾಮೆ ಸ್ವೀಕೃತ..? ರಾಮಲಿಂಗಾ ರೆಡ್ಡಿ ಆನಂದ್‌ ಸಿಂಗ್‌ ಪ್ರತಾಪಗೌಡ ಪಾಟೀಲ್‌ ಗೋಪಾಲಯ್ಯ ನಾರಾಯಣ ಗೌಡ ಕಾಂಗ್ರೆಸ್‌ನ ರಾಮಲಿಂಗಾ ರೆಡ್ಡಿ, ಆನಂದ್‌ ಸಿಂಗ್‌, ಪ್ರತಾಪಗೌಡ ಪಾಟೀಲ್‌ ಅವರು…