ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ಕೆಫೀನ್‌ನ ಇನ್ನೊಂದು ಉತ್ತಮ ಗುಣವೆಂದರೆ ಇದರ ಸೇವನೆಯಿಂದ ರಕ್ತದಲ್ಲಿ ಅಡ್ರಿನಲಿನ್ ಎಂಬ ಹಾರ್ಮೋನು ಬಿಡುಗಡೆಯಾಗುವುದು. ನಮ್ಮ ದೈಹಿಕ ಚಟುವಟಿಕೆಗಳಿಗೆ ಈ ಹಾರ್ಮೋನು ಅಗತ್ಯವಾಗಿದೆ. ಕಾಫಿ ಸೇವನೆಯ ಮೂಲಕ ಹೆಚ್ಚಿನ ಅಡ್ರಿನಲಿನ್ ಲಭ್ಯವಾಗುವುದರಿಂದ ನಿಮ್ಮ ಹಲವು ದೈಹಿಕ ಚಟುವಟಿಕೆಗಳು ಚುರುಕಾಗುತ್ತವೆ.
ಕೆಫಿನ್ ಅಧಿಕವಾಗಿ ಇರುವಂತಹ ಕಾಫಿ ಸೇವನೆ ಮಾಡಬಾರದು ಎನ್ನುವಂತಹ ಮಾತನ್ನು ನಾವು ಹೆಚ್ಚಿನವರ ಬಾಯಿಯಿಂದ ಕೇಳುತ್ತಲಿರುತ್ತೇವೆ. ಕಾಫಿಯೂ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ವಾದಿಸುವವರು ಹಲವಾರು ಮಂದಿ. ಆದರೆ ಕೆಲವು ಜನರು ಕಾಫಿ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುವವರು ಇದ್ದಾರೆ. ಕಾಫಿ ಸೇವಿಸಿದರೆ ಅದರಿಂದ ದೇಹಕ್ಕೆ ಒಳ್ಳೆಯದು ಎನ್ನುವ ಮಾತುಗಳು ಈಗ ಬರುತ್ತಿದೆ
ಯಕೃತ್ತಿನ ರೋಗಗಳನ್ನು ಕಡಿಮೆ ಮಾಡಬಹುದು ಪ್ರಾಣಕ್ಕೆ ಅಪಾಯವಾಗಬಲ್ಲ ಲಿವರ್ ಸಿರೋಸಿಸ್ ಕಾಯಿಲೆಯ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ, ಕಾಫಿ ಕುಡಿದರೆ ನಿಮ್ಮ ಯಕೃತ್ತು ಸುರಕ್ಷಿತವಾಗಿಡಲು ನೆರವಾಗಬಲ್ಲದು. ಕಾಫಿ ಕುಡಿಯುವುದರಿಂದ ಯಕೃತ್ತಿಗೆ ಬರುವ ಯಕೃತ್ತು ಕ್ಯಾನ್ಸರ್ ಹಾಗೂ ಯಕೃತ್ತು ಸಿರೋಸಿಸ್ ಕಾಯಿಲೆ ಬರುವ ಅಪಾಯ ಕಡಿಮೆ ಮಾಡಬಲ್ಲದು. ಒಂದು ಕಪ್ ಕಾಫಿ ಕುಡಿದರೆ ಲಿವರ್ ಸಿರೋಸಿಸ್ ಕಾಯಿಲೆಯನ್ನು ಶೇ. 22ರಷ್ಟು ಕಡಿಮೆ ಮಾಡಬಹುದು. ಇದೇ ರೀತಿ ದಿನಕ್ಕೆ ಎರಡು ಹಾಗೂ ಮೂರು ಕಪ್ ಕಾಫಿ ಕುಡಿದರೆ ತಲಾ ಶೇ. 43 ರಷ್ಟು ಹಾಗೂ ಶೇ. 57 ರಷ್ಟು ಕಾಯಿಲೆ ಕಡಿಮೆ ಮಾಡಬಹುದು ಎಂದು ಸೌತ್ಆ್ಯಂಪ್ಟನ್ ವಿವಿಯ ಅಧ್ಯಯನದಲ್ಲಿ ತಿಳಿದುಬಂದಿದೆ.
ಕೊಬ್ಬು ಕರಗಿಸಲು ಶಕ್ತವಾಗಿರುವ ಕಾಫಿ ನಿಮ್ಮ ನಿತ್ಯದ ವ್ಯಾಯಾಮಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನಿಧಾನವಾಗಿ ಕರಗಿಸಿ ಹೆಚ್ಚು ಹೊತ್ತು ವ್ಯಾಯಾಮ ಮಾಡಲು ಕಾಫಿ ನೆರವಾಗುತ್ತದೆ. ಜೊತೆಗೇ ಇದರಲ್ಲಿರುವ ಕೆಫೀನ್, ಥಿಯೋಬ್ರೋಮಿನ್, ಥಿಯೋಫೈಲಿನ್ ಮತ್ತು ಕ್ಲೋರೋಜೆನಿಕ್ ಆಮ್ಲಗಳು ಜಠರದಲ್ಲಿ ಕರಗಲು ಹೆಚ್ಚು ಕೊಬ್ಬನ್ನು ಬೇಡುವುದರಿಂದ ಕೊಬ್ಬು ಶೀಘ್ರವಾಗಿ ಕರಗುತ್ತದೆ.
ಕೂದಲಿನ ಸೌಂದರ್ಯಕ್ಕೂ ಆರೋಗ್ಯಕಾರಿ ಪ್ರತಿ ಹದಿನೈದು ದಿನಕ್ಕೊಮ್ಮೆ ಹಳೆಯ ಕಾಫಿ ಬೀಜಗಳ ಪುಡಿಯನ್ನು ನೀರಿನಲ್ಲಿ ಮಿಶ್ರಣ ಮಾಡಿ ತಲೆಗೂದಲಿಗೆ ಹಚ್ಚಿಕೊಳ್ಳಿ. ಸುಮಾರು ಇಪ್ಪತ್ತು ನಿಮಿಷಗಳ ಬಳಿಕ ಸೌಮ್ಯ ಶಾಂಪೂ ಉಪಯೋಗಿಸಿ ತಲೆಯನ್ನು ತೊಳೆದುಕೊಳ್ಳಿ. ಇದರಿಂದ ತಲೆಬುರುಡೆಯ ಚರ್ಮದಲ್ಲಿರುವ ಕೊಳೆ, ಹೊಟ್ಟು ಮತ್ತು ಇತರ ಕಲ್ಮಶಗಳು ನಿವಾರಣೆಯಾಗುತ್ತವೆ.
ಖಿನ್ನತೆ ಕಡಿಮೆ ಮಾಡಲಿದೆ ಕಾಫಿ ಕಾಫಿ ಕುಡಿಯುವುದರಿಂದ ಖಿನ್ನತೆಯ ಅಪಾಯ ಕಡಿಮೆ ಮಾಡುತ್ತದೆ. ಹಾರ್ವಡ್ ಸಾರ್ವಜನಿಕ ಆರೋಗ್ಯ ಶಾಲೆಯ ಅಧ್ಯಯನದ ಪ್ರಕಾರ ಮಹಿಳೆಯರಲ್ಲಿ ಖಿನ್ನತೆ ಕಡಿಮೆ ಮಾಡಬಹುದು ಎಂದು ಹೇಳಿದೆ.
ಯಕೃತ್ತಿನ ರೋಗಗಳನ್ನು ಕಡಿಮೆ ಮಾಡಬಹುದು ಪ್ರಾಣಕ್ಕೆ ಅಪಾಯವಾಗಬಲ್ಲ ಲಿವರ್ ಸಿರೋಸಿಸ್ ಕಾಯಿಲೆಯ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ, ಕಾಫಿ ಕುಡಿದರೆ ನಿಮ್ಮ ಯಕೃತ್ತು ಸುರಕ್ಷಿತವಾಗಿಡಲು ನೆರವಾಗಬಲ್ಲದು. ಕಾಫಿ ಕುಡಿಯುವುದರಿಂದ ಯಕೃತ್ತಿಗೆ ಬರುವ ಯಕೃತ್ತು ಕ್ಯಾನ್ಸರ್ ಹಾಗೂ ಯಕೃತ್ತು ಸಿರೋಸಿಸ್ ಕಾಯಿಲೆ ಬರುವ ಅಪಾಯ ಕಡಿಮೆ ಮಾಡಬಲ್ಲದು. ಒಂದು ಕಪ್ ಕಾಫಿ ಕುಡಿದರೆ ಲಿವರ್ ಸಿರೋಸಿಸ್ ಕಾಯಿಲೆಯನ್ನು ಶೇ. 22ರಷ್ಟು ಕಡಿಮೆ ಮಾಡಬಹುದು. ಇದೇ ರೀತಿ ದಿನಕ್ಕೆ ಎರಡು ಹಾಗೂ ಮೂರು ಕಪ್ ಕಾಫಿ ಕುಡಿದರೆ ತಲಾ ಶೇ. 43 ರಷ್ಟು ಹಾಗೂ ಶೇ. 57 ರಷ್ಟು ಕಾಯಿಲೆ ಕಡಿಮೆ ಮಾಡಬಹುದು ಎಂದು ಸೌತ್ಆ್ಯಂಪ್ಟನ್ ವಿವಿಯ ಅಧ್ಯಯನದಲ್ಲಿ ತಿಳಿದುಬಂದಿದೆ.
ತೂಕಕಳೆದುಕೊಳ್ಳಲುಸಹಕಾರಿ
ಕಾಫಿಯಲ್ಲಿ ಕೆಲವೊಂದು ಪ್ರಮುಖ ಖನಿಜಾಂಶಗಳಾಗಿರುವಂತಹ ಮೆಗ್ನಿಶಿಯಂ ಮತ್ತು ಪೊಟಾಶಿಯಂ ಇದೆ. ಇವುಗಳು ದೇಹವು ಇನ್ಸುಲಿನ್ ಉಪಯೋಗಿಸಲು ನೆರವಾಗುವುದು, ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಿಸುವುದು ಮತ್ತು ಸಿಹಿ ಮತ್ತು ತಿಂಡಿಗೆ ಬಯಕೆ ಕಡಿಮೆ ಮಾಡುವುದು. ಕಾಫಿಯಲ್ಲಿ ಇರುವಂತಹ ಕೆಫಿನ್ ಕೊಬ್ಬಿನ ಅಂಗಾಂಶಗಳನ್ನು ವಿಘಟಿಸುವುದು ಮತ್ತು ತೂಕ ಕಳೆದುಕೊಳ್ಳಲು ಇದು ನೆರವಾಗುವುದು
ಮಧುಮೇಹದಅಪಾಯತಗ್ಗಿಸುವುದು
ಕಾಫಿಯಲ್ಲಿ ಇರುವಂತಹ ಕೆಫಿನ್ ಅಂಶವು ಟೈಪ್ 2 ಅಪಾಯವನ್ನು ಕಡಿಮೆ ಮಾಡುವುದು. ಕೆಫಿನ್ ಇನ್ಸುಲಿನ್ ಸೂಕ್ಷ್ಮತೆ ಕಡಿಮೆ ಮಾಡುವುದು ಮತ್ತು ಗ್ಲೂಕೋಸ್ ಸಹಿಷ್ಣುತೆ ದುರ್ಬಲಗೊಳಿಸುವುದು. ಇದರಿಂದಾಗಿ ಟೈಪ್-2 ಮಧುಮೇಹದ ಅಪಾಯವು ಕಡಿಮೆ ಆಗುವುದು.
ಕ್ಯಾನ್ಸರ್ವಿರುದ್ಧಹೋರಾಡುವುದು
ಕಾಫಿಯಲ್ಲಿ ಆಂಟಿಆಕ್ಸಿಡೆಂಟ್ ಅಂಶವು ಸಮೃದ್ಧವಾಗಿದ್ದು, ದಿನದಲ್ಲಿ 2-3 ಕಪ್ ಕಾಫಿ ಕುಡಿದರೆ ಆಗ ಖಂಡಿತವಾಗಿಯೂ ಇದು ಕ್ಯಾನ್ಸರ್ ನ್ನು ಪರಿಣಾಮಕಾರಿ ಆಗಿ ತಡೆಯಲು ನೆರವಾಗುವುದು. ಈ ಬಗ್ಗೆ ನಡೆಸಿರುವಂತಹ ಹಲವಾರು ಅಧ್ಯಯನಗಳು ಕೂಡ ಈ ಅಂಶವನ್ನು ಕಂಡುಕೊಂಡಿದೆ. ಮಿತ ಪ್ರಮಾಣದಲ್ಲಿ ಕಾಫಿ ಸೇವಿಸಿದರೆ ಅದರಿಂದ ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಕಾರಿ ಆಗಲಿದೆ.
ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…
ವೈದ್ಯರನ್ನು ದೂರವಿಡಲು ಈ ಹಣ್ಣುಗಳನ್ನು ಸೇವಿಸಿ, ಎಷ್ಟೋಂದು ಹಣ್ಣುಗಳು ಅಬ್ಬ! ತಿನ್ನಬೇಕು ಎಲ್ಲಾ ಫ್ರೂಟ್: ಆರೋಗ್ಯಕ್ಕಾಗಿ ಹಣ್ಣು ತಿನ್ನಿ ಆನಂದಕ್ಕಾಗಿ ಹಣ್ಣು ತಿನ್ನಿ ಪೌಷ್ಟಿಕ ಭದ್ರತೆಗೂ ಹಣ್ಣು ತಿನ್ನಿ…
ರೈಲ್ವೆ ಇಲಾಖೆ ಕೇಂದ್ರ ಸರ್ಕಾರಕ್ಕೊಂದು ಪತ್ರ ಬರೆದಿದೆ. ರೈಲ್ವೆ ಇಲಾಖೆಯಲ್ಲಿ ಕುಟುಂಬ ಪಿಂಚಣಿ ವ್ಯವಸ್ಥೆಯಿದೆ. ಅದಕ್ಕೆ ಕೆಲವೊಂದು ನಿಯಮಗಳಿವೆ. ಆದ್ರೆ ಒಂದು ವರ್ಷದ ಹಿಂದೆ ರೈಲ್ವೆ ಸಿಬ್ಬಂದಿ ಪುತ್ರ ಈಗ ಪುತ್ರಿಯಾಗಿರುವ ವ್ಯಕ್ತಿ ಕುಟುಂಬ ಪಿಂಚಣಿಗಾಗಿ ಪತ್ರ ಬರೆದಿದ್ದಾನೆ. ಇದೇ ವಿಚಾರ ಸದ್ಯ ಕೇಂದ್ರದ ಮೆಟ್ಟಿಲೇರಿದೆ. 2017ರಲ್ಲಿ ರೈಲ್ವೆ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ. ಅವ್ರ 32 ವರ್ಷದ ಮಗ ಪಿಂಚಣಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ವಾಸ್ತವವಾಗಿ ಸಿಬ್ಬಂದಿ ಹಣವನ್ನೇ ಕುಟುಂಬ ಆಶ್ರಯಿಸಿಕೊಂಡಿದ್ದರೆ ಮಾತ್ರ ಪಿಂಚಣಿ ನೀಡಲಾಗುತ್ತದೆ. 25 ವರ್ಷದೊಳಗಿನ ಮದುವೆಯಾಗದ…
ನಿಮಗೆ ಆಟಂಬಾಂಬ್ ಗೊತ್ತು, ಹೈಡ್ರೋಜನ್ ಬಾಂಬು ಬಗ್ಗೆ ಗೊತ್ತು. ಆದರೆ ನೀವು ವಾಟರ್ ಬಾಂಬ್ ಬಗ್ಗೆ ಕೇಳಿದ್ದೀರಾ! ಅದರಲ್ಲಿ ಕೂಡ ನೀರಾವರಿಗೆ ಅಂತ ಕಟ್ಟಿರೋ ಡ್ಯಾಮ್, ಲಕ್ಷಾಂತರ ಜನರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ, ಎಂಬುದರ ಬಗ್ಗೆ ನಿಮಗೆ ಗೊತ್ತಾದ್ರೆ ಶಾಕ್ ಆಗ್ತೀರಾ… ಅದಕ್ಕಿಂತ ಹೆಚ್ಚಾಗಿ ನೀರನ್ನು ಬಳಸುತ್ತಿರುವ ಕೇರಳ ರಾಜ್ಯ ಡ್ಯಾಮ್ ಕಟ್ಟಿರುವ ಜನರ ಜೀವಗಳನ್ನು ಪಣಕ್ಕಿಟ್ಟು ಆಟ ಆಡುತ್ತಿದೆ ಅಂದ್ರೆ ನಿಮಗೆ ನಂಬದೆ ಇರೋಕ್ಕೆ ಆಗಲ್ಲ.ಹೀಗೆ ಜನರ ಜೀವನದ ಜೊತೆ ಆಟವಾಡುತ್ತಿರುವ ಅಪಾಯಕಾರಿ ಡ್ಯಾಮ್ ಎಲ್ಲಿದೆ ಗೊತ್ತಾ?ನಮ್ಮ…
ಅಭಿವೃದ್ಧಿ ಚರ್ಚೆಗೆ ಸಿದ್ಧ ಎಂಬ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೇಳಿಕೆಗೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ. ಜಿಲ್ಲೆಯಲ್ಲಿಂದು ಮಗ ನಿಖಿಲ್ ಪರ ಪ್ರಚಾರ ಮಾಡಿದ ಕುಮಾರಸ್ವಾಮಿ, ಯಾವ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡುತ್ತಾರೆ. ನನ್ನ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನ ಜೊತೆ ಚರ್ಚೆ ಮಾಡುವುದಕ್ಕೂ ಅವರ ಕೈಯಲ್ಲಿ ಶಕ್ತಿಯಿಲ್ಲ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ. ಮಂಡ್ಯ ಜಿಲ್ಲೆಗೆ ದೇವೇಗೌಡ ಕುಟುಂಬ ಕೊಟ್ಟಿರುವ ಕೊಡುಗೆ, ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತಾರೋ ಅಥವಾ ಇನ್ನು ಯಾರ…
ಭಾರತದ ಸ್ಪೈಡರ್ ಮ್ಯಾನ್ ಎಂದೇ ಹೆಸರುಗಳಿಸಿರುವ ಚಿತ್ರದುರ್ಗದ ಕೋತಿರಾಜು ಅಲಿಯಾಸ್ ಜೋತಿರಾಜು ಬಗ್ಗೆ ನಿಮಗೆ ಗೊತ್ತೇ? ನೀವು ಚಿತ್ರದುರ್ಗದ ಕೋಟೆಗೆ ಭೇಟಿ ನೀಡಿದ್ದರೆ ನೀವು ಇವರ ಸಾಹಸಮಯ ಆಟಗಳನ್ನು ನೋಡಿರಬಹುದು, ಇವರು ನೂರಾರು ಅಡಿ ಎತ್ತರದ ಗೋಡೆಗಳನ್ನು ಯಾವ ಸಹಾಯವಿಲ್ಲದೆಯೇ ಮೇಲೇರುತ್ತಾರೆ!
ಇನ್ನು ಮುಂದೆ ಮೇಘಾಲಯದಲ್ಲಿ ಒಂದು ದಿನಕ್ಕಿಂತ ಹೆಚ್ಚು ದಿನ ಉಳಿಯುವುದಾದರೆ ಮೇಘಾಲಯಕ್ಕೆ ಬರುವ ಮುನ್ನ ನೋಂದಾಯಿಸಿಕೊಳ್ಳಬೇಕು. ಅಲ್ಲಿನ ಬುಡಕಟ್ಟು ಜನಾಂಗದವರ ಸುರಕ್ಷತೆ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶುಕ್ರವಾರ ನಡೆದ ಮೇಘಾಲಯ ಸಚಿವ ಸಂಪುಟ ಸಭೆಯಲ್ಲಿ ಅಮೆಂಡ್ಮೆಂಟ್ ಗೆ ಒಪ್ಪಿಗೆ ಸಿಕ್ಕಿದೆ. 2016ರ ಮೇಘಾಲಯ ರೆಸಿಡೆಂಟ್ ಕಾಯ್ದೆ ಪ್ರಕಾರ ಈ ವರದಿಯನ್ನು ಮನ್ನಿಸಲಾಗಿದೆ. ತಕ್ಷಣದಿಂದ ಕಾನೂನು ಜಾರಿಯಾಗುವಂತೆ ಆದೇಶಿಸಲಾಗಿದೆ ಎಂದು ಉಪಮುಖ್ಯಮಂತ್ರಿ ತಿಳಿಸಿದ್ದಾರೆ. ಒಂದೊಮ್ಮೆ 24 ಗಂಟೆಗಿಂತ ಹೆಚ್ಚು ಇರುವುದಾದರೆ ಸರ್ಕಾರಕ್ಕೆ ದಾಖಲೆಗಳನ್ನು ಸಲ್ಲಿಸಬೇಕು. ತಕ್ಷಣದಿಂದ ಜಾರಿಗೆ…