ರಾಜಕೀಯ

ಕರ್ನಾಟಕ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಹೊಸ ಕ್ರಾಂತಿ..!ತಿಳಿಯಲು ಈ ಲೇಖನ ಓದಿ …

796

ರಾಜ್ಯದ ಮೂಲೆ ಮೂಲೆಗಳಲ್ಲೂ ಮಹಾತ್ಮ ಗಾಂಧೀಜಿಯವರ ಸ್ವಾತಂತ್ರ ಸಂಗ್ರಾಮದ ಮಾದರಿಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಸಂಘಟನೆ ಚಟುವಟಿಕೆಗಳು ನಡೆಯುತ್ತಿದ್ದು, ಡಿಸಂಬರ್.19 ರಂದು ಕೂಡಲ ಸಂಗಮದಲ್ಲಿ ನಡೆಯುವ ಐತಿಹಾಸಿಕ ಸಮಾವೇಶವು ರಾಜ್ಯದ ರಾಜಕೀಯ ಇತಿಹಾಸದಲ್ಲಿ ಕ್ರಾಂತಿ ಆಗಲಿದೆಯೆಂದು ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಹೇಳಿದ್ದಾರೆ.

ಡಿ.19 ರಂದು ಕೂಡಲ ಸಂಗಮದಲ್ಲಿ ನಡೆಯಲಿರುವ ನಮ್ಮ ಕಾಂಗ್ರೆಸ್ ಐತಿಹಾಸಿಕ ಸಮಾವೇಶಕ್ಕೆ ಪೂರ್ವಭಾವಿ ಪ್ರಚಾರಕ್ಕಾಗಿ ಉತ್ತರ ಕರ್ನಾಟಕದ ತಮ್ಮ ಅಭಿಮಾನಿ ಬೆಂಬಲಿಗರು ಸ್ವಯಂ ಪ್ರೇರಣೆಯಿಂದ ಕಾರುಗಳನ್ನು ತಂದಿದ್ದು, ಇಂದಿನಿಂದ ರಾಜ್ಯದೆಲ್ಲೆಡೆ ಈ ಕಾರುಗಳು ಪ್ರವಾಸ ನಡೆಸಿ ಕೂಡಲಸಂಗಮ ಸಮಾವೇಶಕ್ಕೆ ನಾಲ್ಕರಿಂದ ಐದು ಲಕ್ಷ ಮಂದಿಯನ್ನು ಸೇರಿಸುವ ಕೆಲಸ ಮಾಡಲಿದ್ದಾರೆಂದು ವಿವರಿಸಿದರು.

ನಮ್ಮ ಕಾಂಗ್ರೆಸ್ ಪಕ್ಷದ ಪ್ರಚಾರ ಕಾರ್ಯಕ್ಕೆ ಶಕ್ತಿ ಕೊಟ್ಟಿರುವ ಉತ್ತರ ಕರ್ನಾಟಕದ ಅಭಿಮಾನಿ ಬೆಂಬಲಿಗರಿಗೆ ತಾವು ಧನ್ಯವಾದಗಳನ್ನು ಅರ್ಪಿಸುವುದಾಗಿ ಹೇಳಿದ ಅವರು, ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ರಹಸ್ಯ ಅಜೆಂಡಾ ಇಲ್ಲ, ಬಡವರು, ದೀನ ದಲಿತರು ಹಾಗೂ ಅಹಿಂದ ವರ್ಗದವರು, ಶೋಷಿತರ ಪಕ್ಷವಾಗಿದೆ. ಪಕ್ಷದ ಪ್ರಚಾರ ಕಾರ್ಯಕ್ಕೆ ತಾವು ಯಾವುದೇ ಹಣಕಾಸು ನೆರವು ನೀಡಿಲ್ಲ, ಅಭಿಮಾನಿ ಬೆಂಬಲಿಗರೇ ಸ್ವಯಂ ಪ್ರೇರಿತವಾಗಿ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆಂದು ಹೇಳಿದರು.

ನಮ್ಮ ಕಾಂಗ್ರೆಸ್ಪ ಕ್ಷವು ಒಂದು ಸಮಾಜದ ಪಕ್ಷವಲ್ಲವೆಂದು ಸ್ಪಷ್ಟಪಡಿಸಿದ ಅವರು, ಸಾಮಾಜಿಕ ನ್ಯಾಯ ಸ್ಥಾಪನೆಗಾಗಿ, ಬಡವರ ಕಲ್ಯಾಣಕ್ಕಾಗಿ ಎಲ್ಲಾ ವರ್ಗದವರ ಪಕ್ಷವಾಗಿ ನಮ್ಮ ಕಾಂಗ್ರೆಸ್ಅ ನ್ನು ರೂಪಿಸಲಾಗುತ್ತಿದೆ, ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ನೊಂದಿರುವ ಅನೇಕ ಮುಖಂಡರು ನಮ್ಮ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ. ಬಹಳಷ್ಟು ಮುಖಂಡರು ಪಕ್ಷದ ಸಂಪರ್ಕದಲ್ಲಿದ್ದಾರೆಂದು ಅವರು ಮಾರ್ಮಿಕವಾಗಿ ನುಡಿದರು.

ಡಿ.19 ರ ಕೂಡಲಸಂಗಮದಲ್ಲಿ ಪಕ್ಷವನ್ನು ಅಧಿಕೃತವಾಗಿ ಉದ್ಘಾಟಿಸಿದ ನಂತರ ಕರ್ನಾಟಕದ ಯಾವ ಯಾವ ಕ್ಷೇತ್ರಗಳಲ್ಲಿ ನಮ್ಮ ಕಾಂಗ್ರೆಸ್ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಬೇಕೆಂಬುದನ್ನು ನಿರ್ಧರಿಸಲಾಗುವುದು, ತಮ್ಮ ಬೆಂಬಲಿಗರಿರುವ ಎಲ್ಲಾ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ನಿಲ್ಲಿಸಲಾಗುತ್ತದೆಯೆಂದು ಸುಳಿವು ನೀಡಿದರು.

ಇದೇ ಸಂದರ್ಭದಲ್ಲಿ ಪಕ್ಷದ ಧ್ವಜವನ್ನು ಬಿಡುಗಡೆ ಮಾಡಿದ ಅವರು, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಕ್ಕೂ ಹೆಚ್ಚು ಕಾರುಗಳ ಪ್ರಚಾರ ಕಾರ್ಯಕ್ಕೆ ಪಕ್ಷದ ಧ್ವಜ ತೋರಿಸುವ ಮೂಲಕ ಚಾಲನೆ ನೀಡಿದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • Sports, ಕ್ರೀಡೆ

    ಕ್ರಿಕೆಟ್ ನಲ್ಲಿ ಹೊಸ ನಿಯಮ ಜಾರಿಗೆ ನಿಮಗೋತ್ತಾ

    ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ‘ದಿ ಹಂಡ್ರೆಡ್’ ಪುಸ್ತಕದಿಂದ ಒಂದು ಎಲೆಯನ್ನು ತೆಗೆದುಕೊಳ್ಳಲು ನಿರ್ಧರಿಸಿದೆ ಮತ್ತು ಓವರ್-ರೇಟ್ ಅಪರಾಧಗಳಿಗೆ ಪಂದ್ಯದೊಳಗೆ ದಂಡವನ್ನು ಪರಿಚಯಿಸಿದೆ. ಓವರ್-ರೇಟ್‌ನಲ್ಲಿ ಹಿಂದುಳಿದಿರುವ ತಂಡಗಳು (ಅಂದರೆ ನಿಗದಿತ ಸಮಯದೊಳಗೆ ಓವರ್‌ಗಳನ್ನು ಬೌಲ್ ಮಾಡದ ತಂಡಗಳು) ಈಗ ತಕ್ಷಣವೇ ಶಿಕ್ಷೆಗೆ ಗುರಿಯಾಗುತ್ತವೆ ಮತ್ತು ಉಲ್ಲಂಘನೆಯ ಹಂತದಿಂದ ಹೆಚ್ಚುವರಿ ವ್ಯಕ್ತಿಯನ್ನು ವೃತ್ತದೊಳಗೆ ನಿಲ್ಲಿಸುವಂತೆ ಒತ್ತಾಯಿಸಲಾಗುತ್ತದೆ. “ಫೀಲ್ಡಿಂಗ್ ತಂಡವು ಇನಿಂಗ್ಸ್‌ನ ಅಂತಿಮ ಓವರ್‌ನ ಮೊದಲ ಚೆಂಡನ್ನು ಇನ್ನಿಂಗ್ಸ್‌ನ ಅಂತ್ಯಕ್ಕೆ ನಿಗದಿತ ಅಥವಾ ಮರುನಿಗದಿಪಡಿಸಿದ ಸಮಯದ ಮೂಲಕ ಬೌಲ್ ಮಾಡುವ…

    Loading

  • ಸುದ್ದಿ

    ಮಳೆ ಆತಂಕದಲ್ಲಿರುವ ಕೊಡಗಿನ ಜನತೆಗೆ ನೋಟಿಸ್ ಶಾಕ್ ನೀಡಿದ ನಗರಸಭೆ….!

    ಕಳೆದ ಒಂದು ವಾರದಿಂದ ಕೊಡಗು ಜಿಲ್ಲೆಯಲ್ಲಿ ತುಂತುರು ಮಳೆ ಸುರಿಯುತ್ತಿದೆ. ಕಳೆದ ಬಾರಿ ಸುರಿದ ರಣಭೀಕರ ಮಳೆಗೆ ಜಿಲ್ಲೆಯಲ್ಲಿ ಪ್ರವಾಹ ಮತ್ತು ಭೂಕುಸಿತ ಸಂಭವಿಸಿತ್ತು. ಪರಿಣಾಮ ಈಗ ಸಣ್ಣದಾಗಿ ಮಳೆ ಸುರಿದ್ರೂ ಜನರು ಆತಂಕಪಡುತ್ತಿದ್ದಾರೆ. ಇದೇ 20ರಿಂದ ಪುನಃ ನಿರಂತರ ಮಳೆ ಬೀಳುವ ಸಾಧ್ಯತೆ ಇದ್ದು, ಕೆಲವು ಪ್ರದೇಶಗಳ ಜನರಿಗೆ ಮಡಿಕೇರಿ ನಗರಸಭೆ ನೋಟಿಸ್ ನೀಡಿದೆ. ಇದು ಜನರಲ್ಲಿ ಮತ್ತೆ ಆತಂಕ ಮೂಡುವಂತೆ ಮಾಡಿದೆ. ಕಳೆದ ಒಂದು ವಾರದಿಂದ ಕೊಡಗು ಜಿಲ್ಲೆಯಲ್ಲಿ ವರುಣನ ಅಬ್ಬರ ಇಲ್ಲದಿದ್ದರೂ ಶಾಂತಾವಾಗಿಯೇ…

  • ಸುದ್ದಿ

    ದಂಡಕ್ಕೆ ಹೆದರಿ ರಸ್ತೆಗಿಳಿಯದ ವಾಹನಗಳು, ಪೆಟ್ರೋಲ್ ಮತ್ತು ಡೀಸೆಲ್ ಬೇಡಿಕೆ ಕುಸಿತ,.!

    ರಾಜ್ಯದಲ್ಲಿ ಹೊಸ ಮೋಟಾರು ವಾಹನ ಕಾಯ್ದೆ ಮಂಗಳವಾರವೇ ಜಾರಿಗೆ ಬಂದಿದೆ. ಸಂಚಾರ ನಿಯಮಗಳನ್ನು ಕೇರ್ ಮಾಡದ ವಾಹನ ಸವಾರರು ಭಾರೀ ದಂಡ. ದಂಡಕ್ಕೆ ಹೆದರಿ ರಸ್ತೆಗಿಳಿಯದ ವಾಹನಗಳು, ಒಡಿಶಾದಲ್ಲಿ ಪೆಟ್ರೋಲ್, ಡೀಸೆಲ್ ಬೇಡಿಕೆ ಕುಸಿತಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾದ ನಂತರ ಟ್ರಾಫಿಕ್ ಪೊಲೀಸರು ವಿಧಿಸುತ್ತಿರುವ ದಂಡಗಳನ್ನು ನೋಡಿ ಬೆಚ್ಚ ಬಿದ್ದಿರುವ ವಾಹನ ಸವಾರರು ಹಲವರು ತಮ್ಮ ವಾಹನಗಳನ್ನು ಮನೆಯಿಂದ ಹೊರಗೆ ತರುತ್ತಿಲ್ಲವಂತೆ. ಇದರ ಪರಿಣಾಮ ಪೆಟ್ರೋಲ್, ಡೀಸೆಲ್ ಬೇಡಿಕೆಯಲ್ಲಿ ಗಣನೀಯವಾಗಿ ಕಡಿಮೆಯಾಗಿದೆಯಂತೆ. ಹೌದು ಒಡಿಶಾದಲ್ಲಿ ಪೆಟ್ರೋಲ್…

  • ಕರ್ನಾಟಕದ ಸಾಧಕರು

    ಸಾಧನೆ ಮಾಡುವವನಿಗೆ ಬಡವ ಎನ್ನುವ ಬವಣೆ ಇರಲೇ ಬಾರದು ಅಂತ ಒಂದು ಸಾಧಕರಲ್ಲಿ ಒಬ್ಬರು ದ.ರಾ.ಬೇಂದ್ರೆ

    “ಕುಣಿಯೋಣು ಬಾರಾ ಕುಣಿಯೋಣು ಬಾ”, “ಇಳಿದು ಬಾ ತಾಯಿ ಇಳಿದು ಬಾ”, “ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು”, ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ. ಬೇಂದ್ರೆಯವರ ಕುರಿತೊಂದು ಸಾಕ್ಷ್ಯಚಿತ್ರ ತಯಾರಾಗಿತ್ತು.

  • ವಿಚಿತ್ರ ಆದರೂ ಸತ್ಯ

    ವೈದ್ಯಕೀಯ ಪವಾಡದಿಂದ ವರ್ಷದಲ್ಲಿ ‘ಎರಡು ಬಾರಿ ಹುಟ್ಟುಹಬ್ಬ’ ಆಚರಿಸುತ್ತಿರುವ ಮಗು..!ತಿಳಿಯಲು ಈ ಲೇಖನ ಓದಿ..

    ಒಂದು ವರ್ಷದ ಹಿಂದೆ ಅಧಿಕೃತವಾಗಿ ಈ ಧರೆಯಲ್ಲಿ ಅವತರಿಸಿರುವ ಪುಟ್ಟ ಬಾಲಕಿಯೀಗ ಆರೋಗ್ಯವಂತಳಾಗಿ ಬೆಳೆಯುತ್ತಿದ್ದಾಳೆ. ಇದರಲ್ಲೇನು ವಿಶೇಷ ಎನ್ನುತ್ತೀರಾ? ಈ ಮಗು ಎರಡು ಬಾರಿ ಜನಿಸಿದ್ದು, ಇದಕ್ಕಾಗಿ ಆಧುನಿಕ ವೈದ್ಯಕೀಯಕ್ಕೆ ಕೃತಜ್ಞತೆಗಳನ್ನು ಹೇಳಬೇಕಾಗಿದೆ.