ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕಾಲ ಕಾಲಕ್ಕೆ ಬದಲಾಗುವ ವಾತಾವರಣದ ಜೊತೆಗೆ ಆರೋಗ್ಯದ ಹೊಂದಾಣಿಕೆ ಮಾಡಿಕೊಳ್ಳುವುದು ಸಾಹಸವೇ ಸರಿ. ಬೇಸಿಗೆ ಕಾಲದಲ್ಲಿ ಬಿಸಿಲಿನ ಬೇಗೆಯಿಂದ ಶರೀರದಿಂದ ಒಸರುವ ಬೆವರು ನೀಡುವ ಬಾಧೆಯಂತು ಹೇಳತೀರದು.
ಅದರಲ್ಲೂ ದೇಹದಿಂದ ಹೊರಸೂಸುವ ವಾಸನೆ ಕಚೇರಿಯಲ್ಲಿ, ಬಸ್ಸಿನಲ್ಲಿ ಮದುವೆ ಸಮಾರಂಭಗಳಲ್ಲಿ ಹಿಂಸೆ ನೀಡಿದರೆ, ಕಂಕುಳ ದುರ್ವಾಸನೆಯಿಂದ ಬಹಳಷ್ಟು ಮಂದಿ ಮುಜುಗರಪಡುವುದು ಸಾಮಾನ್ಯವೇ ಆಗಿದೆ.
ಆದರೆ ಇವುಗಳಿಗೆಲ್ಲ ಸುಲಭ ಪರಿಹಾರ ಕಂಡುಕೊಳ್ಳುವ ಬದಲು. ರಸಾಯನಿಕಗಳಿಂದ ತಯಾರಿಸಿದ ವಸ್ತುಗಳ ಮೇಲೆ ಮಾರು ಹೋಗಿ ಹಣ ವ್ಯರ್ಥ ಮಾಡುವುದರ ಜೊತೆಗೆ ಚರ್ಮದ ಕಾಂತಿಯನ್ನು ಕಳೆದುಕೊಳ್ಳುವ ಅಪಾಯಗಳಿಗೂ ಸಿಲುಕುವ ಬದಲು ಸುಲಭ ಪರಿಹಾರಗಳನ್ನು ಹುಡುಕುವುದು ಉತ್ತಮ.
ಕಂಕುಳ ದುರ್ವಾಸನೆಯಿಂದ ಮುಕ್ತರಾಗಲು ನೀವು ಈ ಕೆಳಗೆ ನೀಡಿರುವ ಸುಲಭ ಪರಿಹಾರೋಪಾಯಗಳನ್ನು ಅನುಸರಿಸಿದರೆ ನೀವು ಸುಲಭವಾಗಿ ಪರಿಹಾರ ಕಂಡುಕೊಳ್ಳ ಬಹುದಾಗಿದೆ.
ಬೇಸಿಗೆ ಕಾಲದಲ್ಲಿ ದೇಹವಿಡೀ ಬೆವರುವುದು ಸಾಮಾನ್ಯವಾಗಿದೆ. ಇಂತಹ ಸಂದರ್ಭದಲ್ಲಿ ಆ್ಯಂಟಿ ಬ್ಯಾಕ್ಟೀರಿಯಾ ಸಾಬೂನಿನಿಂದ ಹಾಗೂ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ, ಮುಖ್ಯವಾಗಿ ಕಂಕುಳಗಳನ್ನು ಚೆನ್ನಾಗಿ ತೊಳೆಯಿರಿ. ಸಾಧ್ಯವಾದರೆ ದಿನಕ್ಕೆರಡು ಬಾರಿ ಸ್ನಾನ ಮಾಡುವುದರಿಂದ ಬ್ಯಾಕ್ಟೀರಿಯಾಗಳಿಂದ ದೂರವಿದ್ದು, ಶುಚಿತ್ವ ಹಾಗೂ ನೈರ್ಮಲ್ಯತೆಯನ್ನು ಕಾಪಾಡಿಕೊಳ್ಳಿ. ರೇಷ್ಮೆಯಂತಹ ನೈಸರ್ಗಿಕ ನಾರುಗಳಿಂದ ತಯಾರಿಸಲ್ಪಟ್ಟ ವಸ್ತ್ರಗಳು ತೇವಾಂಶವನ್ನು ಹೀರಿ ಚರ್ಮವನ್ನು ತೇವರಹಿತವಾಗಿಡುತ್ತದೆ.
ನಮ್ಮ ದೈನಂದಿನ ಆಹಾರಗಳಲ್ಲಿಯೂ ಸಾಧ್ಯವಾದಷ್ಟು ಮಟ್ಟಿಗೆ ಗಮನಹರಿಸಬೇಕಾಗಿದೆ. ಕಾಫೀ, ಖಾರದ ತಿನಿಸುಗಳು, ಕೊಬ್ಬಿನಾಂಶವಿರುವ ಆಹಾರಗಳು ಹಾಗೂ ಧೂಮಪಾನದಿಂದ ದೂರವಿದ್ದು, ಕಂಕುಳದ ವಾಸನೆಯಿಂದ ದೂರವಿರಬಹುದು.
ಡಿಯೋಡ್ರಂಟ್ ಬದಲು ಹತ್ತಿಯನ್ನು ಆ್ಯಪಲ್ ಸೈಡರ್ ವಿನೆಗರ್ ನಿಂದ ಒದ್ದೆ ಮಾಡಿ ಕಂಕುಳಕ್ಕೆ ಹಚ್ಚಿರಿ.
ಬ್ಯಾಕ್ಟೀರಿಯಾಗಳನ್ನು ಹೊಡೆದೋಡಿಸುವಲ್ಲಿ ನಿಂಬೆ ಹಣ್ಣು ಕೂಡಾ ಪ್ರಭಾವಶಾಲಿಯಾಗಿದೆ. ನಿಂಬೆ ಹಣ್ಣು ನ್ನು ಎರಡು ಭಾಗ ಮಾಡಿ, ಒಂದು ಭಾಗವನ್ನು ಕಂಕುಳಕ್ಕೆ ಉಜ್ಜಿ ಅದರ ರಸವು ಕಂಕುಳದಲ್ಲಿಯೇ ಒಣಗಲು ಬಿಡಿ. ಸಂಪೂರ್ಣವಾಗಿ ಒಣಗಿದ ನಂತರ ಸ್ನಾನ ಮಾಡಿ. ಕಂಕುಳದ ವಾಸನೆ ಸಂಪೂರ್ಣವಾಗಿ ಮಾಯವಾಗುವ ತನಕ ಪ್ರತಿದಿನಕ್ಕೊಂದು ಬಾರಿ ಮಾಡಿರಿ.
ಬ್ಯಾಕ್ಟೀರಿಯಾಗಳನ್ನು ಶಮನ ಮಾಡುವುದರಲ್ಲಿ ನಮ್ಮ ಪರಿಸರದಲ್ಲಿ ಸಾಮಾನ್ಯವಾಗಿ ಲಭ್ಯವಿರುವ ತುಳಸಿ ಮತ್ತು ಬೇವು ಬಹಳ ಪರಿಣಾಮಕಾರಿಯಾಗಿದೆ. ಸ್ವಲ್ಪ ತುಳಸಿ ಹಾಗೂ ಬೇವಿನ ಸೊಪ್ಪನ್ನು ಅರೆದು ಪೇಸ್ಟ್ ತರ ಮಾಡಿ ಕಂಕುಳಗಳಿಗೆ ಹಚ್ಚಿರಿ. ಸ್ವಲ್ಪ ಸಮಯದ ನಂತರ ಸ್ನಾನ ಮಾಡಿ. ಇದನ್ನು ವಾರಕ್ಕೆ ಮೂರು ಸಲ ಮಾಡಿದಲ್ಲಿ ಪರಿಣಾಮ ಕಾಣಬಹುದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿರುವ ವಾಟ್ಸಪ್ ಭಾರತದಲ್ಲಿ ತನ್ನ ಬಿಸಿನೆಸ್ ಆ್ಯಪ್ ಅನ್ನು ಬಿಡುಗಡೆಗೊಳಿಸಿದ ಮೊದಲ ವರ್ಷದಲ್ಲಿ 6.84 ಕೋಟಿ ರೂ. ಆದಾಯ ಗಳಿಸುವಲ್ಲಿ ಯಶಸ್ವಿಯಾಗಿದೆ. ಅತ್ಯಧಿಕ ಸಂಖ್ಯೆಯ ಬಳಕೆದಾರರನ್ನು ಹೊಂದಿರುವ ವಾಟ್ಸಪ್ ದೇಶದಲ್ಲಿ ಈಗ ಆದಾಯ ಗಳಿಕೆಯ ಹಾದಿಯತ್ತ ಹೊರಳಿದೆ. ಬಿಸಿನೆಸ್ ಆವೃತ್ತಿ ಮೂಲಕ ವಾಟ್ಸಪ್ ಮೊದಲ ವರ್ಷದ ಗಳಿಕೆಯನ್ನು ಬಹಿರಂಗಪಡಿಸಿದೆ. ರಿಜಿಸ್ಟ್ರಾರ್ ಆಫ್ ಕಂಪನೀಸ್‌ಗೆ ವಾಟ್ಸಪ್ ಸಲ್ಲಿಸಿರುವ ದಾಖಲಾತಿಗಳ ಪ್ರಕಾರ, 2019 ರಲ್ಲಿಕಂಪನಿ 6.84 ಕೋಟಿ ರೂ. ಆದಾಯ ಮತ್ತು 57 ಲಕ್ಷ ರೂ. ಲಾಭ ಗಳಿಸಿದೆ. ತನ್ನ…
*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಈಗ ಏನಿದ್ದರೂ ಎಲ್ಲವೂ ಪಾಸ್ಟ್ ಪಾಸ್ಟ್. ಹೇಗಾಗಿದೆ ಎಂದರೆ ನೆಮ್ಮದಿಯಾಗಿ ಊಟ ಮಾಡಲು ಸಹ ಸಮಯವಿಲ್ಲದಂತಾಗಿದೆ. ಇದು ಯಾವ ಮಟ್ಟಕ್ಕೆ ಹೋಗಿದೆ ಅಂದ್ರೆ, ಊಟವನ್ನ ತಟ್ಟೆಗೆ ಹಾಕಿದ ಕೂಡಲೇ ಗಬ-ಗಬ ತಿಂದು ಕೈ ತೊಳೆಯುವವರೇ ಹೆಚ್ಚಾಗಿದ್ದಾರೆ. ಆದರೆ ಹೀಗೆ ಊಟವನ್ನ ಅಥವಾ ಆಹಾರವನ್ನ ತಿನ್ನುವುದರಿಂದ ಹಲವು ತೊಂದರೆಗಳನ್ನ ಎದುರಿಸ ಬೇಕಾಗುತ್ತದೆ. ಅವಸರ ಅವಸರವಾಗಿ ತಿನ್ನುವುದರಿಂದ ನಿಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮವಾಗುತ್ತದೆ ಎಂದು ವರದಿಯೊಂದು ತಿಳಿಸಿದೆ. ಇತ್ತೀಚೆಗೆ ಹೊರಬಂದ…
ಬೆಂಗಳೂರಿನ ಜನರಿಗೆ ದಿನದಿಂದ ದಿನಕ್ಕೆ ಆಪ್ತವಾಗುತ್ತಿರುವ ನಮ್ಮ ಮೆಟ್ರೋ ಇನ್ನು ಮುಂದೆ ಇನ್ನಷ್ಟು ಹತ್ತಿರವಾಗಲಿದೆ. ಡಿಸೆಂಬರ್ ವೇಳೆಗೆ ನಮ್ಮ ಮೆಟ್ರೋದಲ್ಲಿ ಮಹಿಳಾ ಬೋಗಿ ಸಹ ಆರಂಭವಾಗಲಿದೆ.
ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಲವು ಕ್ರಮ ಕೈಗೊಂಡಿರುವ ಸರ್ಕಾರ ಮತ್ತೊಂದು ಅನುಕೂಲತೆ ಕಲ್ಪಿಸಲು ಮುಂದಾಗಿದೆ. ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಬೆಲೆ ಕುಸಿತವಾದ ಸಂದರ್ಭದಲ್ಲಿ ಬೆಂಬಲ ಬೆಲೆಗೆ ಸರ್ಕಾರದಿಂದ ಮಾರುಕಟ್ಟೆ ಮಧ್ಯಪ್ರವೇಶ ಮಾಡಿ ಬೆಲೆ ನಿಗದಿಪಡಿಸಲು ಐವರು ಸಚಿವರ ಕ್ಯಾಬಿನೇಟ್ ಉಪ ಸಮಿತಿಯನ್ನು ಸರ್ಕಾರ ರಚನೆ ಮಾಡಿದೆ. ಉಪಮುಖ್ಯಮಂತ್ರಿಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ಐವರು ಸಚಿವರ ಕ್ಯಾಬಿನೆಟ್ ಉಪಸಮಿತಿ ರಚಿಸಲಾಗಿದ್ದು, ಗ್ರಾಮೀಣಾಭಿವೃದ್ಧಿಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಾನೂನುಸಂಸದೀಯ ವ್ಯವಹಾರಗಳು ಹಾಗೂ ಸಣ್ಣ…
ಕಣ್ಣೀರು ಹೆಣ್ಮಕ್ಕಳ ಅಸ್ತ್ರ ಅಂತಾರಲ್ಲಾ! ವಿಷ್ಯ ಏನಪ್ಪಾ ಅಂದ್ರೆ ಹೆಂಗಸ್ರು ಒಂದ್ ವರ್ಷಕ್ಕೆ ಸರಾಸರಿ 30 ರಿಂದ 64 ಸಲ ಕಣ್ಣೀರಿಡ್ತಾರಂತೆ. ಆದ್ರೆ ಗಂಡಸ್ರು 6 ರಿಂದ 17 ಸಲ ಅತ್ರೆ ಹೆಚ್ಚೆಚ್ಚು.
ಕನ್ನಡದ ಹೆಮ್ಮೆ ಕೆಜಿಎಫ್ ಚಿತ್ರದ ಯಶಸ್ಸು ಕಾಣಲಿ ಎಂದು ಎಲ್ಲಾ ಕನ್ನಡಿಗರು ಪ್ರೋತ್ಸಾಹ ನೀಡಿದರು. ಸ್ಟಾರ್ ವಾರ್ ಮರೆತು ಎಲ್ಲಾ ನಟರುಗಳ ಅಭಿಮಾನಿಗಳು ಯಶ್ ಗೆ ಸಪೋರ್ಟ್ ಮಾಡಿದ್ದಾರ್ರೆ. ಹಾಗೆ ಎಲ್ಲಾ ಸುದ್ದಿವಾಹಿನಿಗಳು ಈ ಸಿನಿಮಾವನ್ನು ಪ್ರಮೋಷನ್ ಮಾಡಿದವು. ಆದರೆ ಟಿವಿ9 ಮಾತ್ರ ಈ ಚಿತ್ರದ ಬಗ್ಗೆ ಒಂದು ದಿನವೂ ವಿಶೇಷ ಕಾರ್ಯಕ್ರಮವನ್ನು ಮಾಡಲಿಲ್ಲ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಯಿತು. Tv9 ಸುದ್ದಿ ವಾಹಿನಿಯ ಏಕೆ ಹೀಗೆ ಮಾಡಿತು ಎಂಬುದಕ್ಕೆ ಉತ್ತರ ಇಲ್ಲಿದೆ. ಸಾಮಾನ್ಯವಾಗಿ ಚಿತ್ರತಂಡದವರು ಆ…