ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕಡಿಮೆ ವೆಚ್ಚದಲ್ಲಿ ಮಂಗಳಯಾನ, ಒಟ್ಟಿಗೆ 104 ಉಪಗ್ರಹಗಳನ್ನು ಹಾರಿಸಿ ವಿಶ್ವದಾಖಲೆ ಸ್ಥಾಪಿಸಿರುವ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಇದೀಗ ಇನ್ನೊಂದು ದಾಖಲೆಯನ್ನು ನಿರ್ಮಿಸಿದೆ.
ಭಾರತ ಇದುವರೆಗೂ ಅಭಿವೃದ್ಧಿಪಡಿಸಿದ ರಾಕೆಟ್ಗಳಲ್ಲೇ ಅತ್ಯಂತ ದೈತ್ಯ ಗಾತ್ರ (200 ಆನೆ ತೂಕದ) ಮತ್ತು ಸೂಪರ್ ಪವರ್ ಹೊಂದಿರುವ ಜಿಎಸ್ಎಲ್ವಿ ಮಾರ್ಕ್-3 ಉಡ್ಡಯನ ವಾಹಕವನ್ನು ಶ್ರೀಹರಿಕೋಟಾದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಆ ಮೂಲಕ, ಇಂಥ ಭಾರೀ ತೂಕದ ರಾಕೆಟ್ ಹಾರಿಸಬಲ್ಲ ಸಾಮರ್ಥ್ಯ ಹೊಂದಿರುವ ಅಮೆರಿಕ, ರಷ್ಯಾ, ಯುರೋಪ್, ಚೀನಾ ಹಾಗೂ ಜಪಾನ್ ಸಾಲಿಗೆ ಭಾರತವೂ ಸೇರ್ಪಡೆಯಾಗಿದೆ.
ಜಿಎಸ್ಎಲ್ವಿ ಮಾರ್ಕ್ 3 ರಾಕೆಟ್, ತನ್ನೊಂದಿಗೆ ಜಿಸ್ಯಾಟ್ 19 ಉಪಗ್ರಹ ಕೂಡಾ ಹೊತ್ತೊಯ್ಯಲಿದೆ. ಜಿಸ್ಯಾಟ್ 19 ಉಪಗ್ರಹವು, ಅತ್ಯಾಧುನಿಕವಾಗಿದ್ದು, ಡಿಜಿಟಲ್ ಇಂಡಿಯಾದ ಕನಸು ನನಸು ಮಾಡುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಭಾರತ ಇದುವರೆಗೆ 41 ಉಪಗ್ರಹಗಳನ್ನು ಹಾರಿಬಿಟ್ಟಿದ್ದು, ಅದರಲ್ಲಿ 13 ಸಂಪರ್ಕ ಉಪಗ್ರಹಗಳಾಗಿವೆ.
ಜಿಎಸ್ಎಲ್ವಿ ಮಾರ್ಕ್ 3 ರಾಕೆಟ್ ಮಹತ್ವ :-
ಸದ್ಯ ಇಸ್ರೋ ಬತ್ತಳಿಕೆಯಲ್ಲಿ ಪಿಎಸ್ಎಲ್ವಿ ಹಾಗೂ ಜಿಎಸ್ಎಲ್ವಿ ಮಾರ್ಕ್-2 ರಾಕೆಟ್ಗಳು 2 ಟನ್ ಭಾರ ಹೊತ್ತೊ ಯ್ಯ ಬಲ್ಲದು. ಅದಕ್ಕೂ ಮೇಲ್ಪಟ್ಟಭಾರದ ಉಪಗ್ರಹ ಒಯ್ಯುವ ಸಾಮರ್ಥ್ಯ ಜಿಎಸ್ಎಲ್ವಿ ಮಾರ್ಕ್ 3ಗೆ ಇದೆ. ಈ ರಾಕೆಟ್ ಬಳಕೆಯಿಂದ ಸಂಪರ್ಕ ಉಪಗ್ರಹಗಳನ್ನು ಉಡಾವಣೆ ಮಾಡಲು ಬೇರೆ ದೇಶಗಳ ಮೇಲೆ ಅವಲಂಬಿಸುವುದು ತಪ್ಪುತ್ತದೆ.
ಜಿಎಸ್ಎಲ್ವಿ ವಿಶೇಷತೆ:-
ದ್ರವರೂಪದ ಆಮ್ಲಜನಕ ಹಾಗೂ ದ್ರವರೂಪದ ಜಲಜನಕವನ್ನು ಇಂಧನವಾಗಿ ಬಳಸಿ ಕಾರ್ಯನಿರ್ವಹಿಸುವ ಕ್ರಯೋಜೆನಿಕ್ ಎಂಜಿನ್ ಮೂಲಕ ಪೂರ್ಣಪ್ರಮಾಣದ ರಾಕೆಟ್ ಉಡಾವಣೆ ಮಾಡುತ್ತಿರುವುದು ಇದೇ ಮೊದಲು.
ಜಿಎಸ್ಎಲ್ವಿ ಮಾರ್ಕ್ 3 ದೇಶದ ಅತ್ಯಂತ ದೈತ್ಯ ರಾಕೆಟ್ ಆಗಿದೆ. ಜತೆಗೆ ಅತ್ಯಂತ ಕುಬ್ಜ ರಾಕೆಟ್ ಕೂಡ ಹೌದು. ಎತ್ತರ 43 ಮೀಟರ್. (ಪಿಎಸ್ಎಲ್ವಿ ರಾಕೆಟ್ 44.4 ಮೀಟರ್ ಎತ್ತರವಿದೆ).
ಭೂಸ್ಥಿರ ವರ್ಗಾವಣೆ ಕಕ್ಷೆಗೆ 4 ಟನ್, ಕೆಳ ಭೂ ಕಕ್ಷೆಗೆ 8 ಟನ್ ತೂಕದ ಉಪಗ್ರಹ ಒಯ್ಯುವ ಸಾಮರ್ಥ್ಯ ಹೊಂದಿದೆ.
ಜಿಸ್ಯಾಟ್ 19 ವಿಶೇಷತೆ:-ಜಿಸ್ಯಾಟ್-19, ಉಪಗ್ರಹ ಆಧರಿತ ಧ್ವನಿ, ವೇಗದ ಇಂಟರ್ನೆಟ್ ಹಾಗೂ ವಿಡಿಯೋದಂತಹ ಅತ್ಯಂತ ಸುರಕ್ಷಿತ ಸೇವೆ ಆರಂಭಿಸುವ ನಿಟ್ಟಿನಲ್ಲಿ ಮೊದಲ ಉಪಗ್ರಹ . ಈ ಹಿಂದೆ ಉಡಾವಣೆ ಮಾಡಲಾದ 6-7 ಉಪಗ್ರಹಗಳಿಗೆ ಒಂದು ಜಿಸ್ಯಾಟ್- 19 ಸಮ. ಜಿಸ್ಯಾಟ್ 19ರಲ್ಲಿ ಟ್ರಾನ್ಸ್ಫಾಂಡರ್ಗಳು ಇರುವುದಿಲ್ಲ. ಈ ಹಿಂದಿನ ಉಪಗ್ರಹಗಳಲ್ಲಿ 1 ರೇಡಿಯೋ ಸಂಕೇತ ಕಳುಹಿಸುವ ವ್ಯವಸ್ಥೆ ಇದ್ದರೆ ಈ ಉಪಗ್ರಹದಲ್ಲಿ ಒಮ್ಮೆಗೆ 8 ರೇಡಿಯೋ ಸಂಕೇತ ಕಳುಹಿಸುವ ವ್ಯವಸ್ಥೆ ಇದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ವಯಸ್ಸಿಗೆ ಸಭಂದಪಟ್ಟ ವಿಷಯ ಬಂದಾಗ ಯಾರನ್ನಾದರೂ ನೋಡಿದ್ರೆ, ಅಂದಾಜು ಅವರ ವಯಸ್ಸನ್ನು ಗುರುತಿಸುವುದು ಕಷ್ಟದ ಕೆಲಸವೇನಲ್ಲ. ಆದ್ರೆ ಕೆಲವೊಬ್ಬರನ್ನು ನೋಡಿದಾಗ ಅದು ಕಷ್ಟ ಸಾಧ್ಯವೆನಿಸಬಹುದು. ಅಂತವರೇ ಆದ ಒಬ್ಬರ ಬಗ್ಗೆ ನಾವು ಹೇಳುತ್ತಿದ್ದೇವೆ.
ಉತ್ತರ ಕನ್ನಡ ಜಿಲ್ಲೆಯ ಯೆಲ್ಲಾಪುರ ಗ್ರಾಮದ ಸಹಕಾರ ಸೊಸೈಟಿ ಶಾದಿಭಾಗ್ಯ ಯೋಜನೆಯಡಿ ಬಂಪರ್ ಬಹುಮಾನ ಘೋಷಿಸಿದೆ.ಆನಗೋಡು ಗ್ರಾಮದ ರೈತನನ್ನು ವಿವಾಹವಾದ ಯಾವುದೇ ಯುವತಿಯ ಅಕೌಂಟ್ ಗೆ 1 ಲಕ್ಷ ರು ಹಣ ಡೆಪಾಸಿಟ್ ಮಾಡಲಾಗುವುದು. ಈ ಆಫರ್ ಆನಗೋಡು ಗ್ರಾಮಸ್ಥರಿಗೆ ಹಾಗೂ ಆನಗೋಡು ಸೇವಾ ಸಹಕಾರಿ ಸಂಘದ ಸದಸ್ಯರಿಗೆ ಮಾತ್ರ ಅನ್ವಯಿಸುತ್ತಿದೆ.ಈ ಯೋಜನೆ 2019ರ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಅಸಹಾಯಕರಾಗಿರುವ ಕುಟುಂಬಗಳಿಗೆ ಧನ ಸಹಾಯವಾಗಲಿದೆ, ಭವಿಷ್ಯದಲ್ಲಿ ಅವರಿಗೆ ಸಹಾಯವಾಗಲಿ ಎಂಬ…
ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಬಹುನಿರೀಕ್ಷೆಯ ತೆಲುಗು ಚಿತ್ರ ‘ಸೈರಾ ನರಸಿಂಹ ರೆಡ್ಡಿ’ ಆರಂಭದಿಂದಲೂ ಭಾರೀ ಕುತೂಹಲ ಮೂಡಿಸಿದೆ. ಭಾರತೀಯ ಚಿತ್ರರಂಗದ ಗಮನ ಸೆಳೆದಿರುವ ‘ಸೈರಾ ನರಸಿಂಹ ರೆಡ್ಡಿ’ ಚಿತ್ರದಲ್ಲಿ ಘಟಾನುಘಟಿ ಕಲಾವಿದರು ಅಭಿನಯಿಸಿದ್ದಾರೆ. ಬಿಗ್ ಬಿ ಅಮಿತಾಬ್ ಬಚ್ಚನ್, ಕಿಚ್ಚ ಸುದೀಪ್, ವಿಜಯ್ ಸೇತುಪತಿ, ಜಗಪತಿಬಾಬು, ಅನುಷ್ಕಾ ಶೆಟ್ಟಿ, ನಯನ ತಾರಾ, ತಮನ್ನಾ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ರಾಮ್ ಚರಣ್ ತೇಜ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಸುಧೀಂದರ್ ರೆಡ್ಡಿ ನಿರ್ದೇಶಿಸಿದ್ದಾರೆ. ಈಗಾಗಲೇ ‘ಸೈರಾ ನರಸಿಂಹ…
ಬೆಂಗಳೂರು ನಿಮ್ಹಾನ್ಸ್ನ ಜನ ಆರೋಗ್ಯ ಕೇಂದ್ರದ ಎಪಿಡೀಮಿಯಾಲಜಿ ವಿಭಾಗದ ವತಿಯಿಂದ ಅನುಷ್ಠಾನಗೊಂಡಿರುವ ಮಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಯುವಜನತೆಗೆ ಸಂಬಂಧಿಸಿದ ವಿಷಯಗಳಿಗೆ ಗೌರವಧನ ಆಧಾರದ ಮೇಲೆ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಯುವಜನತೆಗೆ ಸಂಬಂಧಿಸಿದ ವಿಷಯಗಳಿಗೆ ಗೌರವಧನ ಆಧಾರದ ಮೇಲೆ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ರಾಷ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ನಾನ ಸಂಸ್ದೆ (ನಿಮ್ಹಾನ್ಸ್) ಬೆಂಗಳೂರು ಇಲ್ಲಿ ತರಬೇತಿ…
ಇತ್ತೀಚಿನ ವೇಗದ ಜೀವನ ಶೈಲಿಯಲ್ಲಿ ಬಹಳಷ್ಟು ಜನರಿಗೆ ಮಾರುಕಟ್ಟೆಗಳಿಗೆ ಹೋಗಿ ತಮಗೆ ಬೇಕಾದ ವಸ್ತುಗಳನ್ನ ಕೊಂಡುಕೊಳ್ಳಲು ಸಮಯವಿಲ್ಲ, ಅಷ್ಟೆ ಯಾಕೆ ತಾವು ತಮ್ಮ ಕೆಲಸ ಮುಗಿಸಿ ಮನೆಗೆ ಬಂದರೆ ತಮ್ಮ ಹೊಟ್ಟೆಗೆ ಊಟ ಮಾಡಿಕೊಂಡು ತಿನ್ನಲು ಸಹ ಸಮಯವಿಲ್ಲ. ಇಂತಹ ಎಲ್ಲಾ ಸಮಸ್ಯೆಗಳಿಗೂ ಪರಿಹಾರವೆಂಬಂತೆ ಹಲವಾರು ಆನ್ಲೈನ್ ಶಾಪಿಂಗ್ (ಅಂತರ್ಜಲ ಮಾರುಕಟ್ಟೆ) ವೆಬಸೈಟ್ಗಳು ಪ್ರಾರಂಭವಾಗಿವೆ. ಇದರೊಂದಿಗೆ ಊಟವನ್ನು ಸಹ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಸಹ ನಾವು ಕಾಣಬಹುದು. ಆದರೆ ಇವುಗಳೆಲ್ಲ ದೊಡ್ಡ ದೊಡ್ಡ ನಗರಗಳಿಗೆ ಮಾತ್ರ…
ಮೇಷ ರಾಶಿ ಭವಿಷ್ಯ (Sunday, December 5, 2021) ನಿಮ್ಮ ಶಕ್ತಿಯ ಮಟ್ಟ ಹೆಚ್ಚಿರುತ್ತದೆ. ಇಂದು ನೀವು ನಿಮ್ಮ ಹಣವನ್ನು ಧಾರ್ಮಿಕ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಬಹುದು, ಇದರಿಂದ ನೀವು ಮಾನಸಿಕ ಶಾಂತಿಯನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಇತರರ ಸಲಹೆಗಳನ್ನು ಕೇಳುವುದು ಮತ್ತು ಕಾರ್ಯಗತಗೊಳಿಸುವುದು ಪ್ರಮುಖವಾದ ಒಂದು ದಿನ. ನೀವು ಪ್ರಣಯದ ಆಲೋಚನೆಗಳು ಮತ್ತು ಹಿಂದಿನ ಕನಸುಗಳಲ್ಲಿ ಕಳೆದುಹೋಗುತ್ತೀರಿ. ನಿಮ್ಮ ಕೆಲಸದಿಂದ ವಿರಾಮವನ್ನು ತೆಗೆದುಕೊಂಡು ಇಂದು ನೀವು ನಿಮ್ಮ ಸ್ವಲ್ಪ ಸಮಯವನ್ನು ನಿಮ್ಮ ಜೀವನ ಸಂಗಾತಿಯೊಂದಿಗೆ ಕಳೆಯಬಹುದು….