ಆಧ್ಯಾತ್ಮ

ಇದು ಸೃಷ್ಟಿ ಕರ್ತ ಬ್ರಹ್ಮದೇವರ, ವಿಶ್ವದ ಏಕೈಕ ದೇವಾಲಯ!ಈ ದೇವಾಲಯ ಎಲ್ಲಿದೆ ಗೊತ್ತಾ?

2103

ಭಾರತದ ಹಿಂದೂ ಧರ್ಮವು ಸನಾತನವಾಗಿದ್ದು, ಈ ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವರುಗಳಿದ್ದಾರೆ. ಭಾರತದ ಉದ್ದಗಲಕ್ಕೂ ಪ್ರತಿಯೊಂದು ದೇವರುಗಳ ದೇವಸ್ಥಾನಗಳು, ಪೂಜಾ ಮಂದಿರಗಳು ನಮಗೆ ಸಿಗುತ್ತವೆ. ಆದರೆ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಶಿವ ಇವರು ಸೃಷ್ಟಿ, ಸ್ಥಿತಿ, ಲಯ
ಕರ್ತರಾಗಿದ್ದು, ಸೃಷ್ಟಿಯ ಮೂಲಕ್ಕೆ ಆಧಾರವಾಗಿರುವ ಬ್ರಹ್ಮನಿಗೆ ಮಾತ್ರ ದೇವಾಲಯಗಳಿಲ್ಲ.ಹಾಗಂತ ಇಲ್ಲವೇ ಇಲ್ಲ ಅಂತಲ್ಲ. ಇಡಿ ವಿಶ್ವದಲ್ಲಿರುವುದು ಒಂದೇ ಒಂದು ದೇವಾಲಯ ಮಾತ್ರ.

ರಾಜಸ್ಥಾನದಲ್ಲಿ ಸೃಷ್ಟಿ ಕರ್ತನಾದ ಬ್ರಹ್ಮನಿಗೆ ದೇವಾಲಯವೊಂದಿದ್ದು, ಪುಷ್ಕರ್ ದೇವಾಲಯ ಎಂದೇ ಪ್ರಸಿದ್ಧಿ ಪಡೆದಿದೆ. ಬ್ರಹ್ಮನಿಗೆ ಭೂಲೋಕದಲ್ಲಿ ಪೂಜೆ ತಪ್ಪುವುದಕ್ಕೆ ಹಲವು ಪುರಾಣಗಳಲ್ಲಿ ಹಲವು ರೀತಿಯ ವಿವರಣೆಗಳಿವೆ. ಈ ಪೈಕಿ ಒಂದು ವಿವರಣೆ ಪ್ರಕಾರ ವಜ್ರನಭ ಎಂಬ ರಾಕ್ಷಸ ಭೂಮಿಯಲ್ಲಿ ಅತ್ಯಂತ ಉಪಟಳ ನೀಡುತ್ತಿದ್ದ. ಆಗ ಬ್ರಹ್ಮದೇವರು ಕಮಲದ ಹೂವನ್ನು ಆಯುಧವನ್ನಾಗಿ ಬಳಸಿಕೊಂಡು ಆತನನ್ನು ವಧೆ ಮಾಡುತ್ತಾನೆ. ಈ ಸಂದರ್ಭದಲ್ಲಿ ಕಮಲದ ಹೂವಿನ ಎಸಳುಗಳು ಭೂಮಿಯ ಮೂರು ಭಾಗಗಳಲ್ಲಿ ಬೀಳುತ್ತದೆ. ಆ ಪ್ರದೇಶಗಳಲ್ಲಿ ಜ್ಯೇಷ್ಠ, ಮಧ್ಯ, ಕನಿಷ್ಟ ಎಂಬ ಮೂರು ಸರೋವರಗಳು ಸೃಷ್ಟಿಯಾಗುತ್ತವೆ. ಬ್ರಹ್ಮನ ಕೈಯ್ಯಿಂದ ಕಮಲ ಬಿದ್ದಿದ್ದರಿಂದಾಗಿ ಅದಕ್ಕೆ ಪುಷ್ಕರ ಎಂಬ ಹೆಸರು ಬಂದಿದೆ ಎಂಬ ನಂಬಿಕೆ ಇದೆ.

ಪುರಾಣಗಳ ಪ್ರಕಾರ ಬ್ರಹ್ಮ ಯಜ್ಞ ಮಾಡಬೇಕಿರುತ್ತದೆ. ಮಡದಿ ಇಲ್ಲದೇ ಯಜ್ಞ ಮಾಡುವಂತಿಲ್ಲ. ಆದರೆ ಬ್ರಹ್ಮನ ಮಡದಿ ಸಾವಿತ್ರಿ ಆ ವೇಳೆಯಲ್ಲಿ ಅಲ್ಲಿರುವುದಿಲ್ಲ. ಯಜ್ಞ ಮಾಡಲೇಬೇಕಾದ್ದರಿಂದ ಬ್ರಹ್ಮ ಗಾಯತ್ರಿಯನ್ನು ವಿವಾಹವಾಗಿ ಯಜ್ಞವನ್ನು ಪೂರೈಸುತ್ತಾನೆ. ಸಾವಿತ್ರಿ ಬಂದು ನೋಡಿದಾಗ ಗಾಯತ್ರಿ ಬ್ರಹ್ಮನನ್ನು ವಿವಾಹವಾಗಿರುವುದು ತಿಳಿಯುತ್ತದೆ. ಇದರಿಂದ ಕೋಪಗೊಂಡ ಸಾವಿತ್ರಿ “ನಿನಗೆ ಭೂಲೋಕದಲ್ಲಿ ಪೂಜೆ ಇಲ್ಲದಂತಾಗಲಿ” ಎಂದು ಶಾಪ ನೀಡುತ್ತಾಳೆ. ಆದರೆ ಯಜ್ಞದಲ್ಲಿ ಭಾಗಿಯಾಗಿದ್ದ ಗಾಯತ್ರಿ ತನ್ನ ಶಕ್ತಿಯಿಂದ ಯಜ್ಞ ನಡೆದಿದ್ದ ಪುಷ್ಕರವನ್ನು ರಕ್ಷಿಸುತ್ತಾಳೆ, ಅದಕ್ಕಾಗಿಯೇ ಇಂದಿಗೂ ಪುಷ್ಕರದಲ್ಲಿ ಮಾತ್ರ ಬ್ರಹ್ಮನಿಗೆ ಪೂಜೆ ಸಲ್ಲುತ್ತದೆ ಎಂಬ ನಂಬಿಕೆ ಇದೆ. ಇಲ್ಲಿ ಓದಿ:-ಈ 5 ವಸ್ತುಗಳಿಂದ ಶಿವ ಲಿಂಗವನ್ನು ಪೂಜಿಸುವಂತಿಲ್ಲ!

ಶಿವ ಬ್ರಹ್ಮನ ಒಂದು ತಲೆ ಕತ್ತರಿಸಿದ್ದಕ್ಕೂ ಪೂಜೆ ನಿಲ್ಲುವುದಕ್ಕೂ ಇದೆ ಕಾರಣ :-

ಬ್ರಹ್ಮಾಂಡದ ಸೃಷ್ಟಿಯ ವೇಳೆ ಬ್ರಹ್ಮ ಶತರೂಪಳೆಂಬ ಸುಂದರ ದೇವತೆಯನ್ನು ಸೃಷ್ಟಿಸಿದ. ತಾನೇ ಸೃಷ್ಟಿಸಿದ ಈ ದೇವತೆಯಿಂದ ಬ್ರಹ್ಮ ಮೋಹಗೊಂಡ. ಬ್ರಹ್ಮನ ದೃಷ್ಟಿಯನ್ನು ತಪ್ಪಿಸಿಕೊಳ್ಳಲು ಶತರೂಪ ಶತ ಪ್ರಯತ್ನ ನಡೆಸಿದಳಾದರೂ ಎಲ್ಲಾ ದಿಕ್ಕುಗಳಲ್ಲಿ ಆಕೆಯನ್ನು ಹಿಂಬಾಲಿಸಲು ಬ್ರಹ್ಮ ತಲೆಯೊಂದನ್ನು ರೂಪಿಸಿದ. ನಾಲ್ಕು ದಿಕ್ಕುಗಳು ಮತ್ತು ಇವುಗಳ ಮೇಲೊಂದು ಹೀಗೆ ಒಟ್ಟು ಐದು ತಲೆಯನ್ನು ಬ್ರಹ್ಮ ಹೊಂದಿದ. ಬ್ರಹ್ಮನನ್ನು ನಿಯಂತ್ರಿಸಲು ಶಿವ ಮೇಲಿನ ತಲೆಯನ್ನು ಕತ್ತರಿಸಿ ಹಾಕಿದ. ತಾನು ಸೃಷ್ಟಿಸಿದವಳ ಮೇಲೆ ತಾನೇ ಅವಳನ್ನು ಮೋಹಿಸುವುದು ತಪ್ಪೆಂದು ಶಿವ ಬ್ರಹ್ಮನಿಗೆ ಹೇಳಿದ. ಹಾಗಾಗಿ ಬ್ರಹ್ಮನಿಗೆ ಯಾರೂ ಪೂಜೆ ಸಲ್ಲಿಸಬಾರದೆಂದು ಶಿವ ಶಾಪ ನೀಡಿದ ಎಂದೂ ಹೇಳಲಾಗುತ್ತದೆ. ಆದ್ದರಿಂದಲೇ ತ್ರಿಮೂರ್ತಿಗಳಲ್ಲಿ ಇಬ್ಬರಾದ ವಿಷ್ಣು ಮತ್ತು ಶಿವನಿಗೆ ಮಾತ್ರ ಪೂಜೆ ಸಲ್ಲಿಸಲಾಗುತ್ತಿದೆ. ಬ್ರಹ್ಮನಿಗೆ ಒಂದು ಪ್ರದೇಶವನ್ನು ಹೊರತುಪಡಿಸಿ ಬೇರೆ ಎಲ್ಲಿಯೂ ಪೂಜೆ ಸಲ್ಲಿಸುವುದಿಲ್ಲ.

ಭಗವಾನ್ ಶಿವನಿಂದ ಪಡೆದ ಶಾಪ:-

ಒಮ್ಮೆ ಬ್ರಹ್ಮ ಮತ್ತು ವಿಷ್ಣು ದೇವತೆಗಳ ನಡುವೆ ಯಾರೂ ಸವ್ರೋತ್ತಮರೆಂದು ವಾದ ಏರ್ಪಡುತ್ತದೆ. ಇಬ್ಬರ ನಡುವೆ ಅತಿ ಘೋರವಾದ ವಾದ ಉಂಟಾಗಲು, ಆಗ ಇವರ ಮಧ್ಯ ಆದಿ ಅನ್ತ್ಯಗಳಲ್ಲಿದ ಬೃಹದಾಕಾರವಾದ ಅಗ್ನಿ ಸ್ಥಂಭ ಲಿಂಗವು ಏರ್ಪಡುತ್ತದೆ. ಭಗವಾನ್ ಶಿವನು ಲಿಂಗದ ರೂಪದಲ್ಲಿ ಕಾಣಿಸಿಕೊಂಡು, ಈ ಲಿಂಗದ ಆದಿ, ಅಂತ್ಯ ಕಂಡುಹಿಡಿದವರು ಸವ್ರೋತ್ತಮರೆಂದು ಘೋಷಿಸುತ್ತಾರೆ. ಆಗ ಬ್ರಹ್ಮ ಮತ್ತು ನಾರಾಯಣರು ಲಿಂಗದ ಆದಿ ಮತ್ತು ಅಂತ್ಯ ಹುಡುಕಲು ಹೊರಡುತ್ತಾರೆ. ನಾರಾಯಣನು ಲಿಂಗದ ತುದಿಯ ಕಡೆ, ಮತ್ತು ಬ್ರಹ್ಮನು ಲಿಂಗದ ಶಿರದ ಕಡೆ ಹುಡುಕಲು ಹೊರದುತ್ತಾರೆ. ಆದ್ರೆ ಭಗವಾನ್ ನಾರಾಯಣನಿಗೆ ಅಂತ್ಯ ಸಿಗದೇ, ಈ ಶಿವ ಲಿಂಗಕ್ಕೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ ಎಂದು ನಿರ್ಧರಿಸಿ, ವಾಪಸ್ ಆಗುತ್ತಾರೆ.

ಸುಲಭವಾಗಿ ತನ್ನ ಸೋಲನ್ನು ಒಪ್ಪದ ಬ್ರಹ್ಮದೇವರು, ಆದಿಯನ್ನು ಕಂಡುಹಿಡಿಯಲು ಹೋಗುತ್ತಿರುವಾಗ ಲಿಂಗದಿಂದ ಜಾರುತ್ತಿದ್ದ ಕೇದಗೆ ಪುಷ್ಪವನ್ನು ಕಂಡ ಬ್ರಹ್ಮದೇವರು, ಕೆದಗೆಯೊಡನೆ ಸಂಧಾನ ಮಾಡಿಕೊಂಡು, ನಾನು ಲಿಂಗದ ಆಡಿಯನ್ನು ಕಂಡೆ ಎಂಬ ಸುಳ್ಳನ್ನು ಹೇಳಬೇಕೆಂದು, ಕೇದಗೆ ಪುಷ್ಪವನ್ನು ಸಾಕ್ಷಿಯಾಗಿ ಕರೆತಂದನು. ಶಿವನಿಗೆ ನಾನು ಈ ಲಿಂಗದ ಆದಿಯನ್ನು ಕಂಡೆ ಎಂದು, ಸಾಕ್ಷಿಯಾಗಿ ಕೇದಗೆ ಪುಷ್ಪವನ್ನು ಕೇಳಲಾಗಿ, ಕೇದಗೆ ಪುಷ್ಪವು ಕೂಡ ಬ್ರಹ್ಮನ ಮಾತಿಗೆ ಸಹಕರಿಸಿತು. ಆಗ ಬ್ರಹ್ಮದೇವರ ಸುಳ್ಳಿನಿಂದ ಕ್ರುದ್ದನಾದ ಶಿವನು, ಇನ್ನುಮುಂದೆ ಮೂರು ಜಗತ್ತುಗಳಲ್ಲಿ ಯಾರೊಬ್ಬರೂ ನಿನ್ನನ್ನು ಪೂಜಿಸದಂತೆ ಇರಲಿ ಎಂಬ ಶಾಪವನ್ನು ಕೊಟ್ಟನು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ

    ಖ್ಯಾತಿ ತಿಥಿ ಸಿನಿಮಾದ ಗಡ್ಡಪ್ಪನಿಗೆ ಈಗ ಏನಾಗಿದೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ‘ತಿಥಿ’ ಸ್ಟಾರ್ ಗಡ್ಡಪ್ಪ ಹಾಗೂ ಸೆಂಚುರಿಗೌಡ ಸದ್ಯ ಸ್ಯಾಂಡಲ್ ವುಡ್ ನ ‘ಟಾಕ್ ಆಫ್ ದಿ ಟೌನ್’ ಆಗಿದ್ದಾರೆ. ಬಿಗ್ ಸ್ಟಾರ್ ಗಳಂತೆ ಬ್ಯುಸಿಯಾಗಿರುವ ಇವರಿಬ್ಬರು ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

  • inspirational

    ಬಯಲಾಯ್ತು ದಾಸ ದರ್ಶನ್ ರವರ ಮತ್ತೊಂದು ಮುಖ..?

    ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ನಡೆಯ ಮೂಲಕ ನಿಜಜೀವನದಲ್ಲಿಯೂ ಹೀರೋ ಆಗಿದ್ದಾರೆ. ಅಂದ ಹಾಗೆ ಹಿರಿಯ ನಟ ರೆಬಲ್ ಸ್ಟಾರ್ ಅಂಬರೀಶ್ ಅವರ ನಿಧನದ ಹಿನ್ನೆಲೆಯಲ್ಲಿ ದರ್ಶನ್ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲು ಅಭಿಮಾನಿಗಳಿಗೆ ಕರೆ ನೀಡಿದ್ದಾರೆ. ಇದರ ಹಿಂದೆ ಮತ್ತೊಂದು ಕಾರಣ ಕೂಡ ಇದೆ ಎಂದು ಹೇಳಲಾಗಿದೆ. ತಮ್ಮ ಹುಟ್ಟುಹಬ್ಬ ಆಚರಣೆ ಸಂದರ್ಭದಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ, ಘೋಷಣೆ ಕೂಗಿ ಸಂಭ್ರಮಿಸುತ್ತಾರೆ. ಇದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆ ಆಗುತ್ತದೆ ಎಂಬುದನ್ನು ದರ್ಶನ್…

  • ಸುದ್ದಿ

    ಸೂಜಿಯಿಂದ ಚುಚ್ಚದೆಯೇ ಚುಚ್ಚುಮದ್ದು ನೀಡಬಹುದಾದ ನೋ ಪ್ರಿಕ್ಲಿ ಪ್ಯಾಚ್‌ ಆವಿಷ್ಕರಿಸಿದ ಭಾರತೀಯ ವಿಜ್ಞಾನಿಗಳು,..!

    ಸೂಜಿ ಚುಚ್ಚಿಸಿಕೊಳ್ಳುವುದೆಂದರೆ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಭಯ ಇದ್ದೇ ಇರುತ್ತದೆ. ಇದಕ್ಕೆ ಮನಃಶಾಸ್ತ್ರದಲ್ಲಿ ಟ್ರೈಪನೋಫೋಬಿಯಾ ಎಂದು ಹೆಸರು. ಈ ಭಯಕ್ಕೆ ಭಾರತದ ವಿಜ್ಞಾನಿಗಳು ಪರಿಹಾರ ಹುಡುಕಿದ್ದಾರೆ. ಸೂಜಿಯಿಂದ ಚುಚ್ಚದೆಯೇ ಚುಚ್ಚುಮದ್ದು ನೀಡಬಹುದಾದ ನೋ ಪ್ರಿಕ್ಲಿ ಪ್ಯಾಚ್‌ ಆವಿಷ್ಕರಿಸಿದ್ದಾರೆ. ಅಹಮದಾಬಾದ್‌,  ಮಕ್ಕಳಿಗೆ ಹುಷಾರು ತಪ್ಪಿತೆಂದರೆ ಪಾಲಕರಿಗೆ ಆಂತಂಕವಾಗುವುದು ಸಹಜ. ಚಿಕಿತ್ಸೆ ಕೊಡಿಸುವಾಗ ಚುಚ್ಚುಮದ್ದು ಕೊಡಿಸುವುದು ಮತ್ತೊಂದು ಸಾಹಸದ ಕಾರ್ಯ. ಕೆಲ ಮಕ್ಕಳಂತೂ ಹಾರಾಡಿ, ಚೀರಾಡಿ ಹಿಡಿತಕ್ಕೇ ಸಿಗದಂತಾಗಿಬಿಡುತ್ತವೆ. ಅಂತಹ ಮಕ್ಕಳ ಕೈಕಾಲು ಕಟ್ಟಿಯೇ ಚುಚ್ಚುಮದ್ದು ನೀಡಬೇಕಾಗುತ್ತದೆ. ನಮ್ಮಲ್ಲಿಯೂ ಹಲವರಿಗೆ…

  • ಜ್ಯೋತಿಷ್ಯ

    ದಿನ ಭವಿಷ್ಯ ಬುಧವಾರ ಈ ದಿನದ ರಾಶಿ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ನೋಡಿ….

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ9663218892 call/ whatsapp/ mail raghavendrastrology@gmail.com ಮೇಷ(7 ನವೆಂಬರ್, 2018) ನಿಮ್ಮ ನಿರ್ಧಾರದಲ್ಲಿ ಪೋಷಕರ ಸಹಾಯ ನಿಮಗೆ ತುಂಬ ಸಹಾಯ ಮಾಡುತ್ತದೆ….

  • Sports

    ಕ್ರಿಕೆಟ್ ವೃತ್ತಿಯಲ್ಲಿ ಆಟವಾಡದೆಯೇ ಗಳಿಸಬಹುದು 20 ಲಕ್ಷದವರೆಗೆ ಸಂಬಳ…!

    ಕ್ರಿಕೆಟ್ ಬಹುತೇಕರ ಕನಸು. ಆದ್ರೆ ಅಂತರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುವುದು ಸುಲಭದ ಕೆಲಸವಲ್ಲ. ಕ್ರೀಡೆ ಗೊತ್ತಿಲ್ಲದವರಿಗೂ ಕ್ರಿಕೆಟ್ ಜಗತ್ತಿನಲ್ಲಿ ಕೆಲಸ ಸಿಗುತ್ತದೆ. ಒಳ್ಳೆ ವಿದ್ಯಾಭ್ಯಾಸ ಹೊಂದಿರುವವರು ಕ್ರಿಕೆಟ್ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡು ಲಕ್ಷಾಂತರ ರೂಪಾಯಿ ಗಳಿಕೆ ಮಾಡ್ತಿದ್ದಾರೆ. ಬ್ಯಾಟಿಂಗ್, ಬೌಲಿಂಗ್ ಮಾತ್ರವಲ್ಲ, ಮೈದಾನದಲ್ಲಿ ಹಾಗೂ ಮೈದಾನದ ಹೊರಗೆ ಕ್ರಿಕೆಟ್ ಗೆ ಸಂಬಂಧಿಸಿದ ಅನೇಕ ಕೆಲಸಗಳಿವೆ. ಪಂದ್ಯದ ತೀರ್ಪುಗಾರನಾಗಿ ನೀವು ಕೆಲಸ ಮಾಡಬಹುದು. ಪ್ರತಿ ಪಂದ್ಯಕ್ಕೆ 30 ಸಾವಿರ ರೂಪಾಯಿ ನೀಡಲಾಗುತ್ತದೆ. ಐಸಿಸಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ…