ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕನ್ನಡ ಚಿತ್ರರಂಗದಲ್ಲಿ 80 ರ ದಶಕದಲ್ಲಿ ಹಲವಾರು ನಟರು ಕನ್ನಡ ಚಲನಚಿತ್ರ ರಂಗಕ್ಕೆ ಪಾದರ್ಪಣೆ ಮಾಡಿದ್ದರು ಆ ವೇಳೆಯಲ್ಲಿ ಶ್ರೀಧರ್ ಕೂಡ ಕನ್ನಡ ಚಲನ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು ಹಲವಾರು ಸಿನಿಮಾಗಳಲ್ಲಿ ನಟಿಸಿದರು ಇವರು ನಟ ಮಾತ್ರವಲ್ಲ ಒಬ್ಬ ಒಳ್ಳೆಯ ಅದ್ಭುತ ನೃತ್ಯಗಾರ ನಟನೆ ಜೊತೆ ನೃತ್ಯ ಮಾಡುವುದರಲ್ಲಿಯೂ ಕೂಡ ಸುಪ್ರಸಿದ್ಧ ಎಲ್ಲಾ ವಿದ್ಯೆಗಳನ್ನು ಕರಗತ ಮಾಡಿಕೊಂಡಿದ್ದರು ಕನ್ನಡ ಚಲನಚಿತ್ರಗಳಲ್ಲಿ ಮಾತ್ರವಲ್ಲದೆ ಬಹುಭಾಷೆಗಳಲ್ಲಿ ಸಿನಿಮಾವನ್ನು ಮಾಡಿದ್ದಾರೆ. ಇವರ ವೈಯಕ್ತಿಕ ಜೀವನಕ್ಕೆ ಬರುವುದಾದರೆ ಇವರಿಗೆ ಒಬ್ಬಳು ಹೆಂಡತಿ ಮತ್ತು ಒಂದು ಹೆಣ್ಣು ಮಗು ಇದೆ ಶ್ರೀಧರ್ ಮಾದರಿಯಲ್ಲೆ ಹೆಂಡತಿ ಕೂಡ ಪ್ರಸಿದ್ಧ ಕಲಾವಿದೆ ಇವರಿಬ್ಬರು ವಿದ್ಯೆ ಮಗಳಿಗೂ ಕೂಡ ಬಂದಿದೆ.
ಶ್ರೀಧರ್ ದಂಪತಿಗೆ ಸೀನಿಯರ್ ಡಾನ್ಸರ್ ಪ್ರಶಸ್ತಿ ಅಮೃತ ಘಳಿಗೆ’ ಚಿತ್ರದ ಮುಖಾಂತರ ಕನ್ನಡ ಚಿತ್ರರಂಗಕ್ಕೆ ಕಾಲಿಸಿರಿದ ಮತ್ತು ಭರತನಾಟ್ಯ ಪ್ರದರ್ಶನದಿಂದ ವಿಶ್ವದಾದ್ಯಂತ ಖ್ಯಾತಿ ಗಳಿಸಿರುವ ನಟ, ನೃತ್ಯಪಟು ಶ್ರೀಧರ್ ಮತ್ತು ಅವರ ಪತ್ನಿ ಅನುರಾಧ ಅವರನ್ನು ಚೆನ್ನೈನ ನಾರದ ಗಾನ ಸಭಾ 2009ನೇ ಸಾಲಿನ ‘ಸೀನಿಯರ್ ಡಾನ್ಸರ್’ ಎಂದು ಪ್ರಶಸ್ತಿ ನೀಡಿ ಗೌರವಿಸಿದೆ. ಬಾಲ್ಯದಿಂದಲೇ ನೃತ್ಯದ ಗೀಳನ್ನು ಬೆಳೆಸಿಕೊಂಡಿದ್ದ ಶ್ರೀಧರ್ ಅವರಿಗೆ 1982ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ‘ಶ್ರೇಷ್ಠ ನೃತ್ಯಪಟು’ ಪ್ರಶಸ್ತಿ ನೀಡಿತ್ತು. ಶ್ರೀಧರ್ ಅವರ ನೃತ್ಯ ಮತ್ತು ಅಭಿನಯ ಸಾಮರ್ಥ್ಯವನ್ನು ಗಮನಿಸಿದ ಖ್ಯಾತ ಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ‘ಅಮೃತ ಘಳಿಗೆ’ ಚಿತ್ರಕ್ಕಾಗಿ ಶ್ರೀಧರ್ ಅವರನ್ನು ಎಳೆತಂದಿದ್ದರು.
ನಂತರ ಸುಂದರ ಸ್ವಪ್ನಗಳು, ಬಣ್ಣದ ವೇಷ, ಶಬರಿಮಲೆ ಸ್ವಾಮಿ ಅಯ್ಯಪ್ಪ, ಮೌನ ಗೀತೆ, ಹಠಮಾರಿ ಹೆಣ್ಣು ಕಿಲಾಡಿ ಗಂಡು, ಆಸ್ಫೋಟ, ಬೊಂಬಾಟ್ ಹೆಂಡ್ತಿ, ಸಂತ ಶಿಶುನಾಳ ಷರೀಫ ಸಾಹೇಬ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಶಿಶುನಾಳ ಚಿತ್ರಕ್ಕೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಯೂ ಒಲಿದುಬಂದಿತು. ಕನ್ನಡ ಚಿತ್ರವಲ್ಲದೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿಯೂ ಶ್ರೀಧರ್ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ. ಶ್ರೀಧರ್ ಮತ್ತು ಅನುರಾಧ ದಂಪತಿಗಳು ಕರ್ನಾಟಕ, ಭಾರತದೆಲ್ಲೆಡೆ ಮತ್ತು ವಿಶ್ವದಾದ್ಯಂತ ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ. ನೃತ್ಯ ಮತ್ತು ಅಭಿನಯ ಕ್ಷೇತ್ರದಲ್ಲಿ ಅವರ ಮೂರು ದಶಕಗಳ ಸೇವೆಯನ್ನು ಗುರುತಿಸಿ ರಾಜ್ಯ ಸರಕಾರ 2002ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿತ್ತು. 2008ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಶ್ರೀಧರ್ ಮತ್ತು ಅನುರಾಧ ಅವರನ್ನು ಪ್ರಶಸ್ತಿ ನೀಡಿ ಗೌರವಿಸಿತ್ತು.
ಚಲನಚಿತ್ರ ಕಲಾವಿದರಾದ ಶ್ರೀಧರ್ ಮತ್ತು ಅನುರಾಧ ದಂಪತಿ ಪುತ್ರಿ ನೃತ್ಯದಲ್ಲಿ ವಿಶಿಷ್ಟ ಸಾಧನೆ ಮಾಡುವ ಮೂಲಕ ಪೋಷಕರಿಗೆ ಕೀರ್ತಿ ತಂದಿದ್ದಾರೆ. ಮನಶಾಸ್ತ್ರದಲ್ಲಿ ಹೆಚ್ಚಿನ ಆಸಕ್ತಿ ಇರುವ ಅನಘಳಿಗೆ ಆ ವಿಷಯದಲ್ಲಿ ನೂರಕ್ಕೆ ನೂರು ಬಂದಿದ್ದು ಬಹಳ ಸಂತಸ ತಂದಿದೆ. ಈಗಾಗಲೇ ದೇಶ ಮತ್ತು ವಿದೇಶದಲ್ಲಿ ನೃತ್ಯ ಪ್ರದರ್ಶನ ನೀಡಿರುವ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಪರಿಷತ್‌ನ (ಎನ್‌ಸಿಇಆರ್‌ಟಿ) ಸ್ಕಾಲರ್‌ಶಿಪ್‌ನ್ನು ಸಹ ಪಡೆಯುತ್ತಿದ್ದಾರೆ. ಪೋಷಕರ ಜೊತೆಗೆ ಇಂಗ್ಲೆಂಡ್, ಫ್ರಾನ್ಸ್‌ನಲ್ಲೂ ಅನಘ ಗೌರಿ ನೃತ್ಯ ಪ್ರದರ್ಶನ ನೀಡಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಲಂಕೆಯಲ್ಲಿ ಮಹಾಯುದ್ಧ ನಡೆದು ರಾವಣ ರಾಮಬಾಣಕ್ಕೆ ತುತ್ತಾಗಿ ಧರೆಗುರುಳಿದ. ಅವನು ಇನ್ನೂ ಮರಣಶಯ್ಯೆಯಲ್ಲಿರುವಾಗ ರಾಮ, “ಲಕ್ಷ್ಮಣಾ, ರಾವಣ ಮಹಾ ಪಂಡಿತ. ಅಧ್ಯಯನ ಮತ್ತು ಅನುಭವದಿಂದ ಅಪಾರ ಜ್ಞಾನ ಗಳಿಸಿದ್ದಾನೆ. ಅವನ ಬಳಿ ಹೋಗಿ, ಅವನಿಂದ ಅಮೂಲ್ಯವಾದ ಪಾಠಗಳನ್ನು ಕಲಿತು ಕೊಂಡು ಬಾ ಎಂದು ಹೇಳಿದ. ಅದರಂತೆ ಲಕ್ಷ್ಮಣ ರಾವಣನ ಪಾದದ ಬಳಿ ನಿಂತು, ರಾವಣನ ಬೋಧನೆಗಳನ್ನು ಆಲಿಸಿ, ಹೃದ್ಗತ ಮಾಡಿಕೊಳ್ಳುತ್ತಾನೆ. ರಾವಣ ಸಾಯುವ ಮುನ್ನ ಲಕ್ಷ್ಮಣನಿಗೆ ರಾವಣ ಯೋಧ ಮಾತ್ರವಲ್ಲ, ಸರ್ವೋಚ್ಚ ವಿದ್ವಾಂಸನು ಆಗಿದ್ದ ಬ್ರಾಹ್ಮಣ ಕುಲದಲ್ಲಿ ಜನಿಸಿದ…
ದೇಶದ ಮೊದಲ ರೋಬೋಟ್ ರೆಸ್ಟೋರೆಂಟ್ ಚೆನ್ನೈನಲ್ಲಿ ಶುರುವಾಗಿದೆ. ಇಲ್ಲಿ ವೇಟರ್ ಬದಲು ರೋಬೋಟ್ ಆಹಾರ ಒದಗಿಸುವ ಕೆಲಸ ಮಾಡುತ್ತದೆ. ಈ ರೆಸ್ಟೋರೆಂಟ್ ಚೆನ್ನೈನ ಮಹಾಬಲಿಪುರಂ ರಸ್ತೆಯಲ್ಲಿದೆ. ಥಾಯ್ ಹಾಗೂ ಚೈನೀಸ್ ಆಹಾರ ಗ್ರಾಹಕರಿಗೆ ಸಿಗಲಿದೆ.
ಇಂದು ಭಾನುವಾರ , 25/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ತಲೆಹೊಟ್ಟು ಎಲ್ಲ ರೀತಿಯ ವಯೋಮಾನದವರನ್ನು ಕಾಡುವ ಸಮಸ್ಯೆ. ಮಾರುಕಟ್ಟೆಯಲ್ಲಿ ಸಿಗುವ ಯಾವೆಲ್ಲ ಎಣ್ಣೆ ಹಾಗೂ ಶ್ಯಾಂಪೂ ಗಳನ್ನು ಪ್ರಯೋಗ ಮಾಡಿದ್ರೂ ತಲೆಹೊಟ್ಟು ಹೋಗ್ತಾಯಿಲ್ಲ ಎನ್ನುವವರಿದ್ದಾರೆ
ಲೂಧಿಯಾನದ ಅಬ್ದುಲ್ಲಾಪುರ ಬಸ್ತಿ ಪ್ರದೇಶದಲ್ಲಿ ಮಕ್ಕಳಿಗೆ ಬಲವಂತವಾಗಿ ಪೊಲೀಯೋ ಡ್ರಾಪ್ಸ್ ನೀಡಲಾಗುತ್ತಿದೆ ಎಂಬ ಆರೋಪಗಳ ನಡುವೆಯೇ ಒಂದೂವರೆ ವರ್ಷ ಪ್ರಾಯದ ಬಾಲಕ, ಪೊಲೀಯೋ ಡ್ರಾಪ್ಸ್ ನೀಡಲಾದ ಅರ್ಧ ತಾಸಿನೊಳಗೆ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಅನೇಕ ವರ್ಷಗಳ ಹಿಂದೆ, ವಿದ್ಯಾರ್ಥಿಯೋಬ್ಬನು ಕಾನೂನು ಶಿಕ್ಷಣವನ್ನು ಕಲಿಯಲು ಬಂದ. ಆದ್ರೆ ಅವನ ಹತ್ತಿರ ಶುಲ್ಕವನ್ನು ಪಾವತಿಸಲು ಸಾಧ್ಯವಿರಲಿಲ್ಲ. ಹೀಗಾಗಿ ಅವನು ಶಿಕ್ಷಕರ ಜೊತೆ ಒಪ್ಪಂದವೊಂದನ್ನು ಮಾದಿಲೊಂಡನು.ಅದೆಂದರೆ “ನಾನು ನ್ಯಾಯಾಲಯದಲ್ಲಿ ನನ್ನ ಮೊದಲ ಪ್ರಕರಣವನ್ನು ಗೆಲ್ಲುವ ದಿನ ನಿಮ್ಮ ಶುಲ್ಕವನ್ನು ನಾನು ಪಾವತಿಸುತ್ತೇನೆ” ಎಂದು ವಿಧ್ಯಾರ್ಥಿ ಮತ್ತು ಶಿಕ್ಷಕರು ಒಪ್ಪಂದ ಮಾಡಿಕೊಂಡರು.