ಆರೋಗ್ಯ

ಪಾರ್ಶ್ವವಾಯು ದೇಹದ ಭಾಗಗಳನ್ನು ನಿತ್ರಾಣಗೊಳಿಸುವ ಭಯಾನಕ ಕಾಯಿಲೆ..!ಇದನ್ನು ಹೇಗೆ ತಡೆಗಟ್ಟುವುದು ಎಂಬುದನ್ನು ತಿಳಿಯಲು ಇದನ್ನು ಓದಿ …

2062

ಮಾನವನ ಜೀವನಕ್ಕೆ ಸಂಚಕಾರ ತರುವ ಕಾಯಿಲೆ ಇದು. ದೇಹದ ಭಾಗಗಳನ್ನು ನಿತ್ರಾಣಗೊಳಿಸಿ, ನಿರ್ದಿಷ್ಟ ಭಾಗಕ್ಕೆ ಜೀವವೇ ಇಲ್ಲದಂತೆ ಮಾಡಿಬಿಡುವ ಕಾಯಿಲೆ ಪಾರ್ಶ್ವವಾಯು.
ಮೆದುಳಿಗೆ ಆಗುವ ಆಘಾತವೇ ಪಾಶ್ವವಾಯು ಆಕ್ರಮಿಸಲು ಕಾರಣ. ರಕ್ತಪರಿಚಲನೆಯ ಕೊರತೆಯಿಂದ ಅಥವಾ ಮೆದುಳಿನಲ್ಲಿ ಆಗುವ ರಕ್ತಸ್ರಾವದಿಂದ ಪಾಶ್ವವಾತ ಕಾಣಿಸಿಕೊಳ್ಳುತ್ತದೆ.

ಪಾರ್ಶ್ವವಾಯು ಹೇಗೆ ಉಂಟಾಗುತ್ತದೆ:-

ಮೆದುಳಿಗೆ ಸಾಗುವ ರಕ್ತದ ಪರಿಚಲನೆಯಲ್ಲಿ ಹಠಾತ್‌ ಆಗಿ ಕೊರತೆಯುಂಟಾದಾಗ ಈ ರೀತಿಯ ದಾಳಿ ಉಂಟಾಗುತ್ತದೆ. ಅಪಧಮನಿ ಅಥವಾ ಶುದ್ಧ ರಕ್ತನಾಳ ಗಳಲ್ಲಿ ಅಡ್ಡಿ ಸಂಭವಿಸಿದಾಗ ಮೆದುಳಿಗೆ ಹರಿಯುತ್ತಿದ್ದ ರಕ್ತ ನಿಲ್ಲುತ್ತದೆ. ಹೃದಯದ ಅಪಧಮನಿಗಳಲ್ಲಿ ಕೊಬ್ಬು ಶೇಖರಣೆಯಾಗಿದ್ದಾಗಲೂ ರಕ್ತದ ಹರಿವಿಗೆ ತಡೆಯುಂಟಾಗಿ, ರಕ್ತದ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ. ಇಂಥಹ ಸಂದರ್ಭದಲ್ಲಿ ಮೆದುಳಿನ ರಕ್ತನಾಳಗಳು ಒಡೆಯುವ ಸಂಭವವಿರುತ್ತದೆ. ಅಥವಾ ಮೆದುಳಿನಲ್ಲಿಯೇ ರಕ್ತನಾಳ ಒಡೆದು ರಕ್ತ ಸೋರುತ್ತಿದ್ದರೆ ಪಾರ್ಶ್ವವಾತ ಕಾಣಿಸಿಕೊಳ್ಳುತ್ತದೆ.

ಪಾರ್ಶ್ವವಾತಕ್ಕೆ ಈಡಾದ ವ್ಯಕ್ತಿ ತನ್ನ ಯಾವುದಾದರೂ ಒಂದು ಚಟುವಟಿಕೆಯನ್ನು ಕಳೆದುಕೊಳ್ಳುತ್ತಾನೆ. ಮಾತು ನಿಲ್ಲಬಹುದು, ನೆನಪಿನ ಶಕ್ತಿಯೇ ಹೊರಟುಹೋಗಬಹುದು ಅಥವಾ ಒಂದು ಬದಿಯ ದೇಹವೇ ಬಲಹೀನಗೊಳ್ಳಬಹುದು. ಹೃದಯಾಘಾತಕ್ಕೆ ಹೇಗೆ ತುರ್ತು ಚಿಕಿತ್ಸೆಯ ಅವಶ್ಯಕತೆಯಿರುವುದೋ.. ಅಷ್ಟೇ ತುರ್ತು ಚಿಕಿತ್ಸೆಯ ಅವಶ್ಯಕತೆ ಪಾರ್ಶ್ವವಾತಕ್ಕೂ ಇರುತ್ತದೆ.

ಪಾರ್ಶ್ವವಾಯು ಲಕ್ಷಣಗಳು:-

ಹಠಾತ್ ಆಗಿ ಕಾಲು ಅಥವಾ ಬುಜ ಮರಗಟ್ಟಿದಂತಾಗುವುದು. ಮಾತು ನಿಂತುಹೋಗುವುದು, ದೇಹದ ನಿರ್ದಿಷ್ಟ ಅಂಗ ಬಲಹೀನಗೊಳ್ಳುವುದು, ನಡೆಯುಲು ಸಾಧ್ಯವಾಗದಷ್ಟು ಬಲಹೀನಗೊಳ್ಳುವುದು.

 

ಸ್ವಾದೀನ ತಪ್ಪಿದಂತಾಗಿ ಎಚ್ಚರ ತಪ್ಪುವುದು, ತೀವ್ರ ತಲೆನೋವು ಒಮ್ಮೆಲೇ ಬಂದು ಕಣ್ಣು ಕಾಣದಂತಾಗುವುದು ಮಂಪರು ಅಥವಾ ವಾಕರಿಕೆ ಬಂದಂತಾಗುವುದು ಇವೆಲ್ಲ ಪಾರ್ಶ್ವವಾಯು ರೋಗದ ಲಕ್ಷಣಗಳು.

ಪಾರ್ಶ್ವವಾಯುವನ್ನು ತಡೆಯಲು ಸಲಹೆಗಳು:- 

ಕಡಿಮೆ ಕೊಬ್ಬಿರುವ ಆಹಾರದ ಸೇವನೆ.
ಆಹಾರದಲ್ಲಿ ಹಣ್ಣು, ತರಕಾರಿಗಳನ್ನು ಹೆಚ್ಚಾಗಿ ಬಳಸುವುದು.

ತೂಕವನ್ನು ನಿಯಂತ್ರಣದಲ್ಲಿಡುವುದು.

ಒತ್ತಡದ ಬದುಕಿಗೆ ಆಗಾಗ ಸ್ಪಲ್ಫ ರಿಲೀಫ್‌ ನೀಡುತ್ತಿರಿ.

ರಕ್ತದೊತ್ತಡವನ್ನು ಆಗಾಗ ಪರೀಕ್ಷಿಸುತ್ತಿರಿ, ವೈದ್ಯರ ಸಲಹೆಯಂತೆ ಔಷಧ ತೆಗೆದುಕೊಳ್ಳಿ.

ರಕ್ತಪರೀಕ್ಷೆ ಮಾಡಿಸಿಕೊಂಡು, ಕೊಲೆಸ್ಟ್ರಾಲ್‌ ಮಟ್ಟ ಅತೀ ಹೆಚ್ಚು ಇದ್ದರೆ, ಅದನ್ನು ಆರೋಗ್ಯಕರ ರೀತಿಯಲ್ಲಿ ಕಡಿಮೆ ಮಾಡುವ ಬಗ್ಗೆ ವೈದ್ಯರ ಸಲಹೆ ಪಡೆದುಕೊಳ್ಳಿ. ಧೂಮಪಾನ ಮಾಡದಿರಿ.

.

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ