ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈಗ ಎಲ್ಲದಕ್ಕೂ ಒಂದೇ ಕಾರ್ಡ್ – ಅದುವೇ ಆಧಾರ್ ಕಾರ್ಡ್.ಸರ್ಕಾರ ಎಲ್ಲ ವ್ಯವಹಾರ ಮತ್ತು ಸೌಲಭ್ಯಗಳಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡುತ್ತಿರುವ ಸಂಗತಿ ನಮಗೆಲ್ಲ ತಿಳಿದಿದೆ. 12 ಅಂಕೆಗಳ ಆಧಾರ್ ನಂಬರ್ ಪ್ರತಿಯೊಬ್ಬ ಭಾರತೀಯನ ಗುರುತು ಹಾಗೂ ಹೆಮ್ಮೆಯ ಸಂಖ್ಯೆಯಾಗಿ ಮಾರ್ಪಟ್ಟಿದೆ.
ಆದರೆ ಆಧಾರ್ ಕಾರ್ಡ್ ಅರ್ಜಿ ತುಂಬುವ ಸಂದರ್ಭದಲ್ಲಿ, ನಮ್ಮ ಹೆಸರು, ವಿಳಾಸ, ಲಿಂಗ, ಹುಟ್ಟಿದ ದಿನ, ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ ಮುಂತಾದ ಮಾಹಿತಿಗಳನ್ನು ದಾಖಲಿಸುವಾಗ ಸಹಜವಾಗಿಯೇ ತಪ್ಪುಗಳಾಗಿರುತ್ತವೆ. ಇಂತಹ ತಪ್ಪುಗಳಿಂದಾಗಿ ತುಂಬಾ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಹಾಗಾದ್ರೆ ಇದಕ್ಕೆ ಬೇರೆ ಏನಾದ್ರೂ ಮಾರ್ಗವಿದಯೇ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು.
ಹೌದು, ಇಂತಹ ತಪ್ಪುಗಳನ್ನು ನೀವೇ ಸ್ವತಹ ಅಪ್‌ಡೇಟ್ ಮಾಡಿಕೊಳ್ಳಬಹುದು.ಹೇಗಂತೀರಾ!ಅದಕ್ಕಾಗಿ ಇಲ್ಲೊಂದು ಮಾರ್ಗದರ್ಶಿ ಇದೆ, ಮುಂದೆ ಓದಿ…
ಆಧಾರ್ ಕಾರ್ಡ್‌ನಲ್ಲಿ ತಪ್ಪಾಗಿ ದಾಖಲಾಗಿರುವ ನಿಮ್ಮ ಖಾಸಗಿ ದಾಖಲೆಗಳನ್ನು ಸರಿಪಡಿಸಲು ನೀವು ಪ್ರಪ್ರಥಮವಾಗಿ ಯುಐಡಿಎಐ ವೆಬ್ ಸೈಟ್ ಸಂದರ್ಶಿಸಬೇಕು.
ಆಧಾರ್ ಕಾರ್ಡ್ ನಲ್ಲಿ ಬದಲಾವಣೆ ಮಾಡಲು ಅಥವಾ ಅಪ್ಡೇಟ್ ಮಾಡಲು ಯುಐಡಿಎಐ ಆಧಾರ್ ಕಾರ್ಡ್ ಸೆಲ್ಪ್ ಸರ್ವಿಸ್ ಅಪ್ಡೇಟ್ ಪೋರ್ಟಲ್ ಪರಿಚಯಿಸಿದೆ.(https://ssup.uidai. gov.in/web/guest/update). ಈ ಪೋರ್ಟಲ್ ಗೆ ಭೇಟಿ ಕೊಟ್ಟ ನಂತರ ನಿಮ್ಮ ಆಧಾರ್ ನಂಬರ್ ಎಂಟರ್ ಮಾಡಿ. ತದನಂತರ ನಿಮ್ಮ ಮೊಬೈಲ್ ನಂಬರ್ ಗೆ ಒಟಿಪಿ ಕೋಡ್ ಬರುತ್ತದೆ.ಕೆಲವೊಂದು ಮುಖ್ಯ ಖಾಸಗಿ ವಿವರಗಳನ್ನು ಸರಿಪಡಿಸಲು ಅಗತ್ಯವಿರುವ ದಾಖಲೆಪತ್ರಗಳನ್ನು ಸಲ್ಲಿಸಬೇಕಾಗುವುದು; ಆದರೆ ಮೊಬೈಲ್ ಸಂಖ್ಯೆ, ಲಿಂಗ, ವಿಳಾಸ ಮುಂತಾದ ವಿವರಗಳಲ್ಲಿನ ತಪ್ಪುಗಳನ್ನು ಸರಿಪಡಿಸಲು ಯಾವುದೇ ದಾಖಲೆ ಪತ್ರಗಳು ಬೇಕಾಗಿಲ್ಲ.
ಮೇಲಿನ ಚಿತ್ರದಲ್ಲಿ ತೋರಿಸದಂತೆ ನಿಮ್ಮ ಆಯ್ಕೆಯನ್ನು ನೀವು ಕ್ಲಿಕ್ ಮಾಡುವ ಮೂಲಕ ಆಯ್ದುಕೊಳ್ಳಬೇಕು.
ನಿಮ್ಮ ಆಧಾರ್ ನಂಬರ್ ಎಂಟರ್ ಮಾಡಿದಾಕ್ಷಣ ನಿಮಗೆ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯ ಪೋನಿಗೆ ಒನ್ ಟೈಮ್ ಪಾಸ್‌ವರ್ಡ್ (ಓಟಿಪಿ) ಬರುತ್ತದೆ.
ಟೆಕ್ಸ್‌ಟ್ ವೆರಿಫಿಕೇಶನ್ ಬಾಕ್ಸ್‌ನಲ್ಲಿ ನೀವು ನಿಮಗೆ ದೊರಕಿರುವ ಓಟಿಪಿಯನ್ನು ಎಂಟರ್ ಮಾಡಬೇಕು. ಅದಕ್ಕಾಗಿ ನಿಮ್ಮ ಕಂಪ್ಯೂಟರ್ ಪರದೆಯಲ್ಲಿ ಈ ಚಿತ್ರವು ಕಾಣಿಸಿಕೊಳ್ಳುತ್ತದೆ :
ಯುಐಡಿಎಐ ಆನ್ಲೈನ್ ಪೋರ್ಟಲ್ ಮೂಲಕ ಹೆಸರು, ಲಿಂಗ, ಜನ್ಮದಿನಾಂಕ, ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಅಪ್ಡೇಟ್ ಅಥವಾ ಬದಲಾವಣೆ ಮಾಡಬಹುದು.
ಬದಲಾವಣೆಯ ಎಲ್ಲ ಪ್ರಕ್ರಿಯೆಗಳು ಮುಗಿದ ಬಳಿಕ ನೀವು “ಸಬ್‌ಮಿಟ್’ ಮಾಡಬೇಕಾಗುತ್ತದೆ. ಅದು ನಿಮ್ಮ ಕಂಪ್ಯೂಟರ್ ಪರದೆಯಲ್ಲಿ ಈ ರೀತಿಯಾಗಿ ಗೋಚರವಾಗುತ್ತದೆ.
ಇದೆಲ್ಲವೂ ಮುಗಿದ ಬಳಿಕ ನಿಮಗೆ ಯುಆರ್‌ಎನ್ ನಂಬರ್ ಸಿಗುತ್ತದೆ. ಈ ನಂಬರನ್ನು ನೀವು ಜಾಗ್ರತೆಯಾಗಿ ಇರಿಸಿಕೊಂಡು ನೀವು ಮಾಡಿರುವ ಬದಲಾವಣೆ/ತಿದ್ದುಪಡಿಗಳು ಕಾರ್ಯಗತವಾಗುವುದನ್ನು ಆನ್‌ಲೈನ್‌ನಲ್ಲೇ ತಿಳಿದುಕೊಳ್ಳಬಹುದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ವಾಹನ ಕಲಿಕಾ ಪರವಾನಗಿ (ಎಲ್ಎಲ್ಆರ್) ಹೊಂದಿದ್ದು, ಅಂತಹ ಸಂದರ್ಭದಲ್ಲಿ ಅಪಘಾತವಾದರೆ ವಿಮಾ ಕಂಪನಿಗಳು ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹತ್ತು ವರ್ಷಗಳ ಹಿಂದಿನ ಪ್ರಕರಣವೊಂದರ ತೀರ್ಪು ಈಗ ಹೊರಬಿದ್ದಿದ್ದು, ಎಲ್ಎಲ್ಆರ್ ಇದ್ದ ವೇಳೆ ಅಂತವರು ವಾಹನ ಚಾಲನೆ ಮಾಡುವಾಗ ಡಿಎಲ್ ಹೊಂದಿದ ಪರಿಣಿತರು ಇರಬೇಕೆಂಬ ನಿಯಮವಿದೆ. ಆದರೆ ಇದು ದ್ವಿಚಕ್ರವಾಹನಕ್ಕೋ ಅಥವಾ ನಾಲ್ಕು ಚಕ್ರ ವಾಹನಕ್ಕೋ ಎಂಬುದರ ಕುರಿತು ಸ್ಪಷ್ಟತೆ ಇಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಈ ನಿಯಮ ನಾಲ್ಕು ಚಕ್ರ ವಾಹನಗಳಿಗೆ…
ಹೆಸರು ನಾರಾಯಣ ಮಜುಂದಾರ್ ಇವರು ತಮ್ಮದೇಯಾದ ರೆಡ್ ಕೌ ಡೈರಿ ಪ್ರೈವೇಟ್ ಲಿಮಿಟೆಡ್ ಅನ್ನೋ ಕಂಪನಿಯನ್ನು ಸ್ಥಾಪಿಸಿದ್ದಾರೆ. ಈ ಕಂಪನಿಯು ಭಾರತದ ಹಾಲು ಮತ್ತು ಹಾಲಿನ ಉತ್ಪನ್ನಗಳ ಅತಿದೊಡ್ಡ ಸರಬರಾಜುದಾರರಲ್ಲಿ ಒಂದಾಗಿದೆ.
ಇವರ ಕಂಪನಿಯು ಮೊಸರು, ತುಪ್ಪ, ಪನೀರ್ ಮತ್ತು ರಾಸುಗುಲ್ಲಾ ಹೊರತುಪಡಿಸಿ ಐದು ವಿಧದ ಹಾಲುಗಳನ್ನು ಮಾರಾಟ ಮಾಡುತ್ತದೆ.
ಇದು ಪ್ಲಾಸ್ಟಿಕ್ ಯುಗ ಮನುಷ್ಯ ಪ್ರತಿಯೊಂದಕ್ಕೂ ಪ್ಲಾಸ್ಟಿಕ್ ಮೇಲೆ ಅವಲಂಬಿತವಾಗಿದ್ದಾರೆ. ತಾನು ಬಳಸುವ ದಿನನಿತ್ಯದ ಹಲವು ವಸ್ತುಗಳು ಅಷ್ಟಲ್ಲದೆ ತಿನ್ನಲು, ಕುಡಿಯಲು ಬಳಸುವ ವಸ್ತು ಸಹ ಪ್ಲಾಸ್ಟಿಕ್ ನಿಂದಲೇ ಕೂಡಿರುತ್ತದೆ. ಆದರೆ ಈ ಪ್ಲಾಸ್ಟಿಕ್ ಮನುಷ್ಯನ ಜೀವಕ್ಕೆ ಮುಂದೊಂದು ದಿನ ಕುತ್ತು ತರುತ್ತದೆ ಎಂದು ತಿಳಿದು ಎಚ್ಚೆತ್ತುಕೊಳ್ಳುವುದು ಬಹಳ ಮುಖ್ಯ. ಮನುಷ್ಯನ ಆರೋಗ್ಯ ಹದಗೆಡದಂತೆ ಕಾಪಾಡಿಕೊಳ್ಳಬೇಕಾದ ಸಣ್ಣದೊಂದು ಈ ಸಲಹೆಯನ್ನು ಅನುಸರಿಸಿ. ಏನಾದು ಅಂತೀರಾ? ಹೌದು ನಾವು ದಿನನಿತ್ಯ ಬಳಸುವ ಕೆಲವು ಪ್ಲಾಸ್ಟಿಕ್ ತಟ್ಟೆ, ಪ್ಲಾಸ್ಟಿಕ್ ಲೋಟ,…
ಬಿಪಿಎಲ್ ಪಡಿತರ ಚೀಟಿದಾರರು ಇನ್ನು ಮುಂದೆ ರಾಜ್ಯದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಾದರೂ ತಮ್ಮ ಪಾಲಿನ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ನಮ್ಮಲ್ಲಿ ದೇವರಿಗೆ, ಗೋವುಗಳಿಗೆ, ದಸರಾ ಸಂಧರ್ಭದಲ್ಲಿ ವಾಹನಗಳಿಗೂ ಸಹ ನಾವು ಪೂಜೆ ಸಲ್ಲಿಸುತ್ತೇವೆ. ಆದರೆ ವಿಚಿತ್ರ ಎಂದರೆ ಇಲ್ಲಿ ಒಂದು ಬುಲೆಟ್ ಗೆ ಗುಡಿಯನ್ನು ಕಟ್ಟಿ ಪೂಜೆ ಸಲ್ಲಿಸುತ್ತಾರೆ ಎಂದರೆ ನೀವು ನಮ್ಬೋದಿಲ್ಲಾ.. ರಾಜಸ್ಥಾನದ ಜೈಪುರದಿಂದ 50 ಕಿ.ಮೀ. ದೂರದಲ್ಲಿರುವ ಪಾಲಿ ಜಿಲ್ಲೆಯಲ್ಲಿ ಒಂದು ವಿಶೇಷವಾದ ದೇವಾಲಯವಿದೆ. ಈ ದೇವಾಲಯದಲ್ಲಿರುವ 350 ಸಿಸಿ ಯ ರಾಯಲ್ ಎನ್ ಫೀಲ್ಡ್ ಬುಲೆಟ್ ಬೈಕ್ ಗೆ ಭಕ್ತರು ಪೂಜೆ ಸಲ್ಲಿಸುತ್ತಾರೆ. ಬೈಕ್ ಗೆ ಪೂಜೆ ಸಲ್ಲಿಸಲೂ ಒಂದು ಕಾರಣವಿದೆ. ಅದೇನು…
ನಾವು ದಿನಾಲು ಬೆಳಿಗ್ಗೆ ಎದ್ದ ತಕ್ಷಣ ನಮಗೆ ಏನಿಲ್ಲಾ ಅಂದ್ರು ಬಿಸಿ ಬಿಸಿ ಚಹಾ(ಟೀ) ಬೇಕೇ ಬೇಕು. ಒಂದು ಸಮೀಕ್ಷೆಯ ಪ್ರಕಾರ ಶೇ. ತೊಂಬತ್ತಕ್ಕೂ ಹೆಚ್ಚು ಭಾರತೀಯರು ನಿತ್ಯವೂ ಕನಿಷ್ಠ ಮೂರು ಕಪ್ ಚಹಾ ಕುಡಿಯುತ್ತಾರೆ. ಆದರೆ ಚಹಾ ಕುಡಿಯುವವರಲ್ಲಿ ಹೆಚ್ಚಿನವರು ದಿನದ ಪ್ರಥಮ ಆಹಾರವಾಗಿ ಒಂದು ಟೀ ಸೇವಿಸುತ್ತಾರೆ. ಕೆಲವರಂತೂ ಹಾಸಿಗೆಯಿಂದ ಏಳುವ ಮುನ್ನವೇ ಬೆಡ್ ಟೀ ಎಂದು ಕುಡಿಯುತ್ತಾರೆ.