ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶಕ್ಕೆ ಪೂರ್ವಭಾವಿಯಾಗಿ ಅಭಿಮಾನಿಗಳೊಂದಿಗೆ ಸಂವಾದ ನಡೆಸುತ್ತಿದ್ದಾರೆ.ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ರಜನಿಕಾಂತ್, ‘ನಾನು ರಾಜಕೀಯಕ್ಕೆ ಬರುತ್ತೇನೆ ಎಂದು ಹೇಳಿಲ್ಲ. ನನ್ನ ನಿರ್ಧಾರವನ್ನು ಡಿಸೆಂಬರ್ 31ಕ್ಕೆ ಹೇಳುತ್ತೇನೆ’ ಎಂದಿದ್ದಾರೆ.

ರಾಜಕೀಯ ಪ್ರವೇಶದ ಬಗ್ಗೆ ಎದ್ದಿರುವ ಊಹಾಪೋಹಗಳಿಗೆ ಡಿಸೆಂಬರ್ 31ಕ್ಕೆ ತೆರೆ ಎಳೆಯಲಿದ್ದೇನೆ ಎಂದು ಹೇಳಿದ್ದಾರೆ.
ತಲೈವಾ ಅಣ್ಣಾವ್ರ ಬಗ್ಗೆ ಹೇಳಿದ್ದು ಏನು ಗೊತ್ತಾ..?
ನಟ ರಜನಿಕಾಂತ್ ಚೆನ್ನೈನ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಕಳೆದ 3 ದಿನಗಳಿಂದ ಅಭಿಮಾನಿಗಳೊಂದಿಗೆ ಸಭೆ ನಡೆಸಿರುವ ಅವರು, ತಮ್ಮ ಭಾಷಣದಲ್ಲಿ ವರನಟ ಡಾ. ರಾಜ್ ಕುಮಾರ್ ಅವರನ್ನು ನೆನಪಿಸಿಕೊಂಡಿದ್ದಾರೆ.

ಅಣ್ಣಾವ್ರ ಬಗ್ಗೆ ತನ್ನ ಅಭಿಮಾನಿಗಳಲ್ಲಿ, ಅವರು ಹಿರಿಯರಿಗೂ,ಕಿರಿಯರಿಗೂ ಹೇಗೆ ಗೌರವ ಕೊಡುತ್ತಿದ್ದರು ಎಂಬುದರ ಬಗ್ಗೆ ಮಾತನಾಡಿದ್ದು,ರಾಜಕುಮಾರ ಅವರ ಸರಳತೆ ಬಗ್ಗೆ ಅವರ ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾರೆ.
ರಜನಿಕಾಂತರವರು ಬೆಂಗಳೂರಿನಲ್ಲಿದ್ದಾಗ ರಾಜ್ ರವರನ್ನು ನೋಡಲು ಗಂಟೆಗಟ್ಟಲೆ ಕಾಯುತ್ತಿದ್ದು,ಅವರು ಸಿಕ್ಕಾಗ ಅವರ ಕಾಲು ಮುಟ್ಟಿ ನಮಸ್ಕಾರ ಮಾಡಿ ಪುಳಕಿತನಾಗಿದ್ದೆ.

ಏನ್ಟಿಆರ್,ಶಿವಾಜಿ ಗಣೇಶನ್, ಮತ್ತು ಎಂ.ಜಿ.ಆರ್. ಅವರಂತೆಯೇ ರಾಜ್ ಕುಮಾರ್ ಅವರು ಮೇರುನಟರಾಗಿದ್ದು,ತುಂಬಾ ಸರಳ ಸ್ವಭಾವದ ಮೂರ್ತಿಯಾಗಿದ್ದರು ಎಂದು ರಜನಿ ಅಭಿಮಾನಿಗಳಲ್ಲಿ ಹೇಳಿಕೊಂಡಿದ್ದಾರೆ.

ನಾನು ಅಣ್ಣಾವ್ರ ಅಭಿಮಾನಿ…
ನಾನು ರಾಜಣ್ಣರವರ ಅಭಿಮಾನಿಯಾಗಿದ್ದು,ಅವರ ಚಿತ್ರಗಳನ್ನು ತುಂಬಾ ಇಷ್ಟಪಟ್ಟು ನೋಡುತ್ತಿದ್ದೆ.ಅವರು ಸರಳ ವ್ಯಕ್ತಿತ್ವ ನನಗೆ ಮಾದರಿಯಾಗಿದೇ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬಹಳಷ್ಟು ಮಂದಿಯ ಮನೆಯಲ್ಲಿ ಈ ಸೊಳ್ಳೆ ಬ್ಯಾಟ್‌ಗಳು ಇದ್ದೇ ಇರುತ್ತವೆ. ನೀವು ಮನೆ ಬಾಗಿಲು ಹಾಕಿಟ್ಟಿದ್ದರೂ ಒಂದು ಕ್ಷಣಕ್ಕೆ ಬಾಗಿಲು ತೆರೆದರೆ ಸಾಕು ಸೊಳ್ಳೆಗಳೆಲ್ಲಾ ಮನೆಯೊಳಗಡೆ ಸೇರಿಕೊಂಡು ಬಿಡುತ್ತವೆ. ಮಧ್ಯರಾತ್ರಿಯಲ್ಲಿ ಸೊಳ್ಳೆ ಬ್ಯಾಟ್ ಹಿಡಿದುಕೊಂಡು ಸೊಳ್ಳೆಯನ್ನು ಹುಡುಕಿ ಹುಡುಕಿ ಸಾಯಿಸಬೇಕಾಗುತ್ತದೆ. ಬೇಸಿಗೆಗಾಲದಲ್ಲಂತೂ ಸೊಳ್ಳೆಗಳ ಕಾಟ ಸಿಕ್ಕಾಪಟ್ಟೆ ಇರುತ್ತವೆ. ಈ ಸೊಳ್ಳೆಗಳ ಕಾಟದಿಂದ ಮುಕ್ತಿ ಸಿಗಬೇಕಾ? ನಾವು ನಿಮಗೆ ಸೊಳ್ಳೆ ಓಡಿಸಲು ಉಪಯೋಗಕ್ಕೆ ಬರುವ ಕೆಲವು ಸುಲಭವಾದ ಟಿಪ್ಸ್‌ನ್ನು ಹೇಳಿಕೊಡಲಿದ್ದೇವೆ. ಇದಕ್ಕೆ ಮನೆಯಲ್ಲಿರುವ ಕೆಲವು ವಸ್ತುಗಳೇ ಸಾಕು. ಅದಕ್ಕೆ…
ಇದ್ದಿದ್ದು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದಂಗಾಯ್ತು ಎಂಬುವುದು ನನ್ನ ಪರಿಸ್ಥತಿ. ನಾನು ಯಾರನ್ನು ದೋಷಿಸಿಲ್ಲ. ಕೊಡಗು ಸಂತ್ರಸ್ಥರಿಗೆ ಸರ್ಕಾರ ಚೆನ್ನಾಗಿರುವ ಮನೆ ನಿರ್ಮಿಸಿ ಕೊಡಲಿ ಎಂದು ಮನವಿ ಮಾಡಿದ್ದು ಎಂದು ಸಚಿವ ಸಾರಾ ಮಹೇಶ್‍ಗೆ ನಟಿ ಹರ್ಷಿಕಾ ಪೂಣಚ್ಚ ತಿರುಗೇಟು ನೀಡಿದ್ದಾರೆ.ವಿಡಿಯೋ ಮೂಲಕ ಶನಿವಾರ ತಾವು ಕೊಡಗು ಸಂಸ್ರಸ್ಥರ ಬಗ್ಗೆ ನೀಡಿದ ಹೇಳಿಕೆಗೆ ಹರ್ಷಿಕಾ ಪೂಣಚ್ಚ ಸ್ಪಷ್ಟನೆ ನೀಡಿದ್ದಾರೆ. ವಿಡಿಯೋದಲ್ಲಿ ಇದ್ದಿದ್ದು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದಂಗಾಯ್ತು ನನ್ನ…
ಈಗಾಗಲೇ ಕೇಂದ್ರ ಸರ್ಕಾರದ ಗೋಹತ್ಯೆ ನಿಷೇಧ ಕಾನೂನು ವಿರುದ್ಧ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ
ಇದು ಭಾರತದ ಜೈಪುರ್‌ನಲ್ಲಿರುವ ಒಂದು ಅರಮನೆ. ಇದನ್ನು 1799ರಲ್ಲಿ ಮಹಾರಾಜ ಸವಾಯಿ ಪ್ರತಾಪ್ ಸಿಂಗ್ ಅವರು ಕಟ್ಟಿಸಿದ್ದರು, ಮತ್ತು ಲಾಲ್ ಛಂದ್ ಉಸ್ತಾರವರು ಹಿಂದೂ ದೇವರಾದ ಕೃಷ್ಣ ನ ಕಿರೀಟದ ಆಕಾರದಲ್ಲಿ ಇದರ ವಿನ್ಯಾಸಗೊಳಿಸಿದ್ದರು. ಜಟಿಲ ಜಾಲರಿ ಕಾಮಗಾರಿಯಿಂದ ಅಲಂಕೃತ ಝರೊಕಾ ಎಂದು ಕರೆಯಲಾದ 953 ಚಿಕ್ಕ ಕಿಟಕಿಗಳು ಒಳಗೊಂಡಇದರ ಅದ್ವಿತೀವಾದ ಐದು-ಅಂತಸ್ತಿನ ಹೊರರೂಪ ಜೇನುಗೂಡಿನ ಜೇನುಹಟ್ಟಿಗೆ ಕೂಡ ಸದೃಶ್ಯವಾಗಿದೆ. ಈ ಜಲರಿಯ ಮುಖ್ಯ ಉದ್ದೇಶವೆಂದರೆ ರಾಜ ಮನೆತನದ ಮಹಿಳೆಯರಿಗೆ ಅವರು ಕಾಣದಂತೆ ಕೆಳಗಿನ ರಸ್ತೆಯ ದಿನನಿತ್ಯದ ಜೀವನವನ್ನು ನೋಡಲು ಸಾಧ್ಯವಾಗಬೇಕೆಂದು,…
ಭಾರತದ ಹೆಮ್ಮೆಯ ಕ್ಷಿಪಣಿ ಬ್ರಹ್ಮೋಸ್ ಗೆ ಪರ್ಯಾಯ ಎಂದೇ ಕರೆಯಲಾಗುತ್ತಿದ್ದ ನಿರ್ಭಯ್ ಕ್ಷಿಪಣಿ ಸಿದ್ಧವಾಗಿ ದಶಕಗಳೇ ಕಳೆದರೂ ಈವರೆಗೆ ನಡೆದ ಎಲ್ಲ ಪರೀಕ್ಷಾರ್ಥ ಪ್ರಯೋಗಗಳಲ್ಲಿ ಅದು ವಿಫಲವಾಗಿತ್ತು. ಈ ಹಿಂದೆ ನಡೆದ ಒಟ್ಟು ನಾಲ್ಕು ಪರೀಕ್ಷೆಗಳಲ್ಲಿ ನಿರ್ಭಯ್ ವಿಫಲವಾಗುವ ಮೂಲಕ ವಿಜ್ಞಾನಿಗಳಲ್ಲಿ ಭಾರಿ ನಿರಾಸೆ ಮೂಡಿಸಿತ್ತು.
ಇಂದು ಗುರುವಾರ, 15/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…