ಸುದ್ದಿ

ಪಾನ್ ಕಾರ್ಡ್ ಇದ್ದವರಿಗೆ ಶಾಕಿಂಗ್ ಸುದ್ದಿ, ಬೇಗ ಎಚ್ಛೆತ್ತುಕ್ಕೊಳ್ಳಿ ನಿರ್ಲಕ್ಷ ಮಾಡಿದರೆ ಬಾರಿ ದಂಡ ಕಟ್ಟಬೇಕಾಗುತ್ತದೆ.

76

ಪಾನ್ ಕಾರ್ಡ್ ಯಾರ ಬಳಿ ಇಲ್ಲ ಹೇಳಿ, ಎಲ್ಲರ ಬಳಿ ಇದ್ದೆ ಇರುತ್ತದೆ. ಪಾನ್ ಕಾರ್ಡ್ ಇಲ್ಲದೆ ಯಾವುದೇ ವ್ಯಾಪಾರ ಮತ್ತು ವ್ಯವಹಾರವನ್ನ ಮಾಡಲು ಸಾಧ್ಯವಿಲ್ಲ ಮತ್ತು ಯಾವುದೇ ಹಣದ ವಹಿವಾಟನ್ನ ಸಹ ಮಾಡಬೇಕೆಂದರೆ ನಿಮಗೆ ಪಾನ್ ತುಂಬಾ ಅವಶ್ಯಕ. ಇನ್ನು ಕಳೆದ ಎರಡು ವರ್ಷಗಳಿಂದ ಪಾನ್ ಕಾರ್ಡ್ ಗೆ ಸಂಬಂಧಿಸಿದಂತೆ ಹಲವು ನಿಯಮಗಳನ್ನ ಜಾರಿಗೆ ತರಲಾಗಿದ್ದು ಆ ನಿಯಮಗಳನ್ನ ಪಾಲಿಸುವುದು ಕಡ್ಡಾಯ ಕೂಡ ಆಗಿತ್ತು. ಈ ಹಿಂದೆ ಬ್ಯಾಂಕುಗಳಲ್ಲಿ ವ್ಯವಹಾರಗಳನ್ನ ಮಾಡಬೇಕೆಂದರೆ ತುಂಬಾ ಸುಲಭವಾಗಿ ಮಾಡಬಹುದಾಗಿತ್ತು ಆದರೆ ಈಗ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಬ್ಯಾಂಕ್ ಕೆಲಸವನ್ನ ಮಾಡಲು ಸಾಧ್ಯವಾಗುವುದಿಲ್ಲ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ನಮ್ಮ ಖಾತೆಗೆ ನಮ್ಮ ಹಣವನ್ನ ಹಾಕಲು ಕೂಡ ಪಾನ್ ಕಾರ್ಡ್ ತುಂಬಾ ಅವಶ್ಯಕ.

ಇನ್ನು ಈಗ ಪಾನ್ ಕಾರ್ಡ್ ಗೆ ಸಂಬಂಧಪಟ್ಟಂತೆ ಬಹುಮುಖ್ಯವಾದ ಮಾಹಿತಿಯನ್ನು ತಿಳಿಯೋಣ. ಹಾಗೆ ಇದನ್ನು ನಿರ್ಲಕ್ಷ ಮಾಡಬೇಡಿ. ನಿರ್ಲಕ್ಷ ಮಾಡಿದರೆ ದಂಡ ಕಟ್ಟಬೇಕಾಗುತ್ತದೆ. ಹಾಗಾದರೆ ಏನದು ಬಹುಮುಖ್ಯ ಮಾಹಿತಿ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ತಿಳಿಯೋಣ ಪೂರ್ತಿಯಾಗಿ ಓದಿ ಮತ್ತು ಈ ಸ್ನೇಹಿತರೆ ನೀವು ಪಾನ್ ಸಂಖ್ಯೆಯನ್ನ ನಮೂದಿಸುವ ವೇಳೆ ತಪ್ಪನ್ನ ಮಾಡಿದರೆ ಬರೋಬ್ಬರಿ 10 ಸಾವಿರ ರೂಪಾಯಿ ದಂಡವನ್ನ ಕಟ್ಟಬೇಕು ಇಲ್ಲವಾದರೆ ನಿಮ್ಮಮೇಲೆ ಖಠಿಣವಾದ ಕ್ರಮವನ್ನ ತೆಗೆದುಕೊಳ್ಳಲಾಗುತ್ತದೆ.

ಹೌದು 50 ಸಾವಿರಕ್ಕೂ ಅಧಿಕ ವ್ಯವಹಾರವನ್ನ ಮಾಡುವಾಗ ಪಾನ್ ಸಂಖೆಯನ್ನ ನಮೂದಿಸುವುದು ಕಡ್ಡಾಯ. ಇನ್ನು ಪಾನ್ ಸಂಖ್ಯೆಯನ್ನ ನಮೂದಿಸುವ ಸಮಯದಲ್ಲಿ ತಪ್ಪಾಗಿ ನಮೂದಿಸಿದರೆ ಅಥವಾ ಉದ್ದೇಶಪೂರ್ವಕವಾಗಿ ನಮೂದಿಸಿದರೆ ಆದಾಯ ತೆರಿಗೆ ಕಲಂ 1961 ಸೆಕ್ಷನ್ 272 ಬಿ ಅನ್ವಯ ನಿಮಗೆ 10 ಸಾವಿರ ರೂಪಾಯಿಗಳ ದಂಡವನ್ನ ವಿಧಿಸಲಾಗುತ್ತದೆ. ಇನ್ನು ಈಗ ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಜೋಡಣೆ ಕಡ್ಡಾಯ.

ಇನ್ನು ಆಧಾರ್ ಗೆ ಪಾನ್ ಕಾರ್ಡ್ ಕಡ್ಡಾಯವಾಗಿರುವುದರಿಂದ ಪಾನ್ ಕಾರ್ಡ್ ಇಲ್ಲದವರು ಹಣದ ವಹಿವಾಟಿನ ಸಂದರ್ಭದಲ್ಲಿ ಆಧಾರ್ ಸಂಖ್ಯೆಯಯನ್ನ ನೀಡುತ್ತಾರೆ, ಇನ್ನು ಈ ಸಮಯದಲ್ಲಿ ಆಧಾರ್ ಸಂಖ್ಯೆಯನ್ನ ಕೂಡ ತಪ್ಪಾಗಿ ನೀಡಿದರೆ ಇದೆ ನಿಯಮ ಅನ್ವಯಿಸಲಿದೆ. ಇನ್ನು ಈ ನಿಯಮ ಜಾರಿಗೆ ಬಂದಿರುವುದು ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು ಎಂದು ಜನರು ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ, ನೀವು ಕೂಡ ಹಣದ ವಹಿವಾಟು ಮಾಡುವ ಸಮಯದ್ಲಲಿ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಸಂಖ್ಯೆಯನ್ನ ಯಾವುದೇ ಕಾರಣಕ್ಕೂ ತಪ್ಪಾಗಿ ನೀಡಬೇಡಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ