ಮನರಂಜನೆ, ಸುದ್ದಿ

ಸರಿಗಮಪ ಗ್ರಾಂಡ್ ಫಿನಲೆಯಲ್ಲಿ ರನ್ನರ್ ಅಪ್ ಆದ ಹನುಮಂತನಿಗೆ ಸಿಕ್ಕಿದ್ದು ಎಷ್ಟು ಲಕ್ಷ ಗೊತ್ತಾ?ಇದೇ ಮೊದಲ ಬಾರಿಗೆ ರನ್ನರ್ ಅಪ್ ಗೆ ಬಾರೀ ಮೊತ್ತದ ಬಹುಮಾನ!

486

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಸರಿಗಮಪ’ ಗ್ರಾಂಡ್ ಫಿನಾಲೆಯಲ್ಲಿ ಮಂಗಳೂರಿನ ಕೀರ್ತನ್ ಹೊಳ್ಳ ವಿನ್ನರ್ ಆಗಿದ್ದಾರೆ. ಹಾವೇರಿಯ ಚೀಲೂರು ಬಡ್ನಿ ತಾಂಡಾದ ಹನುಮಂತ ಅವರು ರನ್ನರ್ ಆಗಿದ್ದಾರೆ.
ಕೀರ್ತನ್ ಹೊಳ್ಳ ಆರಂಭದಿಂದಲೂ ಅದ್ಭುತವಾಗಿ ಹಾಡುವ ಮೂಲಕ ಜಡ್ಜಸ್ ಗಳು ಹಾಗೂ ಮಹಾಗುರುಗಳ ಮೆಚ್ಚುಗೆ ಗಳಿಸಿದ್ದರು. ಅದೇ ರೀತಿ ಹನುಮಂತ ತಮ್ಮ ಮುಗ್ಧತೆಯಿಂದಲೇ ಜನಪ್ರಿಯರಾಗಿದ್ದರು.

ಶನಿವಾರ ನಡೆದ ಗ್ರಾಂಡ್ ಫಿನಾಲೆಯಲ್ಲಿ ನಿಹಾಲ್ ತಾವ್ರೊ, ಹನುಮಂತ, ಕೀರ್ತನ ಹೊಳ್ಳ, ವಿಜೇತ್, ಹೃತ್ವಿಕ್ ಹಾಗೂ ಸಾಧ್ವಿನಿ ಅವರು ಫಿನಾಲೆಗೆ ಎಂಟ್ರಿ ಕೊಟ್ಟಿದ್ದರು. ಅವರಲ್ಲಿ ಕೀರ್ತನ್ ಹೊಳ್ಳ, ಸಾದ್ವಿನಿ ಮತ್ತು ಹನುಮಂತ ಗ್ರಾಂಡ್ ಫಿನಾಲೆಗೆ ಪ್ರವೇಶಿಸಿದ್ದು, ಅಂತಿಮವಾಗಿ ಕೀರ್ತನ್ ಹೊಳ್ಳ ವಿನ್ನರ್ ಆಗಿದ್ದಾರೆ. ಹನುಮಂತ ರನ್ನರ್ ಅಪ್ ಆಗಿದ್ದಾರೆ.

ಇದೇ ಮೊದಲ ಬಾರಿಗೆ ‘ಸರಿಗಮಪ’ ಶೋನಲ್ಲಿ ರನ್ನರ್ ಅಪ್ ಆದವರಿಗೆ ಭಾರಿ ಮೊತ್ತದ ಬಹುಮಾನ ನೀಡಲಾಗಿದೆ. ಹನುಮಂತ ಅವರಿಗೆ 15 ಲಕ್ಷ ರೂ. ಮೊತ್ತದ ಸೈಟ್ ಬಹುಮಾನವಾಗಿ ಸಿಕ್ಕಿದೆ. ಇನ್ನು ಮುಗ್ಧತೆಯಿಂದಲೇ ತಮ್ಮ ಹಾಡಿನ ಮೂಲಕ ಎಲ್ಲರ ಮನಗೆದ್ದಿರುವ ಹನುಮಂತ ಅವರಿಗೆ ಬಂಪರ್ ಆಫರ್ ಸಿಕ್ಕಿದೆ.

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರೇ ಈ ಮಾಹಿತಿಯನ್ನು ‘ಸರಿಗಮಪ’ ವೇದಿಕೆಯಲ್ಲಿ ತಿಳಿಸಿದ್ದಾರೆ. ಫಿನಾಲೆ ರೌಂಡ್ ನಲ್ಲಿ ಹನುಮಂತ ‘ಅಶ್ವಮೇಧ’ ಚಿತ್ರದ ‘ಹೃದಯ ಸಮುದ್ರ’ ಹಾಡನ್ನು ಹಾಡಿದ್ದು, ಜಡ್ಜಸ್ ಗಳು ಹನುಮಂತ ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಮಾತನಾಡಿದ ಅರ್ಜುನ್ ಜನ್ಯ, ಹನುಮಂತ ಅವರಿಗೆ ದೊಡ್ಡ ಸಿನಿಮಾವೊಂದರಲ್ಲಿ ಅವಕಾಶ ಸಿಕ್ಕಿದೆ. ಅವರಿಗಾಗಿ ದೊಡ್ಡ ನಿರ್ದೇಶಕರು ಕಾಯುತ್ತಿದ್ದಾರೆ. ಆ ಸಿನಿಮಾದಲ್ಲಿ ಹನುಮಂತ ಹಾಡಲಿದ್ದಾರೆ. ಇನ್ನು 2-3 ದಿನದಲ್ಲಿ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದ್ದಾರೆ. ಗಾಯಕರಾದ ವಿಜಯ ಪ್ರಕಾಶ್ ಹಾಗೂ ರಾಜೇಶ್ ಕೃಷ್ಣ ಕೂಡ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಹಂಸಲೇಖ ಅವರು, ಜನಪದ ನಾಯಕ ಹನುಮಂತ ಎಂದು ಹೇಳಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಕ್ರೀಡೆ

    ಐಪಿಎಲ್ ಕ್ರಿಕೆಟ್ ತಂಡದ ಈ ಆಟಗಾರ ಸಿಕ್ಸರ್ ಕಿಂಗ್, ಪತ್ನಿ ಬಿಕಿನಿ ಕ್ವೀನ್.!ಯಾರು ಗೊತ್ತ.?ತಿಳಿಯಲು ಮುಂದೆ ನೋಡಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಇಂಡಿಯನ್ ಪ್ರೀಮಿಯರ್ ಲೀಗ್ ನ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ಆಂಡ್ರೆ ರಸ್ಸೆಲ್ ಸಿಕ್ಸರ್ ಕಿಂಗ್ ಆಗ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆಂಡ್ರೆ ರಸ್ಸೆಲ್ 11 ಸಿಕ್ಸರ್ ಬಾರಿಸಿ ಈ ಬಾರಿ ಐಪಿಎಲ್ ನಲ್ಲಿ ನಾನೇ ಸಿಕ್ಸರ್ ಕಿಂಗ್ ಎನ್ನುತ್ತಿದ್ದಾರೆ. ಆಂಡ್ರೆ ರಸ್ಸೆಲ್ ಸಿಕ್ಸರ್ ಕಿಂಗ್ ಆದ್ರೆ ಅವ್ರ ಪತ್ನಿ ಬಿಕಿನಿ ಕ್ವೀನ್ ಎನ್ನುತ್ತಿದ್ದಾರೆ ಜನರು. ಆಂಡ್ರೆ ರಸ್ಸೆಲ್ ಜಮೈಕಾದ ನಿವಾಸಿ. ಪತ್ನಿ ಲಾರಾ ಡೊಮಿನಿಕನ್…

  • govt, modi, ತಂತ್ರಜ್ಞಾನ

    ಹೊಸ ವರ್ಷಕ್ಕೆ ಹೊಸ ಕೊಡುಗೆ: 2018 ಕ್ಕೆ ದೇಶಿ ಜಿಪಿಎಸ್ ಹೊಂದಲಿರುವ ನಮ್ಮ ಭಾರತ!

    ದೇಶಿ ಜಿಪಿಎಸ್ ಗೆ ನಾವಿಕ್ ಎಂದು ನಾಮಕರಣ ಮಾಡಿದ್ದ ಪ್ರಧಾನಿ, ದೇಶದ ಯಾವುದೇ ಭಾಗದಲ್ಲಿ ಪ್ರಯಾಣಿಕರು ದಾರಿ ತಪ್ಪಿದರೆ, ಸರಿಯಾದ ದಾರಿ ತೋರಿಸುವ ದೇಶಿ ಜಿಪಿಎಸ್ (ಗ್ಲೋಬಲ್‌ ಪೊಸಿಷನಿಂಗ್‌ ಸಿಸ್ಟಂ ಅಥವಾ ದಿಕ್ಸೂಚಿ ವ್ಯವಸ್ಥೆಯ ತಂತ್ರಜ್ಞಾನ) ನಾವಿಕ್ ಅಂತಿಮ ಹಂತದ ಪರೀಕ್ಷಾರ್ಥ ಪ್ರಯೋಗದಲ್ಲಿದ್ದು, 2018 ವರ್ಷಾರಂಭಕ್ಕೆ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ.

  • ಉಪಯುಕ್ತ ಮಾಹಿತಿ

    ಮಾಟ, ಮಂತ್ರ, ವಶೀಕರಣ ಎಂದರೇನು ಗೊತ್ತಾ.! ಈ ಸಮಸ್ಯೆಗಳಿಂದ ಹೊರಬರುವುದು ಹೇಗೆ? ಪರಿಹಾರ ತಿಳಿಯಿರಿ.

    ಪಂಡಿತ್ ರಾಘವೇಂದ್ರ ಸ್ವಾಮಿಗಳು ಗಳು ಶ್ರೀ ಸ್ವಾಮಿ9901077772 ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು) call/ whatsapp 9901077772 ಮನೆ ಮುಂದೆ ನಿಂಬೆಕಾಯಿ,…

  • ಸುದ್ದಿ

    ಆದಿವಾಸಿಗಳ ಪಾಲಿಗೆ ಮರಣ ಶಾಸನವಾದ ನೂತನ ಅರಣ್ಯ ಕಾಯ್ದೆ,.ಇದನ್ನೊಮ್ಮೆ ಓದಿ …!

    ಈ ನೆಲದ ಮೂಲನಿವಾಸಿಗಳಾದ ಆದಿವಾಸಿಗಳ ಬದುಕು ಮತ್ತೊಮ್ಮೆ ಬೀದಿಗೆ ಬೀಳುವ ಸಾಧ್ಯತೆ ನಿಚ್ಚಳವಾಗುತ್ತಿದೆ. ಕಳೆದ ಫೆಬ್ರವರಿ 13ರಂದು ಅರಣ್ಯದಿಂದ ಎಲ್ಲರನ್ನು ಒಕ್ಕಲೆಬ್ಬಿಸಬೇಕು ಎಂಬ ಸರ್ವೋಚ್ಛ ನ್ಯಾಯಾಲಯ ನೀಡಿದ ತೀರ್ಪಿನಿಂದಾಗಿ ತೂಗುಕತ್ತಿಯ ಕೆಳೆಗೆ ಬದುಕುತ್ತಿರುವ ಈ ನತದೃಷ್ಟರಿಗೆ ನೆಮ್ಮದಿ ಎಂಬುದು ಜೀವಮಾನದ ಕನಸು ಎಂಬಂತಾಗಿದೆ. ನ್ಯಾಯಾಲಯದ ತೀರ್ಪಿನ ವಿರುದ್ಧ ಕೇಂದ್ರದ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಮೇಲ್ಮನವಿ ಸಲ್ಲಿಸುವುದರ ಮೂಲಕ ತಡೆಯಾಜ್ಞೆ ತಂದಿರುವುದರಿಂದ ತಾತ್ಕಾಲಿಕವಾಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಈ ತಡೆಯಾಜ್ಞೆಯ ಜೊತೆಗೆ ರಾಷ್ಟ್ರದ ಹದಿನಾಲ್ಕು ರಾಜ್ಯಗಳ ಅರಣ್ಯಗಳಲ್ಲಿ ಬದುಕುತ್ತಿರುವ…

  • ಸುದ್ದಿ

    ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿದ ಈತ 100 ಕಿ.ಮೀ. ದೂರದಿಂದ ಎದ್ದು ಬಂದಿದ್ದೇಗೆ ಗೊತ್ತಾ?

    ಆತ್ಮಹತ್ಯೆ ಮಾಡಿಕೊಳ್ಳಲೆಂದು ನದಿಗೆ ಧುಮುಕಿದ ವ್ಯಕ್ತಿಯ ಹಣೆಬರಹದಲ್ಲಿ ದೈವ ಬೇರೆಯದ್ದೇ ಯೋಜನೆ ರೂಪಿಸಿದ್ದ. ಸಾಯಲೆಂದು ನದಿಗೆ ಧುಮುಕಿದ್ದ ಕೆಲವೇ ಕ್ಷಣಗಳಲ್ಲಿ ಆತನ ಮನಸ್ಸು ಬದಲಾಗಿತ್ತು. ನೀರಿಗೆ ಬಿದ್ದ ತಕ್ಷಣ ತಾನು ಬದುಕಬೇಕು ಎಂದೆನಿಸಿತ್ತಂತೆ.ಹೌದು, ಇಂತದ್ದೊಂದು ಘಟನೆ ಗುವಾಹಟಿಯಿಂದ ವರದಿಯಾಗಿದ್ದು, ರಭಸದಿಂದ ಹರಿಯುತ್ತಿದ್ದ ಬ್ರಹ್ಮಪುತ್ರ ನದಿಗೆ ಲಕ್ಷ್ಮಣ್‌ ಸ್ವರ್ಗೀಯರಿ ಎಂಬಾತ ಧುಮುಕಿ ಆತ್ಮಹತ್ಯೆಗೆ ಮುಂದಾಗಿದ್ದ. ಆದರೆ ಆತನ ಮನಸ್ಸು ಬದಲಾಯಿತು. ನದಿಯ ಪ್ರವಾಹಕ್ಕೆ ಸಿಲುಕಿದ ಈತ 10 ಗಂಟೆಗಳಲ್ಲಿ 100 ಕಿ.ಮೀ. ದೂರಕ್ಕೆ ಸುರಕ್ಷಿತವಾಗಿ ತಲುಪಿದ್ದಾನೆ. ಬಕ್ಸಾ ಜಿಲ್ಲೆಯ…