ಸಿನಿಮಾ

ಬಾಡಿಗೆ ಮನೆಯನ್ನು ಖಾಲಿ ಮಾಡಲು ಕೋರ್ಟ್ ನಲ್ಲಿ ಸಮಯ ಕೇಳಿದ ಯಶ್ ತಾಯಿ.!ಈ ಸುದ್ದಿ ನೋಡಿ..

157

ರಾಕಿಂಗ್ ಸ್ಟಾರ್ ಯಶ್ ಕುಟುಂಬ ನ್ಯಾಯಾಲಯದ ಆದೇಶದಂತೆ ಬೆಂಗಳೂರಿನ ಬನಶಂಕರಿಯ ಕತ್ರಿಗುಪ್ಪೆಯಲ್ಲಿರುವ ಬಾಡಿಗೆ ಮನೆಯನ್ನು ಮಾರ್ಚ್ 31ರೊಳಗೆ ಖಾಲಿ ಮಾಡಬೇಕಾಗಿತ್ತು. ಆದರೆ ಇದೀಗ ಯಶ್ ಅವರ ತಾಯಿ ಪುಷ್ಪಾ, ಇನ್ನೂ ಆರು ತಿಂಗಳ ಕಾಲ ಇದೇ ಮನೆಯಲ್ಲಿ ನೆಲೆಸಲು ಅವಕಾಶ ಮಾಡಿಕೊಡುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ತಮ್ಮ ಕುಟುಂಬ ಹಾಸನದಲ್ಲಿ ನೆಲೆಸಲು ನಿರ್ಧರಿಸಿದ್ದು, ಅಲ್ಲಿ ಈಗಾಗಲೇ ಮನೆ ನಿರ್ಮಾಣ ಕಾರ್ಯ ಆರಂಭವಾಗಿದೆ. ಇನ್ನು 6 ತಿಂಗಳೊಳಗಾಗಿ ಈ ಕಾರ್ಯ ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ ತಮಗೆ ಈಗ ವಾಸಿಸುತ್ತಿರುವ ಬಾಡಿಗೆ ಮನೆಯಲ್ಲಿ ಆರು ತಿಂಗಳು ವಾಸ್ತವ್ಯ ಮುಂದುವರೆಸಲು ಅವಕಾಶ ಕಲ್ಪಿಸಿಕೊಡಬೇಕೆಂದು ಪುಷ್ಪಾ ಕೋರಿದ್ದಾರೆ.

ಮನೆ ಮಾಲೀಕ ಡಾ. ಎಂ. ಮುನಿಪ್ರಸಾದ್ ಹಾಗೂ ಬಾಡಿಗೆದಾರರಾದ ಯಶ್ ಕುಟುಂಬದ ನಡುವೆ ವ್ಯಾಜ್ಯ ತಲೆದೋರಿದ ಹಿನ್ನೆಲೆಯಲ್ಲಿ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ್ದ ನ್ಯಾಯಾಲಯ 25 ಲಕ್ಷ ರೂಪಾಯಿಗಳನ್ನು ಠೇವಣಿಯಾಗಿರಿಸಿಕೊಂಡಿದ್ದಲ್ಲದೆ 2019 ರ ಮಾರ್ಚ್ 31 ರೊಳಗೆ ಮನೆ ಖಾಲಿ ಮಾಡುವಂತೆ ಯಶ್ ಕುಟುಂಬಕ್ಕೆ ಆದೇಶಿಸಿತ್ತು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಬ್ರಹ್ಮಾವರದಲ್ಲಿ ಮಹಾಮಳೆಯ ಅಬ್ಬರ : ಜನಜೀವನ ಅಸ್ತವ್ಯಸ್ತ…..!

    ಬ್ರಹ್ಮಾವರ ತಾಲೂಕಿನೆಲ್ಲೆಡೆ ಕುಂಭ ದ್ರೋಣ ಮಳೆಯ ಅಬ್ಬರ ಜೋರಾಗಿದ್ದು, ಮಂಗಳವಾರ ಬೆಳಗ್ಗಿನಿಂದಲೇ ಸುರಿದ ಮಳೆಯಿಂದಾಗಿ ಹಲವೆಡೆಗಳಲ್ಲಿ ನೆರೆ ಆವರಿಸಿದೆ. ಕೆಲವೆಡೆ ಮನೆಯೊಳಗೆ ನೀರು ನುಗ್ಗಿದ್ದರೆ, ಅನೇಕ ಕಡೆಗಳಲ್ಲಿ ಗದ್ದೆ, ಅಡಿಕೆ, ತೆಂಗಿನ ತೋಟ ಸಹಿತ ಕೃಷಿ ಪ್ರದೇಶಗಳು ಜಲಾವೃತಗೊಂಡಿವೆ. ಬ್ರಹ್ಮಾವರ ಪರಿಸರದ ಮಟಪಾಡಿ, ನೀಲಾವರ, ನಂದನಕುದ್ರು, ರಾಮನಕುದ್ರು, ಬಲ್ಜಿ ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದು ಇದರಿಂದಾಗಿ ವಾಹನ ಸವಾರರು ಕೂಡ ಸಮಸ್ಯೆಯನ್ನು ಅನುಭವಿಸಿದರು. ಅನೇಕ ಕಡೆಗಳಲ್ಲಿ ಭತ್ತದ ಕೃಷಿ ಬೆಳೆದಿರುವ ಗದ್ದೆ ಜಲಾವೃತಗೊಂಡಿದ್ದರೆ, ಅಡಿಕೆ ತೋಟಗಳಲ್ಲಿ ನೀರು ನಿಂತಿದೆ….

  • ಕರ್ನಾಟಕ

    ನೋಡಿ, ನಮ್ಮ ರೈತರು ಮನಸ್ಸು ಮಾಡಿದ್ರೆ, ತೋಟದಿಂದ ಹೀಗೂ ಹಣ ಮಾಡಬಹುದು! ಹೇಗಂತೀರಾ?ಈ ಲೇಖನಿ ಓದಿ…

    ಸೆಲ್ಫಿ ಫೋಟೋ, ಇದರ ಬಗ್ಗೆ ನಿಮಗೆ ಹೇಳೋ ಅವಶ್ಯಕತೆಯಿಲ್ಲ. ಇವತ್ತಿನ ದಿನಗಳಲ್ಲಿ ಅಸ್ಟೊಂದು ಕ್ರೇಜ್ ಆಗಿದೆ ಈ ಸೆಲ್ಫಿ. ಅದರಲ್ಲೂ ಈ ನಮ್ಮ ಯುವ ಸುಮೂಹದಲ್ಲಿ ಹೆಚ್ಚಾಗಿದೆ. ಎಲ್ಲಿ ಚೆಂದ ಕಾಣುತ್ತೋ ಅಲ್ಲಿ ಸೆಲ್ಫಿ ಫೋಟೋ ತೆಗೆದುಕೊಳ್ಳತಾರೆ.
    ಎಲ್ಲಿ ನೋಡಿದರು ಸೆಲ್ಫಿ ಸೆಲ್ಫಿ ಅದರಲ್ಲೂ ಚಂದ ಚಿಹ್ನದ ಕಾಣುವ ಹೊಲದಲ್ಲಿ ಗಿಡ ಮರಗಳ ಮದ್ಯೆ ಹೀಗೆ ಎಲ್ಲಿ ಅಂದರೆ ಅಲ್ಲಿ ಸೆಲ್ಫಿ ಕ್ರೇಜ್.

  • ಸಿನಿಮಾ

    ನಟಿ ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ಮೇಲೆ ಮಾಡಿದ್ದ ಮೀಟೂ ಪ್ರಕರಣ ಏನಾಗಿದೆ ಗೊತ್ತಾ..?

    ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿದ್ದ ಮೀಟೂ ಆರೋಪ ಕನ್ನಡ ಚಿತ್ರರಂಗದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ನಟಿ ಶೃತಿ ಹರಿಹರನ್ ಮೀಟೂ ಪ್ರಕರಣ ಹಳ್ಳ ಹಿಡಿಯುವ ಎಲ್ಲಾ ಲಕ್ಷಣಗಳು ಕಾಣಿಸ್ತಿವೆ. ಯಾಕಂದ್ರೆ ಬಿರುಸಿನ ತನಿಖೆಗೆ ಇಳಿದಿದ್ದ ಪೊಲೀಸರು ಕೂಡ ಸಾಕ್ಷಿಗಳ ಕೊರೆತೆಯಿಂದಾಗಿ ಅವಧಿಗೂ ಮುನ್ನವೇ ಬಿ ರಿಪೋರ್ಟ್ ಸಲ್ಲಿಸೋಕೆ ಮುಂದಾಗಿದ್ದಾರೆ. ನಟಿ ಶೃತಿ ಹರಿಹರನ್ ಮೀಟೂ ಪ್ರಕರಣ ಇಡೀ ಕನ್ನಡ ಚಿತ್ರರಂಗವನ್ನೇ ತಲ್ಲಣಗೊಳಿಸುವಂತೆ ಮಾಡಿತ್ತು. ಅವರು ದಕ್ಷಿಣ ಭಾರತದ ಬಹುಭಾಷಾ ನಟ ಅರ್ಜುನ್…

  • ಗ್ಯಾಜೆಟ್

    ನಿಮ್ಮ ಸ್ಮಾರ್ಟ್‌ಫೋನ್‌ ಹ್ಯಾಂಗ್‌ ಆಗದಿರಲು ಇಲ್ಲಿದೆ ಉಪಾಯ ..!ತಿಳಿಯಲು ಈ ಲೇಖನ ಓದಿ..

    ಸ್ಮಾರ್ಟ್‌ಫೋನ್‌ ಹಳೆಯದಾದಷ್ಟು ಅದು ಹ್ಯಾಂಗ್‌ ಹಾಗೂ ಸ್ಲೋ ಆಗುವ ಚಾನ್ಸ್‌ ಹೆಚ್ಚಾಗಿರುತ್ತದೆ. ಅಂದರೆ ಬಳಕೆ ಮಾಡುವಾಗ ಲೇಟ್‌ ಆಗಿ ರೆಸ್ಪಾನ್ಸ್‌ ಮಾಡುತ್ತದೆ. ನಂತರ ಹ್ಯಾಂಗ್‌ ಆಗುತ್ತದೆ. ಹೀಗೆ ಆದರೆ ಫೋನ್‌ನ್ನು ಮತ್ತೆ ಮತ್ತೆ ರಿಸ್ಟಾರ್ಟ್‌ ಮಾಡಬೇಕಾಗುತ್ತದೆ.

  • ಕ್ರೀಡೆ

    ಐಪಿಎಲ್ 2018ರ ಸಂಪೂರ್ಣ ವೇಳಾಪಟ್ಟಿ ಕನ್ನಡದಲ್ಲಿ…ತಿಳಿಯಲು ಮುಂದೆ ಓದಿ ತಪ್ಪದೆ ಶೇರ್ ಮಾಡಿ…

    ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 2018ರ ಕ್ರಿಕೆಟ್ ಚಾಂಪಿಯನ್‌ಶಿಪ್‌ನ ಸಂಪೂರ್ಣ ವೇಳಾಪಟ್ಟಿ ನಿಮಗಾಗಿ ಇಲ್ಲಿದೆ.ಈ ಸಲದ ಚಾಂಪಿಯನ್‌ಶಿಪ್‌ನಲ್ಲಿ 8 ತಂಡಗಳು ಭಾಗವಹಿಸುತ್ತಿದ್ದು, ಆ ತಂಡಗಳ ಪಟ್ಟಿಯನ್ನು ನೀವೂ ನೋಡಬಹುದು. ಭಾಗವಹಿಸುವ ತಂಡಗಳು: ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್, ಡೆಲ್ಲಿ ಡೇರ್‌ಡೆವಿಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಸನ್‌ರೈಸರ್ಸ್ ಹೈದರಾಬಾದ್, ರಾಜಸ್ತಾನ ರಾಯಲ್ಸ್. ಸೂಚನೆ:- ಪಂದ್ಯಗಳ ದಿನಾಂಕ ಮತ್ತು ನಿಗದಿತ ಸ್ಥಳಗಳು ಐಪಿಎಲ್ ಸೂಚನೆಯಂತೆ ಬದಲಾಗುವ ಸಾಧ್ಯತೆಗಳು ಇರುತ್ತವೆ.  

  • ಸುದ್ದಿ

    ಆನ್‌ಲೈನ್‌ನಲ್ಲಿ ಪಿಎಫ್‌ ಕ್ಲೇಮ್ ಮಾಡಿಕೊಳ್ಳಲು ಈಗ ಸುಲಭ ಅಂದ್ರೆ ಸುಲಭ..! ಹೇಗೆ ಅಂತಿರಾ..?

    ಉದ್ಯೋಗಿಗಳಿಗೆ ನಿವೃತ್ತಿ ನಂತರ ಅನುಕೂಲವಾಗಲೆಂದು ಬಹಳಷ್ಟು ಸಂಸ್ಥೆಗಳು ಪಿಎಫ್ ಸೌಲಭ್ಯವನ್ನು ತಮ್ಮ ಕಂಪನಿಯಲ್ಲಿ ನೀಡುತ್ತಿವೆ. ಭಾರತ ಸರ್ಕಾರದ ಸ್ವಾಯತ್ತ ಸಂಸ್ಥೆಯಿಂದ ಪ್ರಾವಿಡೆಂಟ್‌ ಫಂಡ್‌ನ ಕಾರ್ಯಗಳು ನೆರವೇರುತ್ತಿದ್ದು, ಒಟ್ಟು ಮೊತ್ತಕ್ಕೆ ನಿಗದಿಪಡಿಸಿದ ಬಡ್ಡಿ ಸೇರಿಸಿ ಸರ್ಕಾರ ಹಣವನ್ನು ನೀಡುತ್ತದೆ. ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ಅಡಿ ಸ್ಥಾಪನೆಯಾದ ಇಪಿಎಫ್‌ಒ ಉದ್ಯೋಗಿಗಳಿಗೆ ಪಿಎಫ್‌ ಸೌಲಭ್ಯವನ್ನು ನೀಡುತ್ತಿದೆ. ಉದ್ಯೋಗಿ ತನಗೆ ಅಗತ್ಯವಿದ್ದಾಗ ಅಥವಾ ನಿವೃತ್ತಿಯ ನಂತರ ಪಿಎಫ್‌ ಹಣವನ್ನು ಪಡೆಯಬಹುದಾಗಿದೆ. ಇನ್ನು, ಪಿಎಫ್‌ ಹಣವನ್ನು ಪಡೆಯುವುದು ಸಹ ಈಗ ಬಹಳಷ್ಟು ಸುಲಭ…