ಸಿನಿಮಾ

ಅಭಿಮಾನಿಗಳು ಕೊಟ್ಟ ಹೆಸರನ್ನೇ ತಮ್ಮ ಮಗಳಿಗೆ ಇಡಲಿದ್ದಾರೆ ದಂಪತಿ ಯಶ್ ಹಾಗೂ ರಾಧಿಕಾ ಪಂಡಿತ್!ಆ ಹೆಸರೇನು ಗೊತ್ತಾ?

469

ಸ್ಯಾಂಡಲ್ವುಡ್ ತಾರಾ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಜೀವನದಲ್ಲಿ ಮುದ್ದಾದ ಹೆಣ್ಣು ಮಗು ಎಂಟ್ರಿ ಕೊಟ್ಟು ಮೂರು ತಿಂಗಳಾಗಿದೆ. ಮೂರು ತಿಂಗಳಾದರೂ ಯಶ್ ಹಾಗೂ ರಾಧಿಕಾ ತಮ್ಮ ಮಗಳ ನಾಮಕರಣವನ್ನು ಮಾಡಲಿಲ್ಲ. ಈಗ ಅಭಿಮಾನಿಗಳು ಸೂಚಿಸಿದ ಹೆಸರನ್ನೇ ತಮ್ಮ ಮಗಳಿಗೆ ನಾಮಕರಣ ಮಾಡುತ್ತಿದ್ದಾರೆ.

ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಹೆಣ್ಣು ಮಗುವಿಗೆ ತಂದೆ-ತಾಯಿ ಆಗಿದ್ದಾರೆ ಎಂಬ ಸುದ್ದಿ ಹೊರ ಬರುತ್ತಿದ್ದಂತೆ, ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮಗಳಿಗೆ ಹೆಸರು ಸೂಚಿಸಲು ಪ್ರಾರಂಭಿಸಿದ್ದಾರೆ. ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಮಗಳಿಗೆ ‘ಯಶಿಕಾ’ ಎಂದು ಹೆಸರಿಡಬೇಕೆಂದು ಅಭಿಮಾನಿಗಳು ಸೂಚಿಸಿದ್ದರು.

ಯಶ್ ಹಾಗೂ ರಾಧಿಕಾ ಇಬ್ಬರ ಹೆಸರು ಸೇರಿಸಿ ‘ಯಶಿಕಾ’ ಎಂದು ಹೆಸರಿಡಲು ಅಭಿಮಾನಿಗಳು ಸ್ಟಾರ್ ಜೋಡಿ ಬಳಿ ಮನವಿ ಮಾಡಿಕೊಂಡಿದ್ದರು. ಈಗ ಈ ಹೆಸರೇ ತಮ್ಮ ಮಗಳಿಗೆ ನಾಮಕರಣ ಮಾಡಲು ಯಶ್ ಒಪ್ಪಿಕೊಂಡಿದ್ದಾರೆ. ಸದ್ಯ ಮಗುವಿಗೆ ಈಗ ಮೂರು ತಿಂಗಳಾಗಿದ್ದು, 5ನೇ ತಿಂಗಳಿನಲ್ಲಿ ನಾಮಕರಣ ಮಾಡಲಿದ್ದಾರೆ.

ಈ ಬಗ್ಗೆ ಸ್ವತಃ ರಾಧಿಕಾ ಪಂಡಿತ್ ಅವರು, “ನಮ್ಮ ಮಗಳಿಗೆ ಯಶಿಕಾ ಎಂದು ಹೆಸರಿಡಲು ನಿರ್ಧರಿಸಿದ್ದೇವೆ. ಅಲ್ಲದೇ ಮಗುವಿಗೆ 5ನೇ ತಿಂಗಳು ತುಂಬಿದ್ದಾಗ ನಾಮಕರಣ ಮಾಡಲು ನಿರ್ಧರಿಸಿದ್ದೇವೆ” ಎಂದು ಹೇಳಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ