ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೊಪ್ಪಳ: ತಲ್ಲೂರು ಕೆರೆ ಯಾರಿಗೆ ನೆನಪಿಲ್ಲ ಹೇಳಿ.. ನಟ ಯಶ್ ಆ ಜಿಲ್ಲೆಯ ತಲ್ಲೂರು ಕೆರೆಯನ್ನು ಅಭಿವೃದ್ದಿ ಪಡಿಸಿ ಅಧುನಿಕ ಭಗಿರಥನಾಗಿದ್ದರು. ಈ ಕಾರಣಕ್ಕಾಗಿಯೇ ತಲ್ಲೂರು ಕೆರೆ ಜನಮಾನಸದಲ್ಲಿ ಉಳಿದಿದೆ. ಆದ್ರೆ ಇದೇ ಕೆರೆಯಲ್ಲಿ ಯಶ್ ಅಭಿವೃದ್ದಿ ಪಡಿಸುವ ಮೊದಲು ಅದೊಂದು ಇಲಾಖೆ ಬರೊಬ್ಬರಿ ಒಂದು ಕೋಟಿ ಖರ್ಚು ಮಾಡಿದೆ ಅಂತಾ ಹಣ ಗುಳುಂ ಮಾಡಿದೆ.

ನಟ ಯಶ್ 2017ರಲ್ಲಿ ತಮ್ಮ ಯಶೋಮಾರ್ಗ ಫೌಂಡೇಶನ್ ವತಿಯಿಂದ ಸ್ವಂತ ಖರ್ಚಿನಲ್ಲಿ ಬರೊಬ್ಬರಿ 70 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿ ತಲ್ಲೂರು ಕೆರೆ ಅಭಿವೃದ್ದಿ ಪಡಿಸಿದ್ರು. ಅವರ ಶ್ರಮದಂತೆ ತಲ್ಲೂರು ಕೆರೆಯೂ ಸಂಪೂರ್ಣವಾಗಿ ಭರ್ತಿಯಾಗಿ 25 ಕ್ಕೂ ಹೆಚ್ಚು ಹಳ್ಳಿಗಳಿಗೆ ಕುಡಿಯೋ ನೀರು ಒದಗಿಸುತ್ತಿದೆ. ಆದ್ರೆ ಕೊಪ್ಪಳದ ಸಣ್ಣನೀರಾವರಿ ಇಲಾಖೆ ಮಾತ್ರ 2015-16ರಲ್ಲಿ ಕಾಟಾಚಾರಕ್ಕೆ ಅಲ್ಪಸ್ವಲ್ಪ ಕಾಮಗಾರಿ ನಡೆಸಿ ಬರೊಬ್ಬರಿ 1 ಕೋಟಿ ಹಣ ಗುಳುಂ ಮಾಡಿದ್ದಾರೆ. ಈ ಬಗ್ಗೆ ಟಿವಿ5ಗೆ ದಾಖಲೆಗಳು ಲಭ್ಯವಾಗಿದ್ದು, ಸಣ್ಣನೀರಾವರಿ ಇಲಾಖೆ ಕೆರೆಯನ್ನು ಅಭಿವೃದ್ದಿ ಪಡಿಸಿದ್ರೆ, ಯಶ್ ಯಾಕೆ ಇಲ್ಲಿ ಬಂದು ಅಷ್ಟೊಂದು ಹಣ ಖರ್ಚು ಮಾಡಿ ಕೆರೆ ಅಭಿವೃದ್ದಿ ಪಡಿಸ್ತಾ ಇದ್ರು ಎನ್ನುವ ಮಾತುಗಳು ಕೇಳಿಬಂದಿದೆ.

ಇಲಾಖೆಯ ಅಧಿಕಾರಿಗಳು ತಲ್ಲೂರು ಕೆರೆಯ ತಡೆಗೊಡೆ ನಿರ್ಮಾಣ, ಊಳೆತ್ತುವುದು ಸೇರಿದಂತೆ ಕೆರೆಗೆ ನೀರು ಹರಿಯುವುದಕ್ಕೆ ಕಾಲುವೆಗಳನ್ನು ನಿರ್ಮಾಣ ಮಾಡಿದ್ಧೇವೆ ಅಂತಾ ಬರೊಬ್ಬರಿ 1 ಕೋಟಿ 4 ಲಕ್ಷ ರೂ ಹಣ ಎತ್ತುವಳಿ ಮಾಡಿದ್ದಾರೆ. ಕೇವಲ 5 ರಿಂದ 10 ಲಕ್ಷ ರೂ ಹಣ ಮಾತ್ರ ಅಧಿಕಾರಿಗಳು ಖರ್ಚು ಮಾಡಿ ಕೋಟಿ ರೂ ಹಣ ಕಮಾಯ್ ಮಾಡಿದ್ದಾರೆ. ತಕ್ಷಣ ಈ ಬಗ್ಗೆ ಸಣ್ಣನೀರಾವರಿ ಇಲಾಖೆಯ ಸಚಿವರು ಇತ್ತ ಕಡೆ ಗಮನಹರಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಈ ಹಿಂದೆ ಕೊಪ್ಪಳ ಸಣ್ಣನೀರಾವರಿ ಇಲಾಖೆಯ ನಡೆದಿದ್ದ ಹಗರಣ ಸಿಐಡಿ ತನಿಖೆಯಲ್ಲಿ ಇರುವಾಗಲೇ ಮತ್ತೊಂದು ಹಗರಣ ಬೆಳಕಿಗೆ ಬಂದಿದ್ದು, ಇಲಾಖೆಯ ವಿರುದ್ದ ಜನ್ರು ಛೀಮಾರಿ ಹಾಕ್ತಾ ಇದ್ದಾರೆ.. ಈಗಲಾದ್ರೂ ಯಶ್ ನ ಕನಸಿನ ಕೂಸು ತಲ್ಲೂರು ಕೆರೆಯ ಹಗರಣವನ್ನು ಸಣ್ಣನೀರಾವರಿ ಸಚಿವರಾದ ಸಿ.ಎಸ್ ಪುಟ್ಟರಾಜು ತನಿಖೆ ನಡೆಸ್ತಾರಾ ಕಾದು ನೋಡಬೇಕಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಂದಿನ ವೈಸ್ ರಾಯ್ ಹೌಸ್ ಅಂದ್ರೆ ಇಂದಿನ ರಾಷ್ಟ್ರಪತಿ ಭವನ, ಐತಿಹಾಸಿಕ ಹೌಸ್ ಮುಂದೆ 1946 ರಲ್ಲಿ ನಗು ಮುಖದಿಂದ ನಿಂತಿರುವ ‘ರಾಷ್ಟ್ರಪಿತ’- ‘ಮಹಾತ್ಮಾ’ಗಾಂಧೀಜಿ ಮತ್ತು ಬ್ರಿಟಿಷ್ Political Leader (ಬ್ರಿಟನ್ ಪ್ರಜೆ ಆಗಿದ್ದರೂ ಸಹಿತ, ಗಾಂಧಿ ಅವರ ಅಪ್ಪಟ ಅಭಿಮಾನಿ.
ದೇಶದ ಎರಡನೇ ಅತಿ ದೊಡ್ಡ ರೈಲ್ವೆ ಓವರ್ ಬ್ರಿಡ್ಜ್ ಈ ತಿಂಗಳ ಅಂತ್ಯಕ್ಕೆ ಉದ್ಘಾಟನೆಯಾಗುತ್ತಿದೆ. ಪಶ್ಚಿಮ ಬಂಗಾಳದ ಬುರ್ದ್ವಾನ್ ಜಂಕ್ಷನ್ ನಲ್ಲಿ ನಾಲ್ಕು ಪಥದ ಕೇಬಲ್ ಸ್ಟೇಯಡ್ ರೈಲ್ವೆ ಮೇಲು ಸೇತುವೆ ನಿರ್ಮಾಣವನ್ನು ಭಾರತೀಯ ರೈಲ್ವೆ ಪೂರ್ಣಗೊಳಿಸಿದೆ. ಇದನ್ನು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಸೆಪ್ಟೆಂಬರ್ 30 ರಂದು ಉದ್ಘಾಟಿಸಲಿದ್ದಾರೆ. ಸಂಚಾರಕ್ಕೆ ಒಂದು ದಿನವೂ ವ್ಯತ್ಯಯವಾಗದಂತೆ 188.43 ಮೀಟರ್ ಕೇಬಲ್ ಸ್ಟೇಯ್ಡ್ ಓವರ್ ಬಿಡ್ಜ್ ಕಾಮಗಾರಿಯನ್ನು 197 ದಿನಗಳಲ್ಲಿ ಪೂರ್ಣಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ…
ಸಾಮಾನ್ಯವಾಗಿ ಪಪ್ಪಾಯಿ ಹಣ್ಣು ತಿಂದು ಅದರ ಬೀಜಗಳನ್ನು ಎಸೆಯುತ್ತಾರೆ. ಆದರೆ ಸಂಶೋಧನೆಯೊಂದು ಕೇವಲ ಪಪ್ಪಾಯಿ ಹಣ್ಣು ಮಾತ್ರವಲ್ಲ ಅದರ ಬೀಜಗಳು ಕೂಡ ಆರೋಗ್ಯಕರ ಅಂಶವನ್ನು ಹೊಂದಿದೆ. ಅದನ್ನು ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆದು ಎನ್ನುವುದನ್ನು ತಿಳಿಸಿದೆ. ಪಪ್ಪಾಯಿ ಬೀಜಗಳ ಉಪಯೋಗವೇನು? 1. ಕ್ಯಾನ್ಸರ್ಪಪ್ಪಾಯಿ ಬೀಜಗಳು ಆ್ಯಂಟಿ ಕ್ಯಾನ್ಸರ್ ಅಂಶಗಳನ್ನು ತನ್ನಲ್ಲಿ ಅಡಗಿಸಿಟ್ಟುಕೊಂಡಿದೆ. ಹೀಗಾಗಿ ಪಪ್ಪಾಯಿ ಬೀಜಗಳು ಕ್ಯಾನ್ಸರ್ ಕೋಶಗಳು ಮತ್ತು ಗೆಡ್ಡೆಗಳ ಬೆಳವಣಿಗೆಯನ್ನು ತಡೆಯುವ ಅಂಶವನ್ನು ಹೊಂದಿದೆ. 2. ಹೊಟ್ಟೆನೋವು ಕಡಿಮೆ ಮಾಡುತ್ತದೆಹೊಟ್ಟೆನೋವಿನಿಂದ ಬಳಲುತ್ತಿರುವವರು ದಿನಕ್ಕೆ 3 ಬಾರಿ…
ಇಂದು ಬುಧವಾರ, 14/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ಹೋದ ವರ್ಷ ಆರಂಭವಾಗಿದ್ದ ರಿಲಾಯನ್ಸ್ ಜಿಯೋ ಸೇವೆ, ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಭಾರೀ ಅಲ್ಲೋಲಕಲ್ಲೋಲವನ್ನೇ ಸೃಷ್ಟಿ ಮಾಡಿತ್ತು. ಜಿಯೋ ತನ್ನ ಸೇವೆ ಆರಂಭಿಸಿದ ನಂತರ, ನಡುಗಿಹೋದ ಇತರೆ ಅನೇಕ ಟೆಲಿಕಾಂ ಕಂಪನಿಗಳು ಜಿಯೋಗೆ ಸೆಡ್ಡು ಹೊಡೆಯಲು ಅವುಗಳು ಕೂಡ ನಾ ಮುಂದು ತಾ ಮುಂದು ಎಂಬಂತೆ ವಿವಿಧ ರೀತಿಯಾದ ಆಫರ್’ಗಳನ್ನು ನೀಡಲಾರಂಭಿಸಿದವು. ಜಿಯೋ ಒಡೆತನದ ಮುಕೇಶ್ ಅಂಬಾನಿ ಜಿಯೋ ಪ್ರೈಮ್ ಮೆಂಬರ್’ಶಿಪ್ ಆಫರ್’ನ್ನು ಹೋದ ವರ್ಷ ಪ್ರಾರಂಭಿಸಿದ್ದು, 99 ರು.ಗಳಿಗೆ ಮಾರ್ಚ್ 31ರ ವರೆಗೆ ಒಂದು ವರ್ಷ…
ಈಗ ಕರ್ನಾಟಕ ಬಿಜೆಪಿ ಪಾಳಯದಲ್ಲಿ ಸಂತೋಷ ವೋ ಸಂತೋಷ. ಬಿಜೆಪಿಯ ರಾಜ್ಯಾಧ್ಯಕ್ಷ ರಾದ ಯಡಿಯೂರಪ್ಪಾ ಗೆ ತಡೆಯಲಾರದ ಸಂತಸ. ಕಾರಣ ಅವರ ಮೇಲೆ ದಾಖಲಾಗಿದ್ದ ಬರೋಬರಿ ಐದೂ ಕೇಸುಗಳನ್ನು ಮಂಗಳವಾರ ಡಿಸೆಂಬರ್ 4 ರಂದು ಸುಪ್ರೀಂ ಕೋರ್ಟ್ ವಜಾ ಗಳಿಸಿದೆ. ಶಿವಮೊಗ್ಗ ಮೂಲದ ವಕೀಲರಾದ ಸಿರಾಜಿನ್ ಪಾಷಾ ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧ ಡಿನೋಟಿಫಿಕೇಷನ್ ಮತ್ತು ಇತರೆ ವಿಷಯಗಳಿಗೆ ಸಂಬಂಧಿಸಿದಂತೆ 5 ಕೇಸ್ ಗಳ ನ್ನು ದಾಖಲಿಸಿದ್ದರು. ಹಲವಾರು ವರ್ಷಗಳಿಂದ ಈ ಕೇಸ್ ಗಳ ವಿಚಾರಣೆ…