ಸುದ್ದಿ

ನಟ ಯಶ್ ಕುಟುಂಬದ ವಿರುದ್ಧ ದೂರು ದಾಕಲೆ…ಕಾರಣ?

191

ನಟ ರಾಕಿಂಗ್ ಸ್ಟಾರ್ ಯಶ್ 9 ವರ್ಷಗಳಿಂದ ಇದ್ದ ಬಾಡಿಗೆ ಮನೆಯನ್ನು ಖಾಲಿ ಮಾಡುವ ಸಂದರ್ಭದಲ್ಲಿ ಮನೆಯಲ್ಲಿದ್ದ ವಸ್ತುಗಳಿಗೆ ಹಾನಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಕಮೋಡ್, ಲೈಟಿಂಗ್ಸ್ ವೈರಿಂಗ್, ಡೋರ್ ಸೇರಿದಂತೆ ಮನೆಯಲ್ಲಿದ್ದ ವಸ್ತುಗಳಿಗೆ ಹಾನಿ ಮಾಡಲಾಗಿದೆ ಎಂದು ಹೇಳಲಾಗಿದ್ದು, ಮತ್ತೊಂದು ಸುತ್ತಿನ ಕಾನೂನು ಹೋರಾಟಕ್ಕೆ ಮನೆ ಮಾಲೀಕರು ಮುಂದಾಗಿದ್ದಾರೆ.

ಬಾಡಿಗೆ ಮನೆ ಡ್ಯಾಮೇಜ್ ವಿಚಾರಕ್ಕೆ ಸಂಬಂಧಿಸಿದಂತೆ ನಟ ಯಶ್ ಅವರ ತಾಯಿ ಪುಷ್ಪಾ ಮತ್ತು ಇತರರ ವಿರುದ್ಧ ದೂರು ದಾಖಲಿಸಲಾಗಿದೆ. ಗಿರಿನಗರ ಪೊಲೀಸ್ ಠಾಣೆಯಲ್ಲಿ ಮನೆ ಮಾಲೀಕರಾದ ಮುನಿಪ್ರಸಾದ್ ದಂಪತಿಯಿಂದ ದೂರು ದಾಖಲಿಸಲಾಗಿದೆ. ಮನೆ ಖಾಲಿ ಮಾಡುವ ವೇಳೆ ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ ಎನ್ನಲಾಗಿದೆ.

2 ತಿಂಗಳ ಹಿಂದೆಯೇ ಮನೆ ಖಾಲಿ ಮಾಡಲು ಹೈಕೋರ್ಟ್ ಸೂಚನೆ ನೀಡಿತ್ತು. ಆದರೆ ಹಾಸನದಲ್ಲಿ ಮನೆ ನಿರ್ಮಾಣ ಮಾಡುತ್ತಿರುವುದರಿಂದ ಕಾಲಾವಕಾಶ ನೀಡಬೇಕು ಎಂದು ಯಶ್ ಅವರ ತಾಯಿ ಮನವಿ ಮಾಡಿದ್ದು, ಮೇ 31 ರವರೆಗೆ ಹೈಕೋರ್ಟ್ ಕಾಲಾವಕಾಶ ನೀಡಿತ್ತು. ಆದರೆ, ಮೇ 31 ರಂದು ಮನೆ ಖಾಲಿ ಮಾಡದ ಯಶ್ ಕುಟುಂಬ ಜೂನ್ 7 ರಂದು ಮನೆ ಖಾಲಿ ಮಾಡಿದ್ದು, ಮನೆಯಲ್ಲಿದ್ದ ವಸ್ತುಗಳಿಗೆ ಹಾನಿ ಮಾಡಲಾಗಿದೆ ಎಂದು ಮನೆಯ ಮಾಲೀಕರು ಆರೋಪಿಸಿ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • inspirational

    ಅಂಬರೀಶ್ ಅಣ್ಣನ ಹೆಂಡತಿ ಯಾರು ಅಂತ ಮಂಡ್ಯ ಜನತೆಗೆ ಗೊತ್ತಿಲ್ವಾ? ಅಂತ ನಿಖಿಲ್ ಗೆ ಟಾಂಗ್ ಕೊಟ್ಟ ಯಶ್…

    ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಕಣಾ ರಣ ಭೂಮಿಯಂತಾಗಿದ್ದು ಒಬ್ಬರ ಮೇಲೆ ಒಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತಿದ್ದು ಚುನಾವಣೆ ಪ್ರಚಾರ ತಾರಕಕ್ಕೇರಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಪರವಾಗಿ ಪ್ರಚಾರ ಕೈಗೊಂಡಿರುವ ನಟ ಯಶ್ ಅವರಿಗೆ ಜೆಡಿಎಸ್ ಅಭ್ಯರ್ಥಿ ನಿಖಿಲ್ ಟಾಂಗ್ ಕೊಟ್ಟಿದ್ದಾರೆ. ಬಾಡಿಗೆ ಕಟ್ಟದವರು ನನ್ನ ಯೋಗ್ಯತೆ ಬಗ್ಗೆ ಮಾತನಾಡುತ್ತಾರೆ ಎಂದು ನಿಖಿಲ್ ಹೇಳಿದ್ದಾರೆ. ಇದಾದ ಬಳಿಕ ಮಾತಿನ ವರಸೆ ಬದಲಿಸಿರುವ ಯಶ್, ತಮ್ಮ ವಿರುದ್ಧದ ಆರೋಪಗಳಿಗೆ ತಿರುಗೇಟು ನೀಡತೊಡಗಿದ್ದಾರೆ. ತಿರುಗೇಟು ನೀಡುವ ಸಂದರ್ಭದಲ್ಲಿ ಅವರು ನೀಡಿರುವ…

  • inspirational

    ಹೃದಯಾಘಾತ ( Heart attack ) ತಪ್ಪಿಸಲು ಇಲ್ಲಿವೆ ಸಿಂಪಲ್ ಟಿಪ್ಸ್

    ಚಳಿಗೂ ಹಾರ್ಟ್ ಅಟ್ಯಾಕ್‌ಗೂ ಅದೇನೋ ಸಖ್ಯ! ಚಳಿಗಾಲದಲ್ಲಿ, ಅದೂ ನಸುಕಿನಲ್ಲೇ ಹೃದಯಾಘಾತ ಘಟಿಸುತ್ತದೆ. ಚಳಿಗಾಲದ ರಾತ್ರಿಗಳಲ್ಲಿ ತಾಪಮಾನ ತುಂಬಾ ಕಡಿಮೆಆಗುವುದರಿಂದ ಅಪಧಮನಿಗಳು ಸಂಕುಚಿತಗೊಳ್ಳುತ್ತವೆ. ರಕ್ತದೊತ್ತಡ ಹಾಗೂ ಪ್ರೊಟೀನ್‌ಗಳ ಪ್ರಮಾಣ ಏರುತ್ತದೆ. ರಕ್ತ ಹೆಪ್ಪುಗಟ್ಟುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಹಾಗೆಯೇ ಈ ಅವಧಿಯಲ್ಲಿ ವೈರಲ್ ಸೋಂಕುಗಳೂ ಹೆಚ್ಚು ಪ್ರಮಾಣದಲ್ಲಿ ಹರಡುವುದರಿಂದ, ಉಸಿರಾಟ ಹಾಗೂ ಶ್ವಾಸಕೋಶದ ತೊಂದರೆಗಳುಂಟಾಗಿ ಹೃದ್ರೋಗಗಳು ಉಲ್ಬಣಿಸುವ ಸಾಧ್ಯತೆ ಅಧಿಕ. ಇವೆಲ್ಲ ಕಾರಣಗಳಿಂದ ರಕ್ತ ಸಂಚಾರಕ್ಕೆ ಅಡ್ಡಿ ಆತಂಕಗಳು ಉಂಟಾಗಿ ಹೃದಯಕ್ಕೆ ಸಾಕಷ್ಟು ಆಮ್ಲಜನಕ ಲಭಿಸದೆ ಹೃದಯಾಘಾತ ಆಗುತ್ತದೆ. ಚಳಿಗಾಲದಲ್ಲಿ…

  • ಜ್ಯೋತಿಷ್ಯ

    ಪ್ರೇಮಿಗಳ ದಿನದಂದು ಈ ರಾಶಿಗಳ ವ್ಯಕ್ತಿಗಳಿಗೆ ಸಿಗಲಿದೆ ಪ್ರೀತಿ..!

    ಪ್ರೇಮಿಗಳ ದಿನ ಹತ್ತಿರ ಬರ್ತಿದೆ. ಪ್ರೀತಿಯಲ್ಲಿ ಬಿದ್ದವರು ಪ್ರೇಮಿಗಳ ದಿನ ಆಚರಣೆಗೆ ತಯಾರಿ ನಡೆಸುತ್ತಿದ್ದರೆ ಇನ್ನು ಕೆಲವರು ಪ್ರೇಮ ಪರೀಕ್ಷೆಗೆ ಸಿದ್ಧವಾಗ್ತಿದ್ದಾರೆ. ತಮ್ಮ ಹೃದಯ ಕದ್ದವರ ಮುಂದೆ ಪ್ರೇಮ ನಿವೇದನೆ ಮಾಡಿಕೊಳ್ಳುವ ತವಕದಲ್ಲಿದ್ದಾರೆ. ನಿಜವಾದ ಪ್ರೀತಿ ಸಿಗಬೇಕೆಂದ್ರೆ ಅದೃಷ್ಟ ಕೂಡ ಚೆನ್ನಾಗಿರಬೇಕು. ಈ ಬಾರಿ ಫೆಬ್ರವರಿ 14ರಂದು ಮೂರು ರಾಶಿಯವರ ಅದೃಷ್ಟ ಬದಲಾಗಲಿದೆ. ಅವ್ರಿಗೆ ನಿಜವಾದ ಪ್ರೀತಿ ಸಿಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿ ಪ್ರೇಮಿಗಳ ದಿನ ವೃಷಭ ರಾಶಿಯವರಿಗೆ ಖುಷಿ ತರಲಿದೆಯಂತೆ. ವೃಷಭ ರಾಶಿಯವರು…

  • ಸಿನಿಮಾ

    ಶಾಕಿಂಗ್ ಸುದ್ದಿ.!ನಟನನ್ನು ನೋಡಲಾಗದೇ ಆತ್ಮಹತ್ಯೆ ಯತ್ನಿಸಿದ್ದ ಅಭಿಮಾನಿ ಸಾವು..!

    ನಟ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶುಭಾಶಯ ಹೇಳಲು ಬಂದಿದ್ದ ಅಭಿಮಾನಿಯೊಬ್ಬ ಯಶ್ ಭೇಟಿ ಸಾಧ್ಯವಾಗದ ಹಿನ್ನಲೆಯಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ರವಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದೇ ರವಿ ಮಧ್ಯರಾತ್ರಿಯೇ ಸಾವನ್ನಪ್ಪಿದ್ದಾನೆ. ರವಿ ನೆಲಮಂಗಲ ತಾಲೂಕಿನ ಶಾಂತಿನಗರ ನಿವಾಸಿಯಾಗಿದ್ದು, ಮಂಗಳವಾರ ತನ್ನ ನೆಚ್ಚಿನ ನಟ ಯಶ್ ಅವರ ಹುಟ್ಟುಹಬ್ಬವಿದ್ದ ಕಾರಣ ಅವರನ್ನು ಭೇಟಿ ಮಾಡಲು ಬೆಂಗಳೂರಿನ…

  • ಉಪಯುಕ್ತ ಮಾಹಿತಿ

    ನಿಮಗೆ ಗೊತ್ತಿರುವ ಮೆಕ್ಕೆಜೋಳದ ರೇಷ್ಮೆಯ ಉಪಯೋಗಗಳು..!ತಿಳಿಯಲು ಈ ಲೇಖನ ಓದಿ…

    ನಾವು ಮೆಕ್ಕೆಜೋಳದ ರೇಷ್ಮೆಯನ್ನು ಹಾಗೇ ತಿನ್ನಬಹುದು ಅಥವಾ ನೀರಿನೊಂದಿಗೆ ಬೆರೆಸಿ ದ್ರಾವಣ ರೂಪದಲ್ಲಿ ಕುಡಿಯಬಹುದು ಅಥವಾ ನಿಂಬೇ ಪಾನೀಯವಾಗಿ ಸೇವಿಸಬಹುದು ನೀವು ಮೆಕ್ಕೆಜೋಳದ ರೇಷ್ಮೆಯನ್ನು ಒಂದು ದಿನ ನೀರಿನಲ್ಲಿ ನೆನೆಸಿ ಸೂರ್ಯನ ಬಿಸಿಲಿನಲ್ಲಿ ಇಟ್ಟು ಅಂದೇ ರಾತ್ರಿ ಜೇನುತುಪ್ಪದೊಂದಿಗೆ ಸೇರಿಸಿ ಬೇಕಾದಾಗ ಕುಡಿಯಬಹುದು.

  • ಸುದ್ದಿ

    ಕಾಂಗ್ರೆಸ್‍ನ ಡಿಸಿಎಂ ಪರಮೇಶ್ವರ್ ಸೇರಿದಂತೆ ಎಲ್ಲ ಸಚಿವರಿಂದ ರಾಜೀನಾಮೆ….!

     ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಮುಂದಾಗಿದ್ದು, ಡಿಸಿಎಂ ಜಿ.ಪರಮೇಶ್ವರ್ ಸೇರಿದಂತೆ ಮಾಜಿ ಸಿಎಂ ಆಪ್ತರೆಲ್ಲ ರಾಜೀನಾಮೆ ನೀಡಿದ್ದಾರೆ. ಇಂದು ಬೆಳಗ್ಗೆ ಪರಮೇಶ್ವರ್ ಅವರು ಕರೆದ ಉಪಹಾರ ಕೂಟಕ್ಕೆ ಆಗಮಿಸಿದ್ದ ಎಲ್ಲ ಸಚಿವರು ತಮ್ಮ ಶಾಸಕಾಂಗ ಸಭೆಯ ನಾಯಕ ಸಿದ್ದರಾಮಯ್ಯರಿಗೆ ರಾಜೀನಾಮೆ ನೀಡಿದ್ದಾರೆ. ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್, ಕೃಷ್ಣೆಬೈರೇಗೌಡರು ಸೇರಿದಂತೆ ಎಲ್ಲ 22 ಸಚಿವರು ತಮ್ಮ ರಾಜೀನಾಮೆಯನ್ನು ಪಕ್ಷದ ಅಧ್ಯಕ್ಷರಿಗೆ ನೀಡಿದ್ದಾರೆ. ಇತ್ತ ರಾಜೀನಾಮೆ ನೀಡಿ ಹೊರ ಬಂದು ಮಾತನಾಡಿದ ಸಚಿವ ರಹೀಂಖಾನ್, ಪಕ್ಷದ ಅಧ್ಯಕ್ಷರಿಗೆ ರಾಜೀನಾಮೆ…