ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಂಗಳೂರು: ನಮ್ಮ ಮೆಟ್ರೋ ಎರಡನೇ ಹಂತಕ್ಕೆ ಸಿಎಂ ಯಡಿಯೂರಪ್ಪ ಗರಂ ಆಗಿದ್ದಾರೆ. ಐಟಿ ಕಾರಿಡಾರ್ನಲ್ಲಿ ಮೊದಲು ಮೆಟ್ರೋ ಮುಗಿಸುವಂತೆ ಕಟ್ಟಪ್ಪಣೆ ಹೊರಡಿಸಿದ್ದಾರೆ. ಆದರೆ ಸಿಎಂ ಮುಂದೆ ತಲೆಯಾಡಿಸಿ ಬಂದಿರೋ ಅಧಿಕಾರಿಗಳು, ಈಗ ತಲೆಮೇಲೆ ಕೈ ಹೊತ್ತು ಕುಳಿತಿದ್ದಾರೆ.
ಬೆಂಗಳೂರು ಅಭಿವೃದ್ಧಿ ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಂಡಿರೋ ಸಿಎಂ ಯಡಿಯೂರಪ್ಪ, ನಗರಕ್ಕೆ ಸಂಬಂಧಿಸಿದ ಒಂದೊಂದೇ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸ್ತಿದ್ದಾರೆ. ಇದೇ ರೀತಿ BMRCL ಸಭೆ ನಡೆಸಿದಾಗ ಮೆಟ್ರೋ ಎರಡನೇ ಹಂತದ ಪ್ರಗತಿಗೆ ಸಿಎಂ ತೀವ್ರ ಅಸಮಾದಾನ ವ್ಯಕ್ತಪಡಿಸಿದ್ದಾರೆ. ಯಾವ ಮಾರ್ಗ ಮುಖ್ಯ, ಯಾವುದು ಮುಖ್ಯವಲ್ಲ ಅಂತ ಗೊತ್ತಿಲ್ವಾ ನಿಮ್ಗೆ ಅಂತ ಅಧಿಕಾರಿಗಳ ಮೇಲೆ ರೇಗಾಡಿದ್ದಾರೆ.
ಮೆಟ್ರೋ ಅಧಿಕಾರಿಗಳ ಮೇಲೆ ಸಿಎಂ ರೇಗಾಡುವುದಕ್ಕೆ ಮುಖ್ಯ ಕಾರಣ, ಹೆಚ್ಚು ಬೇಡಿಕೆ ಇರೋ ಐಟಿ ಕಾರಿಡಾರ್ಗಳಲ್ಲೇ ಮೆಟ್ರೋ ಕಾಮಗಾರಿ ವಿಳಂಬವಾಗಿ ಸಾಗ್ತಿರೋದು. ಮುಖ್ಯವಾಗಿ ಬೈಯಪ್ಪನಹಳ್ಳಿ – ವೈಟ್ ಫೀಲ್ಡ್ ಮಾರ್ಗದಲ್ಲಿ ಕಾಮಗಾರಿ ನಿಧಾನಗತಿಯಲ್ಲಿ ಸಾಗ್ತಿದೆ. ಹೀಗಾಗಿ ಮೊದಲು ಐಟಿ ಬಿಟಿ ಕಾರಿಡಾರ್ನಲ್ಲೇ ಮೆಟ್ರೋ ಮುಗಿಸಲು ಸಿಎಂ ಸೂಚಿಸಿದ್ದಾರೆ. ಆದರೆ ಸಿಎಂ ಮುಂದೆ ಎಲ್ಲವನ್ನೂ ಒಪ್ಪಿಕೊಂಡಿರೋ ಅಧಿಕಾರಿಗಳು, ಈಗ ತಲೆಕೆಡಿಸಿಕೊಂಡು ಕುಳಿತಿದ್ದಾರೆ. ಹೇಗಪ್ಪಾ ಡೆಡ್ ಲೈನ್ ಒಳಗೆ ಕಾಮಗಾರಿ ಮುಗಿಸೋದು ಅಂತ ಟೆನ್ಷನ್ಗೆ ಒಳಗಾಗಿದ್ದಾರೆ.
ಬೈಯಪ್ಪನಹಳ್ಳಿ ಟು ವೈಟ್ ಫೀಲ್ಡ್ ಮಾರ್ಗದಲ್ಲಿ ಇನ್ನೂ ಹೇಳಿಕೊಳ್ಳುವಂತಾ ಕೆಲಸ ಆಗಿಲ್ಲ. ಕೆಆರ್ ಪುರಂ ನಲ್ಲಿ ಮೆಟ್ರೋಗೆ ಇನ್ನೂ ಸಾಕಷ್ಟು ಅಡೆತಡೆಗಳು ಎದುರಾಗ್ತಲೇ ಇದೆ. ಹೀಗಾಗಿ ಸಿಎಂ ಹೇಳಿದಂತೆ 2021ಕ್ಕೆ ಈ ಮಾರ್ಗ ಮುಗಿಸೋದು ಕಷ್ಟ ಅಂತ ಮೆಟ್ರೋ ಅಧಿಕಾರಿಗಳಿಗೆ ತಲೆನೋವಾಗಿದೆ.
ಪ್ರಯಾಣಿಕರ ಬೇಡಿಕೆ ಆಧಾರದ ಮೇಲೆ ಐಟಿ ಕಾರಿಡಾರ್ನಲ್ಲಿ ಮೆಟ್ರೋ ಕಾಮಗಾರಿ ಮುಗಿಸಬೇಕಾಗಿದೆ. ಆದರೆ ಸದ್ಯದ ಪರಿಸ್ಥಿತಿ ನೋಡಿದರೆ, ಸಿಎಂ ಏನೇ ಸೂಚನೆ ಕೊಟ್ರೂ ಬೈಯಪ್ಪನಹಳ್ಳಿ ಟು ವೈಟ್ ಫೀಲ್ಡ್ ಮಾರ್ಗದ ಮೆಟ್ರೋ 2021ಕ್ಕೆ ಮುಗಿಯೋದು ಸಾಧ್ಯವೇ ಇಲ್ಲ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹೈದರಾಬಾದ್, ಆಗಸ್ಟ್ 14: ತೆಲಂಗಾಣದಲ್ಲಿ ಮಧ್ಯಂತರ ಸಾರ್ವಜನಿಕ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಮಾಹಿತಿ ನೀಡುವಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೂಚಿಸಿದ್ದಾರೆ. ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಕ್ಕೆ ಒಟ್ಟು 27 ವಿದ್ಯಾರ್ಥಿಗಳು ಮೃತಪಟ್ಟಿದ್ದರು. ಮುಖ್ಯ ಕಾರ್ಯದರ್ಶಿ ಎಸ್ಕೆ ಜೋಶಿ ಅವರಿಗೆ ವರದಿ ನೀಡುವಂತೆ ತಿಳಿಸಿದ್ದಾರೆ. ಒಟ್ಟು 9 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅದರಲ್ಲಿಮೂರು ಲಕ್ಷ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗಿರಲಿಲ್ಲ.ತೆಲಂಗಾಣ ರಾಜ್ಯದ ಮಧ್ಯಂತರ ಪರೀಕ್ಷಾ ಮಂಡಳಿ(TSBIE)ಯು ಏ. 18ರಂದು ಫಲಿತಾಂಶವನ್ನುಪ್ರಕಟಿಸಿತ್ತು. ಅಚ್ಚರಿಯೆಂದರೆ ಈ ವೇಳೆ ಸಾವಿರಾರು…
ಹಣ ಡ್ರಾ ಮಾಡಲು ಸಾಮಾನ್ಯವಾಗಿ ಎಲ್ಲರೂ ಎಟಿಎಂ ಬಳಸ್ತಾರೆ. ಬೇರೆ ಬ್ಯಾಂಕ್ ಎಟಿಎಂನಿಂದ ಹಣ ಡ್ರಾ ಮಾಡುವವರ ಸಂಖ್ಯೆಯೇ ಜಾಸ್ತಿ ಇದೆ. ಹೀಗೆ ಮಾಡುವಾಗ ಕೆಲವೊಂದು ಸಮಸ್ಯೆಗಳು ಎದುರಾಗುತ್ತವೆ.ಮಾನಸಿಕ ಹಾಗೂ ಆರ್ಥಿಕ ನಷ್ಟ ಎದುರಿಸಬೇಕಾಗುತ್ತದೆ. ಹಾಗಾಗಿ ಬೇರೆ ಬ್ಯಾಂಕ್ ಎಟಿಎಂಗೆ ಹೋದಾಗ ಕೆಲವೊಂದು ವಿಷಯಗಳ ಬಗ್ಗೆ ಗಮನ ನೀಡಬೇಕಾಗುತ್ತದೆ. ಬೇರೆ ಎಟಿಎಂಗೆ ಹೋದಾಗ ನೀವು ಈ ಕೆಲಸವನ್ನು ಅವಶ್ಯವಾಗಿ ಮಾಡಬೇಕಾಗುತ್ತದೆ. ಹಣ ಡ್ರಾ ಮಾಡಿದ ನಂತ್ರ ಬರುವ ಸ್ಲಿಪ್ ನ್ನು ಜೋಪಾನವಾಗಿ ತೆಗೆದಿಟ್ಟುಕೊಂಡಿರಬೇಕಾಗುತ್ತದೆ. ಕೆಲವೊಮ್ಮೆ ಹಣ ಡ್ರಾ…
ದಿನನಿತ್ಯದ ಚಟುವಟಿಕೆಯಲ್ಲಿ ನಿದ್ರೆಯೂ ಒಂದು. ಉತ್ತಮ ಆರೋಗ್ಯಕ್ಕೆ ಪೌಷ್ಟಿಕಾಂಶ ಭರಿತ ಆಹಾರ ಮುಖ್ಯವಾದಂತೆ ಉತ್ತಮ ನಿದ್ರೆಗೂ ನಾವು ಸೇವಿಸುವ ಆಹಾರ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ.
ಈ ಹಿಂದೆ ದೇಶ ವಿರೋಧಿ ಚಟುವಟಿಕೆ ಹಿನ್ನೆಲೆ ಮಿಲಿಟರಿ ಮುಖ್ಯಸ್ಥನನ್ನೇ ಗಲ್ಲಿಗೇರಿಸಿ ಭಾರೀ ಸುದ್ಧಿಯಾಗಿದ್ದು ಕಿಮ್ ಜಂಗ್, ಇದೀಗ ಹೊಸ ಕಾಯ್ದೆ ಜಾರಿ ಮಾಡುವ ಮತ್ತೊಮ್ಮೆ ತನ್ನ ಸರ್ವಾಧಿಕಾರವನ್ನು ಪ್ರದರ್ಶಿಸಿದ್ದಾನೆ. ಭೂಮಿಯ ಮೇಲೆ ನರಕ ಇದೆ ಅಂದ್ರೆ ನೀವು ನಂಬುತ್ತಿರಾ.ಪ್ರಜೆಗಳನ್ನ ವಿವಿಧ ರೀತಿ ಹಿಂಸೆ ಕೊಡುವ ದೇಶಗಳು ಈ ಪ್ರಪಂಚದಲ್ಲಿ ಇದೆ.. ಏಷ್ಯಾದಲ್ಲಿ ಉತ್ತರ ಕೊರಿಯಾ ವಿಚಿತ್ರ ರೂಲ್ಸ್ ಮೂಲಕ ಜನರಿಗೆ ಇಲ್ಲೇ ನರಕ ತೋರಿಸುತ್ತಿದೆ. ಈ ದೇಶದಲ್ಲಿ ಸರ್ಕಾರ ಅನುಮೋದಿಸಿರುವ ೨೮ ರೀತಿಯ ಹೇರ್ ಕಟ್…
ಮಯೂನ್ ಎನ್ಬದುಕಿರುವ ಎಲ್ಲ ಜೀವಿಗಳೂ ಉಸಿರಾಡುತ್ತವೆ ಎಂಬ ವಿಷಯ ಯಾರಿಗೂ ಹೊಸತಲ್ಲ. ಮಾನವನು ಪ್ರತಿನಿಮಿಷಕ್ಕೆ ಹದಿನಾರು ಬಾರಿ ಉಸಿರಾಡುತ್ತಾನೆ. ಉಸಿರಾಟದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳವುದೇ ಇಲ್ಲ. ಏಕೆಂದರೆ ಉಸಿರಾಟ ನಮ್ಮಇಚ್ಛೆಗೆ ಕಾಯದೆ ಅನೈಚ್ಛಿಕವಾಗಿ ನಡೆಯುತ್ತಿರುತ್ತದೆ. ಜಗತ್ತಿನಲ್ಲಿ ಬಹಳಷ್ಟು ಜನರು ಉಸಿರಾಡುತ್ತಿರುವ ಕ್ರಮ ಸರಿಯಿಲ್ಲ. ಹೇಗೋ ಉಸಿರಾಡಿಕೊಂಡು ಬದುಕಿದ್ದಾರೆ ಎಂದು ಆಧುನಿಕ ವೈದ್ಯರು ಆರೋಪಣೆ ಮಾಡುತ್ತಿದ್ದಾರೆ.ನಿವು ಸರಿಯಾಗಿ ಉಸಿರಾಡುತಿದ್ತ್ದೀರ? ಇದನ್ನು ತಿಳಿದುಕೊಳ್ಳಲು ಒಂದು ಸರಳ ವಿಧಾನ ಇದೆ. ನೀವು ಈಗ ಎಲ್ಲೇ ಇರಿ. ಏನೇ ಮಾಡುತ್ತಿರಿ. ಒಮ್ಮೆ ಆಳವಾಗಿ…
ಆರಂಭದಲ್ಲಿ ವಾರದಲ್ಲಿ ಒಂದು ದಿನ ರಜೆ ಪಡೆಯಲು ವಿಶ್ವದ ಜನರು ಪರದಾಡಿದ್ದರು. ನಂತ್ರ ಕೆಲ ಕಂಪನಿಗಳು ವಾರದಲ್ಲಿ ಎರಡು ದಿನ ರಜೆ ನೀಡಲು ಶುರು ಮಾಡಿದ್ವು. ಇಷ್ಟಾದ್ರೂ ಉದ್ಯೋಗಿಗಳು ವಾರದಲ್ಲಿ ಮೂರು ದಿನ ರಜೆ ಸಿಕ್ಕರೆ ಎಷ್ಟು ಚೆಂದವೆಂದು ಆಲೋಚನೆ ಮಾಡ್ತಾರೆ. ಭಾರತದಲ್ಲಿ ಇದು ಇನ್ನೂ ಸಾಧ್ಯವಾಗಿಲ್ಲ. ಆದ್ರೆ ಬ್ರಿಟನ್ ಕಂಪನಿಯೊಂದು ಉದ್ಯೋಗಿಗಳಿಗೆ ಖುಷಿ ಸುದ್ದಿ ನೀಡಿದೆ. ಪೋರ್ಟ್ಕುಲಸ್ ಲೆಗ್ಸ್ ಹೆಸರಿನ ಕಂಪನಿ ವಾರದಲ್ಲಿ ಮೂರು ದಿನ ರಜೆ ನೀಡುವುದಾಗಿ ಹೇಳಿದೆ. ಅಂದ್ರೆ ಕೆಲಸಗಾರರು ವಾರದಲ್ಲಿ ನಾಲ್ಕು…