ಸುದ್ದಿ

ಅತಿ ಚಿಕ್ಕ ಪಕ್ಷಿ ಎಂದಾದರೂ ನೋಡಿದೀರಾ ಹಾಗಾದರೆ, ಜಗತ್ತಿನ ಅತಿ ಪುಟ್ಟ ಪಕ್ಷಿ ಹಮ್ಮಿಂಗ್‌ ಬರ್ಡ್‌ ನೋಡಿ.

1184

ಮನುಷ್ಯನ ಉಗುರಿನ ಮೇಲೆ ನಿಂತಿರುವ ಪುಟ್ಟಪಕ್ಷಿಯ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಅದರೊಂದಿಗೆ ಇದು ಜಗತ್ತಿನ ಅತಿ ಚಿಕ್ಕ ಹಕ್ಕಿ ಹಮ್ಮಿಂಗ್‌ ಬರ್ಡ್‌ ಎಂದು ಹೇಳಲಾಗಿದೆ. ‘ಬ್ಯಾನ್‌ ಬಾಯ್‌ ಸಹೀದ್‌’ ಎನ್ನುವ ಫೇಸ್‌ಬುಕ್‌ ಬಳಕೆದಾರರು ಈ ಫೋಟೋವನ್ನು ಮೊದಲು ಪೋಸ್ಟ್‌ ಮಾಡಿದ್ದು ಬಂಗಾಳಿ ಭಾಷೆಯಲ್ಲಿ ‘ಜಗತ್ತಿನ ಅತಿ ಚಿಕ್ಕ ಪಕ್ಷಿ ಹಮ್ಮಿಂಗ್‌ ಬರ್ಡ್‌. ನಾನು ಮೊದಲ ಬಾರಿಗೆ ನೋಡಿದ್ದು’ ಎಂದು ಒಕ್ಕಣೆ ಬರೆದುಕೊಂಡಿದ್ದಾರೆ. ಸದ್ಯ ಇದೀಗ ವೈರಲ್‌ ಆಗುತ್ತಿದ್ದು 15000 ಕ್ಕೂ ಹೆಚ್ಚು ಬಾರಿ ಶೇರ್‌ ಆಗಿದೆ.

ಆದರೆ ನಿಜಕ್ಕೂ ಇದು ಹಮ್ಮಿಂಗ್‌ ಬರ್ಡ್‌ ಹೌದೇ ಎಂದು ಇಂಡಿಯಾ ಟು ಡೇ ಆ್ಯಂಟಿ ಫೇಕ್‌ನ್ಯೂಸ್‌ ರೂಮ್‌ ಪರಿಶೀಲನೆಗೆ ಮುಂದಾದಾಗ ಇದು ಹಮ್ಮಿಂಗ್‌ ಬರ್ಡ್‌ ಅಲ್ಲ, ಕಲಾವಿದರೊಬ್ಬರ ಕೈಚಳಕದಲ್ಲಿ ರಚನೆಯಾದ ಕಲೆ ಎಂದು ತಿಳಿದುಬಂದಿದೆ. ರಿವರ್ಸ್‌ ಇಮೇಜ್‌ನಲ್ಲಿ ಇದರ ಮೂಲದ ಬಗ್ಗೆ ಉತ್ತರ ಲಭಿಸಿದ್ದು, ಫೋಟೋ ವೆಬ್‌ಸೈಟ್‌ವೊಂದರಲ್ಲಿ ಇದೇ ಫೋಟೋ ಕಂಡು ಬಂದಿದೆ. ಅದರಲ್ಲಿ ‘ಮಲಿನಿಕ್‌ ಮಿನಿಯೇಚ​ರ್ಸ್’ ಎಂದು ಫೋಟೋಕ್ರೆಡಿಟ್‌ ನೀಡಲಾಗಿದೆ.

ಇದರ ಜಾಡು ಹಿಡಿದು ಹುಡುಕ ಹೊರಟಾಗ ವೈರಲ್‌ ಆಗಿರುವ ಫೋಟೋದ ಕಲೆಗಾರ್ತಿ ಅಮೆರಿಕ ಮೂಲಕ ಇನಾ ಎಂದು ತಿಳಿದುಬಂದಿದೆ. ಇನಾ ತಮ್ಮಫೇಸ್‌ಬುಕ್‌ ಪೇಜ್‌ನಲ್ಲಿ ಈ ಫೋಟೋವನ್ನು ಪೋಸ್ಟ್‌ ಕೂಡ ಮಾಡಿದ್ದಾರೆ. ಅವರು ತಮ್ಮ ಹೆಸರು ಇನಾ. ಬಲ್ಗಾರಿಯಾ ಮೂಲದವರಾಗಿದ್ದು, ಸದ್ಯಅಮೆರಿಕದಲ್ಲಿ ನೆಲೆಸುತ್ತಿರುವುದಾಗಿಪ್ರೊಫೈಲ್‌ನಲ್ಲಿ ಬರೆದುಕೊಂಡಿದ್ದಾರೆ. ಜಗತ್ತಿನ ಅತಿ ಪುಟ್ಟಪಕ್ಷಿಗಳೆಂದರೆ ಹಮ್ಮಿಂಗ್‌ಬರ್ಡ್‌ ನಿಜ. ಅವು ಸಾಮಾನ್ಯವಾಗಿ 3-5 ಇಂಚುಸುತ್ತಳತೆ ಇರುತ್ತವೆ. ಅವುಗಳಲ್ಲಿ ಅತಿ ಚಿಕ್ಕದು 2 ಇಂಚು ಸುತ್ತಳತೆ ಹೊಂದಿದೆ. ಆದರೆ ಆದರೆ ಫೋಟೋದಲ್ಲಿರುವುದು ಹಮ್ಮಿಂಗ್‌ಬರ್ಡ್‌ ಅಲ್ಲ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ದಿನ ಭವಿಷ್ಯ ಗುರುವಾರ…ಇಂದು ನಿಮಗೆ ಗುರು ಒಲಿಯುತ್ತಾನೆಯೇ ನೋಡಿ ತಿಳಿಯಿರಿ…ಶೇರ್ ಮಾಡಿ..

    ಗುರುವಾರ, 05/04/2018  ಇಂದಿನ ದಿನ ಭವಿಷ್ಯ, ಖ್ಯಾತ ಆಧ್ಯಾತ್ಮಿಕ ಚಿಂತಕರು, ದೈವಜ್ಞ ಜ್ಯೋತಿಷ್ಯರು ಪಂಡಿತ್ ಸುದರ್ಶನ್ ಭಟ್‘ರವರಿಂದ… ಮೇಷ:– ಬಹುದಿನದ ನೀರಿಕ್ಷಿತ ಕನಸು ಕೈಗೂಡುವುದು. ಎಲ್ಲರಂತೆ ನೀವು ಕೂಡಾ ಸಮಾಜ ಮುಖಿಯಾಗಿ ಉ  ನ್ನತ ಅಧಿಕಾರವನ್ನು ಹೊಂದುವಿರಿ. ಇದರೊಂದಿಗೆ ಸಕಾರಾತ್ಮಕ ಚಿಂತನೆಯನ್ನು ಮೈಗೂಡಿಸಿಕೊಂಡಲ್ಲಿ ಒಳಿತಾಗುವುದು. ವೃಷಭ:- ಇವತ್ತಿನ ಕೆಲಸ ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಈ ಬಗ್ಗೆ ಈ ಅನುಭೂತಿ ನಿಮ್ಮ ಮನದಲ್ಲಿರಲಿ. ಹೊರಗಡೆ ಸಂತೋಷವನ್ನು ವ್ಯಕ್ತಪಡಿಸಿದಲ್ಲಿ ಹಣಕಾಸಿನ ವಿಷಯದಲ್ಲಿ ನೀವು ಪರರಿಗೆ ಸಹಾಯ ಮಾಡಬೇಕಾಗುವುದು. ಶತ್ರುವನ್ನು ಕೂಡಾ…

  • India, tourism

    ಇದು ಭಗವಾನ ಶ್ರೀಕೃಷ್ಣನ ನಗರಿ

    ಇದನ್ನು ಜನಪ್ರೀಯವಾಗಿ ಶ್ರೀಕೃಷ್ಣನ ಸಾಮ್ರಾಜ್ಯ ಎಂತಲೆ ಕರೆಯಲಾಗುತ್ತದೆ. ಮೂಲತಃ ಇದೊಂದು ಅದ್ಭುತ ದ್ವೀಪ ಪ್ರದೇಶ ಅಥವಾ ನಡುಗಡ್ಡೆ. ಭಾರತದ ಮುಖ್ಯ ಭೂಮಿಯಿಂದ ಸಮುದ್ರದ ಮೂಲಕ ಮೂರು ಕಿ.ಮೀ ದೂರದಲ್ಲಿರುವ ಜನಪ್ರೀಯಗೊಳ್ಳುತ್ತಿರುವ ಪ್ರವಾಸಿ ತಾಣ. ವಿಶೇಷವೆಂದರೆ ದ್ವಾರಕೆಯಿಂದ ಕೇವಲ ಮೂವತ್ತೇ ಕಿ.ಮೀ ಗಳಷ್ಟು ದೂರದಲ್ಲಿದೆ. ಇದನ್ನು ದ್ವಾರಕಾ ಎಂತಲೂ ಕರೆಯುತ್ತಾರೆ ಹಾಗೂ ಇದು ಗುಜರಾತ್ ರಾಜ್ಯದ ವ್ಯಾಪ್ತಿಯಲ್ಲಿ ಬರುತ್ತದೆ. ಗುಜರಾತ್ ರಾಜ್ಯದ ದೇವಭೂಮಿ ದ್ವಾರಕಾ ಜಿಲ್ಲೆಯ ಓಖಾ ಎಂಬ ಕರಾವಳಿ ಪಟ್ಟಣದಿಂದ ಮೂರು ಕಿ.ಮೀ ದೂರದಲ್ಲಿ ಬೇಟ್ ದ್ವಾರಕಾ…

  • ಸುದ್ದಿ

    ಮದುವೆಯ ಮಂಟಪದಲ್ಲಿ ಕುಳಿತಿರುವ ಈ ವರ ತನ್ನ ಮೊಬೈಲ್ ನಲ್ಲಿ ಮಾಡುತ್ತಿರುವುದೇನು ಗೊತ್ತಾ..?ಗೊತ್ತಾದ್ರೆ ಶಾಕ್ ಹಾಕ್ತೀರಾ…

    ವಿಶ್ವದಾದ್ಯಂತ ಪಬ್​​ಜಿ ಕ್ರೇಜ್​​ ಎಷ್ಟಿದೆ ಅನ್ನೋದನ್ನ ಮತ್ತೆ ಮತ್ತೆ ಹೇಳಬೇಕಿಲ್ಲ. ಊಟ, ನಿದ್ದೆ ಬಿಟ್ಟು ಪಬ್​​ಜಿ ಆಡೋರು ಇದ್ದಾರೆ. ಹಾಗೇ ಇಲ್ಲೊಬ್ಬ ವರ ತನ್ನ ಮದುವೆಯಲ್ಲಿ ಪಬ್​ಜಿ ಆಡ್ತಾ ಕುಳಿತಿರೋ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನ ಎಲ್ಲಿ ಚಿತ್ರೀಕರಿಸಲಾಗಿದೆ ಅನ್ನೋದು ಸ್ಪಷ್ಟವಾಗಿಲ್ಲ. ಮೊದಲಿಗೆ ಟಿಕ್​ಟಾಕ್​ನಲ್ಲಿ ಇದನ್ನು ಹಂಚಿಕೊಳ್ಳಲಾಗಿದ್ದು, ನಂತರ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ. ವರ ವಧುವಿನ ಪಕ್ಕ ಕುಳಿತಿದ್ದರೂ ಆತನ ಸಂಪೂರ್ಣ ಗಮನ ಗೇಮ್​​ ಆಡುವುದರ ಮೇಲಿದೆ. ಗಿಫ್ಟ್​ ಕೊಟ್ಟರೂ…

  • ಆರೋಗ್ಯ

    ಚಳ್ಳೆ ಹಣ್ಣನ್ನು ತಿಂದಿದೀರಾ, ಈ ಚಳ್ಳೆಹಣ್ಣಿನ ಔಷಧಿಯ ಗುಣಗಳು ಹಲವು ಜನರಿಗೆ ತಿಳಿದಿಲ್ಲ, ಈ ಮಾಹಿತಿ ನೋಡಿ.!

    ಈ ಹಣ್ಣನ್ನು ಸಾಮಾನ್ಯವಾಗಿ ಕೆಲವರು ತಿನ್ನುತ್ತಿರುತ್ತಾರೆ, ಗ್ರಾಮೀಣ ಪ್ರದೇಶದ ಜನರಿಗೆ ಹೆಚ್ಚು ಚಿರಪರಿಚಿತ, ಸಾಮಾನ್ಯವಾಗಿ ಈ ಹಣ್ಣು  ಇದರ ಹೆಸರು ಚಳ್ಳೆಹಣ್ಣು ಎಂಬುದಾಗಿ ಇದನ್ನು ಅಡುಗೆಗೆ ಹಾಗೂ ಮತ್ತಿತರ ಕೆಲಸಕ್ಕೆ ಹಾಗೂ ಮನೆಮದ್ದುಗಳಿಗೆ ಔಷಧಿಯಾಗಿ ಕೂಡ ಬಳಸಲಾಗುತ್ತದೆ. ಅದ್ರಲ್ಲೂ ಇದರ ಉಪ್ಪಿನ ಕಾಯಿ ಸೇವನೆ ಅತಿ ಹೆಚ್ಚು ಬಳಕೆಯಲ್ಲಿದೆ ಕೆಲವು ಕಡೆ. ಈ ಚಳ್ಳೆಹಣ್ಣು ಯಾವೆಲ್ಲ ಉಪಯೋಗಕಾರಿ ಅಂಶಗಳನ್ನು ಹೊಂದಿದೆ ಹಾಗೂ ಇದರಿಂದ ದೇಹಕ್ಕೆ ಯಾವೆಲ್ಲ ಆರೋಗ್ಯಕಾರಿ ಅಂಶಗಳನ್ನು ಪಡೆಯಬಹುದಾಗಿದೆ,ಹಾಗೂ ಇದರ ಬಳಕೆಯನ್ನು ಹೇಗೆ ಮಾಡಬಹುದು ಯಾವ…