ದೇವರು-ಧರ್ಮ

ರಾಮಕೋಟಿ ಯಾಕೆ ಬರೆಯಬೇಕು? ಯಾವ ಪೆನ್‌ನಲ್ಲಿ ಬರೆದರೆ ಒಳ್ಳೆಯದಾಗುತ್ತದೆ.!ತಿಳಿಯಲು ಓದಿ ಮರೆಯದೇ ಶೇರ್ ಮಾಡಿ…

1764

ರಾಮನ ಹೆಸರನ್ನು ಅಕ್ಷರ ರೂಪದಲ್ಲಿ ಜಪಿಸುವುದೇ ರಾಮಕೋಟಿ.!

ಮನಸಾ ವಾಚಾ ಕರ್ಮೇಣ ರಾಮನ ಸ್ತುತಿ ಮಾಡುತ್ತಾ ಆ ಮಧುರನಾಮವನ್ನು ಕೋಟಿ ಸಲ ಬರೆಯುವುದೇ ರಾಮಕೋಟಿ.

ಶ್ರೀಮನ್ನಾರಾಯಣನ ಎಲ್ಲ ರೂಪಗಳಲ್ಲಿ ರಾಮಾವತಾರಕ್ಕೆ ಬಹಳ ಪ್ರಾಮುಖ್ಯತೆ ಪಡೆದಿದ್ದು, ರಾಮನನ್ನು ಪ್ರತಿಯೊಬ್ಬರೂ ನಮ್ಮ ದೇವರು ಅಂದುಕೊಳ್ಳುವಷ್ಟು ಹತ್ತಿರವಾದ.

ಅತೀತ ಶಕ್ತಿಗಳಿಗಿಂತ ರಾಮನು ತೋರಿದ ಆದರ್ಶವಂತ ಜೀವನವೇ ಬಹಳ ಮಂದಿಗೆ ರಾಮ ಎಂದರೆ ಒಂದು ವಿಶೇಷವಾದ ಇಷ್ಟ, ಭಕ್ತಿಯನ್ನು ಉಂಟುಮಾಡಿತು!

ರಾಮ ಕೋಟೆಯನ್ನು ಬರೆಯುವಾಗ ಕೆಲವು ಮುಖ್ಯ ನಿಯಮಗಳನ್ನು ಪಾಲಿಸಬೇಕು…

ರಾಮ ಕೋಟಿಯನ್ನು ಬರೆಯಬೇಕು ಅಂದಾಗ ಮೊದಲಿಗೆ ಒಂದು ಒಳ್ಳೆಯ ಬಿಳಿಯ ಪುಸ್ತಕವನ್ನು ಮತ್ತು ಹಸಿರು ಬಣ್ಣದ ಲೇಖನಿಯನ್ನು ಸಿದ್ಧ ಮಾಡಿಕೊಳ್ಳಬೇಕು.

ಒಂದು ಒಳ್ಳೆಯ ಶುಭ ಮುಹೂರ್ತದಲ್ಲಿ ಇದಕ್ಕೆ ಅರಿಶಿನ ಕುಂಕುಮವನ್ನು ಹಚ್ಚಿ ದೇವರ ಸನ್ನಿಧಿಯಲ್ಲಿ ಹೂವುಗಳಿಂದ ಶ್ರೀರಾಮ ಅಷ್ಟೋತ್ತರ ಶತನಾಮಾವಳಿಯಿಂದ ಪೂಜಿಸಿದ ನಂತರ ಕಣ್ಣಿಗೆ ಅದ್ದಿಕೊಂಡು ರಾಮಕೋಟಿಯನ್ನು ಬರೆಯುವುದನ್ನು ಪ್ರಾರಂಭಿಸಿ.

ರಾಮ ಕೋಟಿಯನ್ನು ಬರೆಯುವಾಗ ಇತರೆ ಆಲೋಚನೆಯನ್ನು ಇಟ್ಟುಕೊಳ್ಳದೆ ಮನಸ್ಸ, ವಾಚಾ ರಾಮನನ್ನೇ ಸ್ಮರಿಸುತ್ತಾ ನಿರ್ಮಲ ಮನಸ್ಸಿನಲ್ಲಿ ಬರೆಯಬೇಕು. ರಾಮ ಕೋಟಿಯನ್ನು ಬರೆಯುವ ಪುಸ್ತಕದಲ್ಲಿ ರಾಮನಾಮ ಮಾತ್ರ ಇರಬೇಕು.

ಶ್ಲೋಕ

ಚರಿತಂ ರಘುನಾಥಸ್ಯ ಶತಕೋಟಿ ಪ್ರವಿಸ್ತರಂ|
ಏಕೈಕಮಕ್ಷರಂ ಪುಂಸಾಂ ಮಹಾಪಾತಕ ನಾಶನಮ್!!

ತಾತ್ವರ್ಯ:

ರಘುವಂಶ ಪ್ರಭುವಾದ ಶ್ರೀರಾಮಚಂದ್ರನ ಚರಿತೆ ನೂರು ಕೋಟಿ ಶ್ಲೋಕಗಳಲ್ಲಿದೆ. ಆ ಶ್ಲೋಕಗಳಲ್ಲಿರುವ ಯಾವುದೇ ಒಂದಕ್ಷರವಾದರೂ ನಮ್ಮ ಮಹಾಪಾಪಗಳನ್ನು ಸಹ ಪರಿಹರಿಸುತ್ತದೆ.

ಶ್ರೀ ರಾಮ ನವಮಿಯ ಈ ಶುಭದಿನದಂದು ಮರೆಯದೇ ಈ ಶ್ಲೋಕವನ್ನು ಪಠಿಸಿ…

ರಾಮಾಯ ರಾಮ ಭದ್ರಾಯ, ರಾಮಚಂದ್ರಾಯ ವೇದಸೆ!

ರಘುನಾಥಾಯ ಪತಾಯ ಸೀತಾಯ ನಮಃ!!

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ