ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
18 ವರ್ಷಆಗಿರುವಯುವಕ-ಯುವತಿಯರೇ… ನೀವು ಇನ್ನೂ ಮತದಾನದ ಹಕ್ಕು ಪಡೆದುಕೊಂಡಿಲ್ಲವೇ?,ಪಡೆದಿದ್ದರೂ ಏನಾದ್ರೂ ತಿದ್ದುಪಡಿಮಾಡಬೇಕೆ?ಚಿಂತೆಮಾಡ್ಬೇಡಿ.ಅಗತ್ಯ ದಾಖಲೆಗಳೊಂದಿಗೆ ರೆಡಿಯಾಗಿರಿ.ನಿಮ್ಮಮನೆಗೆ ಬಂದು ಮತದಾರರ ಪಟ್ಟಿಗೆ ಹೆಸರು ಬರೆದುಕೊಂಡುಹೋಗುತ್ತಾರೆ.ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಇದು ಉತ್ತಮ ಅವಕಾಶವಾಗಿದೆ.ಮಿಸ್ಮಾಡ್ಕೋಬೇಡಿ.ಹಾಗಿದ್ರೆ ಇದಕ್ಕೆ ದಾಖಲಾತಿಗಳೇನುಬೇಕು ಅಂತೀರಾ?ಮುಂದೆ ಓದಿ ಎಲ್ಲಾ ಮಾಹಿತಿ ಇದೆ.
ಬೆಂಗಳೂರು, ಮತದಾರರ ಪಟ್ಟಿಯ ಪರಿಶೀಲನೆ ದೃಢೀಕರಣ, ಸೇರ್ಪಡೆ, ತೆಗೆದುಹಾಕುವಿಕೆ ಮತ್ತು ತಿದ್ದುಪಡಿಗೆ ಚುನಾವಣಾ ಆಯೋಗ ಮುಂದಾಗಿದೆ. ಮತದಾರರ ಪಟ್ಟಿಗೆ ಹೆಸರು ಸೇರಿಸಲು ಸೆಪ್ಟೆಂಬರ್ 1 ರಿಂದ 30ರ ತನಕ ಅವಕಾಶ ನೀಡಲಾಗಿದೆ. ಈ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂದು ಚುನಾವಣಾ ಆಯೋಗ ಜನರಿಗೆ ಮನವಿ ಮಾಡಿದೆ. ಸೆಪ್ಟೆಂಬರ್ 1ರಂದು ಈ ಅಭಿಯಾನಕ್ಕೆ ಚಾಲನೆ ದೊರೆಯಲಿದ್ದು ಸೆಪ್ಟೆಂಬರ್ 30ರ ತನಕ ಇದು ನಡೆಯಲಿದೆ. ಬೂತ್ ಲೆವಲ್ ಅಫೀಸರ್ (ಬಿ.ಎಲ್.ಓ) ಮನೆ-ಮನೆಗೆ ಭೇಟಿ ಮಾಡಲಿದ್ದು, ಮತದಾರರು ಸಂಬಂಧಿಸಿದ ದಾಖಲೆಗಳೊಂದಿಗೆ ಸಿದ್ಧರಾಗಿರಬೇಕು ಎಂದು ಚುನಾವಣಾ ಆಯೋಗ ಮನವಿ ಮಾಡಿಕೊಂಡಿದೆ.
ಸಿದ್ಧವಿರಬೇಕಾದ ದಾಖಲಾತಿಗಳು: ಭಾರತೀಯ ಪಾಸ್ಪೋರ್ಟ್, ಆಧಾರ್ ಕಾರ್ಡ್, ಸರ್ಕಾರಿ/ ಅರೆ ಸರ್ಕಾರಿ ನೌಕರರು ಹೊಂದಿರುವ ಗುರುತಿನ ಚೀಟಿ, ರೈತರ ಗುರುತಿನ ಚೀಟಿ, ಚಾಲನಾ ಪರವಾನಿಗೆ, ಪಡಿತರ ಚೀಟಿ, ಬ್ಯಾಂಕ್ ಪಾಸ್ ಪುಸ್ತಕ, ಚುನಾವಣಾ ಆಯೋಗ ಅನುಮೋದಿಸಿದ ಯಾವುದಾದರೂ ಇತರ ದಾಖಲೆ.
ಯಾವುದಕ್ಕೆ ಯಾವ-ಯಾವ ಅರ್ಜಿ: ಹೆಸರು/ತಂದೆಯ ಹೆಸರು/ಲಿಂಗ/ಹುಟ್ಟಿದ ದಿನಾಂಕ/ವಿಳಾಸ/ಫೋಟೋ ತಿದ್ದುಪಡಿಗಾಗಿ ನಮೂನೆ 8 ಅರ್ಜಿ ತುಂಬಬೇಕು. ನಮೂನೆ 7ರಲ್ಲಿ ಸ್ಥಳ ಬದಲಾವಣೆ/ಮರಣ. ನಮೂನೆ 6ರಲ್ಲಿ ಸೇರ್ಪಡೆಗಾಗಿ ಹುಟ್ಟಿದ ದಿನಾಂಕ/ವಯಸ್ಸಿನ ದೃಢೀಕರಣ/ವಿಳಾಸ ದೃಢೀಕರಣ/2 ಪಾಸ್ ಪೋರ್ಟ್ ಅಳತೆಯ ಪೋಟೋಗಳು ಅಗತ್ಯವಾಗಿದೆ.
ಹಾಗಿದ್ದರೇ ಇನ್ನೇಕೆ ತಡ ಸೆ.1ರಿಂದ ಸೆ30ರೊಳಿಗೆ ಬಿ. ಎಲ್. ಓಗಳು ನಿಮ್ಮ ಮನೆಗೆ ಬರಹುದು. ಹಾಗಾಗಿ ಮೇಲೆ ತಿಳಿಸಲಾದ ದಾಖಲಾತಿಗಳನ್ನು ರೆಡಿಮಾಡಿ ಇಟ್ಟುಕೊಳ್ಳಿ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಮ್ಮ ಜಮೀನುಗಳಿಗೆ ಸಂಬಂದಪಟ್ಟಪಹಣಿ (RTC), ಮತ್ತು ಮಿಟೆಶನ್ ಗಳನ್ನೂ ನಾವು ನಿಮ್ಮ ಮೊಬೈಲ್ನಲ್ಲಿ ಚೆಕ್ ಮಾಡಿಕೊಳ್ಳಬಹುದು.
ಆತ್ಮಹತ್ಯೆ ಮಾಡಿಕೊಳ್ಳಲೆಂದು ನದಿಗೆ ಧುಮುಕಿದ ವ್ಯಕ್ತಿಯ ಹಣೆಬರಹದಲ್ಲಿ ದೈವ ಬೇರೆಯದ್ದೇ ಯೋಜನೆ ರೂಪಿಸಿದ್ದ. ಸಾಯಲೆಂದು ನದಿಗೆ ಧುಮುಕಿದ್ದ ಕೆಲವೇ ಕ್ಷಣಗಳಲ್ಲಿ ಆತನ ಮನಸ್ಸು ಬದಲಾಗಿತ್ತು. ನೀರಿಗೆ ಬಿದ್ದ ತಕ್ಷಣ ತಾನು ಬದುಕಬೇಕು ಎಂದೆನಿಸಿತ್ತಂತೆ.ಹೌದು, ಇಂತದ್ದೊಂದು ಘಟನೆ ಗುವಾಹಟಿಯಿಂದ ವರದಿಯಾಗಿದ್ದು, ರಭಸದಿಂದ ಹರಿಯುತ್ತಿದ್ದ ಬ್ರಹ್ಮಪುತ್ರ ನದಿಗೆ ಲಕ್ಷ್ಮಣ್ ಸ್ವರ್ಗೀಯರಿ ಎಂಬಾತ ಧುಮುಕಿ ಆತ್ಮಹತ್ಯೆಗೆ ಮುಂದಾಗಿದ್ದ. ಆದರೆ ಆತನ ಮನಸ್ಸು ಬದಲಾಯಿತು. ನದಿಯ ಪ್ರವಾಹಕ್ಕೆ ಸಿಲುಕಿದ ಈತ 10 ಗಂಟೆಗಳಲ್ಲಿ 100 ಕಿ.ಮೀ. ದೂರಕ್ಕೆ ಸುರಕ್ಷಿತವಾಗಿ ತಲುಪಿದ್ದಾನೆ. ಬಕ್ಸಾ ಜಿಲ್ಲೆಯ…
ಸಂಚಾರಿ ಪೊಲೀಸರ ನೆರವಿನಿಂದ ಅವಳಿ ಮಕ್ಕಳನ್ನ ಅಂಬ್ಯುಲೆನ್ಸ್ ಸಿಬ್ಬಂದಿ ಹಾವೇರಿಯಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಿ ಜೀವ ಉಳಿಸಿದ್ದಾರೆ. ಹಾವೇರಿ ನಗರದ ನಿವಾಸಿ ಲಕ್ಷ್ಮಿ ಜಿಲ್ಲಾಸ್ಪತ್ರೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಆದರೆ ಮಕ್ಕಳಲ್ಲಿ ತೀವ್ರತರದ ಸಮಸ್ಯೆ ಕಾಣಿಸಿಕೊಂಡಿತ್ತು. ಜಿಲ್ಲಾಸ್ಪತ್ರೆಯ ವೈದ್ಯರ ಸಲಹೆಯಂತೆ ಆದಷ್ಟು ಬೇಗ ನವಜಾತ ಶಿಶುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಅರ್ಥಮಾಡಿಕೊಂಡ ಅಂಬ್ಯುಲೆನ್ಸ್ ಸಿಬ್ಬಂದಿ ಕೇವಲ 42 ನಿಮಿಷಗಳಲ್ಲಿ 80 ಕಿಮೀ ಕ್ರಮಿಸಿ ಮಕ್ಕಳನ್ನು ಕಿಮ್ಸ್ ಗೆ ದಾಖಲಿಸಿದ್ದಾರೆ….
ಕೋಲಾರದ ನಗರದಲ್ಲಿ ವಿದೇಶಿ ಎಚ್ಎ- ತಳಿಯ ಹಸುವೊಂದು ದಿಢೀರನೇ ಮೇವು ತಿನ್ನುವುದು ನಿಲ್ಲಿಸಿ ಹಾಲು ಇಳುವರಿಯನ್ನು ಕಡಿತಗೊಳಿಸಿತ್ತು. ಮೇವು ತಿನ್ನುವುದು ನಿಲ್ಲಿಸಿದ್ದರಿಂದ ಹಸು ಬಡಕಲಾಗುತ್ತಾ ಹೋಯಿತು. ಹೊತ್ತಿಗೆ ಸುಮಾರು 1೦ ಲೀಟರ್ ಹಾಲು ನೀಡಿದ್ದ ಹಸು ಕೇವ ಮೂರು ನಾಲ್ಕು ಲೀಟರ್ ಹಾಲು ನೀಡಲು ಶುರುವಿಟ್ಟುಕೊಂಡಿತ್ತು. ಹಸು ಸಾಕುತ್ತಿದ್ದ ಮನೆಯವರು ಹಸುವಿಗೆ ಸಾಕಷ್ಟು ಚಿಕಿತ್ಸೆ ಮಾಡಿಸಿದರೂ ಪ್ರಯೋಜನವಾಗಿರಲಿಲ್ಲ. ಇದೇ ಪರಿಸ್ಥಿತಿ ಕಳೆದರೆ ಹಸು ಪ್ರಾಣ ಕಳೆದುಕೊಳ್ಳುವ ಆತಂಕ ಎದುರಾಗಿತ್ತು. ಇಂತ ಆತಂಕದ ಪರಿಸ್ಥಿತಿಯಲ್ಲಿ ಹಸುವಿನ ನೆರವಿಗೆ ಬಂದವರು…
ಮಾಲೂರಿನ ‘ಯಶವಂತಪುರ’ ಗ್ರಾಮ ರಾಜ್ಯದ ಮೊದಲ ಡಿಜಿಟಲ್ ವಿಲೇಜ್’ ಆಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹಯೋಗದಲ್ಲಿ ರೂಪಿಸಿರುವ ರಾಜ್ಯದ ಮೊದಲ ಡಿಜಿಟಲ್ ವಿಲೇಜ್’ ಇದನ್ನು ಮಾಲೂರಿನ ಶಾಸಕ ಎಸ್.ಮಂಜುನಾಥ್ ಗೌಡ ಉದ್ಘಾಟನೆ ಮಾಡುವ ಮೂಲಕ ಲೋಕಾರ್ಪಣೆ ಮಾಡಿದರು.
ಮುಂಬರುವ 2019ರ ಲೋಕಸಭೆ ಚುನಾವಣೆಗೆ ಬಿಜೆಪಿ ತಯಾರಿ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದ ಸಂಸದರ ಸಭೆ ನಡೆಸಿರುವ ಬೆನ್ನಲ್ಲೆ ಕಾಂಗ್ರೆಸ್ ಪಕ್ಷ ಲೋಕಸಭೆ ಚುನಾವಣೆಗೆ ಸೋನಿಯಾ ಪುತ್ರಿ ಪ್ರಿಯಾಂಕಾ ಗಾಂಧಿಯನ್ನು ಕರ್ನಾಟಕದಿಂದ ಕಣಕ್ಕಿಳಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.