ಸುದ್ದಿ

ಬರೋಬ್ಬರಿ 40 ಕೋಟಿ ಆಫರ್ ರಿಜೆಕ್ಟ್ ಮಾಡಿದ ವಿಜಯ್ ದೇವರಕೊಂಡ…!

47

ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಅಭಿನಯದ ‘ಡಿಯರ್ ಕಾಮ್ರೆಡ್’ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ರಿಲೀಸ್ ಆಗಿದೆ. ಈ ಮಧ್ಯೆ ಹಿಂದಿ ಭಾಷೆಯಲ್ಲಿ ರಿಮೇಕ್ ಮಾಡಲು ವಿಜಯ್ ದೇವರಕೊಂಡ ಅವರಿಗೆ ಆಫರ್ ನೀಡಲಾಗಿತ್ತು. ಆದರೆ ವಿಜಯ್ ತಮಗೆ ಬಂದಿದ್ದ ಆಫರ್ ರನ್ನು ನಿರಾಕರಿಸಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

ಬಾಲಿವುಡ್ ನಟ, ನಿರ್ಮಾಪಕ ಕರಣ್ ಜೋಹರ್ ‘ಡಿಯರ್ ಕಾಮ್ರೆಡ್’ ಸಿನಿಮಾವನ್ನು ಹಿಂದಿ ಭಾಷೆಗೆ ರಿಮೇಕ್ ಮಾಡುತ್ತಿದ್ದಾರೆ. ಹೀಗಾಗಿ ಹಿಂದಿಯಲ್ಲಿ ದೇವರಕೊಂಡ ಅವರನ್ನ ಪರಿಚಯಿಸಲು ಇಷ್ಟಪಟ್ಟಿದ್ದರು. ಅದರಂತೆಯೇ ರೀಮೇಕ್ ಸಿನಿಮಾಗಾಗಿ ಸ್ವತಃ ದೇವರಕೊಂಡ ಅವರನ್ನೇ ಕರೆತರುವ ಪ್ಲ್ಯಾನ್ ಮಾಡಿದ್ದರು.

ಅದಕ್ಕಾಗಿ ಕರಣ್ ಜೋಹರ್ ಅವರು ವಿಜಯ್‍ಗೆ ಬರೋಬ್ಬರಿ 40 ಕೋಟಿ ರೂ. ಆಫರ್ ನೀಡಿದ್ದರು. ಆದರೆ ನಟ ವಿಜಯ್ ದೇವರಕೊಂಡ 40 ಕೋಟಿ ರೂ. ಆಫರ್ ರನ್ನು ಬೇಡ ಎಂದು ನಿರಾಕರಿಸಿದ್ದಾರೆ. ಈ ಹಿಂದೆ ಕೂಡ ‘ಅರ್ಜುನ್ ರೆಡ್ಡಿ’ ಸಿನಿಮಾವನ್ನು ಕರಣ್ ಜೋಹರ್ ಹಿಂದಿಗೆ ರೀಮೇಕ್ ಮಾಡಲು ಪ್ರಯತ್ನ ಮಾಡಿದ್ದರು. ಆಗಲೂ ವಿಜಯ್‍ಗೆ ಮುಂಬೈನಲ್ಲಿ ದುಬಾರಿ ಅಪಾರ್ಟ್ ಮೆಂಟ್ ಆಫರ್ ನೀಡಲಾಗಿತ್ತು. ಆದರೆ ಅಂದು ಕೂಡ ಕರಣ್ ಅವರ ಆಫರ್ ರನ್ನು ನಿರಾಕರಿಸಿದ್ದರು.

ನಟ ವಿಜಯ್ ಸಂದರ್ಶನವೊಂದರಲ್ಲಿ “ಒಂದೇ ಸಿನಿಮಾವನ್ನು ಮತ್ತೆ ಮಾಡುವುದು ಕಷ್ಟದ ಕೆಲಸ. ಏಕಕಾಲದಲ್ಲಿ ಎರಡು ಭಾಷೆಯಲ್ಲಿ ಅಭಿನಯಸುತ್ತೇನೆ. ಆದರೆ ತೆಲುಗಿನಲ್ಲಿ ಮಾಡಿದ ಸಿನಿಮಾವನ್ನೇ ಹಿಂದಿಯಲ್ಲಿ ನಾನೇ ಮಾಡುವುದು ನನಗೆ ಸರಿ ಎನ್ನಿಸುತ್ತಿಲ್ಲ” ಎಂದು ತಿಳಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ