ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಳಗ್ಗೆ ಸಮಯದ ಅಭಾವವಿರುವುದರಿಂದ ರಾತ್ರಿಯೇ ಚಪಾತಿ ಹಿಟ್ಟು ಕಲಸಿಟ್ಟುಕೊಳ್ಳುವುದು ಈಗ ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿದೆ. ಕೆಲವರು ಚಪಾತಿ ಹಿಟ್ಟು ಕಲಸಿದರೆ, ಇನ್ನು ಕೆಲವರು ಅಕ್ಕಿ, ಗೋಧಿ, ಜೋಳದ ಹಿಟ್ಟನ್ನು ಕಲಸಿಡುತ್ತಾರೆ. ಆದರೆ ಹೀಗೆ ಕಲಸಿಟ್ಟ ಹಿಟ್ಟನ್ನು ಉಪಯೋಗಿಸುವುದರಿಂದ ನಮ್ಮ ಆರೋಗ್ಯದ ಮೇಲೆ ಕೆಲವು ಅಡ್ಡಪರಿಣಾಮಗಳು ಬೀರುತ್ತವೆ, ಅದೇನೆಂದು ನೀವೇ ಓದಿ ನೋಡಿ… ಹಿಟ್ಟಿನಲ್ಲಿ ಬ್ಯಾಕ್ಟೀರಿಯಾಗಳು ಮೃದುವಾದ, ಹಸಿ ಹಿಟ್ಟಿನಲ್ಲಿ ಹುದುಗುವಿಕೆ ಪ್ರಕ್ರಿಯೆಯು ಸಾಮಾನ್ಯ ಹಿಟ್ಟಿಗಿಂತ ಬೇಗನೆ ಪ್ರಾರಂಭವಾಗುತ್ತದೆ. ಇದರಿಂದಾಗಿ ಹಿಟ್ಟಿನಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯಲು ಪ್ರಾರಂಭಿಸುತ್ತವೆ.

ಈ ಹಿಟ್ಟು ಮಾನವ ದೇಹಕ್ಕೆ ವಿಷಕಾರಿಯಾಗಿದ್ದು, ನೀವು ಇದನ್ನು ಪ್ರತಿದಿನ ಬಳಸಿದರೆ ಅದು ನಿಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಮಲಬದ್ಧತೆ, ಹೊಟ್ಟೆನೋವು ಗೋಧಿ ಗಟ್ಟಿ ಧಾನ್ಯವಾಗಿದ್ದು, ಇದರ ಹಿಟ್ಟಿನಿಂದ ಮಾಡಿದ ಪದಾರ್ಥಗಳನ್ನು ಸೇವಿಸಿದಾಗ, ಅದು ಹೊಟ್ಟೆಯಲ್ಲಿ ನಿಧಾನವಾಗಿ ಜೀರ್ಣಿಸಿಕೊಳ್ಳಲು ಶುರು ಮಾಡುತ್ತದೆ. ಮಲಬದ್ಧತೆ ಇರುವವರಿಗಂತೂ ಇದನ್ನು ಜೀರ್ಣಿಸಿಕೊಳ್ಳವುದು ಇನ್ನು ಕಷ್ಟವಾಗುತ್ತದೆ. ಉಳಿಸಿಕೊಂಡ ಹಸಿ ಹಿಟ್ಟಿನಿಂದ ರೊಟ್ಟಿಗಳನ್ನು ಮಾಡಿಕೊಂಡು ತಿನ್ನುವುದರಿಂದ ಹೊಟ್ಟೆ ನೋವು, ಮಲಬದ್ಧತೆ ಮತ್ತು ಹೊಟ್ಟೆಯ ತೊಂದರೆ ಉಂಟಾಗುತ್ತದೆ.

ರೋಗ ನಿರೋಧಕ ಶಕ್ತಿ ದುರ್ಬಲವಾಗುತ್ತದೆ ವಿಜ್ಞಾನಿಗಳ ಪ್ರಕಾರ, ಉಳಿದ ಹಸಿ ಹಿಟ್ಟಿನಲ್ಲಿ ರೊಟ್ಟಿಗಳನ್ನು ಮಾಡಬಾರದು. ಅವರ ಪ್ರಕಾರ, ಹಿಟ್ಟನ್ನು ಕಲಸಿದ ನಂತರ, ಆದಷ್ಟು ಬೇಗ ಬಳಸಬೇಕು. ಏಕೆಂದರೆ ಒಂದು ಗಂಟೆಯ ನಂತರ ಅದರಲ್ಲಿ ರಾಸಾಯನಿಕ ಬದಲಾವಣೆಗಳು ಪ್ರಾರಂಭವಾಗುತ್ತವೆ. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಹಿಟ್ಟಿನಲ್ಲಿ ಚಪಾತಿಗಳು ಅಥವಾ ಪರೋಟಗಳನ್ನು ಹಲವಾರು ದಿನಗಳವರೆಗೆ ನಿರಂತರವಾಗಿ ಸೇವಿಸಿದರೆ, ವ್ಯಕ್ತಿಯು ಅನಾರೋಗ್ಯಕ್ಕೆ ಒಳಗಾಗುವುದು ಸಹಜ. ನೀವು ನಿಯಮಿತವಾಗಿ ಹಳೆಯ ಹಿಟ್ಟನ್ನು ಬಳಸಿದರೆ ಜೀರ್ಣಾಂಗ ವ್ಯವಸ್ಥೆಯಲ್ಲಿ ಅಸಮತೋಲನ ಉಂಟಾಗುತ್ತದೆ. ರೋಗ ನಿರೋಧಕ ಶಕ್ತಿ ಕೂಡ ದುರ್ಬಲವಾಗುತ್ತಾ ಹೋಗುತ್ತದೆ.

ಹಿಟ್ಟನ್ನು ಹೇಗೆ ಬಳಸಬೇಕು? ಕೆಲವರಿಗೆ ಮಾರುಕಟ್ಟೆಗಳು ದೂರವಾಗುವುದರಿಂದ ಹಿಟ್ಟನ್ನು ಸಂಗ್ರಹಿಸುವುದು ಸಹಜ. ಹೀಗೆ ಹಿಟ್ಟನ್ನು ಸಂಗ್ರಹ ಮಾಡುವಾಗ ಜಾಗರೂಕರಾಗಿ ಉಪಯೋಗಿಸಬೇಕು. ಈ ಹಿಟ್ಟನ್ನು ಸುಮಾರು 6 ತಿಂಗಳ ನಂತರ ಬಳಸಬಾರದು. ಸ್ವಚ್ಛವಾಗಿರುವ ಡಬ್ಬಿಯಲ್ಲಿ ಎತ್ತಿಡಬೇಕು. ನೀರಿನ ಕೈಯ್ಯಲ್ಲಿ ಬಳಸದೆ, ಒಣ ಕೈ ಉಪಯೋಗಿಸಿ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕತ್ತೆಹಾಲು, ದಮ್ಮು, ಕೆಮ್ಮು, ವಾಯು, ಕಫ, ಶೀತ, ನೆಗಡಿ ಎಲ್ಲಾ ಮಾಯ ಕತ್ತೆಹಾಲು…., ಮಕ್ಳು ಮರಿ, ದೊಡ್ಡೋರ್, ಚಿಕ್ಕೋರ್ ಎಲ್ಲರಿಗೂ ಕತ್ತೆಹಾಲು….!’ ಇದು ಯಾವುದೋ ನಾಟಕದ ಸಂಭಾಷಣೆಯಲ್ಲ, ಬದಲಾಗಿ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಈಚೆಗೆ ಈ ರೀತಿಯ ಧ್ವನಿಯೊಂದು ಕೇಳಿ ಬರುತ್ತಿತ್ತು.
ಇನ್ಮುಂದೆ ವಾಹನಗಳ ಮೇಲೆ ಜಾತಿ ಸೂಚಕ ನಮ್ಮದೇ ಶ್ರೇಷ್ಠ ಜಾತಿ ಎಂದು ಬಿಂಬಿಸುವ ಘೋಷ ವಾಕ್ಯಗಳಿದ್ದ 250 ವಾಹನಗಳ ಮಾಲೀಕರಿಗೆ ಪೊಲೀಸರು ದಂಡ ವಿಧಿಸಿದ್ದಾರೆ ಸುಲಲಿತ ಸಂಚಾರ ಮತ್ತು ಆಂದೋಲನದ ಭಾಗವಾಗಿ ಶುಕ್ರವಾರ ‘ಆಪರೇಷನ್ ಕ್ಲೀನ್ ‘ ಕಾರ್ಯಾಚರಣೆ ನಡೆಸಿರುವ ಪೊಲೀಸರು ಜನರಲ್ಲಿ ಭೀತಿ ಹುಟ್ಟಿಸುವಂತ ಘೋಷ ವಾಕ್ಯಗಳಿರುವ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿದರು. ವಾಹನಗಳಮೇಲೆ ‘ಗೌಡ್ರ ಗೂಳಿ’, ‘ಕುಂತರೆ ಕುರುಬ, ನಿಂತರೆ ಕಿರುಬ’, ‘ತಿಗಳರ ಹುಡ್ಗ’ ಇನ್ನೂ ಹಲವು ರೀತಿಯಜಾತಿ ಸೂಚಕ ಸ್ಟಿಟಕರ್ಗಳನ್ನು ಅಂಟಿಸಿಕೊಂಡಿರುವುದು ಸಾಮಾನ್ಯವಾಗಿ ಕಾಣುತ್ತದೆ…
ಕತ್ತಿನ ಭಾಗದಲ್ಲಿ ಪಾರ್ಶ್ವವಾಯು ಸಮಸ್ಯೆಯನ್ನು ಹೊಂದಿರುವ 65 ವರ್ಷದ ವೃದ್ಧರೊಬ್ಬರು ಕೈ ಚಲನೆಯನ್ನು ಊಹಿಸಿಕೊಳ್ಳುವ ಮೂಲಕ ಬರವಣಿಗೆಯನ್ನು ಸಾಧಿಸಿದ್ದಾರೆ. ಬ್ರೈನ್ ಕಂಪ್ಯೂಟರ್ ಇಂಟರ್ಫೇಸ್ (BCI) ಸಾಧನವನ್ನು ಬಳಸಿ ಹೆಚ್ಚು ಕಾರ್ಯಕ್ಷಮತೆಯುಳ್ಳ ಮೆದುಳು ಪಠ್ಯದ ಮೂಲಕ ಸಂವಹನವನ್ನು ಸಾಧಿಸಿದೆ. ಅಮೆರಿಕದ ನರವಿಜ್ಞಾನಿಗಳು ಈ ಸಾಧನೆಯನ್ನು ಸಂಶೋಧನಾ ಸಹಯೋಗಿ ಬ್ರೈನ್ಗೇಟ್ನೊಂದಿಗೆ ಸೇರಿ ಅಭಿವೃದ್ಧಿಪಡಿಸಿದ್ದಾರೆ. ಬ್ರೈನ್ ಕಂಪ್ಯೂಟರ್ ಇಂಟರ್ಫೇಸ್ ಎನ್ನುವ ಸಾಧನವು ಮೆದುಳಿನ ಮೇಲೆ ಚಿಪ್ಗಳಿಂದ ಕಾರ್ಯ ನಿರ್ವಹಿಸುತ್ತದೆ. ಅದು ಬಳಕೆದಾರರು ಯೋಚಿಸಿದಾಗ ಮೆದುಳಿನ ಚಟುವಟಿಕೆಯನ್ನು ಪತ್ತೆ ಮಾಡುತ್ತದೆ ಮತ್ತು ಅದನ್ನು…
ಈ ಕೆಳಕಂಡ ಸಮಸ್ಯೆಯಿಂದ ಬಳಲುತ್ತಿರುವವರು ಕರಬೂಜ ಸೇವನೆ ಮಾಡುವುದು ಉತ್ತಮ. ಕರಬೂಜ ಹಲವು ಸಮಸ್ಯೆಗಳಿಗೆ ನಿವಾರಣಾ ಗುಣ ಹೊಂದಿದೆ. ನಾವು ಇದರ ಸೇವನೆಯನ್ನು ಮಾಡುವುದು ಉತ್ತಮ ಇದರಿಂದ ದೇಹಕ್ಕೆ ಹಲವು ಲಾಭಗಳು ಲಭಿಸಲಿವೆ. ಕರಬೂಜದಲ್ಲಿ ಪಿಟೋಕೆಮಿಕಲ್ಸ್ ಎನ್ನುವ ಪದಾರ್ಥ ಇದೆ. ಈ ಪದಾರ್ಥಕ್ಕೆ ಉರಿಯೂತದ ವಿರುದ್ಧ ಹೊರಡುವ ಹೂನವಿದೆ. ಇದನ್ನ ತಿನ್ನುವುದರಿಂದ ಮೊಣಕೈ, ಮೊಣಕಾಲು ದೇಹದಲ್ಲಿರೋ ಸಂದಿಗಳಲ್ಲಿ ಬರುವ ನೋವು ಕಡಿಮೆಯಾಗುತ್ತದೆ. ಕರಬೂಜ ಹಣ್ಣು ತಿನ್ನುವುದರಿಂದ ಸಂದಿವಾತ ಬರುವುದನ್ನ ಸಹ ತಡೆಯಬಹುದು. ಕರಬೂಜದಲ್ಲಿ ರೋಗ ನೀರೋದಕ ಶಕ್ತಿ…
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಸ್ಯಾಂಡಲ್ವುಡ್ ಸ್ಟಾರ್ ಗಳ ಬಾಕ್ಸ್ ಆಫೀಸ್ ಯುದ್ಧ ಇದೀಗ ಕ್ಯಾನ್ಸಲ್ ಆಗಿದೆ.ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ಚಿತ್ರಗಳಾದ ‘ಮುನಿರತ್ನ ಕುರುಕ್ಷೇತ್ರ’ ಹಾಗೂ ‘ಪೈಲ್ವಾನ್’ ಒಂದೇ ದಿನ ಅಂದರೆ ಆಗಸ್ಟ್ 9ರಂದು ಬಿಡುಗಡೆಯಾಗಲು ಸಿದ್ಧವಾಗಿತ್ತು. ಆದರೆ ಈಗ ಆಗಸ್ಟ್ 9ರಂದು ಬಿಡುಗಡೆ ಆಗಬೇಕಿದ್ದ ಕುರುಕ್ಷೇತ್ರ ಚಿತ್ರ ಆಗಸ್ಟ್ 2ರಂದು ಬಿಡುಗಡೆ ಆಗಲಿದೆ. ಕಿಚ್ಚ ಸುದೀಪ್ ನಟನೆಯ ‘ಪೈಲ್ವಾನ್’ ಚಿತ್ರ ಕೂಡ ಆಗಸ್ಟ್ 9ರಂದು ರಿಲೀಸ್ ಆಗಲಿದೆ…
ಕೇಂದ್ರ ಸರ್ಕಾರ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ‘ಸುಕನ್ಯಾ ಸಮೃದ್ಧಿ’ ಹೆಸರಿನ ಉಳಿತಾಯ ಖಾತೆಯನ್ನು ಜಾರಿಗೆ ತಂದಿದೆ. ಹೆಣ್ಣು ಮಕ್ಕಳ ಆರ್ಥಿಕ ಸ್ವಾವಲಂಬನೆಗಾಗಿ ಒಂದು ಕುಟುಂಬ ಈ ಖಾತೆಯನ್ನು ತೆರೆಯಬಹುದಾಗಿದೆ. ಸುಕನ್ಯಾ ಸಮೃದ್ಧಿ ಖಾತೆಯನ್ನು ಅಂಚೆ ಕಚೇರಿಗಳಲ್ಲಿ ತೆರೆಯಬೇಕು.