ಆರೋಗ್ಯ

ಬೆಂಡೆಕಾಯಿಯ ಆರೋಗ್ಯಕರ ಪ್ರಯೋಜನಗಳು ಏನೆಂದು ನಿಮಗೆ ಗೊತ್ತೇ? ಓದಿರಿ

42

ಇಂಗ್ಲಿಷಿನಲ್ಲಿ ಲೇಡಿಸ್ ಫಿಂಗರ್ ಮತ್ತು ಸ್ಪ್ಯಾನಿಷ್ ಭಾಷೆಯಲ್ಲಿ ಗೂಂಬೊ ಎಂದು ಕರೆಯುತ್ತಾರೆ. ಬೆಂಡೆಯ ಉಗಮಸ್ಥಾನ ಆಫ್ರಿಕಾ ಖಂಡದ ಉಷ್ಣವಲಯವೆಂದು ಸಸ್ಯ ವಿಜ್ಞಾನಿಗಳ ಅಭಿಪ್ರಾಯ. 1216ಕ್ಕಿಂತ ಪೂರ್ವದಲ್ಲಿ ಯೂರೊಪಿಯನ್ನರು ಇದನ್ನು ಬೆಳೆಸುತ್ತಿದ್ದರು. ಅಲ್ಲಂದೀಚೆಗೆ ಇದನ್ನು ಉಷ್ಣವಲಯ ಮತ್ತು ಸಮಶೀತೋಷ್ಣವಲಯಗಳೆರಡರಲ್ಲೂ ಬೆಳೆಸಲಾಗುತ್ತದೆ. ಇದು ಸುಮಾರು 2 ಮೀ. ಎತ್ತರದವರೆಗೆ ಬೆಳೆಯುತ್ತದೆ. ಸಾಮಾನ್ಯವಾಗಿ ಕವಲೊಡೆಯದಿರದ ಉದ್ದನೆಯ ನೀಳವಾದ ಕಾಂಡ ಮತ್ತು ತಾಯಿ ಬೇರು ಸಮೂಹ ಇರುವುವು. ಕಾಂಡದ ಮೇಲೆ ಸಣ್ಣ ರೋಮಗಳಿವೆ. ಕಾಂಡದಲ್ಲಿ ಸರಳವಾದ ಮತ್ತು ಅಂಗೈಯಾಕೃತಿ ಹೋಲುವ ಅನೇಕ ಎಲೆಗಳಿವೆ. ಎಲೆಯ ಅಲಗು ಭಾಗದಲ್ಲಿ ರೆಟಿಕ್ಯುಲೇಟ್ ನಾಳವಿನ್ಯಾಸ ಇದೆ. ಬೆಂಡೆಕಾಯಿ ಎಂಬ ತರಕಾರಿಯನ್ನು ಹಲವು ರೀತಿಯ ಜೀವಸತ್ವಗಳ ಆಗಾರ ಎನ್ನಬಹುದು. ಇದರಿಂದ ತಯಾರಿಸುವ ಅಡುಗೆ ಸಹ ಬಹಳ ರುಚಿಯಾಗಿರುತ್ತದೆ. ಇನ್ನು ಕೆಲವರಿಗೆ ಬೆಂಡೆ ಎಂದರೇನೇ ಅಷ್ಟಕಷ್ಟೆ. ಆದರೆ ಈ ತರಕಾರಿಯಿಂದ ಸಿಗುವ ಪ್ರಯೋಜನಗಳು ಮಾತ್ರ ಅಷ್ಟಿಷ್ಟಲ್ಲ. ಇದರಲ್ಲಿ ಅಡಗಿರುವ ಪೋಷಕಾಂಶಗಳು ಹಲವು  ರೋಗಗಳಿಗೆ ಮನೆಮದ್ದು. ಬೆಂಡೆಯು ಮಾಲ್ವೇಸೀ ಕುಟುಂಬಕ್ಕೆ ಸೇರಿದ ದ್ವಿದಳ ಸಸ್ಯ. ಇದರ ವೈಜ್ಞಾನಿಕ ಹೆಸರು ಹೈಬಿಸ್ಕಸ್ ಎಸ್ಕ್ಯುಲೆಂಟಸ್ ಅಥವಾ ಅಬಲ್‍ಮಾಸ್ಕಸ್ ಎಸ್ಕ್ಯುಲೆಂಟಸ್. ಇದನ್ನು ಹಿಂದಿಯಲ್ಲಿ ಬಿಂಡಿ.

ಬೆಂಡೆಕಾಯಿಯು ತೂಕ ಇಳಿಸಲು ನೆರವಾಗುವುದು

ಬೆಂಡೆಕಾಯಿಯಲ್ಲಿ ಇರುವ ತುಂಬಾ ಕಡಿಮೆ ಕ್ಯಾಲರಿ (30ಕೆಸಿಎಎಲ್/100ಗ್ರಾಂ) ತೂಕ ಇಳಿಸಲು ಒಂದು ಅತ್ಯುತ್ತಮ ಆಹಾರ. ಇದು ತುಂಬಾ ಕಡಿಮೆ ಕ್ಯಾಲರಿ ನೀಡುವುದು. ಅಷ್ಟೇ ಅಲ್ಲದೇ ಬೆಂಡೆಕಾಯಿಯಲ್ಲಿ ಉನ್ನತ ಮಟ್ಟದ ನಾರಿನಾಂಶವಿದ್ದು, ಇದು ಹೊಟ್ಟೆಯು ದೀರ್ಘಕಾಲ ತುಂಬಿರುವಂತೆ ಮಾಡುವುದು.

ಹೃದಯ ಕಾಯಿಲೆಗೆ ಒಳ್ಳೆಯದು

ಬೆಂಡೆಕಾಯಿಯಲ್ಲಿ ಹೀರಿಕೊಳ್ಳುವ ನಾರಿನಾಂಶ ಪೆಕ್ಟಿನ್ ಇದೆ. ಪೆಕ್ಟಿನ್ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುವುದು ಮತ್ತು ಅಪಧಮನಿಕಾಠಿಣ್ಯ ತಡೆಯುವುದು. ಜಮೆಯಾಗಿರುವಂತಹ ಕೊಲೆಸ್ಟ್ರಾಲ್ ಮತ್ತು ಹೆಪ್ಪುಗಟ್ಟುವಿಕೆಯನ್ನು ಇದು ತಡೆಯುವುದು.

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುವುದು

ಬೆಂಡೆಕಾಯಿಯಲ್ಲಿ ಇರುವಂತಹ ನಾರಿನಾಂಶವು ಇದಕ್ಕೆ ಪ್ರಮುಖ ಕಾರಣವಾಗಿದೆ. ಯುಜೆನಾಲ್ ಎನ್ನುವಂತಹ ಒಂದು ರೀತಿಯ ನಾರಿನಾಂಶವು ಜೀರ್ಣಕ್ರಿಯೆ ನಿಧಾನಗೊಳಿಸುವುದು ಮತ್ತು ರಕ್ತನಾಳದಲ್ಲಿ ಇರುವಂತಹ ಸಕ್ಕರೆ ಹೀರಿಕೊಳ್ಳುವುದು. ಊಟದ ಬಳಿಕ ಸಕ್ಕರೆ ಮಟ್ಟವು ಏರಿಕೆ ಆಗುವುದನ್ನು ಇದು ತಡೆಯುವುದು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುವುದು. ನಾರಿನಾಂಶವು ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ಜೀರ್ಣಕ್ರಿಯೆಗೆ ಸಹಕಾರಿ

ಬೆಂಡೆಕಾಯಿಯಲ್ಲಿ ಇರುವಂತಹ ನಾರಿನಾಂಶವು ಜೀರ್ಣಕ್ರಿಯೆಗೆ ಸಹಕಾರಿ ಮತ್ತು ಇದು ಕರುಳಿನ ಕ್ರಿಯೆಯನ್ನು ನಿಯಂತ್ರಿಉಸುವುದ. ಪೆಕ್ಟಿನ್ ಕರುಳಿನಲ್ಲಿ ಊದಿಕೊಂಡು ಕರುಳಿನಲ್ಲಿರುವಂತಹ ಕಲ್ಮಷವು ಸುಲಭವಾಗಿ ಹೊರಹೋಗುವಂತೆ ಮಾಡುವುದು. ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರು ನಿಯಮಿತವಾಗಿ ಬೆಂಡೆಕಾಯಿ ತಿಂದರೆ ಅದರಿಂದ ಲಾಭ ಪಡೆಯಬಹುದು.

ಗರ್ಭಧಾರಣೆಗೆ ನೆರವಾಗುವುದು

ಗರ್ಭ ಧರಿಸಬೇಕು ಎಂದು ಬಯಸುವವರಿಗೆ ಬೆಂಡೆಕಾಯಿಯು ತುಂಬಾ ಒಳ್ಳೆಯ ಆಹಾರವಾಗಿದೆ. ಬೆಂಡೆಕಾಯಿಯಲ್ಲಿ ಇರುವಂತಹ ಫಾಲಿಕ್ ಆಮ್ಲವು ಗರ್ಭ ಧರಿಸಲು ನೆರವಾಗುವುದು ಮಾತ್ರವಲ್ಲದೆ ಇದು ಭ್ರೂಣದ ಬೆಳವಣಿಗೆಯಲ್ಲೂ ಪ್ರಮುಖ ಪಾತ್ರ ವಹಿಸುವುದು. ಬೆಂಡೆಕಾಯಿಯು ಗರ್ಭಪಾತವಾಗದಂತೆ ತಡೆಯುವುದು. ಭ್ರೂಣದ ನರಕೊಳವೆಗಳು ಬೆಳೆಯಲು ಫಾಲಿಕ್ ಆಮ್ಲವು ನೆರವಾಗುವುದು.

ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ

ಬೆಂಡೆಯಲ್ಲಿರುವ ವಿಟಮಿನ್ ಸಿ ಮತ್ತು ಇತರ ಪೋಷಕಾಂಶಗಳು ಚರ್ಮಕ್ಕೆ ಒಳಗಿನಿಂದ ನೀಡುವ ಪೋಷಣೆಯ ಪರಿಣಾಮವಾಗಿ ಚರ್ಮ ತನ್ನ ಸಹಜ ಸೌಂದರ್ಯ ಮತ್ತು ಕಾಂತಿಯನ್ನು ಹೊಂದುತ್ತದೆ. ಇದಕ್ಕಾಗಿ ಎಳೆಯ ಬೆಂಡೆಯನ್ನು ಆಗಾಗ ಹಸಿಯಾಗಿ ತಿಂದರೆ ಹೆಚ್ಚು ಪರಿಣಾಮಕಾರಿಯಾಗಿದೆ.

ಪ್ರತಿರೋಧಕ ಶಕ್ತಿ ಸುಧಾರಿಸುವುದು

ಬೆಂಡೆಕಾಯಿಯಲ್ಲಿ ಇರುವಂತಹ ವಿಟಮಿನ್ ಸಿ ಅಂಶವು ಪ್ರತಿರೋಧಕ ಶಕ್ತಿ ಸುಧಾರಣೆ ಮಾಡುವಲ್ಲಿ ಸಹಕಾರಿ ಆಗಿರುವುದು.

ರಕ್ತಹೀನತೆ ನಿವಾರಣೆ

ಬೆಂಡೆಕಾಯಿಯಲ್ಲಿ ಕಬ್ಬಿನಾಂಶ, ಫಾಲಿಕ್ ಆಮ್ಲ ಮತ್ತು ವಿಟಮಿನ್ ಕೆ ಇದೆ. ಇದು ರಕ್ತಹೀನತೆ ತಡೆಯಲು ಮತ್ತು ನಿವಾರಣೆ ಮಾಡಲು ನೆರವಾಗುವುದು.

ಕರುಳಿನ ಕ್ಯಾನ್ಸರ್ ತಡೆಯಲು ನೆರವಾಗುವುದು

ಬೇರೆಲ್ಲಾ ನಾರಿನಾಂಶವಿರುವಂತಹ ಆಹಾರದಂತೆ ಬೆಂಡೆಕಾಯಿ ಕೂಡ ಕರುಳಿನ ಕ್ಯಾನರ್ ತಡೆಯುವಲ್ಲಿ ನೆರವಾಗುವುದು. ಇದು ಜೀರ್ಣಕ್ರಿಯೆಯನ್ನು ಸರಿಯಾಗಿಟ್ಟು ಅದು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ನೆರವಾಗುವುದು.

ಕಣ್ಣಿನ ದೃಷ್ಟಿ ಸುಧಾರಿಸುವುದು

ಬೆಂಡೆಕಾಯಿಯಲ್ಲಿ ಇರುವಂತಹ ಬೆಟಾ ಕ್ಯಾರೋಟಿನ್ ಮತ್ತು ವಿಟಮಿನ್ ಎ ಅಂಶವು ಕಣ್ಣಿನ ದೃಷ್ಟಿ ಸುಧಾರಿಸಲು ತುಂಬಾ ನೆರವಾಗುವುದು.

ತಲೆಹೊಟ್ಟು ಮತ್ತು ಹೇನಿಗೆ ಚಿಕಿತ್ಸೆ

ತಲೆಹೊಟ್ಟು ಮತ್ತು ಹೇನು ನಿವಾರಿಸಲು ಬೆಂಡೆಕಾಯಿ ಬಳಸಲಾಗುತ್ತದೆ. ನೇರವಾಗಿ ಬೆಂಡೆಕಾಯಿ ಕತ್ತರಿಸಿಕೊಳ್ಳಿ ಮತ್ತು ಇದನ್ನು ನೀರಿನಲ್ಲಿ ಬಿಸಿ ಮಾಡಿ. ಈ ನೀರಿಗೆ ಲಿಂಬೆರಸ ಹಾಕಿ ಮತ್ತು ಕೂದಲು ತೊಳೆಯಲು ಈ ನೀರನ್ನು ಬಳಸಿ. ಬೆಂಡೆಕಾಯಿಯಲ್ಲಿ ನಾರಿನಾಂಶವು ಹೆಚ್ಚಿನ ಪ್ರಮಾಣದಲ್ಲಿ ಇರುವ ಕಾರಣದಿಂದಾಗಿ ಆಹಾರ ತಜ್ಞರು ಸಾಧ್ಯವಾದಷ್ಟು ತರಕಾರಿ ಸೇವಿಸಲು ಹೇಳುವರು.

ಕೊಲೆಸ್ಟ್ರಾಲ್ ರೋಗಿಗಳಿಗೆ ಸೂಕ್ತವಾಗಿದೆ

ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಇರುವ ರೋಗಿಗಳಿಗೆ ವೈದ್ಯರು ಹೆಚ್ಚಿನ ಆಹಾರಗಳನ್ನು ಸೇವಿಸದಂತೆ ಸಲಹೆ ಮಾಡುತ್ತಾರೆ. ಆದರೆ ಈ ರೋಗಿಗಳು ಬೆಂಡೆಕಾಯಿಯನ್ನು ಮಾತ್ರ ಸುರಕ್ಷಿತವಾಗಿ ಸೇವಿಸಬಹುದು. ಏಕೆಂದರೆ ಬೆಂಡೆಯಲ್ಲಿ ಯಾವುದೇ ಕೊಲೆಸ್ಟ್ರಾಲ್ ಆಗಲೀ ಕೊಲೆಸ್ಟ್ರಾಲ್ ಉಂಟುಮಾಡುವ ಕಣಗಳಾಗಲೀ ಇಲ್ಲದೇ ಇರುವುದರಿಂದ ಕೊಲೆಸ್ಟ್ರಾಲ್ ರೋಗಿಗಳ ಪಾಲಿನ ಪಂಚಾಮೃತವಾಗಿದೆ.

ಶ್ರೀ ಶಿರಿಸಿ ಮಾರಿಕಾಂಭ ದೇವಿ ಜ್ಯೋತಿಷ್ಯ ಶಾಸ್ತ್ರಂ
ಜ್ಯೋತಿಷ್ಯ ಮಹರ್ಷಿ ಮಂಜುನಾಥ್ ಭಟ್
ನೀವು  ಸಮಸ್ಯೆಗಳಿಗೆ
ಪರಿಹಾರ ಹುಡುಕುತ್ತಿದ್ದೀರಾ,,, ?
ಪ್ರೀತಿಯಲ್ಲಿ ನಂಬಿ ಮೋಸ ಸ್ತ್ರೀ ಮತ್ತು ಪುರುಷ ವಶೀಕರಣ
ಹಣಕಾಸಿನ ತೊಂದರೆ ಭೂಮಿ ವಿಚಾರ
ಕೋರ್ಟ್ ಕೇಸ್ ಅನಾರೋಗ್ಯ ಶತ್ರು ಕಾಟ
ದಾಂಪತ್ಯ ತೊಂದರೆ ವಿವಾಹ ವಿಳಂಬ ಸಂತಾನ ಸಮಸ್ಯೆ
ಇನ್ನೂ ನಿಮ್ಮ ಅನೇಕ ಸಮಸ್ಯೆಗಳಿಗೆ
1 ದಿನದಲ್ಲಿ ಪರಿಹಾರ ಶತಸಿದ್ಧ
ನಂಬಿ ಕರೆ ಮಾಡಿ 9900116427

About the author / 

Chethan Mardalu

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ