ಸುದ್ದಿ

ಟ್ರೋಲ್‍ ವಾಸಣ್ಣ ಪ್ರಸಿದ್ದಿಯ ಮಲ್ಪೆ ವಾಸುಗೆ ಖಡಕ್ ವರ್ನಿಗ್ ಕೊಟ್ಟ ಪೊಲೀಸರು!ಅಸಲಿಗೆ ಯಾರಿದು ವಾಸಣ್ಣ ಗೊತ್ತಾ?

299

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಯಲ್ಲಿರುವ ಹೆಸರು ಟ್ರೋಲ್‍ ವಾಸಣ್ಣ. ಮೂಲತಃ ಮಲ್ಪೆಯವರಾದ ವಾಸು ಅವರಿಗೆ ಇದೀಗ ಸೈಬರ್ ಪೊಲೀಸರು ಖಡಕ್‍ ಎಚ್ಚರಿಕೆ ನೀಡಿದ್ದಾರೆ.

ವಾಸು ಅವರು ರಾಜಕೀಯ ಪ್ರೇರಿತ ಮಾತುಗಳು, ರಾಜಕೀಯ ನಾಯಕರನ್ನು, ಪಕ್ಷಗಳನ್ನು ಅಪಹಾಸ್ಯ ಮಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‍ ಆಗಿವೆ. ಹೀಗಾಗಿ ಸದ್ಯ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ವಾಸು ಅವರನ್ನು ಕರೆಸಿ ಸೈಬರ್ ಕ್ರೈಂ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿಯಾಗಿರುವ ವಾಸು ಅವರಿಂದ ಕೆಲ ಕಿಡಿಗೇಡಿಗಳು ಈ ರೀತಿಯ ವಿಡಿಯೋ ಮಾಡಿಸುತ್ತಿದ್ರು, ನಂತರ ವಾಟ್ಸಾಪ್‍,  ಫೇಸ್‍ಬುಕ್‍ಗಳಲ್ಲಿ ಹರಿಬಿಡ್ತಿದ್ರು. ಆದ್ರೆ ಅವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು

ವಾಸು ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ ಅಂತಾ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಹಲವಾರು ಖಾತೆಗಳನ್ನು ಡಿಲೀಟ್ ಮಾಡಲಾಗಿದ್ದು, ಇಂತಹ ವಿಡಿಯೋ ಶೇರ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ