ಸುದ್ದಿ

ನಾಪತ್ತೆಯಾಗಿ ಮೂರು ವರ್ಷದ ನಂತರ ಟಿಕ್ ಟಾಕ್ ನಲ್ಲಿ ಪತ್ತೆಯಾದ ಪತಿ!

37

ಒಂದಿಲ್ಲೊಂದು ಪ್ರಮಾದಕ್ಕ ಕಾರಣವಾಗುತ್ತಿರುವ ಟಿಕ್ ಟಾಕ್ ಮೊಬೈಲ್ app ಅನ್ನು ನಿಷೇಧಿಸಲು ಹಲವು ರಾಜ್ಯಗಳು ಮುಂದಾಗಿರುವ ಹೊತ್ತಲ್ಲೇ ಈ ವಿಡಿಯೋದಿಂದ ಮಹಿಳೆಯೊಬ್ಬರು ನಾಪತ್ತೆಯಾದ ತಮ್ಮ ಪತಿಯನ್ನು ಕಂಡುಕೊಂಡಿದ್ದಾರೆ. ಈ ಮೂಲಕ ವಿರಳಾತಿವಿರಳ ಪ್ರಕರಣದಲ್ಲಿ ಟಿಕ್ ಟಾಕ್ ಉಪಕಾರಕ್ಕೂ ಬಂದಂತಾಗಿದೆ! ತಮಿಳುನಾಡಿನ ವಿಲ್ಲುಪುರಂ ನ ಜಯಪ್ರಧಾ ಎಂಬ ಮಹಿಳೆ ಸುರೇಶ್ ಎಂಬುವವರನ್ನು ಮದುವೆಯಾಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದರು.

ಆದರೆ 2017 ರ ಆರಂಭದಲ್ಲಿ ಸುರೇಶ್ ಅವರು ತಮ್ಮ ಊರಾದ ಕೃಷ್ಣಗಿರಿಗೆ ತೆರಳುವುದಾಗಿ ಹೇಳಿ ಹೊರಟಿದ್ದರು. ನಂತರ ಅವರು ವಾಪಸ್ ಬಂದಿರಲಿಲ್ಲ. ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಹಲವರನ್ನು ವಿಚಾರಿಸಿದರೂ ಸುರೇಶ್ ಅವರ ಸುಳಿವು ಸಿಕ್ಕಿರಲಿಲ್ಲ. ಕೂಡಲೆ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೆ ಸುರೇಶ್ ಬಗ್ಗೆ ಯಾವುದೇ ಮಾಹಿತಿ ದೊರೆತಿರಲಿಲ್ಲ.

ಇದಾಗಿ ಮೂರು ವರ್ಷಗಳ ನಂತರ ಜಯಪ್ರಧಾ ಅವರ ಸಂಬಂಧಿಯೊಬ್ಬರು ಟಿಕ್ ಟಾಕ್ ವಿಡೀಯೋ ನೋಡುತ್ತಿದ್ದಾಗ, ಜಯಪ್ರಧಅ ಅವರ ಪತಿ ಸುರೇಶ್ ಅವರನ್ನೇ ಹೋಲುವ ವ್ಯಕ್ತಿಯೊಬ್ಬರನ್ನು ಅವರು ಕಂಡರು. ಕೂಡಲೇ ಈ ಬಗ್ಗೆ ಜಯಪ್ರಧಾ ಅವರಿಗೆ ತಿಳಿಸಿದಾಗ ಜಯಪ್ರಧಾ ವಿಡಿಯೋವನ್ನು ನೋಡಿ ಅವರು ಸುರೇಶ್ ಎಂಬುದನ್ನು ಖಾತ್ರಿ ಪಡಿಸಿಕೊಂಡು ವಿಲ್ಲುಪುರಂ ಪೊಲೀಸ್ ಠಾಣೆಗೆ ತೆರಳಿ ವಿಷಯ ತಿಳಿಸಿದರು. ಈ ವಿಡಿಯೋ ಮುಲಕ ಪೊಲೀಸರು ಸುರೇಶ್ ನನ್ನು ಪಯ್ತೆ ಮಾಡಲು ಸಮರ್ಥರಾದರು.

ಕೆಲವು ಕೌಟುಂಬಿಕ ಕಾರಣಗಳಿಂದ ಬೇಸರಗೊಂಡು ಹೊಸೂರಿನ ತಮ್ಮ ತಾಯಿಯ ಮನೆಯಲ್ಲಿ ಸುರೇಶ್ ವಾಸವಿದ್ದರು ಎಂಬುದು ಪೊಲೀಸರ ವಿಚಾರಣೆಯ ವೇಳೆ ತಿಳಿದುಬಂದಿತ್ತು. ನಂತರ ಪತ್ನಿ ಮತ್ತು ಮಕ್ಕಳ ಜೊತೆ ವಾಸವಿರಲು ಸುರೇಶ್ ಒಪ್ಪಿದ ಕಾರಣ ಅವರನ್ನು ವಿಲ್ಲುಪುರಂ ಗೆ ಕಳಿಸಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ