ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ದಿನಗಳು ಕಳೆದಂತೆ ಬಿಸಿಲು ಜಾಸ್ತಿ ಆಗುತ್ತಾ ಹೋಗುತ್ತಿದೆ. ಇದರಿಂದ ಕೆಲವರಿಗೆ ದೇಹ ತುಂಬಾ ಹಿಟ್ ಆಗುತ್ತದೆ. ಈ ಸಮಯದಲ್ಲಿ ಖಾರದ ಪದಾರ್ಥಗಳು ಸೇವಿಸಿದರೆ ಹಾಗೂ ಉಷ್ಣತೆಯನ್ನು ಹೆಚ್ಚಿಸುವ ಪದಾರ್ಥಗಳನ್ನು ತಿಂದರೆ ದೇಹದ ಉಷ್ಣತೆ ಹೆಚ್ಚಾಗುತ್ತದೆ ಅಲ್ಲದೆ ಇದರಿಂದ ನಮ್ಮ ದೇಹ ಅನಾರೋಗ್ಯ ಸ್ಥಿತಿಗೆ ಕೊಂಡೈಯುತ್ತದೆ ಉರಿಮೂತ್ರ, ಹೊಟ್ಟೆ ನೋವು, ಮೈಯೆಲ್ಲಾ ಬೊಬ್ಬೆ ಏಳುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಈ ಬೇಸಿಗೆಯಲ್ಲಿ ದೇಹದ ಉಷ್ಣತೆಯನ್ನು ನಾವು ಕಾಪಾಡಿಕೊಳ್ಳಬೇಕು. ಇದನ್ನು ಕಾಪಾಡಿಕೊಳ್ಳಲು ಸುಲಭ ಉಪಾಯ ಏನೆಂದರೆ ನಾವು ದೇಹದ ಉಷ್ಣತೆಯನ್ನು ಕಡಿಮೆ ಮಾಡುವ ಆಹಾರ ಮತ್ತು ತಂಪು ಪಾನೀಯಗಳನ್ನು ಸೇವಿಸಿದರೆ ಸಹಕಾರಿ. ಆದ್ದರಿಂದ ಈ ಕೆಳಗೆ ತಿಳಿಸಿರುವ ಆಹಾರವನ್ನು ನೀವು ಸೇವನೆ ಮಾಡಿದರೆ ದೇಹದ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳಬಹುದು.
1.ಬಾರ್ಲಿ ನೀರನ್ನು ಕುಡಿಯಿರಿ ಎರಡು ಟೇಬಲ್ ಚಮಚಗಳಷ್ಟು ಬಾರ್ಲಿಯನ್ನು ಎರಡು ಲೋಟಗಳಷ್ಟು ನೀರಿನಲ್ಲಿ ಅರ್ಧ ಘ೦ಟೆಯ ಕಾಲ ಕುದಿಸಿರಿ. ಬಳಿಕ ಈ ಬಾರ್ಲಿ ನೀರನ್ನು ತಣಿಸಿ ಆಗಾಗ್ಗೆ ಗುಟುರಿಸುತ್ತಾ ಇರಬೇಕು. ಹೀಗೆ ಮಾಡಿದಲ್ಲಿ, ದೇಹದ ಉಷ್ಣತೆಯು ಗಣನೀಯವಾಗಿ ಕಡಿಮೆಯಾಗುತ್ತದೆ.
2. ಮಾವಿನ ಹಣ್ಣುಗಳನ್ನು ಹೊರತುಪಡಿಸಿ, ಬೇಸಿಗೆಯ ಅವಧಿಯ ಬೇರೆ ಯಾವುದಾದರೂ ಹಣ್ಣನ್ನು ತಿನ್ನಬೇಕೆ೦ದು ಯಾರಾದರೂ ನಿರೀಕ್ಷಿಸುತ್ತಿದ್ದಲ್ಲಿ, ಕೆ೦ಪು ಹಾಗೂ ರಸಭರಿತವಾದ ಹಣ್ಣುಗಳಿಗೆ. ಹೌದು. ನಿಮ್ಮ ಊಹೆ ನಿಜ. ಸಿಹಿಯಾದ ಹಾಗೂ ಜಲಾ೦ಶಯುಕ್ತ ಕಲ್ಲ೦ಗಡಿ ಹಣ್ಣಿಗಿ೦ತಲೂ ಉತ್ತಮವಾದುದು ಬೇರೊ೦ದಿರಲಾರದು. ದಿನದ ಮಧ್ಯಭಾಗದಲ್ಲಿ ಕಲ್ಲ೦ಗಡಿ ಹಣ್ಣಿನ ಒ೦ದಿಷ್ಟು ಹೋಳುಗಳನ್ನು ಸೇವಿಸುವುದರ ಮೂಲಕ ಒ೦ದಿಷ್ಟು ಹೆಚ್ಚುವರಿ ನೀರು, ನಾರಿನ೦ಶ, ಹಾಗೂ ವಿಟಮಿನ್ A ಮತ್ತು C ಗಳನ್ನು ಉತ್ತಮ ಪರಿಮಾಣಗಳಲ್ಲಿ ಪಡೆದುಕೊಳ್ಳುವ೦ತಾದೀತು. ಜಜ್ಜಿದ ಕಲ್ಲ೦ಗಡಿ ಹೋಳುಗಳ ಕೆಲವು ಚೂರುಗಳನ್ನು ನಿಮ್ಮ ಮುಖದ ಮೇಲೆಯೂ ಇರಿಸಿಕೊಳ್ಳುವುದರ ಮೂಲಕ ಆ೦ತರಿಕವಾಗಿ ಅಷ್ಟೇ ಅಲ್ಲ, ಬಾಹ್ಯವಾಗಿಯೂ ಕೂಡಾ ಶಾರೀರಿಕ ತ೦ಪನ್ನು ಅನುಭವಿಸಬಹುದು.
3. ಬೇಸಿಗೆಯ ಬಿಸಿಲ ಝಳದಿ೦ದ ಸೋತುಸುಣ್ಣವಾಗಿರುವ ಜೀವಕ್ಕೆ ಎಳನೀರಿನಷ್ಟು ತ೦ಪನ್ನೀಯುವ ಪೇಯವು ಮತ್ತೊ೦ದಿರಲಾರದು. ಎಳನೀರು ಒಳಗೊ೦ಡಿರಬಹುದಾದ ನೀರಿನಲ್ಲಿ ಜೀವಸತ್ವಗಳು ಹಾಗೂ ಖನಿಜಾ೦ಶಗಳು ಹೇರಳವಾಗಿದ್ದು, ದೇಹದ ಅತ್ಯಧಿಕ ಉಷ್ಣಾ೦ಶದ ದುಷ್ಪರಿಣಾಮವನ್ನು ತಗ್ಗಿಸುವ ನಿಟ್ಟಿನಲ್ಲಿ ನೆರವಾಗುವುದಷ್ಟೇ ಅಲ್ಲ, ಜೊತೆಗೆ ದೇಹಕ್ಕೆ ಯಾವುದೇ ಕ್ಯಾಲರಿಯನ್ನೂ ಹೆಚ್ಚುವರಿಯಾಗಿ ಸೇರಿಸದೇ ಶರೀರದ ನೀರಿನ ಕೊರತೆಯನ್ನೂ ನೀಗಿಸುತ್ತದೆ. ನಿಮ್ಮ ಶರೀರವನ್ನು ಸದೃಢವಾಗಿ ಹಾಗೂ ತ೦ಪಾಗಿರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿದಿನವೂ ಎಳನೀರನ್ನು ಕುಡಿಯಿರಿ.
4. ತ೦ಪು ಪರಿಣಾಮವನ್ನು೦ಟು ಮಾಡುವ ಸಾ೦ಬಾರ ಪದಾರ್ಥವೆ೦ದೇ ಏಲಕ್ಕಿಯು ಚಿರಪರಿಚಿತ. ಏಲಕ್ಕಿ ಎಸಳೊ೦ದನ್ನು ತೆಗೆದುಕೊ೦ಡು ಅದನ್ನು ಎರಡು ಲೋಟಗಳಷ್ಟು ನೀರಿನಲ್ಲಿ ಕುದಿಸಿ, ಬಳಿಕ ನೀರನ್ನು ಸೋಸಿ ಆ ನೀರನ್ನು ತಣ್ಣಗಾಗಿಸಿರಿ. ನಿಮ್ಮ ಶರೀರದ ಉಷ್ಣಾ೦ಶವನ್ನು ತಗ್ಗಿಸುವ ನಿಟ್ಟಿನಲ್ಲಿ ಈ ನೀರನ್ನು ನಿಯಮಿತ ಕಾಲಾ೦ತರಗಳಲ್ಲಿ ಕುಡಿಯಿರಿ.
5.ನೀರನ್ನು ಧಾರಾಳವಾಗಿ ಕುಡಿಯಿರಿ ಇದರ ಕುರಿತ೦ತೆ ಪ್ರತ್ಯೇಕವಾಗಿ ಹೇಳಬೇಕಾದ ಅವಶ್ಯಕತೆ ಇಲ್ಲ. ನೀವು ಹೆಚ್ಚು ಹೆಚ್ಚು ನೀರನ್ನು ಕುಡಿದಷ್ಟೂ ನಿಮ್ಮ ಶರೀರವು ಹೆಚ್ಚು ಹೆಚ್ಚು ಉಷ್ಣಾ೦ಶವನ್ನು ಹೊರಹಾಕುತ್ತದೆ. ಜೊತೆಗೆ, ನಿಮ್ಮ ಶರೀರವೂ ಕೂಡಾ ಇದರಿ೦ದ ಜಲಪೂರಣಗೊ೦ಡಿರುವ೦ತಾಗುತ್ತದೆ ಹಾಗೂ ಬಿಸಿಲ ತಾಪಕ್ಕೆ ಶರೀರವು ಆಯಾಸಗೊಳ್ಳುವುದಿಲ್ಲ. ಹೀಗಾಗಬೇಕಾದರೆ, ನೀವು ಪ್ರತಿದಿನವೂ ಕನಿಷ್ಟ ಪಕ್ಷ ಎ೦ಟು ಲೋಟಗಳಷ್ಟಾದರೂ ನೀರನ್ನು ಕುಡಿಯಲೇ ಬೇಕಾಗುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಟೈಟಾನಿಕ್ ಸಿನಿಮಾವನ್ನ ಯಾರು ತಾನೇ ನೋಡಿಲ್ಲ ಹೇಳಿ, ಭಾರಿ ಗಾತ್ರದ ಈ ಹಡಗು ಪ್ರಯಾಣಿಸಿದ ರೀತಿ ಹಾಗು ಹೇಗೆ ಮುಳುಗಿತು ಎನ್ನುವುದನ್ನು ವಿವರವಾಗಿ ಹೇಳಿಕೊಟ್ಟ ಈ ಚಿತ್ರ ಇಂದಿಗೂ ದಾಖಲೆಯನ್ನು ಬರೆದಿದೆ. ಹಾಲಿವುಡ್ ನ ಸಿನಿಮಾ ನಿರ್ಮಾಣದ ರೂಪುರೇಷೆಯನ್ನೇ ಬದಲಿಸಿದ್ದ ಈ ಚಿತ್ರ ಅಂದಿನ ಕಾಲದ ಬಿಗ್ ಬಜೆಟ್ ಮೂವಿ ಆಗಿತ್ತು, ಚಿತ್ರ ನೋಡಿದವರು ಕೂಡ ಒಂದು ಕ್ಷಣ ದಂಗಾಗಿದ್ದರು, ಅಷ್ಟು ಎಫೆಕ್ಟ್ ನೀಡಿ ಇಡೀ ಚಿತ್ರ ತಂಡ ಇದೊಂದು ಘಟನೆಯನ್ನು ಜನರ ಮುಂದೆ ಇಡಲು ಪ್ರಯತ್ನಿಸಿದ್ದರು….
ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕಜಿಎಫ್’ ಸಿನಿಮಾ ಭಾರತದಾದ್ಯಂತ ಎಲ್ಲೆಡೆ ಹವಾ ಕ್ರಿಯೆಟ್ ಮಾಡಿದ್ದು, ಸಿನಿತಾರೆಯರು ಸೇರಿದಂತೆ ಅಭಿನಿಮಾನಿಗಳಿಂದ ಅಪಾರ ಮೆಚ್ಚುಗೆ ಪಡೆಯುತ್ತಿದೆ. ಅಭಿಮಾನಿಗಳ ರೀತಿ ಎಂಜಾಯ್ ಮಾಡಿಕೊಂಡು ಸಿನಿಮಾ ನೋಡಲು ಸ್ಯಾಂಡಲ್ವುಡ್ ನಟ ಲುಂಗಿ, ಹವಾಯಿ ಚಪ್ಪಲಿ ಧರಿಸಿಕೊಂಡು ಸಿನಿಮಾ ನೋಡಿದ್ದಾರೆ. ನವರಸ ನಾಯಕ ಜಗ್ಗೇಶ್ ಅವರು ಮಾರು ವೇಷದಲ್ಲಿ ಥಿಯೇಟರ್ಗೆ ಹೋಗಿ ಕೆಜಿಎಫ್ ಚಿತ್ರ ವೀಕ್ಷಣೆ ಮಾಡಿದ್ದು, ಈ ವೇಳೆ ಥಿಯೇಟರ್ ನಲ್ಲಿ ತಮಗಾದ ರೋಚಕ ಅನುಭವವನ್ನು ಹಂಚಿಕೊಂಡಿದ್ದಾರೆ.ನಟ ಜಗ್ಗೇಶ್ ಅವರು ಲುಂಗಿ, ಹವಾಯಿ…
ಬೆಂಗಳೂರು, ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮರುಗಳಿಗೆಯೇ ರೈತರು, ಮೀನುಗಾರರು ಮತ್ತು ನೇಕಾರರಿಗೆ ಸಿಹಿಸುದ್ದಿ ನೀಡಿದ್ದ ಸಿಎಂ ಯಡಿಯೂರಪ್ಪ ವಿದ್ಯಾರ್ಥಿಗಳಿಗೂ ಶೀಘ್ರದಲ್ಲೇ ಶುಭ ಸುದ್ದಿ ನೀಡಲಿದ್ದಾರೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರಸ್ತುತ ನೀಡುತ್ತಿರುವ ವಾರ್ಷಿಕ ವೆಚ್ಚವನ್ನು ಹೆಚ್ಚಳ ಮಾಡಲು ಯಡಿಯೂರಪ್ಪ ತೀರ್ಮಾನಿಸಿದ್ದಾರೆ. ಪ್ರಸ್ತುತ ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಇಲಾಖೆಯಡಿ ರಾಜ್ಯದಲ್ಲಿ 2438 ಹಾಸ್ಟೆಲ್ಗಳಿದ್ದು, 1,88,500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಾರ್ಷಿಕ ವೆಚ್ಚವಾಗಿ ಪ್ರತಿ ವಿದ್ಯಾರ್ಥಿಗೆ 1600 ರೂ. ನೀಡಲಾಗುತ್ತಿದೆ. ಇದೀಗ…
ಗರ್ಭಾವಸ್ಥೆ ಎನ್ನುವುದು ಹೆಣ್ಣಿನ ಜೀವನದ ಬಹಳ ಮಹತ್ವದ ಘಟ್ಟ ಎನ್ನುತ್ತಾರೆ. ಈ ಸಮಯದಲ್ಲಿ ತಾಯಿ ತನ್ನ ಮಗುವಿನ ಬೆಳವಣಿಗೆಗಾಗಿ ಬಹಳ ಜಾಗರೂಕಳಾಗಿರಬೇಕು. ಹೆಚ್ಚು ಕಷ್ಟವಾಗುವ ಕೆಲಸಗಳನ್ನು ಮಾಡಬಾರದು. ಆದರೆ ಇಲ್ಲೊಬ್ಬರು ಮಹಿಳೆ ತಾವು 8ನೇ ತಿಂಗಳ ಗರ್ಭವತಿಯಾಗಿರುವಾಗ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ. ಈ ವಿಡಿಯೋ ಕೆಲವು ದಿನಗಳ ಮುನ್ನವೇ ಮಾಡಲಾಗಿದ್ದು ಈಗ ಈ ವಿಡಿಯೋ ವೈರಲ್ ಆಗುತ್ತಿದೆ. ಚೂಡಾಮಣಿ ಪತಿ ಸಾಫ್ಟ್ವೇರ್ ಎಂಜಿನಿಯರ್. ಪತ್ನಿಗೆ ಅವರ ಸಂಪೂರ್ಣ ಸಹಕಾರ ಇದೆ. ದಂಪತಿಗೆ ಈಗಾಗಲೇ ಒಂದು ಹೆಣ್ಣು ಮಗು…
ಹುಟ್ಟುಹಬ್ಬದಂದು ಸ್ನೇಹಿತರು ಎಲ್ಲ ಸೇರಿ ಯುವಕನಿಗೆ ಬರ್ತ್ ಡೇ ಬಂಪ್ಸ್ ಕೊಟ್ಟಿದ್ದು, ಇದರಿಂದ ವಿದ್ಯಾರ್ಥಿ ಮೃತಪಟ್ಟ ಘಟನೆ ತಮಿಳುನಾಡಿದ ಚೆನ್ನೈನಲ್ಲಿ ನಡೆದಿದೆ. ಕಳೆದ ಎರಡು ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಈಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮೃತಪಟ್ಟ ಯುವಕ ಬೆಂಗಳೂರಿನ ಐಐಎಂ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಯುವಕ ಎರಡು ತಿಂಗಳ ಹಿಂದೆ ತನ್ನ ಹುಟ್ಟುಹಬ್ಬವನ್ನು ಸ್ನೇಹಿತರ ಜೊತೆ ಆಚರಿಸಿಕೊಂಡಿದ್ದನು. ಈ ವೇಳೆ ಸ್ನೇಹಿತರು ಎಲ್ಲರು ಸೇರಿ ಆತನಿಗೆ ಬರ್ತ್ ಡೇ…
ಬೆಂಗಳೂರು, ಆ.4- ಈಗಾಗಲೇ ಮೂವರು ಜೆಡಿಎಸ್ ಶಾಸಕರನ್ನು ತನ್ನತ್ತ ಸೆಳೆದಿರುವ ಬಿಜೆಪಿ ಜೆಡಿಎಸ್ಗೆ ಮತ್ತೊಂದು ಭಾರೀ ಶಾಕ್ ಕೊಡಲು ಸಜ್ಜಾಗಿದೆ. ಜೆಡಿಎಸ್ನ ಎಲ್ಲ 23 ಶಾಸಕರನ್ನು ಒಂದೇ ಬಂಚ್ನಲ್ಲಿ ಸೆಳೆಯಲು ಮಹತ್ವದ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ. ಸಮ್ಮಿಶ್ರ ಸರ್ಕಾರ ಪತನದ ನಂತರ ಜೆಡಿಎಸ್ ಪಕ್ಷವನ್ನು ಸಂಪೂರ್ಣವಾಗಿ ತನ್ನತ್ತ ಸೆಳೆಯಲು ಬಿಜೆಪಿ ರಣತಂತ್ರ ರೂಪಿಸಿದೆ ಎಂದು ತಿಳಿದುಬಂದಿದೆ. ದೇವೇಗೌಡರ ಕುಟುಂಬವನ್ನು ಹೊರತುಪಡಿಸಿ ಎಲ್ಲ 23 ಶಾಸಕರನ್ನು ಬಿಜೆಪಿಗೆ ಕರೆದೊಯ್ಯಲು ಇಬ್ಬರು ಮಾಜಿ ಸಚಿವರೇ ಮುಂದಾಳತ್ವ ವಹಿಸಿದ್ದಾರೆ. ಕುತೂಹಲಕಾರಿ ಅಂಶವೆಂದರೆ…