ದೇಗುಲ ದರ್ಶನ

ತಲಕಾವೇರಿ ತೀರ್ಥೋದ್ಭವ ಸಂಭ್ರಮ: ಬ್ರಹ್ಮ ಕುಂಡಲದಲ್ಲಿ ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿದ ಕೊಡವರ ಕುಲದೇವತೆ..!

46

ಕಾವೇರಿ ಕೊಡವರ ಕುಲದೇವಿ,ಕಾವೇರಿ ಜನ್ಮಸ್ಥಳ ತಲಕಾವೇರಿಯಲ್ಲಿ  ಅರ್ಚಕರ ಮಂತ್ರಘೋಷ ,ಮಂಗಳವಾದ್ಯ  ನಡುವೆ ತಡರಾತ್ರಿ ಸರಿಯಾಗಿ 12 ಗಂಟೆ 57 ನಿಮಿಷಕ್ಕೆ ಕರ್ಕಾಟಕಲಗ್ನ, ರೋಹಿಣಿ ನಕ್ಷತ್ರದಲ್ಲಿ ಘಟಿಸಿದ ಪವಿತ್ರ ತೀರ್ಥೋದ್ಭವವನ್ನು ರಾಜ್ಯ ಮತ್ತು ಹೊರರಾಜ್ಯದಿಂದಬಂದ ನೂರಾರು ಭಕ್ತರು ಕಣ್ತುಂಬಿಕೊಂಡರು.

12:59ಕ್ಕೆ ತೀರ್ಥೋದ್ಭವ ಘಟಿಸಲಿದೆ ಎಂದು ಹೇಳಲಾಗಿತ್ತಾದರೂ 2 ನಿಮಿಷ ಮುನ್ನವೇ ತೀರ್ಥೋದ್ಭವಾಯಿತು. 30 ಕ್ಕೂ ಹೆಚ್ಚು ಅರ್ಚಕರ ಮಂತ್ರಘೋಷ, ಮಂಗಳವಾದ್ಯದ ನಡುವೆ ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ಕಾಣಿಸಿಕೊಳ್ಳುತ್ತಿದ್ದಂತೆ ಭಕ್ತರ ಜಯಘೋಷ ಮುಗಿಲು ಮುಟ್ಟಿತು. ಈ ವಿಸ್ಮಯಕ್ಕೆ ಅಪಾರ ಭಕ್ತ ಸಮೂಹ ಸಾಕ್ಷಿಯಾಯಿತು.

 ಕ್ಷೇತ್ರದ ಅರ್ಚಕರ ನೇತೃತ್ವದಲ್ಲಿ ರುದ್ರಾಭಿಷೇಕ , ಕುಂಕುಮಾರ್ಚನೆ ಸೇರಿದಂತೆ ಪೂಜಾ ಕಾರ್ಯಗಳು ನಡೆದವು.ಭಕ್ತರು ತೀರ್ಥಪ್ರೋಕ್ಷಣೆ ಮಾಡಿಸಿಕೊಳ್ಳಲು , ಹಾಗೂ ಬಾಟಲಿ, ಬಿಂದಿಗೆಗಳಲ್ಲಿ ತೀರ್ಥ ತುಂಬಿಸಿಕೊಳ್ಳು ಮುಗಿಬಿದ್ದರು.ರಾಜ್ಯವಲ್ಲದೆ ಕೇರಳ. ತಮಿಳುನಾಡು , ಮತ್ತಿತರ ಹೊರ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು. 

ಪ್ರಾಕೃತಿಕ ವಿಕೋಪ ಮತ್ತು ಮಳೆಯ ಅಬ್ಬರದ ಹಿನ್ನಲೆಯಲ್ಲಿ ಈ ಭಾರಿ ಭಕ್ತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು. ಜಿಲ್ಲಾಧಿಕಾರಿ ಅನ್ನೀಸ್ ಕೆ ಜಾಯ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿಪಿ ಅವರ ನೇತೃತ್ವದಲ್ಲಿ ತೀರ್ಥೋದ್ಬವಕ್ಕೆ ಸಕಲ ವ್ಯವಸ್ಥೆ ಕೈಗೊಳ್ಳಲಾಗಿತ್ತು.  ಕಾನೂನು ಸುವ್ಯವಸ್ಥೆ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಈ ವರ್ಷ ಭಾರತೀಯರು ಗೂಗಲ್ ನಲ್ಲಿ ಅತೀ ಹೆಚ್ಚಾಗಿ ಸರ್ಚ್ ಮಾಡಿ ನೋಡಿದ್ದು ಏನ್ ಗೊತ್ತಾ..?

    ಗೂಗಲ್ ನಲ್ಲಿ ಏನು ಸಿಗಲ್ಲ ಹೇಳಿ? ಪ್ರತಿಯೊಂದು ವಿಷ್ಯದ ಬಗ್ಗೆಯೂ ಗೂಗಲ್ ನಲ್ಲಿ ಮಾಹಿತಿ ಸಿಗುತ್ತದೆ. ಸಣ್ಣಗೆ ಕಾಲು ನೋವು ಬಂದ್ರೂ ಜನರು ಗೂಗಲ್ ನಲ್ಲಿ ಹುಡುಕಾಟ ನಡೆಸ್ತಾರೆ. ಪ್ರತಿಯೊಂದು ರೋಗ, ಅದ್ರ ಲಕ್ಷಣ, ಚಿಕಿತ್ಸೆ ಬಗ್ಗೆ ಗೂಗಲ್ ನಲ್ಲಿ ಮಾಹಿತಿ ಲಭ್ಯವಿದೆ. 2018ರಲ್ಲಿ ಗೂಗಲ್ ನಲ್ಲಿ ಯಾವ ರೋಗದ ಬಗ್ಗೆ ಹೆಚ್ಚು ಸರ್ಚ್ ಮಾಡಲಾಗಿದೆ ಎಂಬ ವರದಿ ಈಗ ಹೊರಬಿದ್ದಿದೆ. 2018ರಲ್ಲಿ ಗೂಗಲ್ ನಲ್ಲಿ ಭಾರತೀಯರು ಅತಿ ಹೆಚ್ಚು ಬಾರಿ ಕ್ಯಾನ್ಸರ್ ಬಗ್ಗೆ ಹುಡುಕಾಟ ನಡೆಸಿದ್ದಾರೆ….

  • ಸುದ್ದಿ

    ‘ಸೋಷಿಯಲ್ ಮೀಡಿಯಾ’ ಬಳಸುವ ಮುನ್ನಾ ಬಾರಿ ಎಚ್ಚರದಿಂದಿರಿ..!ಯಾಕೆ ಗೊತ್ತಾ?

    ಸೋಷಿಯಲ್‌ ಮೀಡಿಯಾಗಳಿಗೆ ಲಗಾಮು ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಚೋದನೆ, ಸುಳ್ಳು ಸುದ್ದಿ, ಮಾನಹಾನಿ ಮತ್ತು ದೇಶದ್ರೋಹಿಗಳಂಥ ಪೋಸ್ಟ್‌ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕಾಗಿ ಜನವರಿ 15ರಿಂದ ಹೊಸ ನಿಯಮ ಜಾರಿಗೆ ತರುತ್ತಿದೆ ನಮ್ಮ ಭಾರತ. ಈ ಬಗ್ಗೆ ಸುಪ್ರೀಕೋರ್ಟ್‌ಗೆ ಇಂದು ವರದಿ ಕೂಡ ಸಲ್ಲಿಸಿದೆ. ಸೋಷಿಯಲ್ ಮೀಡಿಯಾ ಪ್ರೊಫೈಲ್‌ಗಳ ಡೀಕ್ರಿಪ್ಟ್ ಮಾಡಿದ ಡೇಟಾ ಹಂಚಿಕೊಳ್ಳುವ ಬೇಡಿಕೆಗೆ ಸಂಬಂಧಿಸಿದಂತೆ ಮದ್ರಾಸ್, ಬಾಂಬೆ ಮತ್ತು ಮಧ್ಯಪ್ರದೇಶದ ಹೈಕೋರ್ಟ್‌ಗಳಲ್ಲಿ ಬಾಕಿ ಇರುವ ಎಲ್ಲಾ ಪ್ರಕರಣಗಳನ್ನು ಸುಪ್ರೀಂಕೋರ್ಟ್ ವರ್ಗಾಯಿಸಿಕೊಂಡಿದೆ. ರಾಷ್ಟ್ರೀಯ ಭದ್ರತೆ…

  • ಆರೋಗ್ಯ, ಸೌಂದರ್ಯ

    ಕರಿಬೇವಿನ ಈ ಆರೋಗ್ಯಕಾರಿ ಲಾಭಗಳ ಬಗ್ಗೆ ನಿಮ್ಗೆ ಗೊತ್ತಾ..? ತಿಳಿಯಲು ಈ ಲೇಖನ ಓದಿ….

    ಕೂದಲು ಸೊಂಪಾಗಿ ಬೆಳೆಯಲು ಮತ್ತು ಅಕಾಲಿಕ ನೆರೆ ತಡೆಗಟ್ಟಲು ಕರಿಬೇವು ತುಂಬಾ ಸಹಾಯಕಾರಿ. ಅದನ್ನು ಹಾಗೇ ತಿನ್ನಲು ಇಷ್ಟವಿಲ್ಲದಿದ್ದರೆ ಕರಿಬೇವಿನ ಎಲೆಯನ್ನು ಹುರಿದು ಪುಡಿ ಮಾಡಿ ಅದನ್ನು ದೋಸೆ ಜೊತೆ ತಿನ್ನಬಹುದು.

  • inspirational

    ಕಾಲೇಜು ಸ್ನೇಹಿತರು ಪ್ರಾರಂಭಿಸಿದ ಯಶಸ್ವಿ ಉದ್ಯಮಗಳು

    ಮೈಕ್ರೋಸಾಫ್ಟ್, ಗೂಗಲ್, ಯಾಹೂ, ಫೇಸ್‌ಬುಕ್ ಮುಂತಾದ ಎಲ್ಲಾ ದೊಡ್ಡ ಕಂಪನಿಗಳನ್ನು ಡಾರ್ಮ್ ಕೊಠಡಿಯಿಂದ ಪ್ರಾರಂಭಿಸಲಾಯಿತು ಮತ್ತು ಇಂದು ಅವರ ಬಗ್ಗೆ ತಿಳಿದಿಲ್ಲದ ಒಬ್ಬ ವ್ಯಕ್ತಿಯೂ ಇಲ್ಲ. ಹೊಸ-ವಯಸ್ಸಿನ ಪ್ರಾರಂಭಗಳು ಅವರಿಂದ ಸ್ಫೂರ್ತಿ ಪಡೆದುಕೊಳ್ಳುತ್ತವೆ ಮತ್ತು ‘ಸ್ನೇಹಿತ ಮತ್ತು ವ್ಯವಹಾರ ಒಂದೇ ದೋಣಿಯಲ್ಲಿ ಇರಬಾರದು!’ ಎಂದು ಹೇಳುವ ದೀರ್ಘ-ಅವಧಿಯ ಸ್ಟೀರಿಯೊಟೈಪ್ ಅನ್ನು ಮುರಿಯಲು ಪ್ರಯತ್ನಿಸುತ್ತಿದೆ.ಹೇಗಾದರೂ, ಹೊಸ-ವಯಸ್ಸಿನ ಉದ್ಯಮಿಗಳು ಇದಕ್ಕೆ ತದ್ವಿರುದ್ಧವಾಗಿ ಸಾಬೀತುಪಡಿಸಿದ್ದಾರೆ – ಸಹ-ಸಂಸ್ಥಾಪಕರಾಗಿ ಉತ್ತಮ ಸ್ನೇಹಿತನನ್ನು ಹೊಂದಿರುವುದು ವಿಷಯಗಳನ್ನು ಸ್ವಲ್ಪ ಸುಗಮಗೊಳಿಸುತ್ತದೆ ಆದರೆ ನಿರಂತರ ಬೆಂಬಲದೊಂದಿಗೆ ನಿಮ್ಮನ್ನು…

  • ಸ್ಪೂರ್ತಿ

    51ವರ್ಷದ ಮಹಿಳೆ ಮಾಡಿರುವ ಸಾಧನೆಯ ಬಗ್ಗೆ ನೀವು ತಿಳಿದ್ರೆ ಅಚ್ಚರಿ ಪಡೋದ್ರಲ್ಲಿ ಡೌಟ್ ಇಲ್ಲ.!

    ಸಾಧನೆ ಅನ್ನೋದು ಸುಲಭದ ಮಾತಲ್ಲ. ‘ಆಗುವುದಿಲ್ಲ ಅನ್ನೋ ಮಾತನ್ನು ಬಿಟ್ಟು ಆಗುತ್ತೆ’ ಅನ್ನೋ ದಾರಿಯನ್ನು ಹುಡುಕಿದಾಗ ಮಾತ್ರ ಆ ಸಾಧನೆಯನ್ನು ಮಾಡಲು ಸಾಧ್ಯವಾಗುವುದು ಹಾಗು ಅದಕ್ಕೆ ಪ್ರತಿಫಲ ಸಿಗುವುದು.ಕಣ್ರೀ ನಾವು ನಿಮಗೆ ಹೇಳಲು ಹೊರಟಿರುವ ಕಥೆ ಎಲ್ಲರ ಕಣ್ಣು ಹುಬ್ಬೇರಿಸುವ ರೀತಿಯಲ್ಲಿರುವ ಕಥೆ ಇದು.

  • inspirational

    ತಾನು’ಮುಟ್ಟಾಳ ಅಲ್ಲ’ಎಂದು ಸಾಬೀತು ಪಡಿಸಿದ ಮನೋಜ್..! ಮನೋಜ್ ಗೆದ್ದ ಮೊತ್ತ ಎಷ್ಟು.?

    ಕುಟುಂಬದ ಆರ್ಥಿಕ ಸಂಕಷ್ಟವನ್ನು ತೀರಿಸಿಕೊಳ್ಳಲು ಕೆಲವರು ‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮಕ್ಕೆ ಬರುತ್ತಾರೆ. ಸಮಾಜಕ್ಕೆ ಏನಾದರೂ ಒಳಿತು ಮಾಡುವ ಉದ್ದೇಶದಿಂದ ಕೆಲವರು ಹಾಟ್ ಸೀಟ್ಮೇಲೆ ಕೂರುತ್ತಾರೆ. ವಿದ್ಯಾಭ್ಯಾಸಕ್ಕೆ ಸಹಾಯ ಆಗಲಿ ಎಂದೂ ಕೆಲವರು ಪುನೀತ್ ರಾಜ್ ಕುಮಾರ್  ಕೇಳುವ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅಂಥದ್ರಲ್ಲಿ, ಇವರೆಲ್ಲರಿಗಿಂತಲೂ ಕೊಂಚ ವಿಭಿನ್ನವಾಗಿ ಕಂಡಿದ್ದು ಮನೋಜ್ ಎಂಬ ಯುವಕ. ‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದಲ್ಲಿ ಗೆದ್ದ ಹಣದಿಂದ ತಂದೆಗೆ ಸಹಾಯ ಮಾಡಬೇಕು ಎಂಬ ಇಚ್ಛೆಏನೋ ಮನೋಜ್ ಗಿದೆ. ಆದ್ರೆ,ಅದಕ್ಕಿಂತ ಹೆಚ್ಚಾಗಿ ತಾನು ಮುಟ್ಟಾಳ ಅಲ್ಲ ಎಂಬುದನ್ನ…