ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಯಗ್ರೀವ ಹೆಚ್ಚಾಗಿ ಕರ್ನಾಟಕದ ಉಡುಪಿ ಪ್ರದೇಶದಲ್ಲಿ ಮಾಡುವ ಸಿಹಿತಿಂಡಿ.
ಸಾಕಷ್ಟು ಜನರಿಗೆ ಪ್ರೀಯವಾದ ತಿನಿಸು ಎಂದರೆ ಹಯಗ್ರೀವ. ರುಚಿಯಾದ ಹಯಗ್ರೀವವನ್ನು ಮಾಡುವುದು ಬಹಳ ಸುಲಭ! ಹಬ್ಬ ಹರಿದಿನಗಳಲ್ಲಿ ಈ ಸಿಹಿಯನ್ನು ಹೆಚ್ಚಾಗಿ ತಯಾರಿಸಲಾಗುತ್ತದೆ. ಇದನ್ನು ಹೆಚ್ಚಾಗಿ ದೇವರ ನೈವೇದ್ಯಕ್ಕೆ ಇಡಲು ಮಾಡುತ್ತಾರೆ. ಹಯಗ್ರೀವ ಮಾಡಲು ಬೇಕಾಗುವ ಸಾಮಗ್ರಿ ಮತ್ತು ವಿಧಾನವನ್ನು ಇಲ್ಲಿದೆ ನೋಡಿ.
ಬೇಕಾಗುವ ಸಾಮಗ್ರಿಗಳು : ಕಡ್ಲೆ ಬೇಳೆ – 2 ಕಪ್, ತೆಂಗಿನ ತುರಿ – 1ಕಪ್, ಬೆಲ್ಲ – 1 ಕಪ್, ತುಪ್ಪ – 1 ಕಪ್
ಏಲಕ್ಕಿ ಪುಡಿ – 1/2 ಸ್ಪೂನ್, ಗಸಗಸೆ – 1/4 ಕಪ್, ಗೋಡಂಬಿ – 1/4 ಕಪ್, ಬಾದಾಮಿ – 1/4ಕಪ್
ಒಣದ್ರಾಕ್ಷಿ – 1/4 ಕಪ್.
ತಯಾರಿಸುವ ವಿಧಾನ
ಒಂದು ಬೌಲ್ನಲ್ಲಿ ಕಡಲೇ ಬೇಳೆಯನ್ನು ಹಾಕಿ. ಅದಕ್ಕೆ 2 ಕಪ್ ನೀರನ್ನು ಸೇರಿಸಿ ಅರ್ಧ ಗಂಟೆ ನೆನೆಯಲು ಬಿಡಿ. ನೆನೆಸಿಕೊಂಡ ಕಡಲೇ ಬೇಳೆಯನ್ನು ಕುಕ್ಕರ್ಗೆ ಹಾಕಿ. ಅರ್ಧ ಕಪ್ ನೀರನ್ನು ಸೇರಿಸಿ. 4-5 ಸೀಟಿ ಕೂಗಿಸಿ ಬೇಯಿಸಿ. ನಂತರ ಆರಲು ಬಿಡಿ. ಮುಚ್ಚಳವನ್ನು ತೆರೆದು, ಲಘು ಪ್ರಮಾಣದಲ್ಲಿ ಬೇಳೆಯನ್ನು ಅರೆದು ಒಂದೆಡೆ ಇಡಿ. ಒಂದು ಪಾತ್ರೆಯಲ್ಲಿ ಬೆಲ್ಲವನ್ನು ಸೇರಿಸಿ ಬಿಸಿ ಮಾಡಿ. ತಕ್ಷಣವೇ ಅರ್ಧ ಕಪ್ ನೀರನ್ನು ಬೆರೆಸಿ. ಬೆಲ್ಲ ಸಂಪೂರ್ಣವಾಗಿ ಕರಗಲು, ಮಧ್ಯಮ ಉರಿಯಲ್ಲಿ 5-7 ನಿಮಿಷಗಳ ಕಾಲ ಕುದಿಸಿ. ಬೆಲ್ಲದ ಪಾಕಕ್ಕೆ ಬೇಯಿಸಿಕೊಂಡ ಬೇಳೆಯನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಗಸಗಸೆಯನ್ನು ಬೆರೆಸಿ, ಚೆನ್ನಾಗಿ ಮಿಶ್ರಗೊಳಿಸಿ, 3 ಟೇಬಲ್ ಚಮಚ ತುಪ್ಪವನ್ನು ಸೇರಿಸಿ. ಇವೆಲ್ಲವನ್ನು 15 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ, ಒಣದ್ರಾಕ್ಷಿ ಮತ್ತು ಒಣ ತೆಂಗಿನ ತುರಿಯನ್ನು ಸೇರಿಸಿ. ಪುನಃ 5 ಟೇಬಲ್ ಚಮಚ ತುಪ್ಪವನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ. ಇದನ್ನು 2 ನಿಮಿಷ ಬೇಯಿಸಲು ಬಿಡಿ. ಈ ಮಧ್ಯೆ, ಒಂದು ಚಿಕ್ಕ ಪಾತ್ರೆಯಲ್ಲಿ ಒಂದು ಟೇಬಲ್ ಚಮಚ ತುಪ್ಪವನ್ನು ಸೇರಿಸಿ ಬಿಸಿ ಮಾಡಿ, ಕತ್ತರಿಸಿಕೊಂಡ ಗೋಡಂಬಿಯನ್ನು ಹಾಕಿ 2 ನಿಮಿಷ ಹುರಿಯಿರಿ. ಅವು ಹುರಿದು ಹೊಂಬಣ್ಣಕ್ಕೆ ತಿರುಗಬೇಕು,ನಂತರ ಲವಂಗವನ್ನು ಸೇರಿಸಿ ಬೇಯಿಸಿದ ಗೋಡಂಬಿ ಮಿಶ್ರಣವನ್ನು ಬೆಲ್ಲ ಮತ್ತು ಬೇಳೆಯ ಮಿಶ್ರಣಕ್ಕೆ ಸೇರಿಸಿ. ಏಲಕ್ಕಿ ಪುಡಿಯನ್ನು ಸೇರಿಸಿ, ಚೆನ್ನಾಗಿ ಬೆರೆಸಿ, ಬಿಸಿ ಇರುವಾಗಲೇ ಸವಿಯಲು ನೀಡಿ.
ಸಲಹೆ : ಕಡಲೇ ಬೇಳೆಯನ್ನು ನೆನೆಸಿಕೊಂಡರೆ ನುಣ್ಣಗೆ ಬೇಯುತ್ತದೆ. ಒಣಗಿದ ತೆಂಗಿನ ತುರಿ ಸೇರಿಸುವುದು ನಿಮ್ಮ ಆಯ್ಕೆ. ಗಸಗಸೆಯನ್ನು ಸೇರಿಸುವುದು ನಿಮ್ಮ ಆಯ್ಕೆಗೆ ಬಿಟ್ಟಿದ್ದು.
ಕ್ಯಾಲೋರಿ – 256.9 ಕ್ಯಾಲ್ ಫ್ಯಾಟ್ – 11.4 ಗ್ರಾಂ. ಪ್ರೋಟೀನ್ – 21.1 ಗ್ರಾಂ. ಕಾರ್ಬೋಹೈಡ್ರೇಟ್ – 61 ಗ್ರಾಂ. ಸಕ್ಕರೆ – 24.8 ಗ್ರಾಂ. ಫೈಬರ್ – 6.2 ಗ್ರಾಂ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 Raghavendrastrology@gmail.com ಮೇಷ(10 ಡಿಸೆಂಬರ್, 2018) ಸ್ವಲ್ಪ್ ಹೆಚ್ಚು ಹಣ ಮಾಡಲು ನಿಮ್ಮ ನವೀನ ಕಲ್ಪನೆಯನ್ನು ಬಳಸಿ. ಕೆಲವರಿಗೆ ಕುಟುಂಬದಲ್ಲಿಒಂದು ಹೊಸ ಆಗಮನ ಸಂಭ್ರಮಾಚರಣೆ…
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಸಂಘ ‘ಡಿ ಕಂಪನಿ’ ಜಿಲ್ಲೆಯ ಕುಗ್ರಾಮವೊಂದರ ಸರ್ಕಾರಿ ಶಾಲೆಯನ್ನು ದತ್ತು ಪಡೆದುಕೊಂಡಿದ್ದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ. ಸಕಲೇಶಪುರ ತಾಲೂಕಿನ ರಾಮೇನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯನ್ನು ಎರಡು ವರ್ಷಕ್ಕೆ ದತ್ತು ಪಡೆದಿರುವ ದರ್ಶನ್ ಅಭಿಮಾನಿಗಳು ಶಾಲಾ ಅಭಿವೃದ್ಧಿಗೆ ಮುಂದಾಗಿದ್ದಾರೆ. ಶಾಲೆಯ ಮಕ್ಕಳಿಗೆ ಸಮವಸ್ತ್ರಗಳು, ಪುಸ್ತಕ, ಶಾಲಾ ಕಟ್ಟಡಕ್ಕೆ ಬಣ್ಣ, ಪೀಠೋಪಕರಣ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ನೀಡುವ ವಾಗ್ದಾನವನ್ನು ದರ್ಶನ್ ಅಭಿಮಾನಿಗಳು ನೀಡಿದ್ದಾರೆ. ಈ ನಿಟ್ಟಿನಲ್ಲಿ ಡಿ ಕಂಪನಿ ಈಗಾಗಲೇ ಶಿಕ್ಷಣ ಇಲಾಖೆಯಿಂದ…
ಮಳೆ ಬಂದ್ರೆ ಸಾಕು ಬೆಂಗಳೂರಿಗರಿಗೆ ಭಯ.ಯಾಕೆಂದ್ರೆ ಎಲ್ಲಿ ಏನಾಗುತ್ತೆ ಗೊತ್ತಿಲ್ಲ. ಯಾವ ಮೋರಿಯಿಂದ ನೀರು ಹೊರಬಂದು ಮನೆಗಳಿಗೆ ನುಗ್ಗುತ್ತೋ ಎನ್ನುವ ಭಯ. ಎಲ್ಲಿ ಟ್ರಾಫಿಕ್ ಜಾಮ್ ಆಗುತ್ತೋ ಅನ್ನೋ ಭಯ.ಇವೆಲ್ಲದರ ನಡುವೆ ಇನ್ನೊಂದು ಭಾಗ್ಯ ಬೆಂಗಳೂರಿಗರಿಗೆ ಸೇರಲಿದೆ.
ಚಿನ್ನ ಜನಸಾಮಾನ್ಯರಿಗೆ ಕೈಗೆಟುಕುತ್ತಿಲ್ಲ. ನಿರಂತರವಾಗಿ ಬಂಗಾರದ ಬೆಲೆ ಏರಿಕೆಯಾಗ್ತಿದೆ. ಸತತ 6ನೇ ದಿನವೂ ಬಂಗಾರದ ಬೆಲೆ ಹೆಚ್ಚಾಗಿದೆ. ಚಿನ್ನ ಈವರೆಗೆ ಶೇಕಡಾ 25 ರಷ್ಟು ಏರಿಕೆ ಕಂಡಿದ್ದು, ಸೋಮವಾರ 10 ಗ್ರಾಂ ಚಿನ್ನದ ಬೆಲೆ 39,196 ರೂಪಾಯಿಯಾಗಿದೆ. ಇನ್ನು ಬೆಳ್ಳಿ ಬೆಲೆಯಲ್ಲೂ ಏರಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆ ಶೇಕಡಾ 1ರಷ್ಟು ಹೆಚ್ಚಳ ಕಂಡಿದೆ. ಸೋಮವಾರ ಬೆಳ್ಳಿ ಬೆಲೆ ಕೆ.ಜಿ.ಗೆ 45,058 ರೂಪಾಯಿಗೆ ಮಾರಾಟವಾಗ್ತಿದೆ. ಶುಕ್ರವಾರ ಕೆ.ಜಿ. ಬೆಳ್ಳಿ 45,148 ರೂಪಾಯಿಯಿತ್ತು. ಇದು 2016ರ ನಂತ್ರ ಗರಿಷ್ಠ…
ಭಾರತದಲ್ಲಿ ಜನಸಂಖ್ಯೆಯಂತೆಯೇ ವಾಟ್ಸಾಪ್ ಬಳಕೆದಾರರ ಸಂಖ್ಯೆಯೂ ಏರುಗತಿಯಲ್ಲಿ ಸಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ನ ದುರ್ಬಳಕೆ ಹೆಚ್ಚಾಗುತ್ತಿದ್ದು, ತಪ್ಪು ಮಾಹಿತಿ, ಸುಳ್ಳು ಸುದ್ದಿಗಳನ್ನು ಹರಡುವ ಪ್ರಬಲ ಜಾಲ ತಾಣವಾಗಿ ಮಾರ್ಪಟ್ಟಿದೆ. ಅಷ್ಟೇ ಅಲ್ಲದೆ ಚೈಲ್ಡ್ ಪೋರ್ನೋಗ್ರಫಿಯೂ ಶೇರ್ ಆಗುತ್ತಿದೆ. ಇಂತಹ ದುಷ್ಕೃತ್ಯಗಳ ಮೂಲ ಪತ್ತೆ ಹಚ್ಚುವಲ್ಲಿ ವಾಟ್ಸಾಪ್ ಕಂಪನಿಯೂ ಹರ ಸಾಹಸ ಮಾಡುತ್ತಿದೆ.ಇದೀಗ ವಾಟ್ಸಾಪ್ ಬಳಕೆದಾರರ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಯಾವ ಖಾತೆಯಿಂದ ತಪ್ಪು ಮಾಹಿತಿ, ಸುಳ್ಳು ಸುದ್ದಿ, ಕಾನೂನು ಬಾಹಿರ ಪೋರ್ನ್ ಸಂದೇಶಗಳು ರವಾನೆಯಾಗುವುದೋ…
ಕೆಜಿಎಫ್ ಪರಭಾಷೆಗಳಿಗೆ ಡಬ್ ಆಗಿ ಧೂಳು ಎಬ್ಬಿಸಿದ ಬೆನ್ನಲ್ಲೇ ಇತ್ತ ಬೇರೆ ಭಾಷೆಯ ಚಲನ ಚಿತ್ರಗಳು ಸಹ ಡಬ್ ಆಗಿ ಬಿಡುಗಡೆಯಾಗಲು ಸಿದ್ಧವಾಗಿ ನಿಂತಿವೆ. ಇಷ್ಟು ದಿನ ಬೇರೆ ಭಾಷೆಯ ಚಲನ ಚಿತ್ರಗಳು ಕನ್ನಡ ಭಾಷೆಗೆ ಡಬ್ ಆಗಲು ಭಾರಿ ವಿರೋಧ ವಿತ್ತು. ಡಬ್ ವಿಷಯವನ್ನು ಮಾತನಾಡುವಂತೂ ಇರಲಿಲ್ಲ. ಅದರಲ್ಲೂ ಕನ್ನಡ ಚಲನಚಿತ್ರ ಮಂಡಲಿಯಂತೂ ಇದನ್ನು ತೀವ್ರವಾಗಿ ವಿರೋಧಿಸಿತ್ತು. ಕಾರಣ ಕನ್ನಡ ಚಲನಚಿತ್ರ ರಂಗವು ಮೊದಲೇ ಮಾರ್ಕೆಟಿಂಗ್ ವಿಚಾರದಲ್ಲಿ ಹಿಂದೆ ಇರುವುದರಿಂದ ಪರಭಾಷಾ ಚಿತ್ರಗಳು ಡಬ್ ಆದರೆ…