ಆಧ್ಯಾತ್ಮ

ಸೂರ್ಯಗ್ರಹಣದ ಪರಿಣಾಮವೇನು -ಏನು ಮಾಡಬೇಕು? ಏನು ಮಾಡಬಾರದು?

298

ಪಂಡಿತ್ ರಾಘವೇಂದ್ರ ಸ್ವಾಮಿಗಳು ನಿಮ್ಮ ಜೀವನದಸಮಸ್ಯೆಗಳಾದ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ,ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9901077772

ಸರ್ವೇಷಾಮೇವ ವರ್ಣಾನಾಂ ಸೂತಕಂ ರಾಹುದರ್ಶನೇ ।
ಸಚೇಲಂ ತು ಭವೇತ್ ಸ್ನಾನಂ ಸೂತಕಾನ್ನಂ ವಿವರ್ಜಯೇತ್ ।।

ಗ್ರಹಣವನ್ನು ಎಲ್ಲರೂ ನೋಡಬೇಕು. ಗ್ರಹಣದ ಸೂತಕವನ್ನು ಎಲ್ಲ ಜಾತಿ-ಮತದವರೂ, ಎಲ್ಲ ವರ್ಣದವರೂ ಆಚರಿಸ ಬೇಕು. ಚಿಕ್ಕ ಮಕ್ಕಳು, ಗರ್ಭಿಣಿಯರು, ಬಾಳಂತಿಯರು, ಅನಾರೋಗ್ಯ ಪೀಡಿತರು ಹಾಗೂ ಅತಿವೃದ್ಧರನ್ನು ಬಿಟ್ಟು ಆರೋಗ್ಯವಂತರಾದ ಎಲ್ಲರೂ ಗ್ರಹಣ ಅಶೌಚವನ್ನು ಆಚರಿಸಬೇಕು. ಅಶಕ್ತರಿಗೆ ಅವರವರ ಶಕ್ತಿಗೆ ಅನುಸಾರವಾದ ಸಡಿಲಿಕೆ ಇದೆ.

ಗ್ರಹಣದ ಸ್ಪರ್ಷ, ಮೋಕ್ಷ ಸ್ನಾನವನ್ನು ಉಟ್ಟಬಟ್ಟೆ ಸಹಿತವಾಗಿ ಮಾಡಬೇಕು. ವೇಧಕಾಲದಿಂದ ಗ್ರಹಣ ಮುಕ್ತಾಯದವರೆಗೂ ಏನನ್ನೂ ತಿನ್ನಬಾರದು. ಕಠೋರವಾದ ಮಾತುಗಳನ್ನು ಆಡಬಾರದು. ಹೆಚ್ಚುವದು-ಕೊಚ್ಚುವದು, ಅಸ್ತ್ರ-ಶಸ್ತ್ರಗಳ ಉಪಯೋಗವನ್ನು ಮಾಡಬಾರದು.

ಉಗುರು ಕತ್ತರಿಸುವದು, ಕೂದಲು ಕತ್ತರಿಸುವದು, ಅನಾವಶ್ಯಕ ಹರಟೆ, ವಾದ-ವಿವಾದ, ಅಡುಗೆ ಮಾಡುವದು, ಕಸತಗೆಯುವದು, ಮಲಗುವದು ಮೊದಲಾದ ಕೆಲಸಗಳನ್ನು ವೇಧಕಾಲದಲ್ಲಿ ಮಾಡಬಾರದು. ವೇಧಕಾಲದಲ್ಲಿ ನೀರು-ಆಹಾರ ಸೇವನೆ ಮಾಡದೇ ದೇಹವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು. ಇದರಿಂದ ಗ್ರಹಣ ಕಾಲದಲ್ಲಿ ಮಲ-ಮೂತ್ರ ವಿಸರ್ಜನೆಯ ಪ್ರಸಂಗ ಬರಲಾರದು.

ಸೂತಕೇ ಮೃತಕೇ ಚೈವ ಸದೋಷೋ ರಾಹು ದರ್ಶನೇ ।
ತಾವದೇವ ಭವೇತ್ ಶುದ್ಧಿಃ ಯಾವನ್ಮುಕ್ತಿರ್ನ ಸಂಶಯಃ ।।

ಯಾರಿಗಾದರೂ ಜನನ ಶೌಚ, ಮರಣ ಶೌಚ ಇದ್ದರೆ ಗ್ರಹಣ ಕಾಲದಲ್ಲಿ ದೋಷ ಇರುವದಿಲ್ಲ. ಅವರೂ ಕೂಡ ಸ್ನಾನ-ದಾನ ಮೊದಲಾದ ಆಚರಣೆ ಮಾಡಬೇಕು. ಗ್ರಹಣ ಮೋಕ್ಷದ ನಂತರ ಮೊದಲಿನಂತೆ ಜನನ-ಮರಣ ಅಶೌಚ ಆಚರಣೆಯನ್ನು ಮುಂದುವರೆಸಬೇಕು.

ಸ್ನಾನೇ ನೈಮಿತ್ತಿಕೇ ಪ್ರಾಪ್ತೇ ನಾರೀ ಯದಿ ರಜಸ್ವಲಾ ।
ಪಾತ್ರಾಂತರಿತ ತೋಯೇನ ಸ್ನಾನಂ ಕೃತ್ವಾ ವ್ರತಂ ಚರೇತ್
ಪಾತ್ರಾಂತರಿತ ತೋಯೇನ ಸ್ನಾನಂ ಕೃತ್ವಾ ವ್ರತಂ ಚರೇತ್ ।।

ರಜಸ್ವಲಾ ಸ್ತ್ರೀಯರು ನದಿ-ಬಾವಿಗಳನ್ನು ಬಿಟ್ಟು ಒಂದು ಪಾತ್ರೆಯಲ್ಲಿಯ ನೀರನ್ನು ಬಳಸಿ ಸ್ನಾನಮಾಡಬೇಕು.

ಸ್ಪರ್ಷೇ ಜ್ಞಾತೇ ತಥಾ ಗ್ರಸ್ತೇ ಮೋಕ್ಷಕಾಲೇ ವಿಮೋಚನೇ ।
ಸ್ನಾನಂ ಶ್ರಾದ್ಧಂ ಜಪಂ ಹೋಮಂ ದಾನಂ ಸ್ನಾನಂ ಕ್ರಮಾತ್ ಚರೇತ್ ।।

ಗ್ರಹಣ ಸ್ಪರ್ಷಸ್ನಾನ, ಮಧ್ಯಸ್ನಾನ, ತರ್ಪಣ, ಜಪ, ಹೋಮ, ದಾನದ ನಂತರ ಗ್ರಹಣ ಮೋಕ್ಷ ದರ್ಶನ ಮಾಡಿ ಮತ್ತೆ ಸ್ನಾನ ಮಾಡಬೇಕು. ಗ್ರಹಣ ಕಾಲದಲ್ಲಿ ಬಿಸಿನೀರಿನ ಸ್ನಾನ ಮಾಡಬಾರದು.

ಚಂದ್ರ ಸೂರ್ಯ ಗ್ರಹೇ ಸ್ನಾಯಾತ್ ಸೂತಕೇ ಮೃತಕೇ ತಥಾ ।
ಅಸ್ನಾಯಾತ್ ಮೃತ್ಯುಮಾಪ್ನೋತಿ ಸ್ನಾಯಾತ್ ಮೃತ್ಯುಂ ನ ವಿಂದತಿ ।।

ಜನನ-ಮರಣ ಶೌಚ, ಗ್ರಹಣ ಶೌಚ ಸ್ನಾನವನ್ನು ಮಾಡಿದರೆ ಅಪಮೃತ್ಯು ಬರುವದಿಲ್ಲ. ಶೌಚ ಆಚರಣ ಮಾಡದವರಿಗೆ ಮೃತ್ಯು ಸಮಾನವಾದ ಪಾಪ ಬರುವದು.

ಸರ್ವಂ ಗಂಗಾ ಸಮಂ ತೋಯಂ ಸರ್ವೇ ವ್ಯಾಸ ಸಮಾ ದ್ವಿಜಃ ।
ಸರ್ವಂ ಭೂಮಿ ಸಮಂ ದಾನಂ ಗ್ರಹಣೇ ಚಂದ್ರ ಸೂರ್ಯಯೋಃ ।।

ಗ್ರಹಣ ಕಾಲದಲ್ಲಿ ಎಲ್ಲ ತೀರ್ಥಗಳೂ ಗಂಗೆಗೆ ಸಮ. ಹರಿಯುವ ನೀರು ಎಲ್ಲವೂ ಶ್ರೇಷ್ಠವೇ ಇವುಗಳಲ್ಲಿ ಮನೆಯಲ್ಲಿ ನಲ್ಲಿ, ಬಾವಿಗಳು, ಹಳ್ಳ-ಕೊಳ್ಳಗಳು, ನದಿಗಳು, ಸಮುದ್ರಗಳು ಒಂದಕ್ಕಿಂತ ಒಂದು ಶ್ರೇಷ್ಠ ಎಂದು ತಿಳಿಯಬೇಕು. ಸಂಗ್ರಹಿಸಿಟ್ಟ ನೀರು ಉಪಯೋಗಿಸ ಬಾರದು. ಆಶೀರ್ವದಿಸುವ ದ್ವಿಜ ವ್ಯಾಸರಿಗೆ ಸಮನಾದರೆ ಕೊಡುವ ದಾನ ಭೂದಾನಕ್ಕೆ ಸಮ.

ಸಮಮಬ್ರಾಹ್ಮಣೇ ದಾನಂ ದ್ವಿಗುಣಂ ಬ್ರಾಹ್ಮಣ ಬ್ರುವೇ ।
ಶ್ರೋತ್ರೀಯೇ ಶತಸಾಹಸ್ರಂ ಪಾತ್ರೇತು ಅನಂತ ಮಶ್ನುತೇ ।।

ನಿತ್ಯ ಸಂಧ್ಯಾದಿ ಅನುಷ್ಠಾನ ಮಾಡುವ ಆಚರಣಶೀಲ ಬ್ರಾಹ್ಮಣನಿಗೆ ಕೊಡುವ ದಾನದಿಂದ ಎರಡುಪಟ್ಟು ಫಲ ಬರುವದು, ಪಾಠ-ಪ್ರವಚನಾದಿಗಳನ್ನೂ ಮಾಡುವ ಶ್ರೋತ್ರೀಯರಿಗೆ ಕೊಡುವ ದಾನ ಲಕ್ಷಫಲದಾಯಕ. ಈ ಎಲ್ಲ ಸದ್ಗುಣಗಳಿಂದ ಕೂಡಿದ ನಿತ್ಯ ಸತ್ಯ-ಧರ್ಮಾಚರಣ ಶೀಲರಾದ ಯಾವದೇ ಸತ್ಪಾತ್ರರಿಗೆ ಕೊಡುವ ದಾನ ಅನಂತ ಫಲವನ್ನು ಕೊಡವದು.

ಚಂದ್ರಸೂರ್ಯಗ್ರಹೇ ತೀರ್ಥೇ ಮಹಾಪರ್ವಾದಿಕೇ ತಥಾ ।
ಮಂತ್ರದೀಕ್ಷಾಂ ಪ್ರಕುರ್ವಾಣೋ ಮಾಸರ್ಕ್ಷಾದೀನ್ ನ ಶೋಧಯೇತ್ ।।

ಗ್ರಹಣಕಾಲವೇ ಒಂದು ಪರ್ವವಾಗಿ ಇರುವದರಿಂದ ಮಂತ್ರೋಪದೇಶ ಪಡೆಯಲು ಅತ್ಯಂತ ಶ್ರೇಷ್ಠವಾಗಿರುತ್ತದೆ. ಈ ಸಮಯದಲ್ಲಿ ದೀಕ್ಷೆಗೆ ರಾಹುಕಾಲ-ಗುಳಿಕಕಾಲ, ತಿಥಿ, ನಕ್ಷತ್ರ ಇತ್ಯಾದಿ ಮುಹೂರ್ತವನ್ನು ನೋಡಬಾರದು.

ಶಾಂತಿ ಮಂತ್ರ

ಇಂದ್ರೋsನಲೋ ದಂಡಧರಶ್ಚ ಕಾಲಃ ಪಾಶಯುಧೋ ವಾಯುಧನೇಶ ರುದ್ರಃ ।
ಮಜ್ಜನ್ಮ ಋಕ್ಷೋ ಮಮರಾಶಿ ಸಂಸ್ಥಾಃ ಕುರ್ವಂತು ಸರ್ವೇ ಗ್ರಹದೋಷ ಶಾಂತಿಮ್ ।।

ವೈಚಾರಿಕ ಚಿಂತನೆ.

ಗ್ರಹಣ ನೋಡಬಾರದು ಎಂದು ಎಲ್ಲಿಯೂ ಹೇಳಿಲ್ಲ, ಗರ್ಭಿಣಿಯರಿಗೂ ಅವರ ಶಕ್ತಿಗೆ ಅನುಸಾರವಾದ ಆಚರಣೆ ಹಾಗೂ ಶುಭಫಲಗಳನ್ನು ಹೇಳಿದ್ದಾರೆ. ಜ್ಯೋತಿಷ್ಯ ಶಾಸ್ತ್ರದ ಉದ್ದೇಶ ಧರ್ಮದ ಆಚರಣೆಯೇ ಹೊರತು ಭಯ ಹುಟ್ಟಿಸುದೂ ಅಲ್ಲ,

ಪಂಡಿತ್ ರಾಘವೇಂದ್ರ ಸ್ವಾಮಿಗಳು ನಿಮ್ಮ ಜೀವನದಸಮಸ್ಯೆಗಳಾದ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ,ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9901077772

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಕೋತಿಯನ್ನು ಈ ಶ್ರೀಮಂತ ದಂಪತಿಗಳು ತಮ್ಮ ಸ್ವಂತ ಮಗನಿಗಿಂತ ಹೆಚ್ಚಾಗಿ ಸಾಕುತ್ತಿದ್ದಾರೆ.!ಏಕೆ ಗೋತಾ.?ತಿಳಿಯಲು ಈ ಲೇಖನ ಓದಿ…

    ಮಕ್ಕಳಿಲ್ಲದ ಶ್ರೀಮಂತ ದಂಪತಿಗಳಾದ ಬ್ರಿಜೇಶ್ ಶ್ರೀವಾತ್ಸವ ಮತ್ತವರ ಪತ್ನಿ ಶಬೀಸ್ತಾ ಶ್ರೀವಾತ್ಸವ ತಾವು ಸಾಕಿರುವ ಮಂಗನನ್ನು ಮಗುವಿನಂತೆ ನೋಡಿಕೊಳ್ಳುತ್ತಿದ್ದಾರೆ. ಈ ಮಂಗನ ವಾಸ್ತವ್ಯಕ್ಕೆ ಎಸಿ ಕೊಠಡಿಯೊಂದನ್ನು ನಿರ್ಮಿಸಿದ್ದಾರೆ.

  • ಜ್ಯೋತಿಷ್ಯ

    ದಿನ ಭವಿಷ್ಯ ಗುರುವಾರ,ಈ ದಿನದ ನಿಮ್ಮ ರಾಶಿ ಭವಿಷ್ಯದ ಜೊತೆಗೆ ಅದೃಷ್ಟದ ಸಂಖ್ಯೆ ತಿಳಿಯಿರಿ….

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ9663218892 ಮೇಷ(22 ನವೆಂಬರ್, 2018) ಆರೋಗ್ಯಕರ ಮನಸ್ಸು ಯಾವಾಗಲೂ ಆರೋಗ್ಯಕರ ದೇಹದಲ್ಲಿ ಪರ್ಯವಸಾನವಾಗುತ್ತದೆಂದು ನೆನಪಿಡಿ. ಎಲ್ಲಾ ಬದ್ಧತೆಗಳು ಮತ್ತು ಆರ್ಥಿಕ ವ್ಯವಹಾರಗಳನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು….

  • ಮನರಂಜನೆ

    BB ಮನೆಯಲ್ಲಿ ಶುರುವಾಯ್ತು ಪ್ರೇಮ್ ಕಹಾನಿ!’ನನ್ನ ಕಂಡರೆ ನಿಮಗೆ ಏನನಿಸುತ್ತೆ?

    ಬಿಗ್‌ ಬಾಸ್‌ ಮನೆಯಲ್ಲಿ ಕೋಪ, ಜಗಳ, ಲವ್, ಕೇರ್‌ ಇವೆಲ್ಲಾ ಮಾಮೂಲಿ.ಅದರಲ್ಲೂ ನಟ-ನಟಿಯರು ಬೇಗ ಗಂಟು ಹಾಕಿಕೊಳ್ಳುತ್ತಾರೆ ಎಂಬುವುದು ವೀಕ್ಷಕರ ಅಭಿಪ್ರಾಯ. ಮೊದಲ ವಾರದಲ್ಲೇ ಅತಿ ಹೆಚ್ಚು ವೋಟ್‌ ಪಡೆದು ನಾಮಿನೇಶನ್‌ ಪಟ್ಟಿಯಲ್ಲಿ ಸೇರಿಕೊಂಡಿರುವ ಸ್ಪರ್ಧಿ ಚೈತ್ರಾ ಕೊಟ್ಟೂರ್‌ ಟಾಸ್ಕ್ ನಡೆದ ನಂತರ ಮಧ್ಯರಾತ್ರಿ ‘ಲಕ್ಷ್ಮಿ ಬಾರಮ್ಮ’ ಖ್ಯಾತಿಯ ಶೈನ್‌ ಶೆಟ್ಟಿ ಜೊತೆ ಕುಳಿತು ಮಾತನಾಡುತ್ತಿರುತ್ತಾರೆ. ಆಗ ಮನಸ್ಸಲ್ಲಿದ್ದ ಲವ್‌ ವಿಚಾರವನ್ನು ತೆರೆದಿಟ್ಟಿದ್ದಾರೆ. ಬಿಗ್‌ ಬಾಸ್‌ ಮನೆಗೆ ಪ್ರವೇಶಿಸಿದ ಬಳಿಕ ಶೈನ್‌ ಶೆಟ್ಟಿ ಜೊತೆ ಕಾಣಿಸಿಕೊಳ್ಳದ ಚೈತ್ರಾ…

  • ಸುದ್ದಿ

    ‘ಇಂಟರ್ ನ್ಯಾಷನಲ್ ರೆಲಿಜಿಯಸ್ ಫ್ರೀಡಂಅವಾರ್ಡ್’ ತನ್ನದಾಗಿಸಿಕೊಂಡ 83 ವರ್ಷದ ಅಬೂಬಕರ್ ಅಬ್ದುಲ್ಲಹಿ….!

    ದಾಳಿಕೋರರಿಂದ ನೂರಾರು ಕ್ರೈಸ್ತರನ್ನು ರಕ್ಷಿಸಿದ ಮುಸ್ಲಿಂ ಧರ್ಮಗುರುವಿಗೆ ಅತ್ಯುನ್ನತ ಪ್ರಶಸ್ತಿ ನೀಡಿದ ಅಮೆರಿಕಾಲಾಗೊಸ್, ನೈಜೀರಿಯಾ, ಜು.19:  ಮಧ್ಯ ನೈಜೀರಿಯಾದಲ್ಲಿ ದಾಳಿಯೊಂದರ ಸಂದರ್ಭ ತನ್ನ ನಿವಾಸ ಹಾಗೂ ಮಸೀದಿಯಲ್ಲಿ 262 ಕ್ರೈಸ್ತರಿಗೆ ಆಶ್ರಯವೊದಗಿಸಿದ 83 ವರ್ಷದ ಮುಸ್ಲಿಂ ಧರ್ಮಗುರು ಇಮಾಮ್ ಅಬೂಬಕರ್ ಅಬ್ದುಲ್ಲಾಹಿ ಎಂಬವರನ್ನು  ಅಮೆರಿಕಾ ಸರಕಾರ ಗೌರವಿಸಿದೆ. ಅಬ್ದುಲ್ಲಾಹಿ ಅವರ ಜತೆ ಸುಡಾನ್, ಇರಾಕ್, ಬ್ರೆಝಿಲ್ ಹಾಗೂ ಸೈಪ್ರಸ್ ದೇಶಗಳ ನಾಲ್ಕು ಮಂದಿ ಇತರ ಧಾರ್ಮಿಕ ನಾಯಕರಿಗೆ  2019ನೇ ವರ್ಷದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಪ್ರಶಸ್ತಿ (ಇಂಟರ್…

  • inspirational, ಸುದ್ದಿ

    ಕೇವಲ ಒಂದು ಸೇಬಿಗಾಗಿ ಬಿಗ್ ಮನೆಯಲ್ಲಿ ಸ್ಪರ್ಧಿಗಳ ರಂಪಾಟ..!

    ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಒಂದು ಸೇಬಿಗಾಗಿ ಇಡೀ ದಿನ ಜಗಳವಾಡಿದ್ದು, ಮನೆಯಲ್ಲಿ ದೊಡ್ಡ ರಂಪಾಟವೇ ನಡೆದು ಹೋಗಿದೆ. ಮೊನ್ನೆ ರಾತ್ರಿ ಚೈತ್ರ ಕೋಟೂರು ಒಂದು ಆಪಲ್ ತಿಂದಿದ್ದಾರೆ. ಆಪಲ್ ತಿನ್ನುವ ಮುನ್ನ ಅಡುಗೆ ಮನೆಯ ಡಿಪಾರ್ಟ್ಮೆಂಟ್ ಗೆ ಸೇರಿದ್ದ ಚಂದನ್ ಆಚಾರ್ ಪರ್ಮಿಶನ್ ಕೇಳಿದ್ದಾರೆ. ಚೈತ್ರ ಕೋಟೂರುಗೆ ಚಂದನ್ ಆಚಾರ್ ಅನುಮತಿ ನೀಡಿ ಸುಜಾತ ಅವರಿಗೆ ಈ ವಿಷಯವನ್ನು ತಿಳಿಸಲು ಹೇಳುತ್ತಾರೆ. ಆಪಲ್ ತಿನ್ನುವಾಗ ಅದೇ ಚಂದನ್ ಆಚಾರ್, ಪ್ರತಾಪ್, ರಾಜು ತಾಳಿಕೋಟೆ ಜೊತೆಗೂ ಹಂಚಿಕೊಂಡು ತಿಂದಿದ್ದಾರೆ….

  • ಸಿನಿಮಾ

    ನಟಿ ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ಮೇಲೆ ಮಾಡಿದ್ದ ಮೀಟೂ ಪ್ರಕರಣ ಏನಾಗಿದೆ ಗೊತ್ತಾ..?

    ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿದ್ದ ಮೀಟೂ ಆರೋಪ ಕನ್ನಡ ಚಿತ್ರರಂಗದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ನಟಿ ಶೃತಿ ಹರಿಹರನ್ ಮೀಟೂ ಪ್ರಕರಣ ಹಳ್ಳ ಹಿಡಿಯುವ ಎಲ್ಲಾ ಲಕ್ಷಣಗಳು ಕಾಣಿಸ್ತಿವೆ. ಯಾಕಂದ್ರೆ ಬಿರುಸಿನ ತನಿಖೆಗೆ ಇಳಿದಿದ್ದ ಪೊಲೀಸರು ಕೂಡ ಸಾಕ್ಷಿಗಳ ಕೊರೆತೆಯಿಂದಾಗಿ ಅವಧಿಗೂ ಮುನ್ನವೇ ಬಿ ರಿಪೋರ್ಟ್ ಸಲ್ಲಿಸೋಕೆ ಮುಂದಾಗಿದ್ದಾರೆ. ನಟಿ ಶೃತಿ ಹರಿಹರನ್ ಮೀಟೂ ಪ್ರಕರಣ ಇಡೀ ಕನ್ನಡ ಚಿತ್ರರಂಗವನ್ನೇ ತಲ್ಲಣಗೊಳಿಸುವಂತೆ ಮಾಡಿತ್ತು. ಅವರು ದಕ್ಷಿಣ ಭಾರತದ ಬಹುಭಾಷಾ ನಟ ಅರ್ಜುನ್…