ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಆತ್ಮಹತ್ಯೆ ಮಾಡಿಕೊಳ್ಳಲೆಂದು ನದಿಗೆ ಧುಮುಕಿದ ವ್ಯಕ್ತಿಯ ಹಣೆಬರಹದಲ್ಲಿ ದೈವ ಬೇರೆಯದ್ದೇ ಯೋಜನೆ ರೂಪಿಸಿದ್ದ. ಸಾಯಲೆಂದು ನದಿಗೆ ಧುಮುಕಿದ್ದ ಕೆಲವೇ ಕ್ಷಣಗಳಲ್ಲಿ ಆತನ ಮನಸ್ಸು ಬದಲಾಗಿತ್ತು. ನೀರಿಗೆ ಬಿದ್ದ ತಕ್ಷಣ ತಾನು ಬದುಕಬೇಕು ಎಂದೆನಿಸಿತ್ತಂತೆ.ಹೌದು, ಇಂತದ್ದೊಂದು ಘಟನೆ ಗುವಾಹಟಿಯಿಂದ ವರದಿಯಾಗಿದ್ದು, ರಭಸದಿಂದ ಹರಿಯುತ್ತಿದ್ದ ಬ್ರಹ್ಮಪುತ್ರ ನದಿಗೆ ಲಕ್ಷ್ಮಣ್ ಸ್ವರ್ಗೀಯರಿ ಎಂಬಾತ ಧುಮುಕಿ ಆತ್ಮಹತ್ಯೆಗೆ ಮುಂದಾಗಿದ್ದ. ಆದರೆ ಆತನ ಮನಸ್ಸು ಬದಲಾಯಿತು. ನದಿಯ ಪ್ರವಾಹಕ್ಕೆ ಸಿಲುಕಿದ ಈತ 10 ಗಂಟೆಗಳಲ್ಲಿ 100 ಕಿ.ಮೀ. ದೂರಕ್ಕೆ ಸುರಕ್ಷಿತವಾಗಿ ತಲುಪಿದ್ದಾನೆ.

ಬಕ್ಸಾ ಜಿಲ್ಲೆಯ ತಾಮುಲ್ಪುರದ ಧುಲಬಾರಿಯ ನಿವಾಸಿಯಾಗಿದ್ದ 27 ವರ್ಷದ ಸ್ವರ್ಗೀಯರಿ ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ತನ್ನ ದ್ವಿಚಕ್ರ ವಾಹನದಲ್ಲಿ ಗುವಾಹಟಿಯ ಸರೈಘಾಟ್ ಸೇತುವೆಯನ್ನು ತಲುಪಿದ್ದಾನೆ. ಪರ್ಸ್, ಮೊಬೈಲ್ ಫೋನ್, ಗುರುತಿನ ದಾಖಲೆಗಳು, ಚಪ್ಪಲಿ ಸೇರಿದಂತೆ ದ್ವಿಚಕ್ರ ವಾಹನವನ್ನು ಸೇತುವೆ ಮೇಲೆ ಬಿಟ್ಟು ಬ್ರಹ್ಮಪುತ್ರ ನದಿಗೆ ಹಾರಿದ್ದಾನೆ.ಕೂಡಲೇ ಆತ ನದಿಯ ಮೇಲೆ ತೇಲುತ್ತಿದ್ದ ನೀರಿನ ಜೊಂಡು ಮತ್ತು ಬಾಳೆ ಎಲೆಯನ್ನು ಗಮನಿಸಿದ್ದಾನೆ. ಅದನ್ನು ಹಿಡಿದು ಈಜಲು ಶುರುಮಾಡಿದ್ದಾನೆ. ರಾತ್ರಿಯಿಡೀ ಈಜುತ್ತಲೇ ಸಾಗಿದ್ದ ಈತನನ್ನು ಮರುದಿನ ಬೆಳಗ್ಗೆ ಅಸ್ಸಾಂನ ಬರ್ಪೇಟಾ ಜಿಲ್ಲೆಯ ಬೊಹೊರಿಯಲ್ಲಿನ ದೋಣಿಗಾರರು ರಕ್ಷಿಸಿದ್ದಾರೆ.

ಕಲಾಚಂದ್ ಅಲಿ ಎಂಬಾತ ದೋಣಿ ನಡೆಸುತ್ತಿದ್ದಾಗ ಬಟ್ಟೆಗಳಿಲ್ಲದೆ ನೀರಿನಲ್ಲಿ ತೇಲಿ ಬರುತ್ತಿದ್ದ ಸ್ವರ್ಗೀಯರಿಯನ್ನು ರಕ್ಷಿಸಿದ್ದಾನೆ. ನಾನು ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೆ. ಆಗ ಯಾರೋ ಸಹಾಯಕ್ಕಾಗಿ ಕೇಳುತ್ತಿದ್ದರು. ಕೊನೆಗೆ ಆತನನ್ನು ಪತ್ತೆ ಮಾಡಿ ದೋಣಿಯನ್ನು ಅವನ ಕಡೆಗೆ ತೆಗೆದುಕೊಂಡು ಅವನನ್ನು ರಕ್ಷಿಸಿದೆ ಎಂದು ಹೇಳಿದ್ದಾರೆ.

ದಡಕ್ಕೆ ಸೇರಿದ ನಂತರ ಆತನನ್ನು ಪೊಲೀಸರ ಸಹಾಯದಿಂದ ಆಸ್ಪತ್ರೆಗೆ ಸೇರಸಲಾಗಿದ್ದು, ಆತ್ಮಹತ್ಯೆಗೆ ಮುಂದಾಗಿದ್ದು ಯಾಕೆ ಎನ್ನುವುದಕ್ಕೆ ಯಾವುದೇ ಕಾರಣವನ್ನು ತಿಳಿಸದ ಆತ ನನ್ನ ಜೀವನವನ್ನು ಕೊನೆಗೊಳಿಸಲು ನಾನು ಬಯಸಿದ್ದೆ. ಹಾಗಾಗಿ ನದಿಗೆ ಹಾರಿದೆ. ಆದರೆ ನಾನು ಸಾಯಲು ಆಗಲಿಲ್ಲ. ನೀರಿಗೆ ಬಿದ್ದ ತಕ್ಷಣ ನಾನು ಬದುಕಬೇಕು ಎನಿಸಿತು ಎಂದು ಸುದ್ದಿಗಾರರಿಗೆ ತಿಳಿಸಿದ್ದಾನೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಮಳೆ, ನೆರೆ ಹಾನಿಯಿಂದಾಗಿ ಹಾಳಾದ ವಾಣಿಜ್ಯ ಬೆಳೆಗಳಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ನಿಯೋಗ ತೆರಳಿ ಕೇಂದ್ರಕ್ಕೆ ಮನವಿ ಮಾಡಲು ತೀರ್ಮಾನಿಸಲಾಗಿದೆ. ಹಾನಿಯಾದ, ವಿಮೆ ವ್ಯಾಪ್ತಿಗೆ ಬಾರದ ಕಬ್ಬು, ಕಾಫಿ ತೋಟಗಾರಿಕೆ ಬೆಳೆಗಳಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಒತ್ತಾಯಿಸಿ ಕೇಂದ್ರಕ್ಕೆ ನಿಯೋಗ ಹೋಗಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಂಪುಟ ಸಭೆಯ ಬಳಿಕ ಸಚಿವ ಜೆಸಿ ಮಾಧುಸ್ವಾಮಿ ತಿಳಿಸಿದ್ದಾರೆ. ಅಲ್ಲದೆ, ಮುಂದಿನ ದಿನಗಳಲ್ಲಿ…
ಬೆಳ್ಳಂಬೆಳಗ್ಗೆ ತಿಂಡಿ ಏನ್ಮಾಡೋದಪ್ಪಾ ಅಂತಾ ಯೋಚಿಸ್ತಿದ್ದೀರಾ? ಈಗ ಸೀಸನ್ ಚೇಂಜ್ ಆಗ್ತಿದೆ. ಕಫ ನೆಗಡಿ ಸಮಸ್ಯೆ ಇದ್ದದ್ದೇ. ಈಗಿನ ಬದಲಾಗುತ್ತಿರುವ ಹವಾಗುಣಕ್ಕೆ ಬೆಳಗಿನ ತಿಂಡಿಗೆ ಇದನ್ನು ಮಾಡಿ ಮನೆಮಂದಿಯ ಆರೋಗ್ಯ ಕಾಪಾಡಿ. ಹುರುಳಿಕಾಳು ಈ ಹವಾಗುಣಕ್ಕೆ ಹೇಳಿಮಾಡಿಸಿದ ಧಾನ್ಯ. ಕಫ ಹೆಚ್ಚಾಗಿ ಮೂಗು ಕಟ್ಟಿ ಕೆಮ್ಮು ಇದ್ದರೆ ಹುರುಳಿ ಕಾಳಿನ ಸೂಪ್ ಸೇವಿಸಿ. ಇದರಿಂದ ಕಫ ಬೇಗ ಕರಗುತ್ತದೆ ಮತ್ತು ಕೆಮ್ಮು ಶಮನವಾಗುತ್ತದೆ. ನೆನೆಸಿದ ಹುರುಳಿಕಾಳನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಬೇಯಿಸದೆ ಹಾಗೆ ಸೇವಿಸಿದರೆ ಮಲವಿಸರ್ಜನೆ ಸುಲಭವಾಗುತ್ತದೆ….
ಇಂದಿನ ದಿನಗಳಲ್ಲಿ ಪ್ರಾಮಾಣಿಕತೆ ಎಂಬುದು ಎಲ್ಲಿದೆ. ಬಹುತೇಕ ಮಂದಿ ಪ್ರಾಮಾಣಿಕವಾಗಿ ಇರುವುದಿಲ್ಲ. ಆ ರೀತಿ ಇರುವವರು ನೂರಕ್ಕೋ, ಕೋಟಿಗೋ ಒಬ್ಬರಿರುತ್ತಾರೆ. ಅಂತಹವರಲ್ಲಿ ಈಗ ನಾವು ಹೇಳಲಿರುವ ಈತನೂ ಇದ್ದಾನೆ. ಆತನೊಬ್ಬ ಆಟೋಡ್ರೈವರ್. ಆದರೆ ಪ್ರಾಮಾಣಿಕತೆಗೆ ಹೆಸರುವಾಸಿ. ಮಹಿಳೆಯೊಬ್ಬರು ತನ್ನ ಆಟೋದಲ್ಲಿ ತನ್ನ ಬ್ಯಾಗ್ ಮರೆತಿದ್ದರೆ ಅದನ್ನು ಅವರಿಗೆ ಹಿಂತಿರುಗಿಸಿದ. ಆತನಿಗೆ ಆ ಮಹಿಳೆ ಊಹಿಸದಂತಹ ಬಹುಮಾನ ನೀಡಿದರು.
ಭರಚುಕ್ಕಿ ಎಂದರೆ ಎಲ್ಲರಿಗು ಇಷ್ಟವಾದ ಜಾಗ ಎನ್ನಬಹುದು ಯಾಕೆಂದರೆ ಇಲ್ಲಿನ ಸೊಬಗು ನೋಡಲುತುಂಬಾ ಆಕರ್ಷಕವಾಗಿರುತ್ತದೆ ಮತ್ತು ಎತ್ತರದಿಂದ ಹರಿಯುವ ನೀರನ್ನು ನೋಡಲು ಜನರು ಸಾಕಷ್ಟು ದೂರದಿಂದ ಬರುತ್ತಾರೆ. ಈ ಸೊಬಗನ್ನು ಧಾರೆಯೆರೆಯುತ್ತಿದ್ದ ಭರಚುಕ್ಕಿ ಈಗ ಮತ್ತಷ್ಟು ರೋಮಾಂಚಕ ಅನುಭವ ನೀಡಲು ಸಜ್ಜಾಗುತ್ತಿದೆ. ಗಡಿಜಿಲ್ಲೆ ಚಾಮರಾಜನಗರದ ಕೊಳ್ಳೇಗಾಲ ತಾಲೂಕಿನಲ್ಲಿರುವ ಶಿವನಸಮುದ್ರ ಬಳಿಯ ಭರಚುಕ್ಕಿ ಜಲಪಾತವಿಶ್ವದ ಗಮನ ಸೆಳೆಯಲು ಅಣಿಯಾಗುತ್ತಿದೆ.ಶೀಘ್ರದಲ್ಲೇ ಇಲ್ಲಿ ಪ್ರವಾಸಿ ಆಕರ್ಷಣೆಯೊಂದು ಸೇರ್ಪಡೆಗೊಳ್ಳಲಿದ್ದು, ರಾಜ್ಯ ಅರಣ್ಯ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಜತೆಗೂಡಿ ಭರಚುಕ್ಕಿ ಬಯೋಡೈವರ್ಸಿಟಿ ಪಾರ್ಕ್…
ಹೌದು ಸರ್ಕಾರದಿಂದ ಕಲ್ಲಡ್ಕ ಶಾಲೆಗೆ ಸಿಗುತಿದ್ದ ಅನುದಾನ ನಿಲ್ಲಿಸಿದ್ದು ಎಲ್ಲರಿಗೂ ತಿಳಿದೇ ಇದೆ.. ಹೀಗಿರುವಾಗ ಹಲವಾರು ಮಂದಿ ಶಾಲೆಯ ನೆರವಿಗೆ ಬಂದರು..
ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೊಡ್ಡ ಘೋಷಣೆಯೊಂದನ್ನು ಮಾಡಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ್ರೆ ಬಡವರ ಬ್ಯಾಂಕ್ ಖಾತೆಗೆ ಪ್ರತಿ ವರ್ಷ 72 ಸಾವಿರ ರೂಪಾಯಿ ಜಮಾ ಆಗಲಿದೆಯಂತೆ. ಪತ್ರಿಕಾಗೋಷ್ಠಿ ನಡೆಸಿದ ರಾಹುಲ್ ಗಾಂಧಿ ಕನಿಷ್ಠ ಆದಾಯ ಯೋಜನೆ ಘೋಷಣೆ ಮಾಡಿದ್ದಾರೆ. ಇದಕ್ಕೆ ರಾಹುಲ್ ಗಾಂಧಿ ‘ನ್ಯಾಯ್ ಸ್ಕೀಂ’ ಎಂದು ಹೆಸರಿಟ್ಟಿದ್ದಾರೆ. ಈ ಯೋಜನೆಯಿಂದ 25 ಕೋಟಿ ಜನರಿಗೆ ಸಹಾಯವಾಗಲಿದೆ ಎಂದು ರಾಹುಲ್ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ…