ಆರೋಗ್ಯ

ಈ ಹಣ್ಣು ಯಾವುದು? ತಿಂದರೆ ಏನಾಗುತ್ತೆ? ಈ ಉಪಯುಕ್ತ ಮಾಹಿತಿ ನೋಡಿ.

334

ನಿಮ್ಮಲ್ಲಿ ಬಹಳಷ್ಟು ಜನ ಈ ಹಣ್ಣನ್ನ ತಿಂದೇ ಇರುವುದಿಲ್ಲ. ಇನ್ನೂ ಕೆಲವರು ಈ ಹಣ್ಣನ್ನು ತಿಂದರೂ ಇದರ ಬಗ್ಗೆ ಸರಿಯಾಗಿ ತಿಳಿದುಕೊಂಡಿರುವುದಿಲ್ಲ.  ಈ ಹಣ್ಣನ್ನ ಸ್ಟಾರ್ ಫ್ರೂಟ್ ಅಂತ ಕರೆಯುತ್ತಾರೆ. ಈ ಹಣ್ಣು ಸಾಮಾನ್ಯವಾಗಿ ಎಲ್ಲಾ ಊರುಗಳಲ್ಲಿ ಸಿಗುವುದಿಲ್ಲ. ಈ ಹಣ್ಣು ನಮ್ಮ ದೇಶದೇ ಆದರೂ ಸಹ ಕೇವಲ ಕೆಲವು ಊರುಗಳಲ್ಲಿ ಮಾತ್ರ ಈ ಹಣ್ಣನ್ನ ಬೆಳೆಯುತ್ತಾರೆ.

ಇನ್ನೂ ನಮ್ಮ ದೇಶದಿಂದ ಬೇರೆ ದೇಶಗಳಿಗೆ ಈ ಹಣ್ಣು ಎಕ್ಸ್ಪೋರ್ಟ್ ಕೂಡ ಆಗುತ್ತದೆ. ಈ ಸ್ಟಾರ್ ಫ್ರೂಟ್ ಅನ್ನ ತಿನ್ನುವುದರಿಂದ ನಮಗೆ ಏನೆಲ್ಲಾ ಉಪಯೋಗಗಳಿವೆ ಎಂದರೆ? ಇದು ತ್ವಚೆ, ಸ್ವಾಶಕೋಶದ ಕ್ಯಾನ್ಸರ್, ಕರುಳಿನ ಕ್ಯಾನ್ಸರ್ ಹೀಗೆ ನಾನಾ ಬಗೆಯ ಕ್ಯಾನ್ಸರ್ ಗಳ ವಿರುದ್ಧ ಹೋರಾಡಿ ದೇಹವನ್ನ ರಕ್ಷಣೆ ಮಾಡುತ್ತದೆ. ಈ ಹಣ್ಣನ್ನು ಪ್ರತಿನಿತ್ಯ ತಿನ್ನುವುದರಿಂದ ನಮ್ಮ ದೇಹದಲ್ಲಿರುವ ಬೊಜ್ಜು ಅಂದರೆ ಫ್ಯಾಟ್ ಕಂಟೆಂಟ್ ಕಡಿಮೆಯಾಗುತ್ತದೆ. ಹಾಗೆ ಕಫ ಬಾರದಂತೆ ತಡೆಯುತ್ತದೆ. ಇನ್ನು ಊಟದ ನಂತರ ಈ ಹಣ್ಣನ್ನ ತಿನ್ನುವುದರಿಂದ ಜೀರ್ಣಶಕ್ತಿಗೆ ತುಂಬಾ ಒಳ್ಳೆಯದು. ಈ ಹಣ್ಣಿನಲ್ಲಿ ಹೆಚ್ಚಾದ ಫೈಬರ್,ವಿಟಮಿನ್-ಎ,ವಿಟಮಿನ್-ಬಿ ಮತ್ತು ವಿಟಮಿನ್-ಸಿ ಈ ಎಲ್ಲಾ ಅಂಶಗಳು ಹೆಚ್ಚಾಗಿವೆ.

ಇದರಲ್ಲಿರುವ ಅಧಿಕ ಪ್ರಮಾಣದ ನಾರಿನಾಂಶ ರಕ್ತದಲ್ಲಿರುವ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣ ಮಾಡುತ್ತದೆ. ಸೇಬು, ಕಿತ್ತಳೆ, ದ್ರಾಕ್ಷಿ ಮುಂತಾದ ಹಣ್ಣುಗಳಂತಹ ಹಣ್ಣುಗಳಿಗೆ ಹೋಲಿಸಿದರೆ ಈ ಹಣ್ಣಿನಲ್ಲಿರುವ ಸಕ್ಕರೆ ಪ್ರಮಾಣ ಅತ್ಯಂತ ಕಡಿಮೆ. ಆದ್ದರಿಂದ ಇದರ ಸೇವನೆಯಿಂದ ಮಧುಮೇಹ ಸಮಸ್ಯೆಯಿಂದ ದೂರವಿರಬಹುದು. ನೀವೇನಾದರೂ ಈ ಹಣ್ಣನ್ನು ತಿಂದಿಲ್ಲಾ ಎಂದರೆ ಒಮ್ಮೆ ತಿಂದು ನೋಡಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ