ಸುದ್ದಿ

ಹೆಚ್.ವಿಶ್ವನಾಥ್​ ವಿರುದ್ದ ಧೋಸ್ತಿ ಸರ್ಕಾರ ಗರಂ ; ನೀವು ಎಲ್ಲಿದ್ದೀರಿ.? ಯಾಕ್ರಿ ರಾಜೀನಾಮೆ ಕೊಟ್ರಿ.? ಎಂದು ಆವಾಜ್…..

102

ನೀವೂ ಎಲ್ಲಿದ್ದೀರಿ.? ಯಾಕ್ರಿ ರಾಜೀನಾಮೆ ಕೊಟ್ರಿ, ಈಗ ಎಲ್ಲಿದ್ದೀರಾ ನೀವು.? ಯಾಕೆ ಮೋಸ ಮಾಡಿದ್ರೀ.? ಎಂದು ಹುಣಸೂರು ಕಾರ್ಯಕರ್ತರಿಂದ ಶಾಸಕ ಹೆಚ್. ವಿಶ್ವನಾಥ್ ಗೆ ನಾನ್ ಸ್ಟಾಪ್ ಕರೆ ಮಾಡಿ ಆವಾಜ್ ಹಾಕಲಾಗುತ್ತೀದೆ.

ರಾಜೀನಾಮೆ ವಿರೋಧಿಸಿ ಜೆಡಿಎಸ್‍ನಿಂದ ಆಕ್ರೋಶ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನಲೆ ಶಾಸಕ ಹೆಚ್ ವಿಶ್ವನಾಥ್​​ ಅವರ ರಾಜೀನಾಮೆ ವಿರೋಧಿಸಿ ಜೆಡಿಎಸ್‍ನಿಂದ ಆಕ್ರೋಶ ವ್ಯಕ್ತವಾಗಿದೆ. ವಿಶ್ವನಾಥ್ ಅವರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಕೋರಿ ಜೆಡಿಎಸ್ ಕಾರ್ಯಕರ್ತರು ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ. ಅಲ್ಲದೆ ಅದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದಾರೆ ವಿಶ್ವನಾಥ್ ವಿರುದ್ಧ ಅವಹೇಳನಕಾರಿ ಬರಹ ಬರೆದಿದ್ದಾರೆ. ಈ ಮೂಲಕ ವಿಶ್ವನಾಥ್ ಅವರು ರಾಜೀನಾಮೆ ನೀಡಿರುವುದನ್ನು ತೀವ್ರವಾಗಿ ಕಾರ್ಯಕರ್ತರು ವಿರೋಧಿಸಿದ್ದಾರೆ.

ಸ್ವತಹ ವಿಶ್ವನಾಥ್​ಗೆ ಕರೆ ಮಾಡಿ ಅವಾಜ್
ಇನ್ನೂ ಕಾರ್ಯಕರ್ತರು. ಸ್ವತಹ ವಿಶ್ವನಾಥ್​ಗೆ ಕರೆ ಮಾಡುತ್ತಿದ್ದು, ವಿಶ್ವನಾಥ್ ಆಪ್ತ ಸಹಾಯಕ ನಟರಾಜ್ ಗೆ ಕರೆ ಮಾಡಿ ಆವಾಜ್ ಹಾಕುತ್ತಿದ್ದಾರೆ. ದಿನೇ ದಿನೇ ವಿಶ್ವನಾಥ್ ವಿರುದ್ಧ ಹುಣಸೂರು ಮಂದಿ ಆಕ್ರೋಶ ಹೊರಕಾಹುತ್ತಿದ್ದಾರೆ.

ಜನರ ಆಶೋತ್ತರಗಳಿಗೆ ಸ್ಪಂದಿಸುವಲ್ಲಿ ಸಮ್ಮಿಶ್ರ ಸರ್ಕಾರ ವಿಫಲ
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಒಟ್ಟಾರೇ 14 ಮಂದಿ ಶಾಸಕರು ಸ್ಪೀಕರ್ ಗೆ ರಾಜೀನಾಮೆ ನೀಡಿರುವುದಾಗಿ ಜೆಡಿಎಸ್ ಪಕ್ಷದ ಶಾಸಕ ಹೆಚ್. ವಿಶ್ವನಾಥ್ ಸ್ಪಷ್ಟಪಡಿಸಿದ್ದಾರೆ. ಜನರ ಆಶೋತ್ತರಗಳಿಗೆ ಸ್ಪಂದಿಸುವಲ್ಲಿ ಸಮ್ಮಿಶ್ರ ಸರ್ಕಾರ ವಿಫಲವಾಗಿದೆ. ಉಭಯ ಪಕ್ಷಗಳ ಶಾಸಕರನ್ನು ಸರ್ಕಾರ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ.ಸರ್ಕಾರದ ನಡೆ , ಧೋರಣೆ ವಿರುದ್ಧ ರಾಜೀನಾಮೆ ಸಲ್ಲಿಸಿರುವುದಾಗಿ ಹೆಚ್. ವಿಶ್ವನಾಥ್ ತಿಳಿಸಿದ್ದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ