ಸುದ್ದಿ

ನನಗೆ ಈಗ ಎಷ್ಟು ವಯಸ್ಸು ಅಂತ ನಡೆದಾಡುವ ದೇವರು ಶಿವಕುಮಾರ ಸ್ವಾಮೀಜಿಗಳು ಕೇಳಿದ್ದೇಕೆ..!

362

ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳನ್ನು ನಡೆದಾಡುವ ದೇವರು ಎಂದೇ ಭಕ್ತರು ಕರೆಯುತ್ತಾರೆ.ಮೊನ್ನೆಯಷ್ಟೇ ಸಿದ್ದಗಂಗಾ ಶ್ರೀ ಗಳನ್ನು ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಮಠದಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು.

ನಡೆದಾಡುವ ದೇವರು ಎಂದೇ ಕರೆಯುವ ಸಿದ್ದಗಂಗಾ ಶ್ರೀ ಗಳು ಕಿರಿಯಾ ಸ್ವಾಮೀಜಿಗಳಲ್ಲಿ ನನ್ನ ವಯಸ್ಸು ಎಷ್ಟು ಅಂತ ಕೇಳಿದ್ದಾರೆ! ಅದಕ್ಕೆ ಕಿರಿಯ ಶ್ರೀ ಗಳು 111 ವರ್ಷ ಆಗಿದೆ ಎಂದಾಗ ಬಹಳ ಆಯ್ತು ಎಂದು ಶಿವಕುಮಾರ ಸ್ವಾಮೀಜಿಗಳು ಹೇಳಿದ್ದಾರೆ.

ಸಿದ್ದಗಂಗಾ ಶ್ರೀಗಳ ಅನಾರೋಗ್ಯದ ಹಿನ್ನೆಲೆಯಲ್ಲಿ ಡಿಸಿಎಂ ಜಿ.ಪರಮೇಶ್ವರ್ ಸಿದ್ದಗಂಗಾ ಮಠಕ್ಕೆ ಆಗಮಿಸಿದರು. ಡಿಸಿಎಂ ಶ್ರೀಗಳ ಆರೋಗ್ಯ ವಿಚಾರಿಸಿ ಸಿದ್ದಗಂಗಾ ಶ್ರೀಗಳನ್ನು ಆಸ್ಪತ್ರೆಗೆ ಶಿಫ್ಟ್ ಮಾಡಬೇಕೋ, ಬೇಡ್ವೋ ಎನ್ನುವುದನ್ನು ವೈದ್ಯರ ಸಲಹೆ ಪಡೆದು ತೀರ್ಮಾನ ಕೈಗೊಳ್ಳಲಾಗುತ್ತೆ ಎಂದು ಉಪ ಮುಖ್ಯಮಂತ್ರಿ ಪರಮೇಶ್ವರ್ ಹೇಳಿದ್ದಾರೆ.

ಸಿದ್ದಗಂಗಾ ಮಠದಲ್ಲಿ ಶ್ರೀಗಳ ಆರೋಗ್ಯ ವಿಚಾರಿಸಿದ ಬಳಿಕ ಮಾತಾಡಿದರ ಅವರು, ಶ್ರೀಗಳು ನನ್ನ ಜೊತೆ ಮಾತಾಡಿದ್ರು. ಯಾವಾಗ ಬಂದ್ರಿ, ಚೆನ್ನಾಗಿದ್ದೀರಾ ಅಂತ ಕೇಳಿದ್ರು. ಕಿರಿಯ ಶ್ರೀಗಳ ಬಳಿ ತಮಗೆ ಎಷ್ಟು ವಯಸ್ಸಾಯ್ತು ಅಂತ ಪ್ರಶ್ನಿಸಿದ್ರು. ಆಗ ಕಿರಿಯ ಶ್ರೀಗಳು 111 ವರ್ಷ ಅಂದ್ರು. ಅದಕ್ಕೆ ಬಹಳ ಆಯ್ತು, ಬಹಳ ಆಯ್ತು ಅಂದ್ರು. ಶ್ರೀಗಳು ಎಂದಿನಂತೆ ಲವಲವಿಕೆಯಿಂದ ಮಾತನಾಡಿದ್ದಾರೆ ಅಂತ ಪರಮೇಶ್ವರ್ ಹೇಳಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ