ಮನರಂಜನೆ

ಹಳ್ಳಿ ಹೈದ ಹನುಮಂತನಿಗೆ ಹೊಸ ವರ್ಷಕ್ಕೆ ಸಿಕ್ತು ಬಂಪರ್ ಆಫರ್..!

415

ಸರಿಗಮಪ ಸಂಗೀತ ಕಾರ್ಯಕ್ರಮದ ಮೂಲಕ ಕರುನಾಡಿನಲ್ಲಿ ಗಾಯಕ ಹನುಮಂತ ಚಿರಪರಿಚಿತರಾಗಿದ್ದಾರೆ. ಹಾವೇರಿ ಜಿಲ್ಲೆಯ ಗ್ರಾಮದಲ್ಲಿ ಕುರಿ ಕಾಯುತ್ತಿದ್ದ ಹನುಮಂತ ಅವರು ‘ಸರಿಗಮಪ’ ವೇದಿಕೆಯಲ್ಲಿ ಹಾಡುವ ಮೂಲಕ ನಾಡಿನಲ್ಲಿ ಮನೆ ಮಾತಾಗಿದ್ದಾರೆ.

ಮೊದಲ ಹಾಡಿನಿಂದ ಈವರೆಗೂ ಹನುಮಂತ ಹಾಡುವ ಪರಿ ನೋಡಿದರೆ ಸಾಕಷ್ಟು ಬದಲಾಗಿರುವುದು ಗಮನಕ್ಕೆ ಬರುತ್ತದೆ. ಹೊಸ ವರ್ಷ ಆರಂಭವಾಗುವ ಹೊಸ್ತಿಲಲ್ಲಿ ಹನುಮಂತನ ಪಾಲಿನ ಅದೃಷ್ಟದ ಬಾಗಿಲು ತೆರೆದಿದೆ. ಸಿನಿಮಾ ಸಂಗೀತಕ್ಕೆ ಹಿನ್ನೆಲೆ ಗಾಯಕನಾಗುವ ಅವಕಾಶ ಸಿಕ್ಕಿದೆ.

ಇದುವರೆಗೆ ಸರಿಗಮಪ ವೇದಿಕೆಯಲ್ಲಿ ಹಾಡುತ್ತಿದ್ದ ಹನುಮಂತನ ಬಗ್ಗೆ ನಿರ್ದೇಶಕ ಕಮ್ ಸಾಹಿತಿ ಯೋಗರಾಜ್ ಭಟ್ರು ಕೇಳಿದ್ದರು. ಆದರೆ ನೇರವಾಗಿ ಹನುಮಂತ ಹಾಡೋದನ್ನ ನೋಡಿರಲಿಲ್ಲ.

ಈ ವಾರ ಪ್ರಸಾರವಾದ ಸರಿಗಮಪ ಕಾರ್ಯಕ್ರಮದಲ್ಲಿ ಯೋಗರಾಜ್ ಭಟ್ ಮತ್ತು ಚಿತ್ರ ಸಾಹಿತಿಗಳಾದ ಜಯಂತ್ ಕಾಯ್ಕಿಣಿ, ವಿ.ನಾಗೇಂದ್ರ ಪ್ರಸಾದ್ ಅತಿಥಿಗಳಾಗಿ ಆಗಮಿಸಿದ್ದರು. ಈ ವೇಳೆ ಅತಿಥಿಗಳ ಮುಂದೆ ಅಲ್ಲಾಡ್ಸು ಅಲ್ಲಾಡ್ಸು ಹಾಡು ಹೇಳಿ ಹನುಮಂತ ರಂಜಿಸಿದ್ದರು.

ನಿರ್ದೇಶಕ ಯೋಗರಾಜ ಭಟ್ ಹಾಗೂ ಸ್ಪರ್ಧಿ ಹನುಮಂತ ಅವರು ಹಾವೇರಿ ಜಿಲ್ಲೆಯವರಾಗಿದ್ದು, ‘ಸರಿಗಮಪ’ ವೇದಿಕೆಯಲ್ಲಿ ಹನುಮಂತ ಹಾಡುವುದನ್ನು ಕಂಡು ಫಿದಾ ಆದ ಯೋಗರಾಜ ಭಟ್ಟರು ತಮ್ಮ ಮುಂದಿನ ಚಿತ್ರದಲ್ಲಿ ಅವಕಾಶ ನೀಡುವುದಾಗಿ ಘೋಷಿಸಿದ್ದಾರೆ.

ಹೊಸ ವರ್ಷದ ಆರಂಭದಲ್ಲೇ ಹನುಮಂತನಿಗೆ ಅದೃಷ್ಟದ ಬಾಗಿಲು ತೆರೆದಿದ್ದು, ‘ಸರಿಗಮಪ’ ವೇದಿಕೆಯಲ್ಲಿ ಹಾಡುವಾಗಲೇ ಸಿನಿಮಾದಲ್ಲಿ ಹಿನ್ನಲೆ ಗಾಯಕನಾಗಲು ಅವಕಾಶ ದೊರೆತಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸ್ಪೂರ್ತಿ

    ಹೊಟ್ಟೆ ಪಾಡಿಗಾಗಿ ರುಬ್ಬುವ ಕಲ್ಲನ್ನು ಮಾರುತ್ತಿದ್ದ, ಈ ಮಹಿಳೆ ಪೋಲಿಸ್ ಆಫೀಸರ್ ಹಾಗಿದ್ದು ಹೇಗೆ ಗೊತ್ತಾ.?ಎಲ್ಲರಿಗೂ ಸ್ಪೂರ್ತಿ ಈ ಸ್ಟೋರಿ, ಓದಿ ಶೇರ್ ಮಾಡಿ…

    ಮನಸ್ಸಿನಲ್ಲಿ ದೃಢವಾದ ನಿರ್ಣಯವು ಇದ್ದಲ್ಲಿ ಯಾವುದೇ ಕೆಲಸ ಕಷ್ಟವಲ್ಲ .ನಿಮ್ಮಲ್ಲಿ ಪ್ರತಿಭೆ ಇದ್ದು,ಗುರಿ ಅನ್ನುವ ಛಲ ಹೊಂದಿದ್ದರೆ ನಿಮ್ಮನ್ನು ಜಗತ್ತಿನ ಯಾವುದೇ ಶಕ್ತಿಯು ತಡೆಯಲಾರದು ಎಂಬ ಮಾತಿದೆ. ಆದ್ರೆ ಎಷ್ಟೇ ತೊಂದರೆಗಳು ಬರ್ರ್ಲಿ ಯಾವುತ್ತು ನಮ್ಮ ಧೈರ್ಯವನ್ನು ನಾವು ಬಿಡಬಾರದು ಎಂಬ ಮಾತಿದೆ. ಈ ಮಾತಿಗೆ ಉದಾಹರಣೆ ಮಹಾರಾಷ್ಟ್ರದ ಭಂಡಾರಾ ಜಿಲ್ಲೆಯ ‘ಪದ್ಮಶಿಲಾ ತಿರುಪಡೆ’. ಇವರು ತಮ್ಮ ಕಷ್ಟದ ದಿನಗಳಲ್ಲೂ, ಸೋಲನ್ನು ಒಪ್ಪಿಕೊಳ್ಳದೆ,ದೇಶದ ಎಲ್ಲಾ ಮಹಿಳೆಯರಿಗೂ ಸ್ಪೂರ್ತಿಯಾಗಿದ್ದಾರೆ. ಯಾರು ಈ ಮಹಿಳೆ… ಸಾಧನೆ ಅನ್ನುವುದು ಸಾಮಾನ್ಯವಾದ ಕೆಲಸವಲ್ಲ,…

  • ಸಿನಿಮಾ

    ಸೆಂಚುರಿ ಸ್ಟಾರ್ ಶಿವಣ್ಣನ ವಿರುದ್ದ, ಹುಚ್ಚ ವೆಂಕಟ್ ತಿರುಗಿ ಬಿದ್ದಿದೇಕೆ.!

    ‘ನನ್ ಎಕ್ಕಡ’ ಡೈಲಾಗ್’ನಿಂದ್ಲೇ ಫೇಮಸ್ ಆಗಿರುವ ಹುಚ್ಚ ವೆಂಕಟ್ ಹ್ಯಾಟ್ರಿಕ್ ಹಿರೋ, ಸೆಂಚುರಿ ಸ್ಟಾರ್ ಶಿವಣ್ಣ ವಿರುದ್ದ ವೀಡಿಯೋ ಮೂಲಕ ತಿರುಗಿ ಬಿದ್ದಿದ್ದಾರೆ.

  • ಸುದ್ದಿ

    Month End Mobiles Fest: ಫ್ಲಿಪ್‌ಕಾರ್ಟ್ ಆಫರ್ ಸೇಲ್…!

    ಜನಪ್ರಿಯ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ತಿಂಗಳ ಕೊನೆಯ ಮೊಬೈಲ್ ಫೆಸ್ಟ್ ಸೇಲ್ ನಡೆಯುತ್ತಿದೆ. ಬುಧವಾರ ಜುಲೈ 31ರವರೆಗೆ ನಡೆಯುವ ವಿಶೇಷ ಸೇಲ್‌ನಲ್ಲಿ ಗೂಗಲ್ ಪಿಕ್ಸೆಲ್ 3, ಮೋಟೋರೋಲ ಒನ್ ಪವರ್, ಹೊನೊರ್ 9N, ಪೋಕೋ F1 ಮತ್ತು ನೋಕಿಯಾ 6.1 ಮೇಲೆ ವಿಶೇಷ ಆಫರ್ ಸೇಲ್ ಘೋಷಿಸಲಾಗಿದೆ.  ಅಲ್ಲದೆ ಹೊನೊರ್ ಸರಣಿಯ ಫೋನ್‌ ಮೇಲೂ ಆಕರ್ಷಕ ಡಿಸ್ಕೌಂಟ್ ಪ್ರಕಟಿಸಲಾಗಿದೆ.  ಹೊನೊರ್ 10 Lite, ಹೊನೊರ್ 7s, ಹೊನೊರ್ 9i ಮತ್ತು ಹೊನೊರ್ 9 Lite ಮಾದರಿ ಡಿಸ್ಕೌಂಟ್‌ನಲ್ಲಿ ದೊರೆಯುತ್ತದೆ. ಉಳಿದಂತೆ ಸ್ಯಾಮ್‌ಸಂಗ್ ಗ್ಯಾಲಕ್ಸಿ…

  • ಸುದ್ದಿ

    ಕಾಲೇಜುಗಳಲ್ಲಿ ಹುಡುಗ-ಹುಡುಗಿ ಒಟ್ಟಾಗಿ ಓಡಾಡುತ್ತಿದ್ದೀರಾ ಹಾಗಾದರೆ ಇದನ್ನು ನೀವು ತಪ್ಪದೇ ತಿಳಿದುಕೊಳ್ಳಬೇಕು,..!!

    ಇಸ್ಲಾಮಾಬಾದ್,  ಇನ್ನುಮುಂದೆ ಕಾಲೇಜು ಕ್ಯಾಂಪಸ್‌ಗಳಲ್ಲಿ ಹುಡುಗ-ಹುಡುಗಿ ಒಟ್ಟಾಗಿ ಓಡಾಡುವಂತಿಲ್ಲ ಎಂದು ಪಾಕಿಸ್ತಾನದ ವಿಶ್ವವಿದ್ಯಾಲಯವೊಂದು ಸುತ್ತೋಲೆ ಹೊರಡಿಸಿದೆ. ಸದಾ ಹೊಸ ಹೊಸ ಕಾನೂನು ಕಟ್ಟಳೆಗಳಿಂದ ಸುದ್ದಿಯಲ್ಲಿರುವ ಪಾಕಿಸ್ತಾನ ಈಗ ಹೊಸ ಕಾನೂನನ್ನು ಜಾರಿಗೆ ತಂದಿದ್ದು, ವಿದ್ಯಾರ್ಥಿಗಳಿಗೆ ತಲೆನೋವಾಗಿದೆ. ಆದರೆ ಪಾಕಿಸ್ತಾನದ ಖೈಬರ್-ಪಖ್ತುಂಕ್ವಾ ಪ್ರದೇಶದ ಚಾರ್ಸಡ್ಡದಲ್ಲಿರುವ ವಿಶ್ವವಿದ್ಯಾಲಯವೊಂದು ವಿಚಿತ್ರ ಸುತ್ತೋಲೆ ಹೊರಡಿಸುವ ಮೂಲಕ ಅಚ್ಚರಿ ಮೂಡಿಸಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹುಡುಗ-ಹುಡುಗಿ ಒಟ್ಟಿಗೆ ಓಡಾಡುವುದು ಇಸ್ಲಾಮಿಕ್ ಸಂಸ್ಕೃತಿಯಲ್ಲ ಹೀಗಾಗಿವಿದ್ಯಾರ್ಥಿಗಳು ಇಂತಹ ಚಟುವಟಿಕೆಗಳಿಂದ ದೂರ ಇರಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಕಾಲೇಜ್ಕ್ಯಾಂಪಸ್‍ನಲ್ಲಿ…

  • inspirational

    ದರ್ಶನ್‌ ಮತ್ತು ಸುದೀಪ್ ಒಟ್ಟಿಗೆ ನಟಿಸಬೇಕಾಗಿದ್ದ ಆ ಸಿನಿಮಾ ನಿಂತಿದ್ದೇಕೆ? ಇಂದ್ರಜಿತ್ ಬಿಚ್ಚಿಟ್ರು ಮೂಲ ಕಾರಣ.

    ಕನ್ನಡ ಸಿನಿಪ್ರಿಯರ ಬಹುದಿನಗಳ ಕನಸು ಏನೆಂದರೆ, ದರ್ಶನ್‌ ಮತ್ತು ಸುದೀಪ್ ಒಟ್ಟಿಗೆ ನಟಿಸುವುದು! ಬೆಳ್ಳಿತೆರೆ ಮೇಲೆ ಅವರಿಬ್ಬರನ್ನು ಏಕಕಾಲಕ್ಕೆ ನೋಡಲು ಅಭಿಮಾನಿಗಳು ಕಾದಿದ್ದಾರೆ. ಇಬ್ಬರು ಕನ್ನಡದ ಸ್ಟಾರ್ ನಟರು. ಅವರದ್ದೇ ಆದ ಬಹುದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಹೀಗಿರುವಾಗ ಅವರಿಬ್ಬರು ಒಟ್ಟಿಗೆ ನಟಿಸಿಬಿಟ್ಟರೆ? ಅದು ಅಭಿಮಾನಿಗಳಿಗೆ ಹಬ್ಬವೇ ಸರಿ. ಅದಿನ್ನೂ ಸಾಧ್ಯವಾಗಿಲ್ಲ. ಮುಂದೆ ಯಾವತ್ತು ಆಗುತ್ತದೆಯೋ ಅದು ಗೊತ್ತಿಲ್ಲ. ಆದರೆ, ಬಹುವರ್ಷಗಳ ಈ ಹಿಂದೆ ಸ್ಟಾರ್ ನಟರನ್ನು ಒಟ್ಟಿಗೆ ಇಟ್ಟುಕೊಂಡು ಸಿನಿಮಾ ಮಾಡುವ ಪ್ರಯತ್ನವೊಂದು ನಡೆದಿತ್ತು! ಅವರಿಬ್ಬರು…