ಮನರಂಜನೆ

ಹಳ್ಳಿ ಹೈದ ಹನುಮಂತನಿಗೆ ಹೊಸ ವರ್ಷಕ್ಕೆ ಸಿಕ್ತು ಬಂಪರ್ ಆಫರ್..!

428

ಸರಿಗಮಪ ಸಂಗೀತ ಕಾರ್ಯಕ್ರಮದ ಮೂಲಕ ಕರುನಾಡಿನಲ್ಲಿ ಗಾಯಕ ಹನುಮಂತ ಚಿರಪರಿಚಿತರಾಗಿದ್ದಾರೆ. ಹಾವೇರಿ ಜಿಲ್ಲೆಯ ಗ್ರಾಮದಲ್ಲಿ ಕುರಿ ಕಾಯುತ್ತಿದ್ದ ಹನುಮಂತ ಅವರು ‘ಸರಿಗಮಪ’ ವೇದಿಕೆಯಲ್ಲಿ ಹಾಡುವ ಮೂಲಕ ನಾಡಿನಲ್ಲಿ ಮನೆ ಮಾತಾಗಿದ್ದಾರೆ.

ಮೊದಲ ಹಾಡಿನಿಂದ ಈವರೆಗೂ ಹನುಮಂತ ಹಾಡುವ ಪರಿ ನೋಡಿದರೆ ಸಾಕಷ್ಟು ಬದಲಾಗಿರುವುದು ಗಮನಕ್ಕೆ ಬರುತ್ತದೆ. ಹೊಸ ವರ್ಷ ಆರಂಭವಾಗುವ ಹೊಸ್ತಿಲಲ್ಲಿ ಹನುಮಂತನ ಪಾಲಿನ ಅದೃಷ್ಟದ ಬಾಗಿಲು ತೆರೆದಿದೆ. ಸಿನಿಮಾ ಸಂಗೀತಕ್ಕೆ ಹಿನ್ನೆಲೆ ಗಾಯಕನಾಗುವ ಅವಕಾಶ ಸಿಕ್ಕಿದೆ.

ಇದುವರೆಗೆ ಸರಿಗಮಪ ವೇದಿಕೆಯಲ್ಲಿ ಹಾಡುತ್ತಿದ್ದ ಹನುಮಂತನ ಬಗ್ಗೆ ನಿರ್ದೇಶಕ ಕಮ್ ಸಾಹಿತಿ ಯೋಗರಾಜ್ ಭಟ್ರು ಕೇಳಿದ್ದರು. ಆದರೆ ನೇರವಾಗಿ ಹನುಮಂತ ಹಾಡೋದನ್ನ ನೋಡಿರಲಿಲ್ಲ.

ಈ ವಾರ ಪ್ರಸಾರವಾದ ಸರಿಗಮಪ ಕಾರ್ಯಕ್ರಮದಲ್ಲಿ ಯೋಗರಾಜ್ ಭಟ್ ಮತ್ತು ಚಿತ್ರ ಸಾಹಿತಿಗಳಾದ ಜಯಂತ್ ಕಾಯ್ಕಿಣಿ, ವಿ.ನಾಗೇಂದ್ರ ಪ್ರಸಾದ್ ಅತಿಥಿಗಳಾಗಿ ಆಗಮಿಸಿದ್ದರು. ಈ ವೇಳೆ ಅತಿಥಿಗಳ ಮುಂದೆ ಅಲ್ಲಾಡ್ಸು ಅಲ್ಲಾಡ್ಸು ಹಾಡು ಹೇಳಿ ಹನುಮಂತ ರಂಜಿಸಿದ್ದರು.

ನಿರ್ದೇಶಕ ಯೋಗರಾಜ ಭಟ್ ಹಾಗೂ ಸ್ಪರ್ಧಿ ಹನುಮಂತ ಅವರು ಹಾವೇರಿ ಜಿಲ್ಲೆಯವರಾಗಿದ್ದು, ‘ಸರಿಗಮಪ’ ವೇದಿಕೆಯಲ್ಲಿ ಹನುಮಂತ ಹಾಡುವುದನ್ನು ಕಂಡು ಫಿದಾ ಆದ ಯೋಗರಾಜ ಭಟ್ಟರು ತಮ್ಮ ಮುಂದಿನ ಚಿತ್ರದಲ್ಲಿ ಅವಕಾಶ ನೀಡುವುದಾಗಿ ಘೋಷಿಸಿದ್ದಾರೆ.

ಹೊಸ ವರ್ಷದ ಆರಂಭದಲ್ಲೇ ಹನುಮಂತನಿಗೆ ಅದೃಷ್ಟದ ಬಾಗಿಲು ತೆರೆದಿದ್ದು, ‘ಸರಿಗಮಪ’ ವೇದಿಕೆಯಲ್ಲಿ ಹಾಡುವಾಗಲೇ ಸಿನಿಮಾದಲ್ಲಿ ಹಿನ್ನಲೆ ಗಾಯಕನಾಗಲು ಅವಕಾಶ ದೊರೆತಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    2 ದಿನಗಳ ಭೇಟಿಗಾಗಿ ಕೇದಾರನಾಥಕ್ಕೆ ಬಂದಿಳಿದ ಪ್ರಧಾನಿ ಮೋದಿ, ಪುನರ್ನಿರ್ಮಾಣ….

    ಶನಿವಾರ ಬೆಳಗ್ಗೆ ಜಾಲಿ ಗ್ರ್ಯಾಂಟ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿ ಮೋದಿ, ಬಳಿಕ ವಿಶೇಷ ಹೆಲಿಕಾಪ್ಟರ್‌ನಲ್ಲಿ ಕೇದಾರನಾಥ ಮಂದಿರಕ್ಕೆ ತೆರಳಿದರು. ಸಮುದ್ರ ಮಟ್ಟದಿಂದ 11,755 ಅಡಿ ಎತ್ತರದಲ್ಲಿರುವ ಕೇದಾರನಾಥ ಮಂದಿರದ ಸುತ್ತ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಪ್ರವಾಹ ಮತ್ತು ಪ್ರಕೃತಿ ವಿಕೋಪದಿಂದ ಹಾನಿಗೀಡಾದ ಕೇದಾರನಾಥ ಕ್ಷೇತ್ರದ ಪುನರ್ನಿರ್ಮಾಣ ಕಾರ್ಯಗಳ ಪ್ರಗತಿಯನ್ನು ಪ್ರಧಾನಿ ಪರಾಮರ್ಶಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಭೇಟಿಗಾಗಿ ಉತ್ತರಾಖಂಡದ ಕೇದಾರನಾಥಕ್ಕೆ ಶನಿವಾರ ಆಗಮಿಸಿದರು. ಸಾರ್ವತ್ರಿಕ ಚುನಾವಣೆಯ ಪ್ರಚಾರ ಕೊನೆಗೊಂಡ ಮರುದಿನವೇ ಪ್ರಧಾನಿ…

  • ಸುದ್ದಿ

    ಗುಡ್ ನ್ಯೂಸ್ ; ಅಂತೂ ಇಂತು ರಾಜ್ಯಕ್ಕೆ ನೆರೆ ಪರಿಹಾರವನ್ನು ಘೋಷಿಸಿದ ಕೇಂದ್ರ ಸರ್ಕಾರ…!!

    ಕೇಂದ್ರ ಸರ್ಕಾರ ಅಂತೂ ಇಂತೂ ಕೊನೆಗೂ ರಾಜ್ಯಕ್ಕೆ ನೆರೆ ಪರಿಹಾರದ ಹಣ ಘೋಷಿಸಿದೆ. ಬಿಹಾರದ ಜತೆ ಕರ್ನಾಟಕಕ್ಕೂ ನೆರೆಪರಿಹಾರ ಹಣವನ್ನು ಇಂದು  [ಶುಕ್ರವಾರ] ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಪ್ರವಾಹ ಪೀಡಿತ ಬಿಹಾರ ಮತ್ತು ಕರ್ನಾಟಕ ರಾಜ್ಯಗಳಿಗೆ ಮಧ್ಯಂತರ ಪರಿಹಾರ ಹಣವನ್ನಾಗಿ ಬಿಹಾರಕ್ಕೆ 400 ಕೋಟಿ ರೂ. ಮತ್ತು  ಕರ್ನಾಟಕಕ್ಕೆ1200 ಕೋಟಿ ರೂ. ಅನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಶುಕ್ರವಾರ ಅನುಮತಿ ನೀಡಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (ಎನ್​ಡಿಆರ್​ಎಫ್​) ಒಟ್ಟು1813.75 ಕೋಟಿ…

  • ಆರೋಗ್ಯ, ಉಪಯುಕ್ತ ಮಾಹಿತಿ

    ಶುಂಠಿ ನೀರನ್ನು ಕುಡಿಯೋದ್ರಿಂದ ಆಗೋ ಪ್ರಯೋಜನಗಳನ್ನು ಕೇಳಿದ್ರೆ ಈಗ್ಲೇ ಕುಡಿಯೋದಕ್ಕೆ ಸ್ಟಾರ್ಟ್ ಮಾಡ್ತೀರಾ..!

    ಟೀ ರುಚಿ ಹೆಚ್ಚಿಸುವ ಜೊತೆಗೆ ಗಂಟಲು ನೋವನ್ನು ಗುಣಪಡಿಸುವ ಕೆಲಸವನ್ನು ಮಾತ್ರ ಶುಂಠಿ ಟೀ ಮಾಡುವುದಿಲ್ಲ. ಮಸಾಲೆ ರೂಪದಲ್ಲಿ ಬಳಸುವ ಶುಂಠಿ ಬಹು ಉಪಯೋಗಿ. ಇದ್ರ ನೀರನ್ನು ಪ್ರತಿದಿನ ಕುಡಿಯುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಇದ್ರಲ್ಲಿರುವ ಆ್ಯಂಟಿ ಬ್ಯಾಕ್ಟಿರಿಯ, ಆ್ಯಂಟಿ ಫಂಗಲ್ ಅಂಶ ದೇಹವನ್ನು ಆರೋಗ್ಯಕರವಾಗಿರಿಸುತ್ತದೆ. ಊಟ ಮಾಡಿದ 20 ನಿಮಿಷದ ನಂತ್ರ ಒಂದು ಕಪ್ ಶುಂಠಿ ನೀರನ್ನು ಕುಡಿಯಿರಿ. ಇದು ದೇಹದಲ್ಲಿರುವ ಆಮ್ಲ ಪ್ರಮಾಣವನ್ನು ನಿಯಂತ್ರಿಸುತ್ತದೆ. ಇದ್ರಿಂದ ಹೊಟ್ಟೆಯಲ್ಲಾಗುವ ಉರಿ ಕಡಿಮೆಯಾಗುತ್ತದೆ. ಶುಂಠಿಯನ್ನು ಕುಟ್ಟಿ ನೀರಿಗೆ ಹಾಕಿ ಕುದಿಸಿ…

  • ವಿಚಿತ್ರ ಆದರೂ ಸತ್ಯ

    ನಾಯಿಗಳು ಕಾಲನ್ನು ಮೇಲೆತ್ತಿ ವಾಹನಗಳ ಟೈರುಗಳ ಮೇಲೆ ಮೂತ್ರವಿಸರ್ಜನೆ ಮಾಡುತ್ತದೆ ಏಕೆ ಗೊತ್ತಾ..? ತಿಳಿಯಲು ಈ ಲೇಖನ ಓದಿ …

    ಮನುಷ್ಯರು ಟಾಯ್ಲೆಟ್ ನಲ್ಲಿ ಮೂತ್ರ ಮಾಡುತ್ತಾರೆ. ಆದರೆ ಪ್ರಾಣಿಗಳು ಎಲ್ಲೆಂದರಲ್ಲಿ ಮಲಮೂತ್ರ ವಿಸರ್ಜನೆ ಮಾಡುತ್ತದೆ. ಅದರಲ್ಲೂ ನಾಯಿಗಳು ವಾಹನಗಳ ಚಕ್ರಕ್ಕೆ ಅಥವಾ ಮರಕ್ಕೆ ತಾಗಿ ಮೂತ್ರ ಮಾಡುತ್ತದೆ. ಆದರೆ ಅದ್ಯಾಕೆ ಅನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ.

  • ವಿಚಿತ್ರ ಆದರೂ ಸತ್ಯ

    ಈ ವ್ಯಕ್ತಿಯ ಹೊಟ್ಟೆಯಲ್ಲಿ ಸಿಕ್ಕಿದ್ವು,ಬರೋಬರಿ 70ಕ್ಕಿಂತ ಹೆಚ್ಚು ನಾಣ್ಯಗಳು..!ಇದು ಹೇಗೆ ಸಾಧ್ಯ ಅಂತೀರಾ…

    ದಿನದಿಂದ ದಿನಕ್ಕೆ ಒಂದಲ್ಲ ಒಂದು ವಿಶೇಷವಾದ ಸುದ್ದಿಯನ್ನು ನೋಡುತ್ತಲೇ ಇರುತ್ತೇವೆ.ಕೆಲವು ಸುದ್ದಿಗಳು ಅಚ್ಚರಿಯಾಗಿದ್ದರು ಸತ್ಯಕ್ಕೆ ಹತ್ತಿರವಾಗಿರುತ್ತವೆ. ಹಾಗು ಕೆಲವು ಸುದ್ದಿಗಳು ರೋಚಕತೆ ಸೃಷ್ಟಿಸುವ ರೀತಿಯಲ್ಲಿರುತ್ತವೆ.

  • ಸಿನಿಮಾ

    ಡೇಟ್ ಫಿಕ್ಸ್ ಆಯ್ತು ಜೂನಿಯರ್ ರಾಕಿಂಗ್ ಸ್ಟಾರ್ ಆಗಮನಕ್ಕೆ..!

    ಕನ್ನಡದ ಅದ್ದೂರಿ ಚಿತ್ರ KGF ಚಿತ್ರದ ಬಿಡುಗಡೆಗೆ ಕಾದಿರುವ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಇನ್ನೊಂದು ಸಿಹಿ ಸುದ್ದಿ ಹೊರಬಿದ್ದಿದೆ. ಜೂನಿಯರ್ ರಾಕಿಂಗ್ ಸ್ಟಾರ್ ಎಂಟ್ರಿಗೆ ಡೇಟ್ ಫಿಕ್ಸ್ ಆಗಿದ್ದು, ಸ್ವತಃ ನಟಿ ರಾಧಿಕಾ ಪಂಡಿತ್ ಈ ಬಗ್ಗೆ ಹೇಳಿಕೊಂಡಿದ್ದಾರೆ. ಮದುವೆ ವಾರ್ಷಿಕೋತ್ಸವ ಒಂದಾದರೆ, ರಾಧಿಕಾ ಪಂಡಿತ್ ಅವರು ಇದೀಗ ಎಂಟು ತಿಂಗಳ ತುಂಬು ಗರ್ಭಿಣಿಯಾಗಿದ್ದು, ಯಶ್ ಜೀವನದಲ್ಲಿ ಈ ಡಿಸೆಂಬರ್ ಅತ್ಯಮೂಲ್ಯ ಸಂದರ್ಭಕ್ಕೆ ಸಾಕ್ಷಿಯಾಗಲಿದೆ. ಡಿಸೆಂಬರ್ 9ರಂದು ಯಶ್ ಹಾಗೂ ರಾಧಿಕಾ ಅವರ ಮದುವೆ ವಾರ್ಷಿಕೋತ್ಸವದ…