ಸುದ್ದಿ

ಸಾವಿನಲ್ಲಿಯೂ ಸಹ ಸಾರ್ಥಕತೆ, ಮೆದುಳು ನಿಷ್ಕ್ರಿಯಗೊಂಡ ಉಡುಪಿ ಯುವಕನ ಅಂಗಾಂಗ ದಾನ…!

38

ಇತ್ತೀಚಿಗೆ ನಡೆದ ಅಪಘಾತದಲ್ಲಿ ತಲೆಗೆ ಗಂಭೀರ ಗಾಯವಾಗಿ ಮೆದುಳು ನಿಷ್ಕ್ರಿಯವಾಗಿದ್ದ ವ್ಯಕ್ತಿಯೊಬ್ಬರು ತಮ್ಮ ಅಂಗಾಂಗಗಳನ್ನು ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಉಡುಪಿಯ ಬ್ರಹ್ಮಾವರದವಾರ ಸಂದೀಪ್ ಪೂಜಾರಿ ಮೇ 27ರಂದು ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದಾಗಿ ಮರುದಿನ ಮೇ 28ರಂದು ವೈದ್ಯರು ಸಂದೀಪ್ ಅವರ ಮೆದುಳು ನಿಷ್ಕ್ರಿಯವಾಗಿರುವುದಾಗಿ ಘೊಷಿಸಿದ್ದಾರೆ. ಆಗ ಅವರ ಸೋದರರಾದ ಪ್ರದೀಪ್ ಪೂಜಾರಿ ತನ್ನ ಸೋದರನ ಅಂಗಾಂಗ ದಾನಕ್ಕೆ ಸಮ್ಮತಿಸಿದ್ದಾರೆ.

ಅಂಗಾಂಗ ದಾನಕ್ಕೆ ಒಪ್ಪಿಗೆ ಸಿಕ್ಕ ಹಿನ್ನೆಲೆ ಸಂದೀಪ್ ಅವರ ದೇಹದ ಎಂಟು ಅಂಗಗಳನ್ನು ಅಗತ್ಯವಿರುವ ಬೇರೆ ಬೇರೆ ರೋಗಿಗಳಿಗೆ ಅಳವಡಿಸಲು ನಿರ್ಧರಿಸಲಾಗಿದೆ. ಎರಡು ಕಾರ್ನಿಯಾ, ಎರಡು ಕಿಡ್ನಿ (ಮೂತ್ರಪಿಂಡ), ಯಕೃತ್ತು, ಮೇದೋಜೀರಕ ಗ್ರಂಥಿ, ಹೃದಯ ಕಪಾಟಗಳು ಹಾಗೂ ಶ್ವಾಸಕೋಶಗಳನ್ನು ದಾನ ಮಾಡಲಾಗಿದೆ. ಈ ಎಲ್ಲಾ ಅಂಗಾಗಗಳನ್ನು ಗ್ರೀನ್ ಕಾರಿಡಾರ್ ಮೂಲಕ ಬೆಂಗಳೂರಿಗೆ ತಂದು ಅಲ್ಲಿಂದ ಚೆನ್ನೈ ಆಸ್ಪ್ತ್ರೆಗೆ ಸಾಗಿಸಲಾಗಿದೆ.

ಮೃತರ ಎರಡು ಮೂತ್ರಪಿಂಡಗಳನ್ನು ಕಸ್ತೂರ್ಬಾ ಆಸ್ಪತ್ರೆಯ ರೋಗಿಗಳಿಗೆ ಅಳವಡಿಸಿದ್ದರೆ ಯಕೃತ್ತು ಹಾಗೂ ಮೇದೋಜೀರಕ ಗ್ರಂಥಿಗಳನ್ನು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯ ರೋಗಿಗಳಿಗೆ ನಿಡಲಾಗಿದೆ. ಇನ್ನು ಹೃದಯ ಕಪಾಟ ಹಾಗೂ ಶ್ವಾಸಕೋಶಗಳನ್ನು ಚೆನ್ನೈ ಬಿಜಿಎಸ್ ಆಸ್ಪತ್ರೆ ರೋಗಿಗಳಿಗೆ ಅಳವಡಿಸಾಗುತ್ತದೆ ಎಂದು ಮೂಲಗಳು ಹೇಳಿದೆ.ಹೀಗೆ ಸಂದೀಪ್ ತಾವು ಸಾವಿನಲ್ಲಿಯೂ ಸಾರ್ಥಕತೆ ಮೆರೆದು ಇತರರಿಗೆ ಮಾದರಿಯಾಗಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ