Cinema

1.60 ಕೋಟಿ ರೂ ವಂಚನೆ, ಸಿಸಿಬಿಗೆ ದೂರು ನೀಡಿದ ಸ್ಯಾಂಡಲ್​ವುಡ್ ನಿರ್ದೇಶಕ

57

ಸ್ಯಾಂಡಲ್​ವುಡ್ ಕಲಾ ಸಾಮ್ರಾಟ್ ಎಸ್​.ನಾರಾಯಣ್ ಅವರು ವಂಚನೆ ಪ್ರಕರಣದ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬುಧವಾರ ಡಿಸಿಪಿ ರವಿ ಕುಮಾರ್  ಕಚೇರಿಗೆ ಆಗಮಿಸಿದ ಅವರು 1.60 ಕೋಟಿ ರೂ. ವಂಚನೆ ವಿರುದ್ಧ ದೂರು ದಾಖಲಿಸಿದ್ದಾರೆ.

ಕನ್ನಡದಲ್ಲಿ ನಿರ್ಮಾಪಕ, ನಿರ್ದೇಶಕ, ನಟರಾಗಿ ಗುರುತಿಸಿಕೊಂಡಿರುವ ಎಸ್​. ನಾರಾಯಣ್ ಅವರು ಕಳೆದ ವರ್ಷ ಚಿತ್ರವೊಂದನ್ನು ನಿರ್ಮಿಸಲು ಮುಂದಾಗಿದ್ದರು. ಮೂವರು ನಿರ್ಮಾಪಕರು ಸೇರಿ ನಿರ್ಮಿಸಬೇಕಿದ್ದ ಆ ಸಿನಿಮಾದ ಮುಹೂರ್ತ ಕೂಡ ನೆರವೇರಿಸಲಾಗಿತ್ತು.

ಇದೇ ವೇಳೆ ಪಾಲುದಾರರು ಸಂಭಾವನೆ ಬದಲು ನಿವೇಶನ ಖರೀದಿಸುವಂತೆ ಎಸ್​.ನಾರಾಯಣ್ ಅವರಿಗೆ ಸೂಚಿಸಿದ್ದರು. ಅಂತೆಯೇ ಬೆಂಗಳೂರಿನ ಹೆಚ್​ಬಿ.ಆರ್ ಬಡಾವಣೆಯಲ್ಲಿ 1.60 ಕೋಟಿ ಮೌಲ್ಯದ ನಿವೇಶನ ಖರೀದಿಸಿದ್ದರು.

ಆದರೆ ಆ ಬಳಿಕ ನಿವೇಶನದ ದಾಖಲೆಗಳು ನಕಲಿ ಎಂಬುದು ಗೊತ್ತಾಗಿದೆ. ನಕಲಿ ದಾಖಲೆಗಳನ್ನು ನೀಡಿ ನನ್ನಿಂದ ವಂಚಕರು ಹಣ ಪಡೆದುಕೊಂಡಿದ್ದಾರೆ ಎಂದು ಎಸ್.ನಾರಾಯಣ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಒಂದೆಡೆ ಸಾಲದ ಸುಳಿಯಲ್ಲಿ ಸಿಲುಕಿರುವ ನಾರಾಯಣ್ ಅವರು ಸಾಲವನ್ನು ಹಿಂತಿರುಗಿಸಲು ಪರದಾಡುತ್ತಿದ್ದಾರೆ. ಈಗಾಗಲೇ 2 ಕೋಟಿಗೂ ಅಧಿಕ ಸಾಲ ಹೊಂದಿದ್ದು, ನಕಲಿ ದಾಖಲೆ ಮೂಲಕ ವಂಚಿಸಿದ ವಂಚಕರಿಂದ ನ್ಯಾಯ ಒದಗಿಸಿ ಕೊಡಿ ಎಂದು  ಡಿಸಿಪಿ ಅವರ ಹತ್ತಿರ ಎಸ್​.ನಾರಾಯಣ್ ಅವರು ಮನವಿ ಮಾಡಿಕೊಂಡಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ