ಸುದ್ದಿ

‘ಲೈಫ್ ಬಿಗಿನ್ಸ್ ಅಟ್90’ ಎಂಬ ಮಾತನ್ನು ಸ್ಕೂಬಾ ಡೈವಿಂಗ್ಸ್ ನಲ್ಲಿ ವಿಶ್ವದಾಖಲೆ ಸೃಷ್ಟಿಸಿದ ಅಜ್ಜ..!

23

ಸಾಧನೆ ಮತ್ತು ಸಾಹಸಕ್ಕೆ ವಯೋಮಾನ ಎಂದಿಗೂ ಅಡ್ಡಿಯಲ್ಲ ಎಂಬುದು ಈ ಜಗತ್ತಿನಲ್ಲಿ ಅನೇಕ ಬಾರಿ ಸಾಬೀತಾಗಿದೆ. ವಯೋವೃದ್ದರೊಬ್ಬರು ಈ ಹಿಂದೆ ತಾವೇ ಸೃಷ್ಟಿಸಿದ ವಿಶ್ವ ದಾಖಲೆಯನ್ನು ತಾವೇಮುರಿದು ಗಮನಸೆಳೆದಿದ್ದಾರೆ. ಬನ್ನಿ ಈ ಕಿಲಾಡಿತಾತನನ್ನು ನಾವೀಗ ಭೇಟಿ ಮಾಡೋಣ..

ಎರಡನೇ ವಿಶ್ವ ಯುದ್ಧದ ಮಾಜಿಯೋಧ ಹಾಗೂ 96 ವರ್ಷದ ಸಾಹಸಿವೂಲೇ ತಮ್ಮ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸಿಕೊಂಡರು ಸ್ಕೂಬಾ ಡೈವಿಂಗ್ ಮಾಡಿತಮ್ಮ ವಿಶ್ವ ದಾಖಲೆಯನ್ನು ಈ ವಯೋವೃದ್ದರು ಮುರಿದಿದ್ಧಾರೆ. ವಿಶ್ವದ ಅತ್ಯಂತ ಹಿರಿಯ ಸ್ಕೂಬಾ ಡೈವರ್ ಎಂದೇ ಖ್ಯಾತಿಪಡೆದಿರುವ ಇವರು ಸತತ ಮೂರನೇವರ್ಷ ಈ ಸಾಧನೆ ಮಾಡಿದ್ದಾರೆ.

ಸೈಪ್ರಸ್‍ನ ನೌಕಾ ದುರಂತದ ಸ್ಥಳದಲ್ಲಿ ವೂಲೇ ಸ್ಕೂಬಾ ಡೈವಿಂಗ್ಮಾಡಿದರು. ಇವರು ನೀರಿನಲ್ಲಿ ಮುಳುಗಿದ ಆಳ 15 ಅಂತಸ್ತುಗಳ ಎತ್ತರದ ಕಟ್ಟಡಕ್ಕೆ ಸಮ.ಇವರು ನೀರಿನೊಳಗೆ 42.4 ಮೀಟರ್‍ಗಳಷ್ಟು ಆಳಕ್ಕೆ ಡೈವ್ ಮಾಡಿ ಅಲ್ಲಿ 48 ನಿಮಿಷಗಳಕಾಲ ಇದ್ದರು. ಕಳೆದ ವರ್ಷಈ ಸಾಹಸಿ ಅಜ್ಜ40.6 ಮೀಟರ್‍ಗಳಷ್ಟು ಆಳಕ್ಕೆ ಇಳಿದು44 ನಿಮಿಷಗಳ ಕಾಲ ಈಜಾಡಿದ್ದರು. ನಾನು ಈಗಲೂ ಸದೃಢವಾಗಿದ್ದೇನೆ. ಮುಂದಿನ ವರ್ಷ ಮತ್ತೊಂದು ಹೊಸ ದಾಖಲೆ ನಿರ್ಮಿಸುತ್ತೇನೆ ಎಂದು ವಿಶ್ವಾಸ ತುಂಬಿದ ಮಾತುಗಳಲ್ಲಿ ಹೇಳುತ್ತಿದ್ದಾರೆ.

ಸಾಹಸ ಮತ್ತು ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ಸಾಬೀತು ಮಾಡಿರುವ ಈವಯೋವೃದ್ದರು 2017 ಮತ್ತು 2018ರಲ್ಲಿ ತಾವೇ ನಿರ್ಮಿಸಿದ್ದದಾಖಲೆಗಳನ್ನು ಈಗ ಮತ್ತಷ್ಟು ಉತ್ತಮಪಡಿಸಿಕೊಂಡಿದ್ದಾರೆ.ವಾಯುವ್ಯ ಇಂಗ್ಲೆಂಡ್‍ನ ಪೋರ್ಟ್ ಸನ್‍ಲೈಟ್ ಪ್ರದೇಶದವರಾದ ಈಸದೃಢ ಅಜ್ಜ ಈಗ ಸೈಪ್ರಸ್‍ನಲ್ಲಿ ನೆಲೆಸಿದ್ದಾರೆ. ದ್ವಿತೀಯ ಮಹಾ ಸಂಗ್ರಾಮದಲ್ಲಿ ಇವರು ರೇಡಿಯೋ ಆಪರೇಟರಾಗಿ  ಕಾರ್ಯನಿರ್ವಹಿಸಿದ್ದರು. ವೂಲೀ ಜೀವನ ಸಾಧನೆ ಕುರಿತ ಲೈಫ್ ಬಿಗಿನ್ಸ್ ಅಟ್90 ಎಂಬ ಸಾಕ್ಷ್ಯಚಿತ್ರವು. ಬೊಸ್ನಿಯಾ ಮತ್ತು ಹರ್ಜೆಗೋವಿನಾ ಚಲನಚಿತ್ರೋತ್ವದಲ್ಲಿ ಪ್ರದರ್ಶನವಾಗಲಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸ್ಪೂರ್ತಿ

    ಎಸ್ಸೆಸ್ಸೆಲ್ಸಿ ಓದಿದ್ದ ಭೂಪ… 7 ಸರಕಾರಿ ಹುದ್ದೆಗಳ ಕೆಲಸಕ್ಕೆ ಸೇರಿದ್ದು ಹೇಗೆ ಗೊತ್ತಾ…?ತಿಳಿಯಲು ಈ ಲೇಖನ ಓದಿ….

    ಓದಿದ್ದು ಎಸ್ಸೆಸ್ಸೆಲ್ಸಿವರೆಗೆ. ಆದರೂ ಒಂದೇ ವರ್ಷದಲ್ಲಿ 7 ನೌಕರಿಗೆ ಅರ್ಹತೆ ಲಭಿಸಿತು. ಆಯ್ಕೆ ಮಾಡಿಕೊಂಡಿದ್ದು ಮಾತ್ರ ಪಿಎಸ್‌ಐ ಹುದ್ದೆ! ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕು ಮುದೂರ ಗ್ರಾಮದ ಕಾನ ಗೌಡ ಪಾಟೀಲ ಎಂಬುವರ ಪುತ್ರ ಪ್ರಶಾಂತ ಪಾಟೀಲ (38) ಎಂಬುವರು 15 ದಿನಗಳ ಹಿಂದಷ್ಟೇ ಪ್ರೊಬೇಷನರಿ ಅವಧಿ ಪೂರೈಸಿ ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ಎಸ್‌ಐ ಆಗಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ.

  • Health

    ಪೇರಳ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು!!

    ಬಡವರ ಸೇಬು ಎಂದೇ ಖ್ಯಾತಿ ಪಡೆದಿರುವ ಸೀಬೆ ಅಥವಾ ಪೇರಳ ಹಣ್ಣು ಎಲ್ಲಾ ಖಾಯಿಲೆಗೂ ರಾಮಬಾಣ. ಸೇಬಿನ ಬದಲು ದಿನಕ್ಕೊಂದು ಸೀಬೆಹಣ್ಣು ತಿಂದು ವೈದ್ಯರಿಂದ ದೂರ ಇರಿ ಎಂದು ಹೇಳಬಹುದು. ಏಕೆಂದರೆ ಉತ್ತಮ ಹಣ್ಣುಗಳಲ್ಲಿ ಸೀಬೆಹಣ್ಣು ಕೂಡ ಒಂದು. ಅಗತ್ಯವಾಗಿ ಬೇಕಾಗಿರುವ ಪ್ರಮುಖ ಪೌಷ್ಟಿಕಾಂಶಗಳನ್ನು ಹೊಂದಿರುವ ಹಣ್ಣು ಇದು. ಸ್ಲಿಮ್‌ ಆಗಬೇಕೆನ್ನುವವರು ಡಯಟಿಂಗ್‌ ಲಿಸ್ಟ್‌ನಲ್ಲಿ ಸೀಬೆಹಣ್ಣನ್ನು ಸೇರಿಸಿಕೊಳ್ಳಬಹುದು. ಕಡಿಮೆ ಕ್ಯಾಲೋರಿಯ ಈ ಹಣ್ಣು , ದೇಹಕ್ಕೆ ವಿಟಮಿನ್‌ಗಳ ಮಹಾಪೂರವನ್ನೇ ಪೂರೈಸುವುದರೊಂದಿಗೆ ಕೊಬ್ಬಿನಾಂಶದ ಪ್ರಮಾಣವನ್ನು ಕುಂಠಿತಗೊಳಿಸುತ್ತದೆ ಎನ್ನುತ್ತಾರೆ ಎಕ್ಸ್‌ಪರ್ಟ್ಸ್. ಇದು…

  • ಸುದ್ದಿ

    50 ಸಾವಿರ ಉದ್ಯೋಗಾವಕಾಶವನ್ನು ಸೃಷ್ಟಿಸಿ ಘೋಷಣೆ ಮಾಡಿದ ಮೋದಿ ಸರ್ಕಾರ…!

    ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುತ್ತಿದ್ದ ವಿಧಿ 370ರ ರದ್ಧತಿ ಬಳಿಕ ಮಹತ್ವದ ಹೆಜ್ಜೆಯನ್ನಟ್ಟಿರುವ ಕೇಂದ್ರ ಸರ್ಕಾರ ಇದೀಗ ಕಣಿವೆ ರಾಜ್ಯದ ಯುವಕರಿಗೆ 50 ಸಾವಿರ ಉದ್ಯೋಗ ಕಲ್ಪಿಸುವ ಘೋಷಣೆ ಮಾಡಿದೆ.  ಈ ಕುರಿತಂತೆ ಇಂದು [ಬುಧವಾರ] ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಅವರು ಮಾಹಿತಿ ನೀಡಿದ್ದು, ಕಣಿವೆ ರಾಜ್ಯದ ಯುವಕರಿಗಾಗಿ ರಾಜ್ಯದಲ್ಲಿ 50 ಸಾವಿರ ಉದ್ಯೋಗ ಸೃಷ್ಟಿಸಲಾಗುತ್ತಿದೆ ಎಂದು ಹೇಳಿದರು.  ಈ ಕುರಿತಂತೆ ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಮುಂದಿನ 2 ಅಥವಾ 3…

  • ಉದ್ಯೋಗ

    ಯುವ ಪರಿವರ್ತಕರಿಗಾಗಿ ಅರ್ಜಿ ಆಹ್ವಾನ

    ಬೆಂಗಳೂರು ನಿಮ್ಹಾನ್ಸ್‌ನ ಜನ ಆರೋಗ್ಯ ಕೇಂದ್ರದ ಎಪಿಡೀಮಿಯಾಲಜಿ ವಿಭಾಗದ ವತಿಯಿಂದ ಅನುಷ್ಠಾನಗೊಂಡಿರುವ ಮಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಯುವಜನತೆಗೆ ಸಂಬಂಧಿಸಿದ ವಿಷಯಗಳಿಗೆ ಗೌರವಧನ ಆಧಾರದ ಮೇಲೆ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ  ಯುವಜನತೆಗೆ ಸಂಬಂಧಿಸಿದ ವಿಷಯಗಳಿಗೆ ಗೌರವಧನ ಆಧಾರದ ಮೇಲೆ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ರಾಷ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ನಾನ ಸಂಸ್ದೆ (ನಿಮ್ಹಾನ್ಸ್) ಬೆಂಗಳೂರು ಇಲ್ಲಿ ತರಬೇತಿ…

  • ಉಪಯುಕ್ತ ಮಾಹಿತಿ

    ಆಧಾರ್‌ ಕಾರ್ಡ್‌’ನಲ್ಲಿ ತಪ್ಪುಗಳಿದ್ದರೆ ನೀವೇ, ನಿಮ್ಮ ಮೊಬೈಲ್’ನಲ್ಲೇ ಸರಿಪಡಿಸಬಹುದು! ಹೇಗೆ ಗೊತ್ತಾ?

    ಈಗ ಎಲ್ಲದಕ್ಕೂ ಒಂದೇ ಕಾರ್ಡ್‌ – ಅದುವೇ ಆಧಾರ್‌ ಕಾರ್ಡ್‌.ಸರ್ಕಾರ ಎಲ್ಲ ವ್ಯವಹಾರ ಮತ್ತು ಸೌಲಭ್ಯಗಳಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡುತ್ತಿರುವ ಸಂಗತಿ ನಮಗೆಲ್ಲ ತಿಳಿದಿದೆ. 12 ಅಂಕೆಗಳ ಆಧಾರ್ ನಂಬರ್ ಪ್ರತಿಯೊಬ್ಬ ಭಾರತೀಯನ ಗುರುತು ಹಾಗೂ ಹೆಮ್ಮೆಯ ಸಂಖ್ಯೆಯಾಗಿ ಮಾರ್ಪಟ್ಟಿದೆ

  • ಸುದ್ದಿ

    ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರ ನೂರಾರು ಎಕರೆ ಬೆಳೆ ನಾಶ…!

    ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ಹಂತದ ಕಾಲುವೆಗೆ ನೀರು ಬಿಟ್ಟ ಹಿನ್ನೆಲೆ ಕಾಲುವೆ ಒಡೆದು ನೂರಾರು ಎಕರೆ ಬೆಳೆ ಹಾಳಾಗಿದೆ. ರಾಯಚೂರಿನ ಗೋನಾಳ ಬಳಿ ನಿರ್ಮಾಣ ಹಂತದಲ್ಲಿರುವ ನಾರಾಯಣಪುರ ಬಲದಂಡೆ ಕಾಲುವೆಗೆ ನೀರನ್ನು ಹರಿಸಿರುವುದರಿಂದ ಹತ್ತಿ, ತೊಗರಿ ಸೇರಿ ಲಕ್ಷಾಂತರ ರೂಪಾಯಿ ಬೆಳೆ ಹಾಳಾಗಿದೆ. ಕೃಷ್ಣ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿ 126 ಕಿ.ಮೀ ನಿಂದ 186 ಕಿ.ಮೀ ವರೆಗಿನ ನಾರಾಯಣಪುರ ಬಲದಂಡೆ ಕಾಲುವೆ ವಿಸ್ತರಣೆ ಇನ್ನೂ ನಡೆದಿದೆ. ಅಧಿಕಾರಿಗಳು ಕಾಲುವೆಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದ್ದರಿಂದ…