ಸುದ್ದಿ

ಡಾಕ್ಟರೇಟ್ ಪಡೆದ ರವಿಮಾಮ : ತಪ್ಪಿರುವ ದಾರಿಯನ್ನ ಸರಿ ಮಾಡಿಕೊಳ್ಳುತ್ತೇನೆ ಎಂದ ಕ್ರೇಜಿ ಸ್ಟಾರ್…!

33

ಕನಸುಗಾರ ರವಿಚಂದ್ರನ್ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಇವರು ಮಾಡಿದ ಕೆಲಸ ಗುರುತಿಸಿ ಈಗ ವಿಶ್ವವಿದ್ಯಾಲಯವೊಂದು ಗೌರವ ಡಾಕ್ಟರೇಟ್ ಪದವಿ ನೀಡಲು ಮುಂದಾಗಿದೆ. ನಟ ವಿ.ರವಿಚಂದ್ರನ್ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ. ಬೆಂಗಳೂರಿನ ಸಿಎಂಆರ್‌ ಕಾಲೇಜು ಆವರಣದಲ್ಲಿ ಸಂಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರಿಗೆ ಡಾಕ್ಟರೇಟ್  ಗೌರವ ನೀಡಲಾಗಿದೆ.

ಅಕ್ಟೋಬರ್ 18 ರವಿಚಂದ್ರನ್ ಮಗಳು ಗೀತಾಂಜಲಿ ಹುಟ್ಟಿದ ದಿನ. ಆ ದಿನವೇ ಅವರಿಗೆ ಗೌರವ ಡಾಕ್ಟರೇಟ್ ನೀಡಲಿದ್ದೇವೆ ಎಂದು ಯುನಿವರ್ಸಿಟಿಯಿಂದ ಕಾಲ್ಬಂದಿತ್ತಂತೆ. ಅಷ್ಟೇ ಅಲ್ಲದೆ ಅವರ 35ವರ್ಷಗಳ ಕನಸು ನಾನ್‌ ಸ್ಟಾಪ್ಮ್ಯೂಸಿಕಲ್ ಆಲ್ಬಮ್ ಮಾಡುವ ಕೆಲಸಕ್ಕೆ ಚಾಲನೇ ಅಂದೇ ಸಿಕ್ಕಿತಂತೆ. ಡಾಕ್ಟರೇಟ್ ಗೌರವ ಪ್ರದಾನ ಕಾರ್ಯಕ್ರಮದಲ್ಲಿ ರವಿಚಂದ್ರನ್ಸು  ಪತ್ನಿ ಶ್ರೀಮತಿ, ಮಕ್ಕಳಾದ ವಿಕ್ರಮ್,ಮನೋರಂಜನ್, ಗೀತಾಂಜಲಿ, ಅಳಿಯ ಅಜಯ್ ಭಾಗಿಯಾಗಿದ್ದರು.

ಈ ವೇಳೆ ಡಾಕ್ಟರೇಟ್ ಗೌರವ ಪಡೆದು ಮಾತನಾಡಿದ ರವಿಚಂದ್ರನ್, ಇನ್ನೂ ಮುಂದೆ ತಪ್ಪಿರುವದಾರಿಯನ್ನು ಸರಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಸಾಗುತ್ತೇನೆ. ಡಾಕ್ಟರೇಟ್ ಗೌರವ ಸ್ವೀಕರಿಸಿ, ಇನ್ಮುಂದೆ ಹೊಸ ದಾರಿಯನ್ನು ಹಿಡಿಯುತ್ತೇನೆ. ನನ್ನನ್ನು ಗುರುತಿಸಿ ಸಿಎಂಆರ್ ಯುನಿವರ್ಸಿಟಿಯವರು ಡಾಕ್ಟರೇಟ್ ನೀಡಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಈ ಹಿಂದೆಯೇ ಮೂರು ದಶಕಗಳಿಂದ ಚಿತ್ರರಂಗದಲ್ಲಿ ರವಿಚಂದ್ರನ್ ಅವರು ಮಾಡಿದ ಸೇವೆಗೆ ಗೌರವ ಡಾಕ್ಟರೇಟ್ ನೀಡಬೇಕು ಎಂದು ಅಭಿಮಾನಿಗಳು ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದರು. ಅವರ ಬಹುದಿನದ ಆಸೆ ಈಡೇರಿರುವುದರಿಂದ ಅಭಿಮಾನಿಗಳು ಖುಷಿಯಾಗಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ರವಿಚಂದ್ರನ್ ಅವರು ನಟ, ನಿರ್ದೇಶಕ, ನಿರ್ಮಾಪಕ, ಗೀತ ರಚನೆ, ಸಂಗೀತ, ಸಂಭಾಷಣೆ ಸೇರಿದಂತೆ ಹಲವು ವಿಭಾಗಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ 85ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಮಧುಮಗಳಿಲ್ಲದೆ ಮದುವೆ ಮಾಡಿ ಮಗನ ಕನಸನ್ನು ನನಸು ಮಾಡಿದ ಪೋಷಕರು…!

    ವಧುವಿಲ್ಲದೆ ತನ್ನ 27 ವರ್ಷದ ಮಗನಿಗೆ ಅದ್ಧೂರಿಯಾಗಿ ಮದುವೆ ಮಾಡಿಸುವ ಮೂಲಕ ಮಗನ ಕನಸನ್ನು ನನಸು ಮಾಡಿದ ತಂದೆ… ಅಜಯ್ ಬಾರೋಟ್ ಸಣ್ಣ ಮಗುವಿರುವಾಗಲೇ ಆತನ ಹೆತ್ತವರು ಮಗ ದೊಡ್ಡವನಾದ ಬಳಿಕ ಆತನಿಗೆ ಅದ್ಧೂರಿಯಾಗಿ ಮದುವೆ ಮಾಡಬೇಕು ಎಂಬ ಕನಸು ಕಂಡಿದ್ದರು. ಆದರೆ ಅಜಯ್ ಬೆಳವಣಿಗೆಯಲ್ಲಿ ಕುಂಠಿತವಾದ ಕಾರಣ ಆತನಿಗೆ ಸಂಗಾತಿ ಹುಡುಕಲು ಮನೆಯವರಿಗೆ ಕಷ್ಟವಾಯಿತು. ಯಾಕಂದರೆ ಅಜಯ್ ಬೆಳೆಯುತ್ತಾ ಅಂಗವೈಕಲ್ಯದಿಂದ ಬಳಲತೊಡಗಿದ. ಹೀಗಾಗಿ ಆತನಿಗೆ ವಧು ಇಲ್ಲದೆ ಮದುವೆ ಮಾಡಲು ಕುಟುಂಬ ತೀರ್ಮಾನ ಮಾಡಿತ್ತು. ಹಾಗೆಯೇ…

  • ಸುದ್ದಿ

    ಶಿವಸೇನಾ ಬೆಂಬಲಿಗರ ಒತ್ತಾಯ ; ಆದಿತ್ಯ ಠಾಕ್ರೆಗೆ ಮುಖ್ಯಮಂತ್ರಿ ಸ್ಥಾನ,.!!

    ಶಿವಸೇನೆ ಮುಖ್ಯಸ್ಥ ಉದ್ಧವ್​ಠಾಕ್ರೆ ಮಗ ಆದಿತ್ಯ ಠಾಕ್ರೆ ಮೊದಲ ಚುನಾವಣೆಯಲ್ಲಿಯೇ ಭರ್ಜರಿ ಗೆಲುವನ್ನು   ದಾಖಲಿಸಿದ  ಮತ್ತು ಅವರಿಗೆ  ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ಕೂಗು ಬೆಂಬಲಿಗರಿಂದ ಜೋರಾಗಿ  ಕೇಳಿ ಬಂದಿದೆ. ಇನ್ನು ಇದನ್ನು  ಕುರಿತು ಮುಂಬೈನ ಅನೇಕ ಕಡೆ ಶಿವಸೇನಾ ಕಾರ್ಯಕರ್ತರು ಬ್ಯಾನರ್​ ಹಾಕಿದ್ದು, ಅದರಲ್ಲಿ ಶಿವಸೇನೆಯ ಯುವನಾಯಕ, ರಾಜ್ಯದ ಭಾವಿ ಮುಖ್ಯಮಂತ್ರಿ ಎಂದು ಘೋಷಣೆ ಬರೆದಿದ್ದಾರೆ ಎಂದು ತಿಳಿಸಿದ್ದಾರೆ. ಸದ್ಯ ಮುಖ್ಯಮಂತ್ರಿ ಸ್ಥಾನವನ್ನು  ಉದ್ಧವ್​ ಠಾಕ್ರೆ ಮುನ್ನಡೆಸುತ್ತಿದ್ದು, ಅವರು  ಇರುವಾಗಲೇ ಅವರ ಮಗನಿಗೆ ಸಿಎಂ ಸ್ಥಾನ ನೀಡಬೇಕು…

  • ಸುದ್ದಿ

    ಕೇವಲ 13 ವಯಸ್ಸಿನಲ್ಲೆ 135 ಪುಸ್ತಕ ಬರೆದು 4 ವಿಶ್ವದಾಖಲೆ ನಿರ್ಮಿಸಿದ ಪೋರ…..!

    ಉತ್ತರ ಪ್ರದೇಶದ 13 ವರ್ಷದ ಬಾಲಕನೊಬ್ಬ ಧರ್ಮ ಹಾಗೂ ಗಣ್ಯರ ಜೀವನಚರಿತ್ರೆ ಕುರಿತು ಸುಮಾರು 135 ಪುಸ್ತಕಗಳನ್ನು ಬರೆದು, 4 ವಿಶ್ವದಾಖಲೆಗಳನ್ನು ಮಾಡಿ ಚಿಕ್ಕ ವಯಸ್ಸಿನಲ್ಲೇ ಅದ್ವಿತೀಯ ಸಾಧನೆಗೈದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ. ಈ ಅಪರೂಪದ ಸಾಧನೆಗೈದ ಬಾಲಕನ ಹೆಸರು ಮೃಗೇಂದ್ರ ರಾಜ್. ಈತ ತನ್ನ 6ನೇ ವಯಸ್ಸಿನಲ್ಲೇ ಪುಸ್ತಕ ಬರೆಯುವ ಹವ್ಯಾಸ ಆರಂಭಿಸಿದ್ದ ಈತ ಮೊದಲು ಕವನ ಸಂಕಲನವನ್ನು ಬರೆದಿದ್ದನು. ಆ ನಂತರ ಕಾಲ ಕಳೆಯುತ್ತಿದ್ದಂತೆ ಬಾಲಕನ ಜೊತೆ ಆತನ ಪುಸ್ತಕ ಬರೆಯುವ ಆಸಕ್ತಿ ಕೂಡ…

  • ಸುದ್ದಿ

    ಕಡಲೆ ತಿನ್ನುವುದರಿಂದ ಗರ್ಭಿಣಿಯರಿಗಿರುವ ಪ್ರಯೋಜನಗಳೇನು ಗೊತ್ತಾ?ತಿಳಿಯಲು ಇದನ್ನೊಮ್ಮೆ ಓದಿ..!

    ಗರ್ಭಿಣಿ ಮಹಿಳೆಯರಿಗೆ ಈ ಆಹಾರ ತಿನ್ನು, ಇದನ್ನು ತಿನ್ನಬೇಡ ಎಂದು ಮನೆಯವರು, ಸ್ನೇಹಿತರು ಸಲಹೆ ನೀಡುತ್ತಾರೆ. ವೈದ್ಯರು ಕೂಡ ಯಾವ ಆಹಾರಗಳನ್ನು ತೆಗೆದುಕೊಳ್ಳಬೇಕು, ಯಾವುದನ್ನು ತಿನ್ನದಿರುವುದು ಸೂಕ್ತ ಎಂಬ ಮಾಹಿತಿ ನೀಡುತ್ತಾರೆ. ಏಕೆಂದರೆ ಗರ್ಭಿಣಿ ಮಹಿಳೆಯರ ಆಹಾರಕ್ರಮ ಗರ್ಭದಲ್ಲಿ ಬೆಳೆಯುತ್ತಿರುವ ಮಕ್ಕಳ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಗರ್ಭಿಣಿಯರು ಪೌಷ್ಟಿಕಾಂಶಗಳಿರುವ ಆಹಾರವನ್ನು ತೆಗೆದುಕೊಳ್ಳುವುದರಿಂದ ಮಗು ಆರೋಗ್ಯಕರವಾಗಿ ಬೆಳೆಯುತ್ತದೆ. ಆದ್ದರಿಂದ ಕಾಳುಗಳನ್ನು ತಿನ್ನುವಂತೆ ಹೇಳುತ್ತಾರೆ. ಕಾಳುಗಳಲ್ಲಿ ಒಂದು ಬಗೆಯಾದ ಚೆನ್ನಾ ಕೂಡ ಗರ್ಭಿಣಿಯರಿಗೆ ಸೇವಿಸಲು ಸೂಕ್ತವಾದ ಆಹಾರವಾಗಿದ್ದು…

  • ಸುದ್ದಿ

    ಆಕಾಶದಿಂದ ಪಾತಾಳಕ್ಕೆ ಇಳಿದ ಈರುಳ್ಳಿ, ಕೇಜಿಗೆ ಈರುಳ್ಳಿ 25 ರೂಪಾಯಿ.!

    ಗಗನ ಸೀಳಿ ಬ್ರಹ್ಮಾಂಡ ತಲುಪಿದ್ದ ಈರುಳ್ಳಿ ಬೆಲೆ ಇದೀಗ ನಿಧಾನವಾಗಿ ಇಳಿಕೆಯತ್ತ ಮುಖ ಮಾಡಿದೆ. ದೇಶದ ವಿವಿಧೆಡೆ 200 ರೂ. ಗಡಿ ದಾಟಿದ್ದ ಈರುಳ್ಳಿ ಬೆಲೆ ಇದೀಗ 170 ರೂ. ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ. ಆದರೆ ನೆರೆಯ ಆಂಧ್ರಪ್ರದೇಶದಲ್ಲಿ ಒಂದು ಕೆಜಿ ಈರುಳ್ಳಿ ಬೆಲೆ ಕೇವಲ 25 ರೂ. ಅಂದರೆ ನಿಮಗೆ ಅಚ್ಚರಿಯಾದಿತು. ಹೌದು, ಆಂಧ್ರ ಸರ್ಕಾರ ಈರುಳ್ಳಿಗೆ ಸಬ್ಸಿಡಿ ಘೋಷಣೆ ಮಾಡಿದ್ದು, ಕೆಜಿ ಈರುಳ್ಳಿ ಬೆಲೆ ಕೇವಲ 25 ರೂ. ಆಗಿದೆ. ರಾಜ್ಯದ ರೈತು ಬಜಾರ್‌ಗಳಲ್ಲಿ ಒಂದು…