ಸುದ್ದಿ

ಪಡಿತರ ಚೀಟಿ ಹೊಂದಿರುವವರಿಗೆ ಇಲ್ಲಿದೆ ನೋಡಿ ಬಹುಮುಖ್ಯವಾದ ಮಾಹಿತಿ….!

157

ನೀವು ಪಡಿತರಚೀಟಿ ಹೊಂದಿದ್ದರೆ ಈ ಸುದ್ದಿಯನ್ನು ತಪ್ಪದೆ ಓದಿ. ಅನಗತ್ಯವಾಗಿ ಪೂರೈಕೆ ಆಗುತ್ತಿರುವ ಪಡಿತರಕ್ಕೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದ್ದು ಜೂನ್ 1ರಿಂದ ಎರಡು ತಿಂಗಳುಗಳ ಕಾಲ ಇ-ಕೆವೈಸಿ ವಿಧಾನದ ಮೂಲಕ ಆಧಾರ್ ದೃಢೀಕರಣ ವ್ಯವಸ್ಥೆ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ.

ಇದರನ್ವಯ ಪಡಿತರ ಚೀಟಿಯಲ್ಲಿ ಹೆಸರು ಹೊಂದಿರುವ ಎಲ್ಲ ಕುಟುಂಬ ಸದಸ್ಯರು ಬಯೋಮೆಟ್ರಿಕ್ ಕೊಡುವುದು ಕಡ್ಡಾಯವಾಗಿದೆ. ಯಾರು ಬಯೋಮೆಟ್ರಿಕ್ ನೀಡಿರುತ್ತಾರೋ ಅಂತಹವರ ಹೆಸರಿನಲ್ಲಿ ಮಾತ್ರ ಪಡಿತರ ವಿತರಿಸಲಾಗುತ್ತದೆ.

ವೃದ್ಧರು, ಕುಷ್ಠರೋಗಿಗಳು, ವಿಶೇಷ ಚೇತನರು, ಎಂಡೋಸಲ್ಫಾನ್ ಸಂತ್ರಸ್ತರಿಗೆ ಇ – ಕೆವೈಸಿಯಿಂದ ವಿನಾಯಿತಿ ನೀಡಲಾಗಿದ್ದು, ಇನ್ನುಳಿದವರು ಕಡ್ಡಾಯವಾಗಿ ನೀಡಬೇಕಿದೆ.ಹಾಲಿ ಚಾಲ್ತಿಯಲ್ಲಿರುವ ಪಡಿತರ ಚೀಟಿಯಲ್ಲಿ ಮೃತರ, ಪರಸ್ಥಳದಲ್ಲಿ ನೆಲೆಸಿರುವವರ,

ಮದುವೆಯಾಗಿ ಗಂಡನ ಮನೆಗೆ ತೆರಳಿದವರ ಹೆಸರುಗಳು ಇನ್ನೂ ಇದ್ದು, ಇವರುಗಳ ಹೆಸರಿನಲ್ಲೂ ಪಡಿತರ ವಿತರಣೆಯಾಗುತ್ತಿರುವ ಕಾರಣ ಸರ್ಕಾರಕ್ಕೆ ಹೊರೆಯಾಗಿ ಪರಿಣಮಿಸಿದೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಇ – ಕೆವೈಸಿ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ