ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ತೆಲುಗು ನಟನನ್ನು ಪ್ರೀತಿಸುತ್ತಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿತ್ತು. ಈ ಬಗ್ಗೆ ರಶ್ಮಿಕಾ ಪ್ರತಿಕ್ರಿಯಿಸಿ ನಾನು ಪ್ರೀತಿಸುತ್ತಿರುವುದು ನಿಜ ಎಂದು ಹೇಳಿದ್ದಾರೆ. ಇತ್ತೀಚೆಗೆ ರಶ್ಮಿಕಾ ಮಂದಣ್ಣ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿದ್ದರು. ಈ ಸಂವಾದದಲ್ಲಿ ರಶ್ಮಿಕಾ ಅವರು ಮನಬಿಚ್ಚಿ ಮಾತನಾಡಿದ್ದಾರೆ. ಇದೇ ವೇಳೆ ತೆಲುಗು ನಟನನ್ನು ಪ್ರೀತಿಸುತ್ತಿರುವ ಗಾಸಿಪ್ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ.
ರಶ್ಮಿಕಾ, ಹೌದು. ನಾನು ಪ್ರೀತಿಸುತ್ತಿರುವುದು ನಿಜ. ಆದರೆ ನಾನು ನನ್ನ ಸಿನಿಮಾವನ್ನು ಮಾತ್ರ ಪ್ರೀತಿಸುತ್ತಿದ್ದೇನೆ. ನನಗೆ ಬೇರೆ ಬೇರೆ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆ ಇದೆ. ಈಗ ನನಗೆ ದೊಡ್ಡ ನಟರ ಜೊತೆ ನಟಿಸುವ ಅವಕಾಶ ಸಿಕ್ಕಿರುವುದಕ್ಕೆ ನಿಜಕ್ಕೂ ಖುಷಿ ಇದೆ. ನಾನು ಚಿತ್ರಗಳನ್ನು ಮಾತ್ರ ಪ್ರೀತಿಸುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದೇ ವೇಳೆ ರಶ್ಮಿಕಾ ಮೇಕಪ್ ಮಾಡಿಕೊಳ್ಳುವುದು ನನಗೆ ಇಷ್ಟವಿಲ್ಲ. ಶೂಟಿಂಗ್ ಇದ್ದಾಗ ಮಾತ್ರ ಮೇಕಪ್ ಮಾಡಿಕೊಳ್ಳುತ್ತೀನಿ. ನಿಜ ಜೀವನದಲ್ಲಿ ನಾನು ಮೇಕಪ್ ಇಲ್ಲದೇ ಇರುತ್ತೇನೆ ಎಂದು ತಿಳಿಸಿದ್ದಾರೆ.
ರಶ್ಮಿಕಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಚಿತ್ರರಂಗದಲ್ಲೂ ನಟಿಸುತ್ತಿದ್ದಾರೆ. ಸದ್ಯ ರಶ್ಮಿಕಾ, ಪ್ರಿನ್ಸ್ ಮಹೇಶ್ ಬಾಬು ಅಭಿನಯದ ‘ಸರಿಲೇರು ನಿಕ್ಕೇವರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ನಿತಿನ್ ಅಭಿನಯದ ‘ಭೀಷ್ಮಾ’ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬಾಲಿವುಡ್ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ‘ಮೈ ಲವ್ ಲೆಟರ್ ಟು ಶ್ರೀದೇವೀಸ್ ಫ್ಯಾನ್ಸ್’ ಎಂಬ ಹೆಸರಿನಲ್ಲಿ,ತಮ್ಮ ಫೇಸ್ಬುಕ್ ವಾಲ್’ನಲ್ಲಿ ಬಹುಭಾಷಾ ನಟಿ ಶ್ರೀದೇವಿ ಬದುಕಿನ ಬಗ್ಗೆ ಕೆಲವು ಮಾಹಿತಿಗಳನ್ನು ತೆರೆದಿಟ್ಟಿದ್ದಾರೆ.
ಒಂದೇ ಕುಟುಂಬದ ಐವರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿತ್ರದುರ್ಗದ ಚಳ್ಳಕೆರೆಯ ನೆಹರು ಸರ್ಕಲ್ ಬಳಿ ನಡೆದಿದೆ. ಮೂವರು ಅಪ್ರಾಪ್ತ ಮಕ್ಕಳು ಸೇರಿದಂತೆ ಶಿಲ್ಪಾ ಹಾಗೂ ಮಂಜುನಾಥ್ ಆತ್ಮಹತ್ಯೆಗೆ ಯತ್ನಿಸಿದ ದಂಪತಿ. ಐವರು ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬೊಮ್ಮಸಮುದ್ರ ಗ್ರಾಮದ ನಿವಾಸಿಗಳಾಗಿದ್ದು, ಖಾಲಿ ನಿವೇಶನದ ಹಕ್ಕು ಪತ್ರ ಮಾಡಿಕೊಡದೆ ಆರು ತಿಂಗಳಿಂದ ಸತಾಯಿಸಿದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗ್ರಾಮ ಪಂಚಾಯ್ತಿ ಪಿಡಿಓ ಪ್ರತಿಭಾ ಹಾಗೂ ಬಿಲ್ ಕಲೆಕ್ಟರ್ ಮಂಜುನಾಥ್ ನಿರ್ಲಕ್ಷ್ಯಕ್ಕೆ ಮನನೊಂದು ಕುಟುಂಬ ಈ ನಿರ್ಧಾರ…
ಐತಿಹಾಸಿಕ ಬೆಂಗಳೂರು ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿ ಉಳಿಸಿಕೊಳ್ಳುವ ಪ್ರಯತ್ನಗಳು ಇತ್ತೀಚಿಗೆ ಹೆಚ್ಚುತ್ತಿದ್ದು ಇಂತಹುದೇ ಅಭಿಯಾನವೊಂದರ ಭಾಗವಾಗಿ ಯುವಬ್ರಿಗೇಡ್ ಕೆಂಪೇಗೌಡ ನಗರಿಯ ಐತಿಹಾಸಿಕ ವೃಷಭಾವತಿ ನದಿ ಉಳಿಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ಯುವಬ್ರಿಗೇಡ್ ನ ಈ ಪ್ರಯತ್ನ ಕ್ಕೆ ಗೋಲ್ಡನ್ ಸ್ಟಾರ್ ಗಣೇಶ ಕೈಜೋಡಿಸಿದ್ದು, ಇದೇ ಸಪ್ಟೆಂಬರ್ ೨೨ ರಂದು ಭಾನುವಾರ ನಡೆಯುವ ಮ್ಯಾರಥಾನ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಸಪ್ಟೆಂಬರ್ ೨೨ ರಂದು ಭಾನುವಾರ, ವೃಷಭಾವತಿ ಸ್ವಚ್ಛತೆ ಗಾಗಿ ಕೆಂಗೇರಿ ಗಣಪತಿ ದೇವಾಲಯದಿಂದ ಬೆಂಗಳೂರು ವಿವಿವರೆಗೆ ಮ್ಯಾರಥಾನ್ ನಡೆಯಲಿದೆ….
ಬಿಗ್ ಬಾಸಿಗೆ ಮೋಸ ಮಾಡಲು ಹೋಗಿ ಭೂಮಿ ಶೆಟ್ಟಿ ಅವರು ಸಿಕ್ಕಿಬಿದ್ದಿದ್ದಾರೆ.. ಹೌದು ಈ ವಾರ ಲಕ್ಸುರಿ ಬಡ್ಜೆಟ್ ಗಾಗಿ ಕಳ್ಳ ಪೊಲೀಸ್ ಟಾಸ್ಕ್ ಒಂದನ್ನು ನೀಡಲಾಗಿತ್ತು.. ಅದರಂತೆ ಶೈನ್ ರಾಜು ತಾಳಿಕೋಟೆ ಚಂದನ್ ಪ್ರಿಯಾಂಕ ಪೊಲೀಸರಾದರೆ ಇತ್ತ ವಾಸುಕಿ ದೀಪಿಕಾ ಕುರಿ ಕಳ್ಳರಾಗಿದ್ದರು. ಸುಜಾತ ಪತ್ರಕರ್ತೆಯಾಗಿ ಕಾಣಿಸಿಕೊಂಡರು.. ಇನ್ನುಳಿದಂತೆ ಭೂಮಿ ಪೃಥ್ವಿ ಕಿಶನ್ ಚಂದನ ಹರೀಶ್ ರಾಜ್ ಜನ ಸಾಮಾನ್ಯರಾಗಿದ್ದರು. ಆದರೆ ಜನಸಾಮಾನ್ಯರ ನಡುವೆ ಇದ್ದ ಕಳ್ಳರು ಯಾರೆಂದು ಉಳಿದವರಿಗೆ ತಿಳಿದಿರಲಿಲ್ಲ. ಕಿತ್ತಾಟ ಕಿರುಚಾಟ ಹಾಗೂ…
ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಾಗಿಲು ತೆಗೆದ ಶನಿವಾರ 3.32 ಕೋಟಿ ರೂ. ಸಂಗ್ರಹವಾಗಿದೆ. ಕಳೆದ ಬಾರಿ ಮೊದಲ ದಿನ ಗಳಿಸಿದ 1.28 ಕೋಟಿ ರೂ.ಗಳಿಗೆ ಹೋಲಿಸಿದಲ್ಲಿ ಸುಮಾರು ಎರಡೂವರೆ ಪಟ್ಟು ಹೆಚ್ಚಾದಂತಾಗಿದೆ. ದೇವಾಲಯದ ಬಾಗಿಲು ತೆಗೆದ ನಂತರ ಇದುವರಗೆ 70000 ಭಕ್ತಾದಿಗಳು ಸ್ವಾಮಿಯ ದರ್ಶನ ಪಡೆದುಕೊಂಡಿದ್ದಾರೆ. ಟ್ರಾವಂಕೋರ್ ದೇವಸ್ವಂ ಬೋರ್ಡ್ ಅಧ್ಯಕ್ಷ ಎನ್.ವಾಸು ಈ ವಿಷಯವನ್ನು ತಿಳಿಸಿದ್ದು, ಹಿಂದಿನ ವರ್ಷಗಳಿಗೆ ಹೋಲಿಸಿದಲ್ಲಿ ಈ ವರ್ಷ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು. ಪ್ರತಿದಿನ 4೦,೦೦೦ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಗೆ…
ಕರಿಬೇವಿನ ಸೊಪ್ಪು ಅಂದ್ರೆ ಮಹಿಳೆಯರಿಗೆ ವಿಶೇಷ ಪ್ರೀತಿ. ಅವರು ಮಾಡೋ ಅಡುಗೆಗೆ ವಿಶೇಷ ಪರಿಮಳ ನೀಡೋ ಮುಖ್ಯ ಪದಾರ್ಥ ಅದು. ಹೌದು….ಅಡುಗೆಗೆ ವಿಶೇಷ ಮೆರಗು ನೀಡುತ್ತೆ ಕರಿಬೇವು. ಕೇವಲ ಪರಿಮಳಕ್ಕಷ್ಟೇ ಅಲ್ಲ, ಇದರಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳೂ ಇವೆ. ಕರಿಬೇವು ಕಬ್ಬಿಣದಂಶ ಹಾಗೂ ಪೋಲಿಕ್ ಆಸಿಡ್ ಗಳ ಗುಚ್ಛವೆಂದೇ ಹೇಳಬಹುದು. ರಕ್ತಹೀನತೆಗೂ ಇದು ರಾಮಬಾಣ. ಕರಿಬೇವು ಲಿವರ್ ಗೂ ಒಳ್ಳೆಯದು. ಲಿವರ್ ಹಾಳಾಗದಂತೆ ತಡೆಯುತ್ತದೆ. ಕರಿಬೇವು ಆಂಟಿಬಯಾಟಿಕ್ ಎಂದು ಆಯುರ್ವೇದಲ್ಲಿ ಹೇಳಲಾಗುತ್ತದೆ. ಕರಿಬೇವು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ….