ಸುದ್ದಿ

9ರ ಬಾಲಕಿಯನ್ನು ಅತ್ಯಾಚಾರ ಮಾಡಿದ ಆರೋಪಿಯನ್ನು ನಡು ರಸ್ತೆಯಲ್ಲೇ ಬಡಿದು ಸಾಯಿಸಿದ್ರು ಜನ…..!

18

9 ವರ್ಷದ ಅಪ್ರಾಪ್ತೆ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ್ದು, ಆತನನ್ನು ಸ್ಥಳೀಯರು ಹಿಡಿದು ಥಳಿಸಿ ಹತ್ಯೆಗೈದ ಘಟನೆ ಪಂಜಾಬ್‍ನ ಜಲಂಧರ್ ನಲ್ಲಿ ನಡೆದಿದೆ.

ಜಲಂಧರ್ ನ ರಾಮ ಮಂಡಿ ಪ್ರದೇಶದಲ್ಲಿ ಭಾನುವಾರ ಈ ಘಟನೆ ನಡೆದಿದೆ. ಅಲೆಮಾರಿ ಕೂಲಿಕಾರನಾಗಿದ್ದ ಪಪ್ಪು ಕುಮಾರ್(39) 9 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಾಲಕಿಯ ಪೋಷಕರು ಕೂಡ ಅಲೆಮಾರಿ ಕೂಲಿಕಾರಾಗಿದ್ದು, ಬಾಲಕಿ ಹಾಗೂ ಆರೋಪಿ ನೆರೆಹೊರೆಯ ಮನೆಗಳಲ್ಲಿ ವಾಸವಾಗಿದ್ದರು.

ಭಾನುವಾರ ಆರೋಪಿ ತನ್ನ ಮನೆಗೆ ಬಾಲಕಿಯನ್ನು ಹೊತ್ತೊಯ್ದು ಅತ್ಯಾಚಾರ ಮಾಡಿದ್ದಾನೆ. ಈ ವೇಳೆ ಬಾಲಕಿಯ ಕೀರುಚಾಟ ಕೇಳಿ ಸ್ಥಳೀಯರು ಆರೋಪಿ ಮನೆ ಬಳಿ ಬಂದಿದ್ದಾರೆ. ಆಗ ವಿಚಾರ ತಿಳಿದು ಆತನ್ನನ್ನು ಹಿಗ್ಗಾಮುಗ್ಗಾ ಹೊಡೆದು ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ವಿಷಯ ತಿಳಿದು ಸ್ಥಳಕ್ಕೆ ಬಂದು ಆರೋಪಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲಿ ಆರೋಪಿ ಮೃತಪಟ್ಟಿದ್ದ ಎಂದು ವೈದ್ಯರು ತಿಳಿಸಿದರು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಈಗಾಗಲೇ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಅತ್ಯಾಚಾರದ ಪ್ರಕರಣ ಹಾಗೂ ಕೊಲೆ ಪ್ರಕರಣ ಹೀಗೆ ಘಟನೆ ಸಂಬಂಧ ಎರಡು ಬೇರೆ ಬೇರೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ತನಿಖೆ ಆರಂಭಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ದಿನ ಭವಿಷ್ಯ , ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ….

    ನಿತ್ಯ ಭವಿಷ್ಯ………… ಮೇಷ ರಾಶಿ ನಿಮ್ಮ ಬುದ್ಧಿ ಚಾತುರ್ಯಕ್ಕೆ ಎಂತಹವರೂ ತಲೆ ಬಾಗುವರು. ಜೀವನದಲ್ಲಿನ ಕಷ್ಟಗಳ ಮೇಲೆ ಜಯ ಸಾಧಿಸುವಿರಿ. ಉತ್ತಮ ಸ್ನೇಹಿತರ ಬೆಂಬಲ ನಿಮಗೆ ದೊರೆಯುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ನಂಬಿದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ಕ್ರಮೇಣ ತೊಂದರೆಗೆ ದಾರಿ ಆಗುವುದು. ವೃಷಭ ರಾಶಿ ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಪ್ರಗತಿಯತ್ತ ಸಾಗುವವು. ಕೆಲವರಿಗೆ ಬಡ್ತಿ ಸಿಗುವುದು.  ದೂರದೂರಿನ ಬಂಧುಗಳಿಂದ ಕಿರಿಕಿರಿ ಮಾತುಗಳು ಎದುರಾಗುವ ಸಂಭವವಿದೆ. ನೀವು ಮಾಡದೇ ಇರುವ ತಪ್ಪಿಗೆ ಮುನಿಸಿಕೊಳ್ಳುವ ಸಂದರ್ಭವಿದೆ. ಇದಕ್ಕೆ ಹೆಚ್ಚಿನ…

  • ಉಪಯುಕ್ತ ಮಾಹಿತಿ

    ವಾರಕ್ಕೆ ಒಂದು ಬಾರಿ ಈ ನೀರನ್ನು ಕುಡಿಯುವುದರಿಂದ ಹೊಟ್ಟೆ ಸುತ್ತಲಿರುವ ಕೊಬ್ಬು ಕರಗಿ ಸುಂದರವಾಗಿ ಕಾಣುತ್ತಿರಾ..!

    ಬಾರ್ಲಿ ನೀರು ದೇಹಕ್ಕೆ ಉತ್ತಮ. ಡಿಹೈಡ್ರೇಷನ್ ಉಂಟಾದಾಗ ಬಾರ್ಲಿ ನೀರು ಕುಡಿದರೆ ಇನ್ನೂ ಒಳ್ಳೆಯದು. ಅಷ್ಟೇ ಅಲ್ಲ, ಇದರಿಂದ ಇನ್ನು ಏನೇನೆಲ್ಲಾ ಲಾಭಗಳಿವೆ ನೋಡಿ. * ಬಾರ್ಲಿಯಲ್ಲಿರುವ ಬೀಟಾ ಗ್ಲೂಕೋನ್ ಅಂಶ ದೇಹದೊಳಗಿನ ವಿಷಾಂಶ ಹೊರಹಾಕಲು ನೆರವಾಗುತ್ತದೆ. * ಮೂತ್ರದ ಸೋಂಕು ಹೋಗುವವರೆಗೂ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಬಾರ್ಲಿ ನೀರು ಕುಡಿಯುವುದು ಒಳ್ಳೆಯದು. * ಅಜೀರ್ಣ, ಗ್ಯಾಸ್ಟ್ರಿಕ್ ಹಾಗೂ ಉಷ್ಣದಿಂದ ಆಗುವ ಸಮಸ್ಯೆಗಳಿಗೆ ಬಾರ್ಲಿ ನೀರು ಒಳ್ಳೆಯದು. * ಮಲಬದ್ಧತೆ, ಬೇಧಿ ಮುಂತಾದ ಸಮಸ್ಯೆ ಇದ್ದರೂ ಬಾರ್ಲಿ…

  • ಸುದ್ದಿ

    ದಿನಾ ಒಂದು ಗ್ಲಾಸ್ ಈ ಹಾಲನ್ನು ಕುಡಿದರೆ ಸಾಕು ನಿಮ್ಮೆಲ್ಲಾ ಕಾಯಿಲೆಗಳು ಇನ್ನು ದೂರ,.!

    ಅರಿಶಿನ ಹಾಲು (ಹಾಲಿಗೆ ಅರಿಶಿನ ಸೇರಿಸಿ ಕುಡಿಯುವುದು) ಕುಡಿಯುವ ರೂಢಿ ನಮ್ಮ ಭಾರತೀಯ ಸಂಪ್ರದಾಯದಲ್ಲಿ ಮೊದಲಿನಿಂದಲೂ ಇದೆ. ಇದನ್ನು ಚಿನ್ನದ ಹಾಲು ಎಂದೂ ಕರೆಯುತ್ತಾರೆ. ಅದರ ಬಣ್ಣ ನೋಡಿ ಮಾತ್ರವಲ್ಲ, ಪ್ರಯೋಜನಗಳನ್ನು ನೋಡಿ. ಅತ್ಯದ್ಭುತ ಪೌಷ್ಠಿಕಾಂಶಗಳನ್ನು ಹೊಂದಿರುವ ಅರಿಶಿನ ಹಾಲನ್ನು ಕುಡಿಯುವುದರಿಂದ ಅನೇಕ ಕಾಯಿಲೆಗಳು ದೂರ ವಾಗುವುದಲ್ಲದೆ, ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಪ್ರತಿದಿನ ಅರಿಶಿನ ಹಾಲನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಆಗುವ ಲಾಭಗಳು ಇಲ್ಲಿವೆ ನೋಡಿ ರಕ್ತವನ್ನು ಶುದ್ಧೀಕರಿಸುತ್ತದೆ : ಅರಿಶಿನ ಹಾಲು ರಕ್ತವನ್ನು ಶುದ್ಧೀಕರಿಸುತ್ತದೆ….

  • ಸುದ್ದಿ

    ಇನ್ಮುಂದೆ ಸ್ಥಿರಾಸ್ತಿಗೂ ಬರಲಿದೆ ಆಧಾರ್‌ ರೀತಿ ವಿಶಿಷ್ಟವಾದ ಗುರುತಿನ ಸಂಖ್ಯೆ, ಇನ್ನಷ್ಟು ಮಾಹಿತಿಗಾಗಿ ಇದನ್ನೊಮ್ಮೆ ಓದಿ

    ಭೂ ವ್ಯವಹಾರ ಪ್ರಕ್ರಿಯೆಯನ್ನು ಸರಳ ಹಾಗೂ ಪಾರದರ್ಶಕಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಅದಕ್ಕಾಗಿ ಜಮೀನಿನ ಎಲ್ಲಾ ಮಾಹಿತಿಯನ್ನೊಳಗೊಂಡ ಆಧಾರ್‌ ರೀತಿಯ ವಿಶಿಷ್ಟಗುರುತಿನ ಸಂಖ್ಯೆಯನ್ನು ಕೇಂದ್ರ ಸರ್ಕಾರ ಪರಿಚಯಿಸಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಿರಾಸ್ತಿಗೂ ಬರಲಿದೆ ಆಧಾರ್ ರೀತಿ ವಿಶಿಷ್ಟಗುರುತಿನ ಸಂಖ್ಯೆ| ವಿಶಿಷ್ಟಗುರುತಿನ ಸಂಖ್ಯೆಯಲ್ಲಿ ಜಾಗದ ಎಲ್ಲಾ ಮಾಹಿತಿ| ಭೂ ವ್ಯವಹಾರ ಸುಲಭ ಹಾಗೂ ಪಾರದರ್ಶಕಕ್ಕೆ ನೆರವು| ಬೆರಳ ತುದಿಯಲ್ಲಿ ಭೂ ದಾಖಲೆ, ಬೇನಾಮಿ ಆಸ್ತಿಗೆ ಬ್ರೇಕ್| ರೈತರಿಗೆ ಸುಲಭ ಸಾಲ ಸೌಲಭ್ಯ, ಭೂ ತಕರಾರುಗಳ ಶೀಘ್ರ…

  • ಸುದ್ದಿ

    ಹಳ್ಳಿ ಮತ್ತು ನಗರ ಬೈಕ್ ಸವಾರರೆ ಎಚ್ಚರ..!ನಿಮ್ಮಲ್ಲಿ ಇದು ಇಲ್ಲಂದ್ರೆ ಏನಾಗುತ್ತೆ ಗೊತ್ತಾ..?

    ಪೋಲೀಸರ ಕಾಟಕ್ಕೆ ಕಳಪೆಮಟ್ಟದ, ಬಿಐಎಸ್ ಅಥವಾ ಐಎಸ್‌’ಐ ಮಾರ್ಕ್ ಇಲ್ಲದ ಹೆಲ್ಮೆಟ್’ಗಳನ್ನು ಕೊಂಡು ಬೈಕ್ ಸವಾರಿ ಮಾಡುತ್ತಿದ್ದವರಿಗೆ ಇಲ್ಲೊಂದು ಶಾಕಿಂಗ್ ನ್ಯೂಸ್ ಇದೆ.ಬೆಂಗಳೂರಿನಲ್ಲಿ ಈಗಾಗ್ಲೆ ಅರ್ಧ ಹೆಲ್ಮೆಟ್ ಹಾಕಿ ಓಡಾಡುತ್ತಿದ್ದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

  • ಸುದ್ದಿ

    ಕೇಂದ್ರ ಸರ್ಕಾರದ ಆದೇಶ, ಏರ್‌ ಇಂಡಿಯಾ ಹಾಗು ಭಾರತ್ ಪೆಟ್ರೋಲಿಯಂ ನಿಗಮ ಶೀಘ್ರದಲ್ಲೇ ಮಾರಾಟವಾಗಲಿದೆ,.!

    ಸರಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್‌ ಇಂಡಿಯಾ ಹಾಗೂ ತೈಲ ಸಂಸ್ಕರಣಾ ಸಂಸ್ಥೆ ಭಾರತ್ ಪೆಟ್ರೋಲಿಯಂ ನಿಗಮ ಶೀಘ್ರದಲ್ಲೇ ಮಾರಾಟವಾಗಲಿದೆ. ನಷ್ಟದಲ್ಲಿರುವ ಈ ಎರಡೂ ಸಂಸ್ಥೆಗಳನ್ನುಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.ಮುಂದಿನ ವರ್ಷ ಮಾರ್ಚ್‌ ಒಳಗೆಎರಡೂ ಸಂಸ್ಥೆಗಳನ್ನು ಮಾರಾಟ ಮಾಡಲು ನಿರ್ಧರಿಸಲಾಗಿದೆಎಂದು ಕೇಂದ್ರ ಹಣಕಾಸು ಸಚಿವೆನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಈ ಮೂಲಕ ಪ್ರಸಕ್ತಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ1 ಲಕ್ಷ ಕೋಟಿ ರೂ. ಹೆಚ್ಚುವರಿಹಣ ಸೇರ್ಪಡೆಯಾಗಲಿದೆ. ಏರ್‌ ಇಂಡಿಯಾ ಹಾಗೂ ಭಾರತ್ಪೆಟ್ರೋಲಿಯಂ ಸಂಸ್ಥೆಗಳನ್ನು ಖರೀದಿಸಲು ಹೂಡಿಕೆದಾರರು ಭಾರೀ ಆಸಕ್ತಿವಹಿಸಿದ್ಧಾರೆ ಎಂದುನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಆದ್ರೆ, ಕೇಂದ್ರ…