ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಂಬಿ ಅಂತಿಮ ದರ್ಶನಕ್ಕೆ ಬಾರದೇ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದ್ದ ಸ್ಯಾಂಡಲ್ ವುಡ್ ನಟಿ, ಮಾಜಿ ಸಂಸದೆ ರಮ್ಯಾ, ತಮ್ಮ ರಾಜಕೀಯ ಕಾರ್ಯಕ್ಷೇತ್ರ ಮಂಡ್ಯದಲ್ಲಿ ಮಾಡಿದ್ದ ಬಾಡಿಗೆ ಮನೆಯನ್ನು ರಾತ್ರೋ ರಾತ್ರಿ ಖಾಲಿ ಮಾಡೋ ಮೂಲಕ, ರಾಜಕೀಯವಾಗಿಯೂ ಮಂಡ್ಯದಿಂದ ದೂರ ಸರಿದರೇ ಎನ್ನುವ ಪ್ರಶ್ನೆ ಎದ್ದಿದೆ.ಹಾಗೂ ಖಾಲಿ ಮಾಡುವ ಮೂಲಕ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದ್ದಾರೆ.
ರಮ್ಯಾ ಮೊದಲ ಬಾರಿಗೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಸಂದರ್ಭದಲ್ಲಿ ಮಂಡ್ಯ ನಗರದಲ್ಲಿ ಮನೆ ಮಾಡಿ, ಇಲ್ಲೇ ಇದ್ದು ಜನರ ಕಷ್ಟಕ್ಕೆ ಸ್ಪಂದಿಸುವ ಭರವಸೆ ನೀಡಿದ್ದರು. ಅದಾದ ನಂತರ ಲೋಕಸಭಾ ಚುನಾವಣೆಯಲ್ಲಿನ ಸೋಲಿನ ಬಳಿಕ ನಟಿ ರಮ್ಯಾ, ಮಂಡ್ಯದತ್ತ ಹೋಗುವುದೇ ಕಡಿಮೆಯಾಗಿತ್ತು. ಇತರೆ ಚುನಾವಣೆ ಸಂದರ್ಭಗಳಲ್ಲಿ ಮತದಾನಕ್ಕೂ ರಮ್ಯಾ ಹಾಜರಾಗಿರಲಿಲ್ಲ.
ಬಳಿಕ ಇದ್ದಕ್ಕಿದ್ದಂತೆ ಮಂಡ್ಯಕ್ಕೆ ಆಗಮಿಸಿದ ರಮ್ಯಾ ನಾನು ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗಿದ್ದೆ. ಈಗ ವಿದ್ಯಾಭ್ಯಾಸ ಮುಗಿಸಿ ವಾಪಸ್ ಬಂದಿದ್ದೇನೆ. ಇನ್ನು ಮುಂದೆ ನಾನು ನಿಮ್ಮ ಜೊತೆಯೇ ಇರುತ್ತೇನೆ ಎಂದು ಹೇಳಿ ಮಂಡ್ಯದಲ್ಲಿ ಎರಡನೇ ಬಾರಿಗೆ ಬಾಡಿಗೆ ಮನೆ ಮಾಡಿದ್ದರು.
ಮಂಡ್ಯದಲ್ಲಿ ನನಗೆ ರಾಜಕೀಯ ನೆಲೆಯಿಲ್ಲ ಎಂದು ಯೋಚಿಸಿದ ರಮ್ಯಾ ಈ ಹಿಂದೆಯೇ ಮಂಡ್ಯ ತೊರೆಯುವ ಯೋಚನೆ ಮಾಡಿದ್ದರು. ಇದೇ ವೇಳೆ, ಇತ್ತೀಚೆಗೆ ಪಾಂಡವಪುರ ತಾಲೂಕಿನ ಕನಗನಮರಡಿ ಬಸ್ ದುರಂತದಲ್ಲಿ 30 ಮಂದಿ ಸಾವನ್ನಪ್ಪಿದ್ದರೂ ಮಾಜಿ ಸಂಸದೆ ರಮ್ಯಾ ಸ್ಥಳಕ್ಕೆ ಭೇಟಿ ನೀಡಿ ಸಾಂತ್ವಾನ ಹೇಳುವ ಕಾರ್ಯಕ್ಕೆ ಮುಂದಾಗಿರಲಿಲ್ಲ.
ಜೊತೆಗೆ ಖ್ಯಾತ ಚಿತ್ರನಟ ಅಂಬರೀಶ್ ಸಾವನ್ನಪ್ಪಿದ ಸಂದರ್ಭದಲ್ಲಿ ಅವರ ಅಂತಿಮ ದರ್ಶನಕ್ಕಾಗಲಿ ಅಥವಾ ಅಂತ್ಯ ಸಂಸ್ಕಾರಕ್ಕಾಗಲಿ ರಮ್ಯಾ ಬಾರದಿರುವುದು ಅಭಿಮಾನಿಗಳನ್ನು ಕೆರಳಿಸಿತ್ತು. ಇದರಿಂದ ಆಕ್ರೋಶಗೊಂಡ ಅಂಬಿ ಅಭಿಮಾನಿಗಳು ರಮ್ಯಾ ನಮ್ಮ ಪಾಲಿಗೆ ಸತ್ತಂತೆ ಎಂದು ಸಿಟ್ಟು ಹೊರಹಾಕಿದ್ರು.
ಈ ಎಲ್ಲಾ ಕಾರಣಗಳಿಂದ ಮಂಡ್ಯ ಜಿಲ್ಲೆಯ ಜನತೆಯ ಆಕ್ರೋಶಕ್ಕೆ ತುತ್ತಾಗಿರುವ ರಮ್ಯಾ, ಇದರಿಂದಾಗಿಯೇ ಸದ್ದುಗದ್ದಲವಿಲ್ಲದೆ ರಾತ್ರೋರಾತ್ರಿ ಮನೆ ಖಾಲಿ ಮಾಡಿದ್ದಾರೆಂದು ಮಾತನಾಡಿಕೊಳ್ಳಲಾಗುತ್ತಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಚೀನಾದ ಒಂದು ಸೀ ಫುಡ್ ಮಾರ್ಕೆಟ್ ನಿಂದ ಹರಡಿರುವ ರೋಗ ಈ ಕರೋನ ವೈರಸ್ ಆಗಿದೆ ಮತ್ತು ಈ ಒಂದು ಕಾರಣಕ್ಕೆ ನಮ್ಮ ಭಾರತ ದೇಶದವರು ಸಮುದ್ರದಲ್ಲಿ ಸಿಗುವ ಆಹಾರವನ್ನ ಸೇವನೆ ಮಾಡಬಾರದು ಅನ್ನುವುದು ನಿರ್ಧಾರಕ್ಕೆ ಬಂದಿದ್ದಾರೆ. ಸ್ನೇಹಿತರೆ ನೀವು ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯ ಇಲ್ಲ ಮತ್ತು ಈ ಸಮುದ್ರದ ಆಹಾರಕ್ಕೂ ಮತ್ತು ಕರೋನ ವೈರಸ್ ಗೂ ಯಾವುದೇ ಸಂಬಂಧ ಇದೆ ಎಂದು ಎಲ್ಲಯೂ ಕೂಡ ಸಾಭೀತಾಗಿಲ್ಲ ಮತ್ತು ನೀವು ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯ…
ಸಾಮಾನ್ಯವಾಗಿ ನಾವು ಮನೆಯಲ್ಲಿ ಏನಪ್ಪಾ ಸಾಕ್ತೀವಿ..?ಹಸು,ಕ್ರಿ,ಕೋಳಿ ನಾಯಿ, ಬೆಕ್ಕು ಇನ್ನೂ ಹಲವು ಸಾಧು ಪ್ರಾಣಿಗಳನ್ನು ಸಾಕೋದು ಉಂಟು.ಆದರೆ ಕಾಡಿನ ರಾಜ ಅದರಲ್ಲೂ ನರಭಕ್ಷಕ ಸಿಂಹವನ್ನು ಸಾಕೋದು ಅಂದ್ರೆ ತಮಾಷೆ ವಿಷಯವೇ ಅಲ್ಲ ಅಲ್ವ.ಕೆಲವರಿಗೆ ಸಿಂಹ ಕನಸಲ್ಲೂ ಬಂದ್ರೆ ಸಾಕು ಒಂದು ಮತ್ತೊಂದು ಮಾಡ್ಕೊತಾರೆ.ಆದ್ರೆ ಸಾಕೋದು ಅಂದ್ರೆ ಸಾಮಾನ್ಯನಾ…ನಮ್ಮ ಪ್ರಾಣದ ಜೊತೆ ನಾವೇ ಆಟ ಆಡಿದಂತೆ ಆಲ್ವಾ.. ಹೌದು, ಹಾಲಿವುಡ್ ನಟಿಯೊಬ್ಬಳು ನರಭಕ್ಷಕ ಸಿಂಹವನ್ನು ಸಾಕುವುದಲ್ಲದೇ ದಿನಾಲೂ ಅದರ ಜೊತೆ ಮಲಗುತ್ತಾಳೆ ಕೂಡ.ಇದನ್ನು ನೆನಸಿಕೊಂಡ್ರೇನೆ ಮೈ ತರ ತರ…
ನಮ್ಮ ಸುರಕ್ಷತೆಗೋಸ್ಕರ ಟ್ರಾಫಿಕ್ ರೂಲ್ಸ್ ಗಳನ್ನು ಪಾಲಿಸಿ ನಾವು ವಾಹನ ಚಲಾಯಿಸಬೇಕಾಗುತ್ತದೆ. ಆದರೆ ಕೆಲವೊಂದು ಸಮಯಗಳಲ್ಲಿ ಮಾತ್ರ ನಿಯಮ ಉಲ್ಲಂಘಿಸಿ ವಾಹನ ಚಲಾಯಿಸದೇ ಬೇರೆ ವಿದಿಯೇ ಇಲ್ಲ. ಇದೇ ರೀತಿ ದ್ವಿತೀಯ ಪಿಯುಸಿ ಓದುತ್ತಿದ್ದ ವಿಧ್ಯಾರ್ಥಿಯೊಬ್ಬಳು ಪರೀಕ್ಷೆಗೆ ತಡವಾಗುತ್ತದೆ ಎಂಬ ಕಾರಣದಿಂದ ರಸ್ತೆ ನಿಯಮ ಉಲ್ಲಂಘಿಸಿ ಗಾಡಿ ಚಲಾಯಿಸಿದ ಕಾರಣ ಪೊಲೀಸರು ತಡೆದಿದ್ದಾರೆ. ಈ ಘಟನೆ ಬೆಳಗಾವಿಯಲ್ಲಿ ನಡೆದಿದ್ದು ಪರೀಕ್ಷೆಗೆ ವಿಳಂಬವಾಗುತ್ತದೆ ಎಂಬ ಕಾರಣದಿಂದ ಓನ್ ವೇನಲ್ಲಿ ಬೈಕ್ ಚಲಾಯಿಸಿಕೊಂಡು ಹೋಗಿದ್ದಾಳೆ. ಇದನ್ನು ಗಮನಿಸಿದ ರಸ್ತೆ ಸಂಚಾರ…
ಗಲ್ಫ್ ದೇಶಗಳಲ್ಲಿ ,ಮುಖ್ಯವಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಕಠಿನವಾಗಿ ಕಾನೂನನ್ನು ಜಾರಿಗೊಳಿಸುತ್ತಾರೆ. ನಿಬಂಧನೆಗಳನ್ನು ಉಲ್ಲಂಘಿಸಿದರೆ, ಯಾರಿಗೇ ಆಗಲಿ ಶಿಕ್ಷೆ ತಪ್ಪಿದ್ದಲ್ಲ. ಆದುದರಿಂದ ಇತರೆ ದೇಶಗಳಿಂದ ಬಂದವರು ಅಲ್ಲಿನ ಕಾನುನುಗಳನ್ನು ಅರಿತುಕೊಂಡಿರಬೇಕು. ಇಲ್ಲದಿಲ್ಲಲ್ಲಿ ಜೈಲುಪಾಲಾಗ ಬೇಕಾಗುತ್ತದೆ.
ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ, ಖ್ಯಾತ ಲೇಖಕಿ ಹಾಗೂ ಜನಾನುರಾಗಿ ಸುಧಾ ಮೂರ್ತಿ ಅವರು ಬಿಗ್ ಬಿ ಅಮಿತಾಭ್ ಬಚ್ಚನ್ ನಡೆಸಿಕೊಡುತ್ತಿರುವ ‘ಕೌನ್ ಬನೇಗಾ ಕರೋಡ್ಪತಿ 11’ರ (ಕೆಬಿಸಿ) ಹಾಟ್ ಸೀಟ್ ಅಲಂಕರಿಸುತ್ತಿದ್ದು ಈ ಎಪಿಸೋಡ್ ಕಿರುತೆರೆ ವೀಕ್ಷಕರಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಸೃಷ್ಟಿಸಿದೆ. ಕೆಬಿಸಿ ಸೆಟ್ನಲ್ಲಿ ಬಿಗ್ ಬಿಯನ್ನು ಸುಧಾ ಮೂರ್ತಿ ಭೇಟಿಯಾಗಿರುವ ಫೋಟೋಗಳನ್ನು ಬಿಗ್ ಬಿ ತಮ್ಮ ಬ್ಲಾಗ್ನಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಸುಧಾ ಮೂರ್ತಿ, “ನಾನು ಸಿನಿಮಾ ಪ್ರೇಮಿ ಹಾಗಾಗಿ ಅಮಿತಾಭ್ ಬಚ್ಚನ್ ಅವರಂತಹ ಮೇರು ಪ್ರತಿಭೆಯನ್ನು ಭೇಟಿಯಾಗಿದ್ದು ತುಂಬಾ ಖುಷಿಯಾಗಿದೆ….
ತಿಂದ ಆಹಾರ ಸರಿಯಾಗ ಜೀರ್ಣವಾಗದೇ ವಿಷಮಯವಾಗುವುದನ್ನು ಫುಡ್ ಪಾಯಿಸನ್ ಎಂದು ಕರೆಯಲಾಗುತ್ತದೆ. ರಾಸಾಯನಿಕಗಳು, ಬ್ಯಾಕ್ಟೀರಿಯಾಗಳು, ಕೀಟಾಣುಗಳು ಸೇರಿಕೊಂಡಿರುವ ಆಹಾರವನ್ನು ತಿಂದ್ರೆ ಅದು ಜೀರ್ಣವಾಗದೇ ಫುಡ್ ಪಾಯಿಸನ್ ಉಂಟಾಗುತ್ತದೆ.