ಸುದ್ದಿ

ರಜನಿಕಾಂತ್ ಈ ಮಹಿಳೆಯನ್ನು ಈಗಲೂ ಹುಡುಕುತ್ತಿದ್ದಾರಂತೆ. ಯಾಕೆ ಗೊತ್ತಾ!

222

ಮಲಯಾಳಂನ ಖ್ಯಾತ ನಟ ದೇವನ್ ಅವರ ಬಳಿ ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅವರು ತನ್ನ ಹಳೆ ಪ್ರೇಮವನ್ನು ನೆನೆದು ಕಣ್ಣೀರಿಟ್ಟಿರಿಟ್ಟಿದ್ದಾರಂತೆ. ತೆರೆಯ ಮೇಲೆ ಲವರ್ ಬಾಯ್ ಅಗಿ ಮಿಂಚುತ್ತಿದ್ದ ರಜನಿ ಅವರ ನಿಜ ಜೀವನದಲ್ಲಿ ತನ್ನ ಮೊದಲ ಪ್ರೇಮ ವಿಫಲವಾಗಿತ್ತು. ಬೆಂಗಳೂರು ಟ್ರಾನ್ಸ್‌ಪೋರ್ಟ್ ಸರ್ವಿಸ್ ಬಸ್  ಕಂಡಕ್ಟರ್ ಆಗಿದ್ದ ಸಮಯದಲ್ಲಿ ರಜನಿ, ರೂಟ್ ನಂಬರ್ 10ಎ ಬಸ್ ನಲ್ಕಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ, ಎಂಬಿಬಿಎಸ್ ಓದುತ್ತಿರುವ ನಿರ್ಮಲಾ ಎಂಬುವವರನ್ನು ಪ್ರೀತಿಸುತ್ತಿದ್ದರು.

ನಿರ್ಮಲಾ ಅವರನ್ನು ಘಾಡವಾಗಿ ಪ್ರೀತಿಸುತ್ತಿದ್ದ ರಜನಿ,ತನ್ನ ಮೊದಲ ಪ್ರೆಮ ಪುರಾಣದ ಬಗ್ಗೆ ತನ್ನ ಸ್ನೇಹಿತರಾದ ಮಲಯಾಳಂನ ಖ್ಯಾತ ನಟ ದೇವನ್‍ಗೆ ಹೇಳಿ ಕಣ್ಣೀರಿಟ್ಟಿದ್ದರಂತೆ. ಮಾಲಿವುಡ್ ವೆಬ್‌ಸೈಟ್ ನಲ್ಲಿ ನೀಡಿರುವ ಸಂದರ್ಶನದಲ್ಲಿ ದೇವನ್ ಅವರು ಈ ವಿಚಾರವನ್ನು ಹಿಂದೊಮ್ಮೆ ತಿಳಿಸಿದ್ದು,”ನಾವೆಲ್ಲ ಸಿನಿಮಾ ಶೂಟಿಂಗ್‍ಗಾಗಿ ಚೆನ್ನೈನಲ್ಲಿ ಇದ್ದೆವು. ಒಂದು ದಿನ ರಜನಿಕಾಂತ್ ನನ್ನನ್ನು ಡಿನ್ನರ್‌ಗೆ ಆಹ್ವಾನಿಸಿದರು. ಹಾಗಾಗಿ ಅವರ ಕೋಣೆಗೆ ಹೋದೆ.

ಊಟಕ್ಕೆ ಬೇಕಾಗಿದ್ದ ಎಲ್ಲವನ್ನೂ ತರಿಸಿದ್ದರು. ಆ ಸಮಯದಲ್ಲಿ ರಜನಿಕಾಂತ್ ಸ್ವಲ್ಪ ಮದ್ಯ ಸೇವಿಸಿ, “ನಿಮಗೆ ಫಸ್ಟ್ ಲವ್ ಇದೆಯಾ? ಎಂದು ಕೇಳಿದ್ದರು.ಆಗ ನಾನು ನನ್ನ ಲವ್ ಸ್ಟೋರಿ ಹೇಳಿದೆ ಅದನ್ನು ಕೇಳಿ ಸಿಕ್ಕಾಪಟ್ಟೆ ಭಾವುಕರಾದ ರಜನಿ, ಯಾಕೆ ಇಷ್ಟೊಂದು ದುಃಖಪಡುತ್ತಿದ್ದೀರಿ ಎಂದು ನಾನು ಕೇಳಿದೆ. ಆಗ ಬೆಂಗಳೂರಿನಲ್ಲಿ ಆರಂಭವಾದ ತನ್ನ ಫಸ್ಟ್ ಲವ್ ವಿವರಿಸಿದರು”

ರಜನಿ- “ನಾನು ಬಸ್ ಕಂಡಕ್ಟರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಎಂಬಿಬಿಎಸ್ ಓದುತ್ತಿದ್ದ ನಿರ್ಮಲಾ  ಎಂಬುವಳ ಜೊತೆಗೆ ಪರಿಚಯ ಬೆಳೆಯಿತು. ಆಕೆ ನಮ್ಮ ಬಸ್ಸಿಗೆ ಪ್ರತಿನಿತ್ಯ ಬರುತ್ತಿದ್ದಳು. ಇಬ್ಬರೂ ಮಾತನಾಡಿಕೊಳ್ಳುತ್ತಿದ್ದೆವು. ಒಂದು ದಿನ ನಾನು ಮುಖ್ಯ ಪಾತ್ರ ಪೋಷಿಸುತ್ತಿರುವ ನಾಟಕವನ್ನು ನೋಡಲು ನಿರ್ಮಾಲಾನನ್ನು ಕರೆದಿದ್ದೆ,ನಂತರ ಮದ್ರಾಸ್ ಫಿಲ್ಮ್ ಇನ್‍ಸ್ಟಿಟ್ಯೂಟ್‍ನಿಂದ ನನಗೆ ಸಂದರ್ಶನಕ್ಕೆ ಪತ್ರ ಬಂತು. ಆದರೆ ನಾನು ಅರ್ಜಿ ಸಲ್ಲಿಸಲಿಲ್ಲ ಲೆಟರ್ ಬಂದಿದ್ದು ನೋಡಿ ಶಾಕ್ ಆಗಿದ್ದೆ. ಬಳಿಕ ಅರ್ಜಿಯನ್ನು ನಿರ್ಮಾಲಾ ಸಲ್ಲಿಸಿದಳು.

ನಾನು ನಾಟಕದಲ್ಲಿ ಅಭಿನಯಿಸಿದ ಪಾತ್ರ ನಿರ್ಮಾಲಾಗೆ ಬಹಳ ಇಷ್ಟವಾಯಿತು. ನನ್ನ ಪ್ರತಿಭೆಯನ್ನು ಪ್ರೋತ್ಸಾಹಿಸಲು ನನ್ನ ಪರವಾಗಿ ಮದ್ರಾಸ್ ಫಿಲ್ಮ್ ಇನ್‍ಸ್ಟಿಟ್ಯೂಟ್‌ಗೆ ಅರ್ಜಿ ಯನ್ನು ಆಕೆ ಸಲ್ಲಿಸಿದ್ದರು. ನಾನು ದೊಡ್ಡ ಸ್ಟಾರ್ ಆಗಬೇಕು ಎಂಬುದು ನಿರ್ಮಾಲ ಕನಸಾಗಿತ್ತು. ಮದ್ರಾಸ್ ಫಿಲ್ಮ್ ಇನ್‍ಸ್ಟಿಟ್ಯೂಟ್‌ಗಾಗಿ ಬೆಂಗಳೂರಿನಿಂದ ಚೆನ್ನೈಗೆ ಹೋಗಲು ನನ್ನ ಬಳಿ ಹಣವಿರಲಿಲ್ಲ. ನಿರ್ಮಲಾ ನನಗೆ 500 ರೂ ನೀಡಿದರು. ಆ ಹಣದಲ್ಲಿ ನಾನು ಚೆನ್ನೈಗೆ ಬಂದೆ. ಮದ್ರಾಸ್ ಫಿಲ್ಮ್ ಇನ್ಸ್‌ಟ್ಯೂಟ್‌ನಲ್ಲಿ ಸೇರಿದ ಬಳಿಕ ಒಂದು ದಿನ ಬೆಂಗಳೂರಿಗೆ ಹೋದೆ.ಆದರೆ ನಿರ್ಮಲಾ ಕಾಣಿಸಲಿಲ್ಲ.ಅಷ್ಟೇ ಅಲ್ಲ ಇದುವರೆಗೂ ತನ್ನ ಜೀವನದಲ್ಲಿ ನಿರ್ಮಲಾರನ್ನು ರಜನಿಕಾಂತ್ ನೋಡಲಿಲ್ಲವಂತೆ. ಆ ವಿಷಯ ಹೇಳುತ್ತಾ ಕಣ್ಣೀರಿಡಲು ಪ್ರಾರಂಭಿಸಿದರು. ಸುಮ್ಮನೆ ಅಳಲಿಲ್ಲ, ಬಿಕ್ಕಿಬಿಕ್ಕಿ ಅತ್ತರು ಎಂದು ದೇವನ್ ತಿಲಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ